ಸೋಯಾಬೀನ್

ಸೋಯಾಬೀನ್ ನಲ್ಲಿ ದಂಡಾಣು ಅಂಗಮಾರಿ

Pseudomonas savastanoi pv. glycinea

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಹಳದಿಯಿಂದ ಕಂದು ಬಣ್ಣದ ಸಣ್ಣ ಚುಕ್ಕೆಗಳು.
  • ನಂತರ ಇವು ಗಾಢ ಕಂದು ಬಣ್ಣದ, ಅನಿಯಮಿತ ಅಥವಾ ವಿವಿಧ ಗಾತ್ರದ ಕೋನೀಯ ಗಾಯಗಳಿಗೆ ಬದಲಾಗುತ್ತವೆ.
  • ಹಳದಿ-ಹಸಿರು ಬಣ್ಣದ "ಹೊರವರ್ತುಲ" ಈ ಗಾಯದ ಸುತ್ತಲೂ ಕಾಣಿಸಿಕೊಳ್ಳುತ್ತದೆ.
  • ಬೀಜಕೋಶಗಳ ಮೇಲೆ ಗಾಯಗಳು ಇರುತ್ತವೆ.
  • ಆದರೆ, ಬೀಜಗಳ ಮೇಲೆ ಇವು ಇರುವುದಿಲ್ಲ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಋತುವಿನ ಆರಂಭದಲ್ಲಿ ಸೋಂಕು ಕಾಟಿಲಿಡಾನ್ ಗಳ ಅಂಚಿನಲ್ಲಿ ಕಂದು ಬಣ್ಣದ ಚುಕ್ಕೆಗಳಿಂದ ಗುರುತಿಸಲ್ಪಡುತ್ತವೆ. ಬೆಳೆಯುವ ಬಿಂದುಗಳ ಮೇಲೆ ಪರಿಣಾಮ ಬೀರಿದರೆ ಎಳೆಯ ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳಬಹುದು ಮತ್ತು ಅವು ಸಾಯಬಹುದು. ಸೋಂಕಿತ ಸಸ್ಯಗಳು, ಋತುವಿನ ನಂತರದಲ್ಲಿ ಎಲೆಗಳ ಮೇಲೆ ಸಣ್ಣ ಹಳದಿ ಮತ್ತು ಕಂದು ಬಣ್ಣದ ಚುಕ್ಕೆಗಳನ್ನು ಬೆಳೆಸುತ್ತವೆ. ಎಳೆಯ ಎಲೆಗಳು ಸಾಮಾನ್ಯವಾಗಿ ಹಳೆಯವುಗಳಿಗಿಂತ ಹೆಚ್ಚಾಗಿ ರೋಗಕ್ಕೆ ಒಳಗಾಗುತ್ತವೆ ಮತ್ತು ರೋಗಲಕ್ಷಣಗಳು ಮುಖ್ಯವಾಗಿ ಮಧ್ಯದಿಂದ - ಮೇಲ್ಭಾಗದ ಮೇಲಾವರಣದಲ್ಲಿ ಕಂಡುಬರುತ್ತವೆ. ಕಾಲಾನಂತರದಲ್ಲಿ, ಈ ಕಲೆಗಳು ಒಗ್ಗೂಡಿದಾಗ, ಅವು ಗಾಢ ಕಂದು ಬಣ್ಣದ, ವಿವಿಧ ಗಾತ್ರದ ಅನಿಯಮಿತ ಅಥವಾ ಕೋನೀಯ ಗಾಯಗಳಾಗುತ್ತವೆ. ಹಳದಿಯಿಂದ ಹಸಿರು ಬಣ್ಣದ "ಹೊರವರ್ತುಲ" ಗಾಯಗಳನ್ನು ಸುತ್ತುವರೆದಿರುವ ನೀರಿನಲ್ಲಿ ನೆನೆಸಿದಂತಿರುವ ಅಂಗಾಂಶಗಳ ತುದಿಯಲ್ಲಿ ಕಂಡುಬರುತ್ತದೆ. ಗಾಯದ ಕೇಂದ್ರವು ಕ್ರಮೇಣ ಒಣಗುತ್ತದೆ ಮತ್ತು ಅಂತಿಮವಾಗಿ ಬೀಳುತ್ತದೆ. ಇದು ಎಲೆಗಳಿಗೆ ಹರಕಲು ರೂಪವನ್ನು ನೀಡುತ್ತದೆ. ಬೀಜಕೋಶದ ರಚನೆಯ ಹಂತದಲ್ಲಿ ಸೋಂಕು ಸಂಭವಿಸಿದರೆ, ಬೀಜಕೋಶಗಳಲ್ಲಿ ಗಾಯಗಳು ಉಂಟಾಗಬಹುದು. ಇದು ಅವುಗಳಿಗೆ ಗಟ್ಟಿಯಾದ ಮತ್ತು ಬಣ್ಣ ಕಳೆದುಕೊಂಡ ರೂಪ ನೀಡಬಹುದು. ಆದಾಗ್ಯೂ, ಬೀಜಗಳು ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ.

ಶಿಫಾರಸುಗಳು

ಜೈವಿಕ ನಿಯಂತ್ರಣ

ತಾಮ್ರದ ಶಿಲೀಂಧ್ರನಾಶಕಗಳನ್ನು ಸೋಯಾಬೀನ್ ಗಳ ಮೇಲೆ ದಂಡಾಣು ಅಂಗಮಾರಿ ನಿಯಂತ್ರಣಕ್ಕೆ ಶಿಫಾರಸು ಮಾಡಲಾಗುತ್ತದೆ. ಚಿಕಿತ್ಸೆಗಳು ಸಂಪೂರ್ಣವಾಗಿ ಪರಿಣಾಮಕಾರಿಯಾಬೇಕಾದರೆ, ರೋಗ ಚಕ್ರದ ಆರಂಭದಲ್ಲೇ ಚಿಕಿತ್ಸೆ ನಡೆಸಬೇಕು, ಅಂದರೆ, ರೋಗಲಕ್ಷಣಗಳು ಮೊದಲಿಗೆ ಪತ್ತೆಯಾದಾಗ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ತಾಮ್ರದ ಶಿಲೀಂಧ್ರನಾಶಕಗಳನ್ನು ಸೋಯಾಬೀನ್ ಗಳ ಮೇಲೆ ದಂಡಾಣು ಅಂಗಮಾರಿ ರೋಗ ನಿಯಂತ್ರಣಕ್ಕೆ ಬಳಸಿಕೊಳ್ಳಬಹುದು. ಆದರೆ ಅದು ಪರಿಣಾಮಕಾರಿಯಾಗಬೇಕಾದರೆ, ರೋಗ ಚಕ್ರದ ಆರಂಭದಲ್ಲೇ ಬಳಸಬೇಕು. ಆದಾಗ್ಯೂ, ಶಿಲೀಂಧ್ರನಾಶಕಗಳು ಈ ರೋಗಕಾರಕದ ವಿರುದ್ಧ ಪರಿಣಾಮಕಾರಿಯಲ್ಲವಾದ್ದರಿಂದ ಕೇಂದ್ರಿತ ಸಮಗ್ರ ಕೀಟ ನಿರ್ವಹಣೆ ಪದ್ಧತಿಗಳನ್ನು ಅನುಸರಿಸಲು ಸೂಚಿಸಲಾಗುತ್ತದೆ.

ಅದಕ್ಕೆ ಏನು ಕಾರಣ

ದಂಡಾಣು ಅಂಗಮಾರಿ ಸ್ಯೂಡೋಮೊನಸ್ ಸಾವಸ್ಟನಾಯಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ಬೀಜಜನ್ಯ ಕಾಯಿಲೆಯಾಗಿದ್ದು, ಹೊಲದಲ್ಲಿ ಸಸ್ಯದ ಅವಶೇಷಗಳ ಮೇಲೂ ಸಹ ಚಳಿಗಾಲವನ್ನು ಕಳೆಯುತ್ತದೆ. ಸಸಿಯ ಹಂತದಲ್ಲಿ ಆರಂಭಿಕ ಸೋಂಕು ಸಾಮಾನ್ಯವಾಗಿ ಕಲುಷಿತ ಬೀಜಗಳ ಸಂಕೇತವಾಗಿದೆ. ಹಳೆಯ ಸಸ್ಯಗಳಲ್ಲಿ, ಸುಪ್ತ ಬ್ಯಾಕ್ಟೀರಿಯಾಗಳು ಗಾಳಿಯ ಮೂಲಕ ಅಥವಾ ನೀರಿನ ತುಂತುರು ಸಿಡಿದಾಗ ಸಸ್ಯದ ಉಳಿಕೆಗಳಿಂದ ಕೆಳ ಎಲೆಗಳಿಗೆ ಹರಡುವ ಮೂಲಕ ಆರಂಭಿಕ ಸೋಂಕು ಸಾಮಾನ್ಯವಾಗಿ ಸಂಭವಿಸುತ್ತದೆ. ಒದ್ದೆ ಎಲೆಯ ಮೇಲ್ಮೈ ರೋಗಕಾರಕದ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಇದು ಕೆಲ ಹಂತದಲ್ಲಿ ಗಾಯಗಳು ಅಥವಾ ಎಲೆ ರಂಧ್ರಗಳ ಮೂಲಕ ಅಂಗಾಂಶಗಳನ್ನು ಪ್ರವೇಶಿಸುತ್ತದೆ. ಮಳೆ ಮತ್ತು ಗಾಳಿ ಸಸ್ಯದೊಳಗೆ ಅಥವಾ ಸಸ್ಯಗಳ ನಡುವೆ ದ್ವಿತೀಯಕ ಸೋಂಕಿನ ಹರಡುವಿಕೆಗೆ ಅನುಕೂಲ ಮಾಡಿಕೊಡುತ್ತದೆ. ತಂಪಾದ (20-25 ° ಸಿ), ಆರ್ದ್ರ ಮತ್ತು ಗಾಳಿಯಿರುವ ಹವಾಮಾನ (ಮಳೆಗಾಳಿ) ರೋಗವನ್ನು ಬೆಂಬಲಿಸುತ್ತದೆ ಮತ್ತು ಹೆಚ್ಚು ಉಷ್ಣತೆ ಮತ್ತು ಶುಷ್ಕ ಹವಾಮಾನದಿಂದ ರೋಗ ಸೀಮಿತವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ರೋಗ ನಿರೋಧಕ ಪ್ರಬೇಧಗಳನ್ನು ಆರಿಸಿ.
  • ರೋಗಗಳ ಹರಡುವಿಕೆಯನ್ನು ಸೀಮಿತಗೊಳಿಸಲು ಸಸ್ಯಗಳು ತೇವವಾಗಿದ್ದಾಗ ಹೊಲಗಳಲ್ಲಿ ಕೆಲಸ ಮಾಡಬೇಡಿ.
  • ಮುಂದಿನ ಋತುವಿನ ಇನಾಕ್ಯುಲಮ್ ಪ್ರಮಾಣವನ್ನು ಕಡಿಮೆಗೊಳಿಸಲು ಸುಗ್ಗಿಯ ನಂತರ ಬೇಸಾಯದ ಬೆಳೆ ಶೇಷವನ್ನು ಉಳುಮೆ ಮಾಡಿ ಒಳಗೆ ಹೂತು ಬಿಡಿ.
  • ಮೆಕ್ಕೆ ಜೋಳ, ಗೋಧಿ ಮತ್ತು ಇತರ ದ್ವಿದಳ ಧಾನ್ಯಗಳಲ್ಲದ, ರೋಗಕ್ಕೆ ಒಳಗಾಗದ ಅತಿಥೇಯ ಸಸ್ಯಗಳೊಂದಿಗೆ ಬೆಳೆ ಸರದಿ ಯೋಜನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ