ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಕಾಳುಮೆಣಸಿನ ಬ್ಯಾಕ್ಟೀರಿಯಾದ ಮ್ರದು ಕೊಳೆತ

Pectobacterium carotovorum subsp. carotovorum

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಎಲೆಗಳಲ್ಲಿರುವ ಸಿರೆಗಳ ಅಂಗಾಂಶ ಗಾಢ ಬಣ್ಣಕ್ಕೆ ತಿರುಗುತ್ತದೆ.
  • ಎಲೆಗಳು ಹಳದಿ ಆಗುತ್ತವೆ ಮತ್ತು ನಂತರ ಸಾಯುತ್ತದೆ.
  • ಹಣ್ಣುಗಳು ಮತ್ತು ಕಾಂಡಗಳ ಮೇಲೆ ನೀರು-ನೆನೆಸಿದ ಗಾಯಗಳು.
  • ಒಂದು ಅಸಹ್ಯ ವಾಸನೆ ಇರಬಹುದು.

ಇವುಗಳಲ್ಲಿ ಸಹ ಕಾಣಬಹುದು


ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ರೋಗಲಕ್ಷಣಗಳು

ಆರಂಭದ ರೋಗಲಕ್ಷಣಗಳು ಸಾಮಾನ್ಯವಾಗಿ ಎಲೆಗಳಲ್ಲಿರುವ ಸಿರೆಗಳ ಅಂಗಾಂಶ ಗಾಢ ಬಣ್ಣಕ್ಕೆ ತಿರುಗುವ ಮೂಲಕ ಮತ್ತು ಸತ್ತಿರುವ ಪ್ರದೇಶಗಳಾಗಿ ಗೋಚರಿಸುತ್ತವೆ. ಗುಳಿಬಿದ್ದ, ನೀರು-ನೆನೆಸಿದ ಗಾಯಗಳು ಕಾಂಡಗಳು, ಹಣ್ಣುಗಳು ಮತ್ತು ಹಣ್ಣಿನ ತೊಟ್ಟಿನ ಮೇಲೆ ವೇಗವಾಗಿ ಹರಡುತ್ತವೆ. ರೋಗವು ಮುಂದುವರೆದಂತೆ, ಶುಷ್ಕ, ಗಾಢ ಕಂದು ಅಥವಾ ಕಪ್ಪು ಕಾಂಡ ಹುಣ್ಣುಗಳು ಬೆಳೆಯಬಹುದು, ಆಗಾಗ್ಗೆ ಶಾಖೆಗಳು ಮುರಿಯಬಹುದು. ಅಂತಿಮವಾಗಿ, ಇಡೀ ಹಣ್ಣು ನೀರಿನಂತೆ, ಮೃದುವಾದ, ಲೋಳೆ ರಸದಂತೆ ಮಾರ್ಪಾಡಾಗುತ್ತದೆ. ಇದು ನೀರು ತುಂಬಿದ ಚೀಲದಂತೆ ಸಸ್ಯದಲ್ಲಿ ತೂಗುತ್ತದೆ. ಸಾಮಾನ್ಯವಾಗಿ, ರೋಗಗ್ರಸ್ತ ಅಂಗಾಂಶಗಳಲ್ಲಿ ಬ್ಯಾಕ್ಟೀರಿಯಾದ ಕೊಳವೆಗಳನ್ನು ಕಾಣಬಹುದು ಮತ್ತು ಅಸಹ್ಯ ವಾಸನೆ ಇರುತ್ತದೆ. ಪೀಡಿತ ಸಸ್ಯಗಳು ಕೊಳೆಯುತ್ತವೆ ಮತ್ತು ನಂತರ ಸಾಯುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, ಪೆಕೊಬ್ಯಾಕ್ಟೀರಿಯಂ ಕ್ಯಾರೊಟೋವೊರಮ್ ಉಪಜಾತಿಯಾದ ಕ್ಯಾರೊಟೋವೊರಮ್ ನ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಹೊಂದಿರುವ ಬೀಜಗಳು ಮತ್ತು ಕೊಯ್ಲು ಮಾಡಿದ ಹಣ್ಣುಗಳ ರಾಸಾಯನಿಕ ಚಿಕಿತ್ಸೆ ಮತ್ತಷ್ಟು ಮಾಲಿನ್ಯವನ್ನು ತಡೆಯಲು ಉಪಯುಕ್ತವಾಗಿದೆ. ಉದಾಹರಣೆಗೆ, ಬೀಜವನ್ನು 1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಲ್ಲಿ (ಬ್ಲೀಚ್) 30 ಸೆಕೆಂಡುಗಳ ಕಾಲ ತೊಳೆದು ನಂತರ ಶುದ್ಧ ನೀರಿನಿಂದ ತೊಳೆಯಿರಿ.

ಅದಕ್ಕೆ ಏನು ಕಾರಣ

ಮೃದು ಕೊಳೆತವನ್ನು ಉಂಟುಮಾಡುವ ಮಣ್ಣಿನಿಂದ ಹುಟ್ಟಿದ ಬ್ಯಾಕ್ಟೀರಿಯಾವು ಪರಿಸರದಲ್ಲಿ ಸರ್ವತ್ರವಾಗಿರುತ್ತದೆ. ಅವು ಮೇಲ್ಮೈ ನೀರು ಮತ್ತು ಮಣ್ಣಿಗೆ ಸಂಬಂಧಪಟ್ಟಿರುತ್ತವೆ. ಬೆಚ್ಚಗಿನ ಮತ್ತು ತೇವಾಂಶವುಳ್ಳ ಹವಾಮಾನವು ಸೋಂಕಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಕೃಷಿಮಾಡುವಾಗ ಉಂಟಾಗುವ ಗಾಯಗಳು, ಕೀಟಗಳಿಂದಾದ ತೂತುಗಳು ಮತ್ತು ಸೂರ್ಯನಿಂದಾದ ಬೊಬ್ಬೆಗಳ ಮೂಲಕ ಬ್ಯಾಕ್ಟೀರಿಯಾ ಸಸ್ಯವನ್ನು ಪ್ರವೇಶಿಸುತ್ತದೆ. ಪೆಕೊಬ್ಯಾಕ್ಟೀರಿಯಂ ಕ್ಯಾರೊಟೋವೊರಮ್ ಉಪಜಾತಿಯಾದ ಕ್ಯಾರೊಟೋವೊರಮ್ ಹೆಚ್ಚಿನ ಹೋಸ್ಟ್ ಸಸ್ಯಗಳನ್ನು ಹೊಂದಿದೆ, ಉದಾಹರಣೆಗೆ ಆಲೂಗಡ್ಡೆ, ಸಿಹಿ ಆಲೂಗೆಡ್ಡೆ, ಕಸ್ಸೇವ, ಈರುಳ್ಳಿ, ಎಲೆಕೋಸು, ಕ್ಯಾರೆಟ್, ಟೊಮೆಟೊ, ಹುರುಳಿ, ಕಾರ್ನ್, ಹತ್ತಿ, ಕಾಫಿ ಮತ್ತು ಬಾಳೆ.


ಮುಂಜಾಗ್ರತಾ ಕ್ರಮಗಳು

  • ಮೆಕ್ಕೆ ಜೋಳ, ಹುರುಳಿ ಅಥವಾ ಸೋಯಾಬೀನ್ಗಳೊಂದಿಗೆ ಬೆಳೆ ಸರದಿ ಮಾಡಿ.
  • ಆಲೂಗೆಡ್ಡೆ ಅಥವಾ ಎಲೆಕೋಸಿನ ನಂತರ ಕಾಳುಮೆಣಸು ನೆಡಬೇಡಿ.
  • ಮಣ್ಣಿನಲ್ಲಿ ಇನಾಕ್ಯುಲಮ್ ಅನ್ನು ಕಡಿಮೆ ಮಾಡಲು ಆಳವಾಗಿ ಉಳುಮೆ ಮಾಡಿ.
  • ಕೃಷಿ, ಕಳೆ ಕೀಳುವಾಗ ಮತ್ತು ಕೊಯ್ಲು ಮಾಡುವಾಗ ಎಚ್ಚರಿಕೆಯಿಂದ ಕೆಲಸ ಮಾಡಿ.
  • ತೇವ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಡಿ.
  • ಉತ್ತಮ ಒಳಚರಂಡಿ ವ್ಯವಸ್ಥೆ ಒದಗಿಸಿ.
  • ವಿಪರೀತವಾದ ಸಾರಜನಕಯುಕ್ತ ರಸಗೊಬ್ಬರ ಬಳಕೆ ಮತ್ತು ನೀರಾವರಿಯನ್ನು ಮಾಡಬೇಡಿ.
  • ಭೂಮಿಯಲ್ಲಿ ಕೆಲಸ ಮಾಡುವಾಗ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ (ನೀರು, ಬಟ್ಟೆ, ಉಪಕರಣಗಳು).
  • ಸೋಂಕುಗಳೆತ ಉತ್ಪನ್ನಗಳನ್ನು ಬಳಸಿ (ಕೈಗಳು, ಉಪಕರಣಗಳು).
  • ಬಾಧಿತ ಸಸ್ಯಗಳು ಮತ್ತು ಕೊಯ್ಲಿನ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಸುಡುವ ಮೂಲಕ ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ