Pseudomonas savastanoi pv. savastanoi
ಬ್ಯಾಕ್ಟೀರಿಯಾ
ಈ ರೋಗದ ಮುಖ್ಯ ಗೋಚರ ಲಕ್ಷಣವೆಂದರೆ ವಸಂತ ಮತ್ತು ಬೇಸಿಗೆಯಲ್ಲಿ ಕೊಂಬೆಗಳು, ರೆಂಬೆಗಳು, ಕಾಂಡಗಳು ಮತ್ತು ಬೇರುಗಳ ಮೇಲೆ ಗಂಟುಗಳು ಕಾಣಿಸಿಕೊಳ್ಳುವುದು. ಶಾಖೆಗಳ ಮೇಲೆ ಅವು ಸಾಮಾನ್ಯವಾಗಿ ಬೆಳೆಯುತ್ತವೆ. ಆದರೆ ಎಲೆಯ ನೋಡ್‌ಗಳಲ್ಲಿ ಅಥವಾ ಹಣ್ಣಿನ ಕಾಂಡಗಳಲ್ಲಿ ಯಾವಾಗಲೂ ಇರಲೇಬೇಕು ಎಂದಿಲ್ಲ. ತೊಗಟೆಯ ಈ ವಿರೂಪಗಳು ಹಲವಾರು ಸೆಂಟಿಮೀಟರ್ ವ್ಯಾಸವನ್ನು ತಲುಪಬಹುದು ಮತ್ತು ಸಾಂದರ್ಭಿಕವಾಗಿ ಎಲೆಗಳು ಅಥವಾ ಮೊಗ್ಗುಗಳ ಮೇಲೆ ಬೆಳೆಯಬಹುದು. ಕಾಂಡದ ಡೈಬ್ಯಾಕ್ ಸಾಮಾನ್ಯವಾಗಿದೆ, ಏಕೆಂದರೆ ಗಂಟುಗಳು ಅಂಗಾಂಶಗಳಿಗೆ ಪೋಷಕಾಂಶ ಮತ್ತು ನೀರಿನ ಸಾಗಣೆಯನ್ನು ನಿಲ್ಲಿಸುತ್ತದೆ. ಸಾಮಾನ್ಯವಾಗಿ, ಸೋಂಕಿತ ಮರಗಳು ಕಡಿಮೆ ಶಕ್ತಿ ಮತ್ತು ಕಡಿಮೆ ಬೆಳವಣಿಗೆಯನ್ನು ತೋರಿಸುತ್ತವೆ. ಗಂಟುಗಳು ಬೆಳೆದಂತೆ, ಅವು ಪೀಡಿತ ಕೊಂಬೆಗಳನ್ನು ಸುತ್ತಿಕೊಳ್ಳುತ್ತವೆ ಮತ್ತು ಕೊಲ್ಲುತ್ತವೆ. ಇದರ ಪರಿಣಾಮವಾಗಿ ಹಣ್ಣಿನ ಗಾತ್ರ ಮತ್ತು ಗುಣಮಟ್ಟ ಕಡಿಮೆಯಾಗುವುದು ಅಥವಾ ಹೊಸದಾಗಿ ನೆಟ್ಟ ತೋಟಗಳ ಸಂದರ್ಭದಲ್ಲಿ ಮರದ ಸಾವಿಗೂ ಕಾರಣವಾಗುತ್ತದೆ.
ಸಾವಯವ, ತಾಮ್ರ-ಆಧಾರಿತ ಉತ್ಪನ್ನಗಳೊಂದಿಗೆ ವರ್ಷಕ್ಕೆ ಎರಡು ತಡೆಗಟ್ಟುವ ಬ್ಯಾಕ್ಟೀರಿಯಾನಾಶಕ ಸಿಂಪಡಣೆಗಳನ್ನು (ಶರತ್ಕಾಲ ಮತ್ತು ವಸಂತಕಾಲ) ಮಾಡಿದರೆ, ಮರಗಳ ಮೇಲೆ ಗಂಟುಗಳ ರಚನೆಯನ್ನು ಅದು ಬಹಳವಾಗಿ ಕಡಿಮೆಗೊಳಿಸುತ್ತವೆ. ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡಲು ಸಮರುವಿಕೆಯ ಗಾಯಗಳಿಗೆ ಬ್ಯಾಕ್ಟೀರಿಯಾನಾಶಕಗಳನ್ನು ಹೊಂದಿರುವ ತಾಮ್ರದೊಂದಿಗೆ ಚಿಕಿತ್ಸೆ ನೀಡಬೇಕು (ಉದಾಹರಣೆಗೆ ಬೋರ್ಡೆಕ್ಸ್ ಮಿಶ್ರಣ). ತಾಮ್ರದ ಸಲ್ಫೇಟ್ ಹೊಂದಿರುವ ಕೆಲವು ಉತ್ಪನ್ನಗಳನ್ನು ಪ್ರಮಾಣೀಕೃತ ಸಾವಯವ ಕೃಷಿಯಲ್ಲಿ ಸಹ ಅನುಮತಿಸಲಾಗಿದೆ.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಈ ರೋಗಕಾರಕವನ್ನು ನಿಯಂತ್ರಿಸಲು ತುಂಬಾ ಕಷ್ಟ. ತಾಮ್ರ-ಆಧಾರಿತ ಉತ್ಪನ್ನಗಳ (ಮ್ಯಾಂಕೋಜೆಬ್‌ನೊಂದಿಗೆ) ಬ್ಯಾಕ್ಟೀರಿಯಾನಾಶಕ ಸಿಂಪಡಣೆಗಳನ್ನು ವರ್ಷಕ್ಕೆ ಎರಡು ಬಾರಿ (ಶರತ್ಕಾಲ ಮತ್ತು ವಸಂತಕಾಲ) ಸೋಂಕು ತಡೆಗಟ್ಟುವ ಸಲುವಾಗಿ ಮಾಡಬೇಕು. ಇದು ತೋಟಗಳಲ್ಲಿ ರೋಗದ ಸಂಭವವನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡಲು ಸಮರುವಿಕೆಯ ಗಾಯಗಳಿಗೆ ಬ್ಯಾಕ್ಟೀರಿಯಾನಾಶಕಗಳನ್ನು ಹೊಂದಿರುವ ತಾಮ್ರದೊಂದಿಗೆ ಚಿಕಿತ್ಸೆ ನೀಡಬೇಕು. ಯಾಂತ್ರಿಕವಾಗಿ ಕೊಯ್ಲು ಮಾಡಿದ ಮರಗಳಿಗೆ ಕೊಯ್ಲು ಮಾಡಿದ ತಕ್ಷಣ ಚಿಕಿತ್ಸೆ ನೀಡಬೇಕು.
ಸ್ಯೂಡೋಮೊನಾಸ್ ಸವಸ್ತಾನೊಯ್ ಎಂಬ ಜಾತಿಯ ಬ್ಯಾಕ್ಟೀರಿಯಾದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಈ ರೋಗಕಾರಕವು ಆಲಿವ್ ಮರಗಳ ಎಲೆಗಳಿಗಿಂತ ಹೆಚ್ಚಾಗಿ ತೊಗಟೆಯಲ್ಲಿ ಬೆಳೆಯುತ್ತದೆ. ಸೋಂಕಿನ ತೀವ್ರತೆಯು ಪ್ರಭೇದದ ಪ್ರಭೇದಕ್ಕೆ ಬದಲಾಗುತ್ತದೆ. ಆದರೆ ಎಳೆಯ ಆಲಿವ್ ಮರಗಳು ಸಾಮಾನ್ಯವಾಗಿ ಹಳೆಯವುಗಳಿಗಿಂತ ಹೆಚ್ಚು ಸೋಂಕಿಗೆ ಒಳಗಾಗುತ್ತವೆ. ಬ್ಯಾಕ್ಟೀರಿಯಾವು ಗಂಟುಗಳಲ್ಲಿ ಬದುಕುಳಿಯುತ್ತದೆ ಮತ್ತು ಮಳೆಯಾದಾಗ ಸಾಂಕ್ರಾಮಿಕ ಬ್ಯಾಕ್ಟೀರಿಯಾದ ಸ್ರಾವವಾಗಿ ಹೊರಬರುತ್ತದೆ. ಇದು ವರ್ಷವಿಡೀ ಮಳೆಯ ತುಂತುರಿನ ಮೂಲಕ ಅಥವಾ ಯಾಂತ್ರಿಕವಾಗಿ ಆರೋಗ್ಯಕರ ಸಸ್ಯಗಳಿಗೆ ಹರಡುತ್ತದೆ. ಎಲೆಯ ಗಾಯಗಳು, ತೊಗಟೆ ಬಿರುಕುಗಳು, ಸಮರುವಿಕೆ ಅಥವಾ ಕೊಯ್ಲಿನ ಗಾಯಗಳು ಅದರ ಪ್ರಸರಣಕ್ಕೆ ಅನುಕೂಲಕರವಾಗಿವೆ. ಚಳಿಗಾಲದಲ್ಲಿ ಫ್ರೀಜಿಂಗ್ ಹಾನಿಯು ವಿಶೇಷವಾಗಿ ಸಮಸ್ಯಾತ್ಮಕವಾಗಿದೆ. ಏಕೆಂದರೆ ಇದು ಸಾಮಾನ್ಯವಾಗಿ ಮಳೆ ಬರುವ ದಿನಗಳೊಂದಿಗೆ ತಾಳೆಯಾಗುತ್ತದೆ. ಇದು ಸಾಂಕ್ರಾಮಿಕ ರೋಗಗಳ ಉಲ್ಭಣಕ್ಕೆ ಸಮರ್ಪಕ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಸೋಂಕಿನ ನಂತರ 10 ದಿನಗಳಿಂದ ಹಲವಾರು ತಿಂಗಳವರೆಗೆ ಒಂದೇ ಅಥವಾ ಸರಣಿಯಲ್ಲಿ ಗಂಟು ಕಾಣಿಸಿಕೊಳ್ಳುತ್ತದೆ.