ಇತರೆ

ಕ್ರೌನ್ ಗಾಲ್

Agrobacterium

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಬಳ್ಳಿಗಳ ಕಾಂಡದ ಕೆಳಭಾಗದಲ್ಲಿ ಉಬ್ಬುಗಾಯಗಳು ಕಾಣಿಸಿಕೊಳ್ಳುತ್ತವೆ.
  • ಮೊದಲು, ಬೇಸಿಗೆಯ ಆರಂಭದಲ್ಲಿ, ತಾಪಮಾನವು 20 °C ಅಥವಾ ಹೆಚ್ಚಿದ್ದಾಗ ಸಣ್ಣ, ಜಡ್ಡುಗಟ್ಟಿದಂತಹ ಕಲೆಗಳು ಕಾಣಿಸಿಕೊಳ್ಳುತ್ತದೆ.
  • ಈ ಕಲೆಗಳು ವೇಗವಾಗಿ ಬೆಳಯುತ್ತವೆ ಮತ್ತು ತೆಳು ಬಣ್ಣದ, ಹೆಚ್ಚು ಕಡಿಮೆ ಗೋಳಾಕೃತಿಯಲ್ಲಿರುವ ಗೆಡ್ಡೆಗಳು ಕಾಣಿಸಿಕೊಳ್ಳುತ್ತವೆ, ಮತ್ತು ಅದು ಗಮನಾರ್ಹ ಗಾತ್ರವನ್ನು ತಲುಪಬಹುದು.
  • ಅವು ಪ್ರೌಢಾವಸ್ಥೆ ತಲುಪಿದಂತೆ, ಅವು ಗಾಢವಾದ ಬಣ್ಣಕ್ಕೆ ತಿರುಗಿ, ಬತ್ತಿ ಹೋಗುತ್ತವೆ ಮತ್ತು ಒಣಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

4 ಬೆಳೆಗಳು
ಬಾದಾಮಿ
ದ್ರಾಕ್ಷಿ
ಆಲಿವ್
ಪೀಚ್

ಇತರೆ

ರೋಗಲಕ್ಷಣಗಳು

ಬಳ್ಳಿಗಳ ಕೆಳ ಕಾಂಡದ ಮೇಲೆ ಉಬ್ಬುಗಾಯಗಳು ಈ ರೋಗದ ವಿಶಿಷ್ಟ ಲಕ್ಷಣವಾಗಿದೆ. ಕಾಂಡಗಳು ಮತ್ತು ಗಿಡಗಳ ಮೇಲಿನ ಭಾಗಗಳನ್ನು ಹೊರತುಪಡಿಸಿ (ಅದಕ್ಕಾಗಿಯೇ ರೋಗಕ್ಕೆ ಈ ಹೆಸರು) ಈ ಉಬ್ಬುಗಳು ಕಸಿ ಮಾಡಿದ ಸ್ಥಳದ ಸುತ್ತಲೂ ಅಥವಾ ಬೇರುಗಳಲ್ಲಿಯೂ ಬೆಳೆಯಬಹುದು. ಮೊದಲಿಗೆ, ಬೇಸಿಗೆಯ ಆರಂಭದಲ್ಲಿ, ತಾಪಮಾನವು 20 °C ಅಥವಾ ಹೆಚ್ಚಿದ್ದಾಗ ಸಣ್ಣ, ಗಡ್ಡೆಯಂತಹ ಬೆಳವಣಿಗೆಯು ಕಾಣಿಸಿಕೊಳ್ಳುತ್ತದೆ. ಈ ಗಡ್ಡೆಗಳು ಶೀಘ್ರವಾಗಿ ಬೆಳೆಯುತ್ತವೆ ಮತ್ತು ಮೃದುವಾದ, ಸ್ಪಂಜಿನಂಥ, ಹೆಚ್ಚು ಕಡಿಮೆ ಗೋಳಾಕಾರದ ದೊಡ್ಡ ಗೆಡ್ಡೆಗಳನ್ನು ಉತ್ಪಾದಿಸುತ್ತವೆ. ಅವು ಗಮನಾರ್ಹ ಗಾತ್ರವನ್ನು ತಲುಪಬಹುದು. ಅವು ಬೆಳೆದಂತೆ ಗಾಢವಾದ ಬಣ್ಣಕ್ಕೆ ತಿರುಗಿ, ತೇವಾಂಶ ಕಳೆದುಕೊಂಡು ಒಣಗಬಹುದು. ಒಮ್ಮೆ ಈ ಗಡ್ಡೆಗಳು ಬೆಳೆಯಲು ಪ್ರಾರಂಭಿಸಿದಂತೆ, ಅವು ಸೋಂಕಿತ ಬಳ್ಳಿಯ ಅಥವಾ ಮರದ ಕೊಂಬೆಯನ್ನು ಸುತ್ತುವರಿಯಬಹುದು. ಮತ್ತು ಇದರಿಂದ ನೀರು ಮತ್ತು ಪೋಷಕಾಂಶಗಳ ಹರಿವಿಗೆ ಅಡ್ಡಿಯಾಗಬಹುದು. ಇದು ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ ಮತ್ತು ಸಣ್ಣ ಬಳ್ಳಿಗಳು ಅಥವಾ ಮರಗಳು ಮೇಲಿನಿಂದ ಸಾಯಲು ಆರಂಭಿಸುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಇದರ ವಿರೋಧಿ ಬ್ಯಾಕ್ಟೀರಿಯಾ ಅಗ್ರೊಬ್ಯಾಕ್ಟೀರಿಯಂ ರೇಡಿಯೋಬ್ಯಾಕ್ಟರ್ ನ K-84 ಪ್ರಭೇದವನ್ನು ಹಲವಾರು ಬೆಳೆಗಳಲ್ಲಿ ಕ್ರೌನ್ ಗಾಲ್ ನಿಯಂತ್ರಿಸಲು ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ದುರದೃಷ್ಟವಶಾತ್, ಈ ವಿಧಾನವು ದ್ರಾಕ್ಷಿಯ ಮೇಲೆ ಕೆಲಸ ಮಾಡುವುದಿಲ್ಲ. ಅಗ್ರೊಬ್ಯಾಕ್ಟೀರಿಯಂ ರೇಡಿಯೋಬ್ಯಾಕ್ಟರ್ ನ F2/5 ಪ್ರಭೇದವನ್ನು ಬಳಸುವ ಪರ್ಯಾಯ ವಿಧಾನವು ಭರವಸೆಯ ಫಲಿತಾಂಶಗಳನ್ನು ತೋರಿಸಿದೆ. ಆದರೆ ಅದು ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗವಿದ್ದರೆ ಅದನ್ನು ಮೊದಲು ಪರಿಗಣಿಸಿ. ಕ್ರೌನ್ ಗಾಲ್ (ಬ್ಯಾಕ್ಟೀರಿಯನಾಶಕಗಳು, ಪ್ರತಿಜೀವಕಗಳು) ವಿರುದ್ಧ ಪ್ರಸ್ತುತ ಲಭ್ಯವಿರುವ ರಾಸಾಯನಿಕ ಚಿಕಿತ್ಸೆಗಳು ಪರಿಣಾಮಕಾರಿಯಾಗಿಲ್ಲ. ಏಕೆಂದರೆ ಅವುಗಳು ರೋಗಲಕ್ಷಣಗಳನ್ನು ಮಾತ್ರ ಪರಿಗಣಿಸುತ್ತವೆ ಆದರೆ ಬ್ಯಾಕ್ಟೀರಿಯಾ ಸೋಂಕನ್ನು ನಿವಾರಿಸುವುದಿಲ್ಲ. ರೋಗ ನಿಯಂತ್ರಣವು ಬಳ್ಳಿಗಳಿಗೆ ಗಾಯವಾಗುವುದನ್ನು ತಡೆಗಟ್ಟುವುದು ಮತ್ತು ಕೃಷಿ ಜಮೀನಿನ ಮೇಲೆ ಕೇಂದ್ರೀಕೃತವಾಗಿದೆ.

ಅದಕ್ಕೆ ಏನು ಕಾರಣ

ಕ್ರೌನ್ ಗಾಲ್ ದ್ರಾಕ್ಷಿಬಳ್ಳಿ ಮತ್ತುರ ಪೀಚ್ ಸೇರಿದಂತೆ ಆರ್ಥಿಕವಾಗಿ ಮುಖ್ಯವಾದ ಹಲವು ಆಶ್ರಯದಾತ ಮರಗಳ ಮೇಲೆ ಪರಿಣಾಮ ಬೀರುವ ಒಂದು ರೋಗವಾಗಿದೆ. ಬ್ಯಾಕ್ಟೀರಿಯಾ ಆಗ್ರೊಬ್ಯಾಕ್ಟೀರಿಯಂ ವಿಟಿಸ್ ನಿಂದ ಇದು ಉಂಟಾಗುತ್ತದೆ. ಇವು ನೆಲದ ಮೇಲಿನ ಅಥವಾ ಮಣ್ಣಿನಲ್ಲಿ ಹೂತಿರುವ ಸಸ್ಯದ ಉಳಿಕೆಗಳಲ್ಲಿ ಅನೇಕ ವರ್ಷಗಳ ಕಾಲ ಬದುಕಬಲ್ಲವು ಮತ್ತು ನಂತರ ಹೊಸ ಮರದ ಸೋಂಕಿಗೆ ಕಾರಣವಾಗುವ ಇನಾಕ್ಯುಲಮ್ ಮೂಲವಾಗಿ ಮಾರ್ಪಾಡಾಗಬಹುದು. ಯಾವುದೇ ಗಾಯವು ರೋಗಕಾರಕದ ಪ್ರವೇಶಕ್ಕೆ ಸಂಭಾವ್ಯ ತಾಣವಾಗಿದೆ ಮತ್ತು ಇದು ಉಬ್ಬುಗಾಯಗಳಂತಹ ರಚನೆಗೆ ಕಾರಣವಾಗಬಹುದು. ಇವುಗಳು ಪ್ರತಿಕೂಲ ವಾತಾವರಣದ ಪರಿಸ್ಥಿತಿಗಳಿಂದ ( ಹಿಮ, ಆಲಿಕಲ್ಲು), ಬೇರುಗಳ ಯಾಂತ್ರಿಕ ಘರ್ಷಣೆ ಅಥವಾ ಕೃಷಿ ಕೆಲಸದ ಸಮಯದಲ್ಲಿ ಆಗುವ ಗಾಯಗಳಿಂದ (ಸಮರುವಿಕೆ, ನಾಟಿಗಳು, ಸಕ್ಕರ್ ಗಳನ್ನು ತೆಗೆಯುವಾಗ) ಉಂಟಾಗಬಹುದು. ರೋಗಲಕ್ಷಣಗಳನ್ನು ಉಂಟುಮಾಡದೆ ಬ್ಯಾಕ್ಟೀರಿಯಾವು ಮರ ಮತ್ತು ಸಸ್ಯ ಅಂಗಾಂಶಗಳಲ್ಲಿ ವರ್ಷಗಳ ಕಾಲ ಬೆಳೆಯಬಹುದು. ಹೀಗಾಗಿ, ರೋಗವು ಆರೋಗ್ಯಕರವಾಗಿರುವ ಸಸಿಗಳ ಸಾಗಣೆಯ ಮೂಲಕ ಸಹ ತೋಟಗಳ ನಡುವೆ ಹರಡಬಹುದು. ರೋಗದ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಸರಿಯಾದ ಪ್ರದೇಶವನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ಉದಾಹರಣೆಗೆ, ಚಳಿಗಾಲದಲ್ಲಿ ಶೀತಲೀಕರಣದಿಂದ ಗಾಯವಾಗುವ ಪ್ರದೇಶಗಳಲ್ಲಿ, ಸಾಮಾನ್ಯವಾಗಿ ಈ ಕ್ರೌನ್ ಗಾಲ್ ಪ್ರಕರಣಗಳು ಹೆಚ್ಚಾಗಿರುತ್ತದೆ..


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಆರೋಗ್ಯಕರ ಸಸ್ಯಗಳನ್ನು ಆಯ್ಕೆಮಾಡಿ.
  • ಶೀತ ಗಾಯಗಳಿಗೆ ಹೆಚ್ಚು ನಿರೋಧಕವಾಗಿರುವ ಸಸ್ಯ ವಿಧಗಳನ್ನು ಆಯ್ಕೆ ಮಾಡಿ.
  • ರೋಗವನ್ನು ತಪ್ಪಿಸಲು ಸ್ಥಳದ ಸರಿಯಾದ ಆಯ್ಕೆ ಮುಖ್ಯವಾಗಿದೆ.
  • ಅದರಲ್ಲೂ ಮುಖ್ಯವಾಗಿ ಹಿಮಗಟ್ಟುವ ತಾಪಮಾನ ಇರುವ ಪ್ರದೇಶಗಳಲ್ಲಿ.
  • ಈ ಹಿಂದೆ ಕ್ರೌನ್ ಗಾಲ್ ರೋಗಕ್ಕೆ ಒಳಗಾಗದ ಪ್ರದೇಶಗಳಲ್ಲಿ ಮಾತ್ರ ಸಸ್ಯಗಳನ್ನು ನೆಡಿ.
  • ಸರಿಯಾದ ಸಮರುವಿಕೆ ಮೂಲಕ ಗಾಳಿಯಾಡುವಂತೆ ನೋಡಿಕೊಳ್ಳಿ.
  • ತೋಟದಲ್ಲಿ ಉತ್ತಮ ಒಳಚರಂಡಿ ವ್ಯವಸ್ಥೆ ಮಾಡಿ.
  • ಭೂಮಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಸಸ್ಯಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಿ.
  • ಇತರ ದ್ರಾಕ್ಷಿತೋಟಗಳಿಗೆ ಸೋಂಕಿನ ಶಂಕೆ ಇರುವ ನಾಟಿ ವಸ್ತುಗಳನ್ನು ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ