ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ ಕ್ಯಾಂಕರ್

Xanthomonas axonopodis pv. citri

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಹಳದಿ ಬಣ್ಣದ ಪ್ರಭಾಲಯವಿರುವ ತುಕ್ಕು-ಕಂದು ಬಣ್ಣ ಮತ್ತು ನರೂಲಿ ತರಹದ ಕುಳಿಗಳು.
  • ನಂತರ ಕಲೆಗಳು ತೆಳು ಕಂದು ಅಥವಾ ಬೂದು ಬಣ್ಣದ ಮಧ್ಯಭಾಗವಿರುವ ಮತ್ತು ಎಣ್ಣೆ ರೀತಿಯ, ನೀರು-ತುಂಬಿದ ಕಂದು ಬಣ್ಣದ ಅಂಚುಗಳಿರುವ ಗಾಯಗಳಾಗಿ ರೂಪುಗೊಳ್ಳುತ್ತವೆ.
  • ಇದೇ ತರಹದ ಲಕ್ಷಣಗಳು ಹಣ್ಣುಗಳು ಮತ್ತು ಕೊಂಬೆಗಳ ಮೇಲೆ ಸಹ ಕಾಣಿಸಿಕೊಳ್ಳಬಹುದು.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಮರಗಳಿಗೆ ಅವುಗಳ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿಯೂ ಸೋಂಕಾಗಬಹುದು ಮತ್ತು ರೋಗಲಕ್ಷಣಗಳು ಎಲೆಗಳು, ಹಣ್ಣುಗಳು ಅಥವಾ ಕೊಂಬೆಗಳ ಮೇಲೆ ಕಾಣಿಸಬಹುದು. ಮೊದಲಿಗೆ ಹೊಸದಾಗಿ ಸೋಂಕಿಗೊಳಗಾದ ಎಲೆಗಳ ಎರಡೂ ಬದಿಗಳಲ್ಲಿ ಸಣ್ಣದಾದ, ಸ್ವಲ್ಪಮಟ್ಟಿಗೆ ಊದಿದ ಮತ್ತು ಸ್ಪಂಜಿನ ರೀತಿಯ ಗಾಯಗಳು ಬೆಳೆಯುತ್ತವೆ. ಅವು ಬೆಳೆದಂತೆ, ಈ ಕಲೆಗಳು ಹೊಳೆಯುವ ಹಳದಿ ಬಣ್ಣದ ಪ್ರಭಾಲಯವಿರುವ ತುಕ್ಕು-ಕಂದು ಬಣ್ಣ ಮತ್ತು ನರೂಲಿ ತರಹದ ಕುಳಿಗಳಾಗಿ ಬೆಳೆಯುತ್ತವೆ. ಅವು ಅಂತಿಮವಾಗಿ ಒಡೆದು ತಮ್ಮಲ್ಲಿರುವ ಪದಾರ್ಥವನ್ನು ಬಿಡುಗಡೆ ಮಾಡುತ್ತವೆ ಮತ್ತು ತೆಳು ಕಂದು ಅಥವಾ ಬೂದು ಬಣ್ಣದ ಮಧ್ಯಭಾಗವಿರುವ ಎಣ್ಣೆ ರೀತಿಯ, ನೀರು-ತುಂಬಿದ ಕಂದು ಬಣ್ಣದ ಅಂಚುಗಳಿರುವ ಗಾಯಗಳಾಗಿ ಬದಲಾಗುತ್ತವೆ. ಕೆಲವೊಮ್ಮೆ, ಹಳೆಯ ಕ್ಯಾಂಕರ್ಗಳ ಮಧ್ಯಭಾಗವು ಉದುರುತ್ತವೆ ಮತ್ತು ಅವು ಶಾಟ್-ಹೋಲ್ ನಂತೆ ಕಾಣಿಸುತ್ತವೆ. ಇದೇ ತರಹದ ಲಕ್ಷಣಗಳು ಹಣ್ಣುಗಳು ಮತ್ತು ಕೊಂಬೆಗಳ ಮೇಲೆ ಸಹ ಕಾಣಿಸಿಕೊಳ್ಳಬಹುದು. ಅಲ್ಲಿ ಕ್ಯಾಂಕರ್ಗಳು ಗಣನೀಯ ಪ್ರಮಾಣದಷ್ಟು ಅಗಲವಾಗಬಹುದು. ಗಾಯಗಳ ಮಧ್ಯಭಾಗವು ಊದಿದಂತಾಗಿ ಹಕ್ಕಳೆ ಅಥವಾ ಗಡುಸಾದಂತೆ ಕಾಣುತ್ತವೆ. ವಿಪರ್ಣನವುಂಟಾಗಬಹುದು ಮತ್ತು ಹಣ್ಣುಗಳು ಅಕಾಲಿಕವಾಗಿ ಉದುರಬಹುದು ಮತ್ತು ನಾಳೀಯ ಅಂಗಾಂಶಗಳು ಸುತ್ತುವರಿಯುವುದರಿಂದ ಕೊಂಬೆಗಳು ಸಾಯಬಹುದು. ಪರಿಪಕ್ವತೆಯನ್ನು ತಲುಪಿದ ಹಣ್ಣುಗಳನ್ನು ಮಾರಲಾಗುವುದಿಲ್ಲ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಸಾಂಥೋಮೊನಾಸ್ ಆಕ್ಸನೊಪೊಡಿಸ್ ಪಿ ವಿ . ಸಿಟ್ರಿಯ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ತಿಳಿದು ಬಂದಿಲ್ಲ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ದುರದೃಷ್ಟವಶಾತ್, ಸಿಟ್ರಸ್ ಕ್ಯಾಂಕರ್ ಒಮ್ಮೆ ಕಂಡುಬಂದರೆ ಅದರ ವಿರುದ್ಧ ಪರಿಣಾಮಕಾರಿ ನಿಯಂತ್ರಣ ಕ್ರಮ ಇಲ್ಲ. ರೋಗದ ಪರಿಣಾಮವನ್ನು ಕಡಿಮೆ ಮಾಡಲು ಉದುರಿರುವ ಮರದ ವಸ್ತುಗಳನ್ನು ತೆರವು ಮಾಡಿ ನಾಶ ಮಾಡುವುದು - ಮುಂತಾದ ನಿರೋಧಕ ಕ್ರಮಗಳನ್ನು ಬಳಸುವುದು ಅತ್ಯಗತ್ಯ. ಸಿಟ್ರಸ್ ಸೈಲೈಡ್ಸ್ ಅನ್ನು ನಿಯಂತ್ರಿಸುವುದು ಸಹ ಹಾನಿಗಳನ್ನು ಮಿತಿಗೊಳಿಸುವ ಒಂದು ಮಾರ್ಗವಾಗಿದೆ. ತಾಮ್ರ ಆಧಾರಿತ ಶಿಲೀಂಧ್ರನಾಶಕಗಳು ಅಥವಾ ಬ್ಯಾಕ್ಟೀರಿಯಾನಾಶಕಗಳು ಸೋಂಕಿನ ವಿರುದ್ಧ ತಡೆಯನ್ನು ಒದಗಿಸುತ್ತವೆ. ಆದರೆ ಅವುಗಳು ಈಗಾಗಲೇ ಇರುವ ಸೋಂಕಿಗೆ ಚಿಕಿತ್ಸೆ ನೀಡುವುದಿಲ್ಲ.

ಅದಕ್ಕೆ ಏನು ಕಾರಣ

ಸಿಟ್ರಸ್ ಕ್ಯಾಂಕರ್ ಎಂಬುದು ಸಿಟ್ರಸ್ ಮತ್ತು ಅದರ ಇತರ ವಾಣಿಜ್ಯ ಪ್ರಬೇಧದ ತಳಿಗಳಿಗೆ ಬರುವ ಗಂಭೀರ ಮತ್ತು ತೀವ್ರವಾದ ಸಾಂಕ್ರಾಮಿಕ ರೋಗವಾಗಿದೆ. ಇದು ಕ್ಸಂಥಾಮೊನಾಸ್ ಸಿಟ್ರಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಮತ್ತು ಇದು ಹಣ್ಣುಗಳು, ಎಲೆಗಳು ಮತ್ತು ಕಾಂಡಗಳ ಮೇಲಿರುವ ಹಳೆಯ ಗಾಯಗಳಲ್ಲಿ 10 ತಿಂಗಳ ಕಾಲ ಬದುಕಬಲ್ಲದು. ಇದು ಎಲೆಗಳ ಮೇಲ್ಭಾಗದಲ್ಲಿರುವ ಗಾಯಗಳು ಅಥವಾ ನೈಸರ್ಗಿಕ ರಂಧ್ರಗಳ ಮೂಲಕ ಸಸ್ಯದ ಅಂಗಾಂಶಗಳನ್ನು ಪ್ರವೇಶಿಸುತ್ತದೆ ಮತ್ತು ಅಲ್ಲಿ ವ್ಯವಸ್ಥಿತವಾಗಿ ಬೆಳೆಯುತ್ತದೆ. ಎಲೆಗಳು ಮತ್ತು ಇತರ ಅಂಗಾಂಶಗಳ ಮೇಲೆ ಬರುವ ಕುಳಿಗಳಲ್ಲಿ ಬ್ಯಾಕ್ಟೀರಿಯಾವಿರುತ್ತವೆ. ಅವು ಎಲೆಗಳು ಒದ್ದೆಯಾದಾಗ ಹೊರಬರುತ್ತವೆ ಮತ್ತು ಮಳೆಯ ಎರಚಲು ಅಥವಾ ಸಿಂಪಡಿಕೆ ನೀರಾವರಿ ವ್ಯವಸ್ಥೆಗಳ ಮೂಲಕ ಸ್ವಲ್ಪ ದೂರದವರೆಗೆ ಹರಡುತ್ತವೆ. ರೋಗಕ್ಕೆ ಅನುಕೂಲವಾಗುವ ಪರಿಸ್ಥಿತಿಗಳೆಂದರೆ ಅಧಿಕ ಆರ್ದ್ರತೆ, ಉಷ್ಣತೆ (20 ರಿಂದ 30 °C) ಮತ್ತು ಮಳೆಗಾಲದ ಹವಾಮಾನ, ಇವುಗಳ ಜೊತೆ ಜೋರಾದ ಗಾಳಿ. ಸಿಟ್ರಸ್ ಸೈಲೈಡ್ಸ್, ಲೀಫ್ ಮೈನರ್ಸ್, ಹಕ್ಕಿಗಳು, ಹಾಗೆಯೇ ಸೋಂಕಿತ ಉಪಕರಣಗಳು ಮತ್ತು ಸಲಕರಣೆಗಳ ಮೂಲಕ ಮರಗಳು ಅಥವಾ ತೋಪುಗಳ ನಡುವೆ ಬ್ಯಾಕ್ಟೀರಿಯಾವು ಹರಡಬಹುದು. ಅಂತಿಮವಾಗಿ, ಸೋಂಕಿತ ಸಸ್ಯಗಳು ಅಥವಾ ನರ್ಸರಿ ಮರಗಳು ಅಥವಾ ಪ್ರಸರಣ ವಸ್ತುಗಳಂತಹ ಸಸ್ಯಗಳ ಭಾಗಗಳನ್ನು ಒಯ್ಯುವುದು ಕೂಡ ಒಂದು ಸಮಸ್ಯೆಯಾಗಿದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿರಬಹುದಾದ ಸಂಪರ್ಕತಡೆ ನಿಬಂಧನೆಗಳ ಬಗ್ಗೆ ಪರಿಶೀಲಿಸಿ.
  • ರೋಗಕ್ಕೆ ಹೆಚ್ಚು ನಿರೋಧಕವಾಗಿರುವ ಸಿಟ್ರಸ್ ಪ್ರಭೇದಗಳನ್ನು ಆಯ್ಕೆ ಮಾಡಿ.
  • ಆರೋಗ್ಯಕರ ಸಸ್ಯ ಸಾಮಗ್ರಿಗಳನ್ನು, ಸಾಧ್ಯವಾದರೆ ಪ್ರಮಾಣೀಕೃತ ಮೂಲಗಳಿಂದ ಖರೀದಿಸಲು ಮರೆಯದಿರಿ.
  • ರೋಗದ ಚಿಹ್ನೆಗಳಿಗಾಗಿ ಮರಗಳ ಮೇಲ್ವಿಚಾರಣೆ ಮಾಡಿ.
  • ಶುಷ್ಕ ಋತುವಿನಲ್ಲಿ ಸೋಂಕಿಗೊಳಗಾದ ಮರಗಳ ಭಾಗವನ್ನು ಕತ್ತರಿಸಿ.
  • ರೋಗವು ಹರಡದಂತೆ ತಡೆಯಲು ಉಪಕರಣಗಳು ಮತ್ತು ಸಲಕರಣೆಗಳನ್ನು ಉಪಯೋಗಿಸಿದ ನಂತರ ಸ್ವಚ್ಚಗೊಳಿಸಿ.
  • ಎಲೆಗಳು ಒದ್ದೆಯಾಗಿದ್ದಾಗ ಹೊಲದಲ್ಲಿ ಕೆಲಸ ಮಾಡಬೇಡಿ.
  • ವಿವಿಧ ತೋಟಗಳ ನಡುವೆ ಕೆಲಸ ಮಾಡುವಾಗ ಬಟ್ಟೆ ಮತ್ತು ಬೂಟುಗಳನ್ನು ಚೆನ್ನಾಗಿ ಸ್ವಚ್ಛ ಮಾಡಿ.
  • ಹತ್ತಿರದ ಆರೋಗ್ಯಕರ ಮರಗಳಿಗೆ ಸೋಂಕಾಗದಂತೆ ತಡೆಗಟ್ಟಲು ತೀವ್ರವಾಗಿ ಸೋಂಕಿಗೊಳಗಾದ ಮರಗಳನ್ನು ನಾಶಮಾಡಿ.
  • ನೆಲಕ್ಕೆ ಬಿದ್ದ ಎಲೆಗಳು, ಹಣ್ಣುಗಳು ಮತ್ತು ಕೊಂಬೆಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ.
  • ರೋಗ ಪ್ರಸರಣವನ್ನು ತಪ್ಪಿಸಲು ಹೊಲಗಳ ನಡುವೆ ಗಾಳಿತಡೆಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ