ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ ವೇರಿಗೇಟೆಡ್ ಕ್ಲೋರೋಸಿಸ್

Xylella fastidiosa subsp. pauca

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲ್ಭಾಗದ ಅಂತರ್ನಾಳಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.
  • ಎಲೆ ಗರಿಯ ಕೆಳಭಾಗದಲ್ಲಿರುವ ಕ್ಲೋರೋಟಿಕ್ ಕಲೆಗಳ ಕೆಳಗೆ ಸಣ್ಣದಾದ, ಸ್ವಲ್ಪ ಊದಿದ ಗಾಯಗಳು.
  • ಮರಗಳ ಬೆಳವಣಿಗೆ ಕುಂಠಿತಗೊಳ್ಳುವುದು, ರೋಗಪೀಡಿತ ಶಾಖೆಗಳಲ್ಲಿ ವಿಪರ್ಣನೆ ಮತ್ತು ಹಣ್ಣುಗಳ ಗಾತ್ರ ಕಡಿಮೆಯಾಗುವುದು.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಸಿಟ್ರಸ್ ವೇರಿಗೇಟೆಡ್ ಕ್ಲೋರೋಸಿಸ್ ನಿಂದ ಸೋಂಕಿಗೊಳಗಾದ ಸಸ್ಯಗಳು ಸತುವಿನ (ಝಿಂಕ್) ಕೊರತೆಯನ್ನು ಹೋಲುವ ಲಕ್ಷಣಗಳನ್ನು ತೋರಿಸುತ್ತವೆ. ಬೆಳೆಯುತ್ತಿರುವ ಎಲೆಗಳ ಮೇಲ್ಭಾಗದಲ್ಲಿ ಅಂತರನಾಳೀಯ ಕ್ಲೋರೋಸಿಸ್ ಕಂಡುಬರುತ್ತದೆ. ಕ್ಲೋರೊಟಿಕ್ ಅಂಗಾಂಶಗಳ ಕೆಳಗಿರುವ ಎಲೆಗಳ ಕೆಳಭಾಗದಲ್ಲಿ ಸಣ್ಣದಾದ, ತಿಳಿ ಕಂದು ಬಣ್ಣದ, ಸ್ವಲ್ಪಮಟ್ಟಿಗೆ ಊದಿದ ಚುಕ್ಕೆಗಳು ಕ್ರಮೇಣ ಕಾಣಿಸಿಕೊಳ್ಳುತ್ತವೆ. ಈ ರೋಗಲಕ್ಷಣಗಳು ಕೇವಲ ಒಂದು ಶಾಖೆಗೆ ಸೀಮಿತವಾಗಿರಬಹುದು. ಕ್ಲೋರೋಟಿಕ್ ಭಾಗಗಳು ಕ್ರಮೇಣ ಎಲೆಗಳ ಅಂಚಿನ ಕಡೆಗೆ ಹರಡುತ್ತವೆ ಮತ್ತು ಎಲೆಗಳ ಕೆಳಭಾಗದಲ್ಲಿರುವ ಗಾಯಗಳು ಗಾಢ ಕಂದು ಅಥವಾ ನೆಕ್ರೋಟಿಕ್ ಆಗಿ ಬದಲಾಗಬಹುದು. ಸೋಂಕಿತ ಮರಗಳ ಚಟುವಟಿಕೆ ಕಡಿಮೆಯಾಗುತ್ತದೆ ಮತ್ತು ಅವುಗಳು ಕುಂಠಿತವಾಗುತ್ತವೆ. ಆದರೆ ಸಾಮಾನ್ಯವಾಗಿ ಅವು ಸಾಯುವುದಿಲ್ಲ. ಕಿರಿದಾದ ಎಲೆಗಳನ್ನು ಹೊಂದಿರುವ ತುದಿಯ ಕೊಂಬೆಗಳಲ್ಲಿ ವಿಪರ್ಣನವು ಪ್ರಾರಂಭವಾಗುತ್ತದೆ. ಶಾಖೆಗಳಲ್ಲಿ ವಿಪರ್ಣನವಾಗುವುದರಿಂದ ಹಣ್ಣುಗಳು ಬಿಸಿಲಿಗೆ ಬೆಂದಂತಾಗಬಹುದು ಅಥವಾ ಅವುಗಳ ಬಣ್ಣ ಕುಂದಬಹುದು. ಅವುಗಳಲ್ಲಿ ಗಟ್ಟಿಯಾದ ತೊಗಟೆಯಿರಬಹುದು, ರಸ ಕಡಿಮೆಯಿರಬಹುದು ಮತ್ತು ಅವುಗಳ ತಿರುಳಲ್ಲಿ ಆಮ್ಲೀಯ ಪರಿಮಳವಿರಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಶಾರ್ಪ್ ಶೂಟರ್ಗಳ ಸಂಖ್ಯೆಯನ್ನು ನಿಯಂತ್ರಿಸಲು ಗೊನಟೋಸೆರಸ್ ಜಾತಿಯ ಕೆಲವು ಪರಾವಲಂಬಿ ಕಣಜಗಳನ್ನು ಬಳಸಲಾಗಿದೆ. ಈ ಅತಿಸಣ್ಣದಾದ ಕಣಜಗಳ ಲಾರ್ವಾಗಳು ಅವುಗಳ ಮೊಟ್ಟೆಯೊಳಗೆ ಬೆಳೆಯುತ್ತವೆ ಮತ್ತು ಅಲ್ಲಿ ಬೆಳೆಯುತ್ತಿರುವ ಭ್ರೂಣವನ್ನು ಕೊಲ್ಲುತ್ತವೆ. ಟ್ವಿಸ್ಟೆಡ್-ವಿಂಗ್ ಪರಾವಲಂಬಿಗಳು (ಸ್ಟ್ರೆಪ್ಸಿಪ್ಟೆರಾನ್ಸ್) ಶಾರ್ಪ್ ಶೂಟರ್ಗಳನ್ನೂ ಒಳಗೊಂಡಂತೆ ವಿವಿಧ ಕೀಟಗಳ ಮೇಲೆ ಪರಿಣಾಮ ಬೀರುತ್ತವೆ. ಶಾರ್ಪ್ ಶೂಟರ್ಗಳ ಇತರ ನೈಸರ್ಗಿಕ ಶತ್ರುಗಳೆಂದರೆ ಮಂಟಿಡ್ಸ್ ಗಳಂತಹ ಪರಾವಲಂಬಿ ಕೀಟಗಳು, ಕೆಲವು ಸ್ವತಂತ್ರವಾಗಿ ಬದುಕುವ ಜೇಡಗಳು ಮತ್ತು ಅನೋಲ್ಗಳು. ಹಿರ್ಸುಟೆಲ್ಲಾ ಜಾತಿಯ ಕೆಲವು ಶಿಲೀಂಧ್ರಗಳು ಸಹ ಈ ಕೀಟಗಳನ್ನು ಆಕ್ರಮಣ ಮಾಡುತ್ತವೆ ಮತ್ತು ತಂಪಾದ, ಆರ್ದ್ರ ಹವಾಮಾನಗಳಲ್ಲಿ ಅವುಗಳನ್ನು ಹೊಲದಲ್ಲಿ ಒಣಗುವಂತೆ ಮಾಡುತ್ತವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ರೋಗವಾಹಕಗಳ ಸಂಖ್ಯೆಯನ್ನು ಗುರುತಿಸಲು ತೋಪುಗಳನ್ನು ಪರಿಶೀಲಿಸುವ ಮೂಲಕ ಅಥವಾ ಹಳದಿ ಜಿಗುಟಾದ ಕಾರ್ಡುಗಳನ್ನು ನೇತುಹಾಕುವ ಮೂಲಕ ಪರಿಶೀಲಿಸಬೇಕು. ಅಸೆಟಾಮಿಪ್ರಿಡ್ ಹೊಂದಿರುವ ವ್ಯವಸ್ಥಿತ ಮತ್ತು ಟಾಪಿಕಲ್ ಕೀಟನಾಶಕಗಳನ್ನು ಶಾರ್ಪ್ ಶೂಟರ್ಗಳ ವಿರುದ್ಧ ಬಳಸಬಹುದಾಗಿದೆ.

ಅದಕ್ಕೆ ಏನು ಕಾರಣ

ಕ್ಸಿಲೆಲ್ಲಾ ಫಾಸ್ಟಿಡಿಯೋಸಾ ಎಂಬ ಬ್ಯಾಕ್ಟೀರಿಯಾದಿಂದ ಸಿಟ್ರಸ್ ವೇರಿಗೇಟೆಡ್ ಕ್ಲೋರೋಸಿಸ್ ನ ಲಕ್ಷಣಗಳು ಉಂಟಾಗುತ್ತವೆ. ಇದು ಮರದ ನಾಳೀಯ ಕೊಳವೆಗಳಲ್ಲಿ (ಕ್ಸೈಲೆಮ್ ಎಂದು ಕರೆಯಲಾಗುತ್ತದೆ) ವಾಸಿಸುವ ವ್ಯವಸ್ಥಿತ ರೋಗವಾಗಿದ್ದು, ಇದು ಬೀಜಗಳು ಸೇರಿದಂತೆ ಮೇಲಾವರಣ ಮತ್ತು ಹಣ್ಣುಗಳಿಗೆ ಹರಡುತ್ತವೆ. ಇದು ಸಿಕಡೆಲ್ಲಿಡೆ (ಶಾರ್ಪ್ ಶೂಟರ್ ಗಳು) ಕುಟುಂಬದ ಅನೇಕ ಕೀಟಗಳಿಂದ ನಿರಂತರವಾಗಿ ಮರದಿಂದ ಮರಕ್ಕೆ ಹರಡುತ್ತದೆ. ಈ ಎಲೆ ಜಿಗಿ ಹುಳುಗಳು ಸಸ್ಯದ ಕೊಳವೆಯಲ್ಲಿರುವ (ಕ್ಸೈಲೆಮ್) ರಸವನ್ನು ಹೀರುತ್ತವೆ ಮತ್ತು ಎರಡು ಗಂಟೆಗಳಷ್ಟು ಹೀರಿದರೆ ಸಾಕು ಅವು ಆ ಬ್ಯಾಕ್ಟೀರಿಯಾವನ್ನು ಪಡೆಯಬಹುದು. ಅವುಗಳು ಹೆಚ್ಚಿನ ಪ್ರಮಾಣದಲ್ಲಿ ಹೀರುವುದರಿಂದ ಮತ್ತು ಅವುಗಳಿಗೆ ಈ ರೋಗ ತಗುಲುವುದಿಲ್ಲವಾದ್ದರಿಂದ ಅವುಗಳು ಈ ರೋಗಕ್ಕೆ ಸರಿಯಾದ ವಾಹಕಗಳಾಗಿ ಕೆಲಸ ಮಾಡುತ್ತವೆ. ಸೋಂಕಿನ ಒಂದು ವರ್ಷದ ನಂತರ ಮೊದಲ ಲಕ್ಷಣಗಳು ಕಂಡುಬರಬಹುದಾದ್ದರಿಂದ ಇದನ್ನು ಗುರುತಿಸುವುದು ಮತ್ತು ಇದಕ್ಕೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ದೇಶದಲ್ಲಿರಬಹುದಾದ ಸಂಪರ್ಕತಡೆ ನಿಬಂಧನೆಗಳ ಬಗ್ಗೆ ಪರಿಶೀಲಿಸಿ.
  • ಪ್ರಮಾಣೀಕೃತ ಮೂಲಗಳಿಂದ ಸಸ್ಯ ಸಾಮಗ್ರಿ ಮತ್ತು ಬೀಜಗಳನ್ನು ಪಡೆಯಿರಿ.
  • ಶಾರ್ಪ್ ಶೂಟರ್ಗಳು ಅಥವಾ ರೋಗದ ಚಿಹ್ನೆಗಳನ್ನು ಗುರುತಿಸಲು ನಿಮ್ಮ ಸಿಟ್ರಸ್ ತೋಪುಗಳನ್ನು ಆಗಾಗ್ಗೆ ಪರಿಶೀಲಿಸಿ.
  • ಎಲ್ಲಾ ಸಿಬ್ಬಂದಿ ಮತ್ತು ಸಂದರ್ಶಕರು ನೈರ್ಮಲ್ಯ ಕಾಪಾಡಿಕೊಳ್ಳುತ್ತಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಿ.
  • ತೋಪಿನಿಂದ ಸೊಂಕಿತ ಮರಗಳನ್ನು ತೆಗೆದುಹಾಕಿ.
  • ತೋಪಿನ ಸುತ್ತಮುತ್ತಲಿರುವ ಶಾರ್ಪ್ ಶೂಟರ್ಗಳ ಪರ್ಯಾಯ ಆಶ್ರಯದಾತ ಸಸ್ಯಗಳನ್ನು ಪತ್ತೆ ಮಾಡಿ.
  • ಕಳೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ.
  • ಕೀಟಗಳನ್ನು ಪತ್ತೆಹಚ್ಚಲು ಮತ್ತು ಹಿಡಿಯಲು ಹಳದಿ ಜಿಗುಟಾದ ಬಲೆಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ