Spiroplasma citri
ಬ್ಯಾಕ್ಟೀರಿಯಾ
ರೋಗದ ತೀವ್ರತೆ, ಪರಿಸರ, ಮರದ ವಯಸ್ಸು ಮತ್ತು ವರ್ಷದ ಸಮಯವನ್ನು ಅವಲಂಬಿಸಿ ರೋಗಲಕ್ಷಣಗಳು ಬದಲಾಗುತ್ತವೆ. ಬೇಸಿಗೆಯ ತಿಂಗಳುಗಳಲ್ಲಿ ಇವು ಸಾಮಾನ್ಯವಾಗಿ ಹೆಚ್ಚು ಗೋಚರಿಸುತ್ತವೆ ಆದರೆ ಸೋಂಕಿತ ಮರಗಳಲ್ಲಿ ವರ್ಷಾನುವರ್ಷ ಲಕ್ಷಣಗಳು ಕಾಣಿಸದೇ ಇರಬಹುದು. ಇದರ ಲಕ್ಷಣಗಳೆಂದರೆ: ಕುಂಠಿತಗೊಂಡ ಬೆಳವಣಿಗೆ, ನೇರವಾದ, ಗರಿಗಳ ರೀತಿಯ ಎಲೆಗಳು ಮತ್ತು ಚಿಕ್ಕದಾಗಿರುವ ಕಾಂಡದ ಅಂತರಗೆಣ್ಣುಗಳಿರುವ ತೆಳ್ಳಗಿನ ಕ್ಯಾನೋಪಿಯು ಪೊದೆ-ರೀತಿಯ ಬೆಳವಣಿಗೆಗೆ ಕಾರಣವಾಗುತ್ತದೆ. ಚಿಕ್ಕ ಮರಗಳು ಕುಳ್ಳಾಗಿ ಮತ್ತು ಅನುತ್ಪಾದಕವಾಗಿಯೇ ಉಳಿಯಬಹುದು, ಆದರೆ ದೊಡ್ಡ ಮರಗಳಲ್ಲಿ ಒಂದೇ ಶಾಖೆಯಲ್ಲಿ ರೋಗಲಕ್ಷಣಗಳು ಕಂಡುಬರಬಹುದು. ಹೂಬಿಡುವುದು ಅನಿಯಮಿತವಾದ ಕಾರಣ ಹಣ್ಣುಗಳ ಬೆಳವಣಿಗೆ, ಗಾತ್ರ ಮತ್ತು ಪರಿಪಕ್ವತೆಯಲ್ಲಿ ಅಸಹಜತೆ ಕಂಡುಬರುತ್ತದೆ. ಎಲೆಗಳು ಪೌಷ್ಟಿಕಾಂಶದ ಕೊರತೆಯನ್ನು (ಸತು) ಹೋಲುವ ಕೆಲವು ಮಚ್ಚೆಗಳನ್ನು ತೋರುತ್ತವೆ.
ಇಲ್ಲಿಯವರೆಗೂ ಎಸ್. ಸಿಟ್ರಿಯ ಪರಿಣಾಮ ಮತ್ತು ಹರಡುವಿಕೆಯನ್ನು ನಿಯಂತ್ರಿಸಲು ಯಾವುದೇ ಜೈವಿಕ ನಿಯಂತ್ರಣದ ಬಗ್ಗೆ ತಿಳಿದುಬಂದಿಲ್ಲ. ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸಿಟ್ರಸ್ ಸ್ಟಬ್ಬರ್ನ್ ರೋಗಕ್ಕೆ ಯಾವುದೇ ರಾಸಾಯನಿಕ ನಿಯಂತ್ರಣ ಆಯ್ಕೆ ಲಭ್ಯವಿಲ್ಲ. ರೋಗವಾಹಕಗಳ ವಿರುದ್ಧ ಕೀಟನಾಶಕ ಚಿಕಿತ್ಸೆಗಳು ಪರಿಣಾಮಕಾರಿಯಾಗುವುದಿಲ್ಲ, ಏಕೆಂದರೆ ಎಸ್. ಸಿಟ್ರಿಯು ಹಣ್ಣಿನ ತೋಟಕ್ಕೆ ಬಂದ ನಂತರ ಬಹಳ ವೇಗವಾಗಿ ಹರಡಬಹುದು.
ಸ್ಪಿರೋಪ್ಲ್ಯಾಸ್ಮಾ ಸಿಟ್ರಿ ಎಂಬ ಬ್ಯಾಕ್ಟೀರಿಯಾದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ, ಇದು ಮರಗಳ ನಾಳೀಯ ಅಂಗಾಂಶದಲ್ಲಿ (ಆಹಾರ ಕೊಳವೆ) ವಾಸಿಸುತ್ತದೆ ಮತ್ತು ಸಕ್ಕರೆಯ ಸಾಗಣೆಯನ್ನು ನಿರ್ಬಂಧಿಸುತ್ತದೆ. ಹಲವಾರು ಜಾತಿಯ ಲೀಫ್ ಹಾಪರ್ಗಳು ಇದನ್ನು ನಿರಂತರವಾಗಿ ಹರಡುತ್ತವೆ. ಬ್ಯಾಕ್ಟೀರಿಯಾವು ರೋಗವಾಹಕಗಳಲ್ಲಿ ವರ್ಧಿಸುತ್ತದೆ ಆದರೆ ಕೀಟವು ಅದರ ಸಂತತಿಗೆ ಅದನ್ನು ರವಾನಿಸುವುದಿಲ್ಲ. ರೋಗಕಾರಕವನ್ನು ಹರಡುವುದು ಪ್ರಾಥಮಿಕ ಕೆಲಸ, ಅಂದರೆ, ಲೀಫ್ ಹಾಪರ್ನಿಂದ ಸಿಟ್ರಸ್ ವರೆಗೆ. ದ್ವಿತೀಯ ಪ್ರಸರಣ (ಮರದಿಂದ ಮರಕ್ಕೆ) ಸೋಂಕಿತ ಬ್ಯಾಕ್ಟೀರಿಯಾದ ಕಸಿ ಮತ್ತು ಕುಡಿಯೊಡೆಯುವುದಕ್ಕೆ ಸೀಮಿತವಾಗಿರುತ್ತದೆ. ಬೆಚ್ಚಗಿನ ಒಳನಾಡಿನ ಬೆಳೆಯುವ ಪ್ರದೇಶಗಳು ಸ್ಟಬ್ಬರ್ನ್ ರೋಗಕ್ಕೆ ಅನುಕೂಲಕರ, ಅಲ್ಲಿ ಇದು ಮುಖ್ಯವಾಗಿ ಸಿಹಿ ಕಿತ್ತಳೆ, ದ್ರಾಕ್ಷಿಹಣ್ಣು ಮತ್ತು ಟ್ಯಾಂಜೆಲೊ ಮರಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಿಟ್ರಸ್ ಜಾತಿಗಳಲ್ಲಿ ರೋಗಲಕ್ಷಣಗಳ ತೀವ್ರತೆಯು ಬದಲಾಗಬಹುದು. ಈ ರೋಗವು ಹಳೆಯ ತೋಪುಗಳಿಗಿಂತ ಹೊಸ ತೋಪುಗಳಲ್ಲಿ ಹೆಚ್ಚು ಸಮಸ್ಯೆಯಾಗಿರುತ್ತದೆ. ರೋಗಲಕ್ಷಣಗಳು ಸೂಕ್ಷ್ಮವಾಗಿದ್ದಾಗ ಅಥವಾ ಇತರ ಅಸ್ವಸ್ಥತೆಗಳು ಇರುವಾಗ ರೋಗದ ಆರಂಭಿಕ ಹಂತಗಳಲ್ಲಿ ರೋಗನಿರ್ಣಯ ಮಾಡುವುದು ಕಷ್ಟವಾಗುತ್ತದೆ.