ಬಾಳೆಹಣ್ಣು

ಮೊಕೊ ರೋಗ

Ralstonia solanacearum

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಸೋಂಕಿತ ಸಸ್ಯಗಳ ಎಲೆಗಳು ಸೊರಗಲು ಪ್ರಾರಂಭಿಸುತ್ತವೆ, ಮತ್ತು ನಂತರ ಉದುರಿಹೋಗುತ್ತವೆ.
  • ನಾಳೀಯ ಭಾಗವನ್ನು ಕತ್ತರಿಸಿದಾಗ ಅಲ್ಲಿ ಸ್ಪಷ್ಟವಾದ, ತಿಳಿ ಹಳದಿ ಬಣ್ಣ ಅಥವಾ ಕಂದು ಬಣ್ಣದ ವಿಪರ್ಣನವು ಕಂಡುಬರುತ್ತದೆ.
  • ಸೋಂಕಿಗೊಳಗಾದ ಹಣ್ಣುಗಳು ವಿರೂಪಗೊಳ್ಳುತ್ತವೆ ಮತ್ತು ಕೊಳೆತದ ಕಾರಣದಿಂದ ಹಣ್ಣುಗಳು ಒಣಗಿ ತಿರುಳು ನಾಶವಾಗುತ್ತದೆ.
  • ಹಣ್ಣುಗಳನ್ನು ತೆರೆದಾಗ ಬ್ಯಾಕ್ಟೀರಿಯಾದ ರಸಸ್ರಾವ ಕಂಡುಬರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ಸೋಂಕಿತ ಸಸ್ಯಗಳ ಚಿಕ್ಕ ಎಲೆಗಳು ಸೊರಗಲು ಪ್ರಾರಂಭಿಸುತ್ತವೆ, ಮತ್ತು ನಂತರ ನಿರ್ಜೀವಗೊಂಡು ಉದುರಿಹೋಗುತ್ತವೆ. ತೊಟ್ಟುಗಳ ಶಕ್ತಿಗುಂದುತ್ತದೆ, ಮತ್ತು ಇದರಿಂದ ಹಸಿರು ಎಲೆಗಳು ಜೋಲಾಡುತ್ತವೆ ಮತ್ತು ಮರದ ಚಟುವಟಿಕೆ ಸ್ಥಗಿತಗೊಳ್ಳುತ್ತದೆ. ರೋಗವು ಹೆಚ್ಚಾದಂತೆ, ಹಳೆಯ ಎಲೆಗಳಿಗೂ ಕೂಡಾ ಸೋಂಕಾಗುತ್ತದೆ. ನಾಳೀಯ ಭಾಗವನ್ನು ಕತ್ತರಿಸಿದಾಗ ಅಲ್ಲಿ ಸ್ಪಷ್ಟವಾದ, ತಿಳಿ ಹಳದಿ ಬಣ್ಣ ಅಥವಾ ಕಂದು ಬಣ್ಣದ ವಿಪರ್ಣನವು ಕಂಡುಬರುತ್ತದೆ. ಸೋಂಕಿಗೊಳಗಾದ ಹಣ್ಣುಗಳು ವಿರೂಪಗೊಳ್ಳುತ್ತವೆ ಮತ್ತು ಕೊಳೆತದ ಕಾರಣದಿಂದ ಹಣ್ಣುಗಳು ಒಣಗಿ ತಿರುಳು ನಾಶವಾಗುತ್ತದೆ, ಮತ್ತು ಈ ಕಾರಣದಿಂದ ಹಣ್ಣಿನ ತಿರುಳಲ್ಲಿ ಗಾಢ ಕಂದು ಬಣ್ಣದ ವಿಪರ್ಣನ ಕಂಡುಬರುತ್ತದೆ. ಹಣ್ಣುಗಳನ್ನು ತೆರೆದಾಗ ಬ್ಯಾಕ್ಟೀರಿಯಾದ ರಸಸ್ರಾವ ಕಂಡುಬರುತ್ತದೆ. ಮರದ ಸಾಗಣೆ ಅಂಗಾಂಶಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ ಮತ್ತು ಸಸ್ಯದ ಮೇಲಿನ ಭಾಗಗಳಿಗೆ ನೀರಿನ ಮತ್ತು ಪೋಷಕಾಂಶಗಳ ಸಾಗಣೆ ಕಡಿಮೆಯಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸಸ್ಯದ ಸುತ್ತಲೂ ಬ್ಲೀಚಿಂಗ್ ಪುಡಿಯನ್ನು ಹರಡುವುದರಿಂದ ರೋಗದ ಪ್ರಗತಿಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ನಾಟಿಗೆ ಮೊದಲು 1% ಬೋರ್ಡೆಕ್ಸ್ ಮಿಶ್ರಣ, 0.4% ತಾಮ್ರ ಆಕ್ಸಿಕ್ಲೋರೈಡ್ ಅಥವಾ ಸ್ಟ್ರೆಪ್ಟೊಮೈಸಿನ್ ಅಥವಾ ಸ್ಟ್ರೆಪ್ಟೋಸೈಕ್ಲಿನ್ (5 ಗ್ರಾಂ / 10 ಲೀಟರ್) ನಂತಹ ಪ್ರತಿಜೀವಕಗಳನ್ನು ಹಾಕಿ ಮಣ್ಣುಗಳನ್ನು ನೆನೆಸಬಹುದು. ನಾಟಿ ಮಾಡುವ ಮೊದಲು 30 ನಿಮಿಷಗಳ ಕಾಲ 0.4% ತಾಮ್ರ ಆಕ್ಸಿಕ್ಲೋರೈಡ್ (4 ಗ್ರಾಂ / ಲೀ) ನೊಂದಿಗೆ ಮೊಳಕೆಗಳನ್ನು ಸಂಸ್ಕರಿಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಮೊಕೊ ರೋಗದ ನೇರ ರಾಸಾಯನಿಕ ಚಿಕಿತ್ಸೆ ಇಲ್ಲ.

ಅದಕ್ಕೆ ಏನು ಕಾರಣ

ಮೊಕೊ ಎಂಬುದು ಬಾಳೆಹಣ್ಣಿನಲ್ಲಿ ಬರುವ ರೋಗವಾಗಿದ್ದು, ಇದು ರಾಲ್ಸ್ಟೊನಿಯಾ ಸೊಲಾನಕೇರಿಯಮ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ಸೋಂಕಿತ ಸಸ್ಯ ಅಂಗಾಂಶಗಳಲ್ಲಿ ಅಥವಾ ಇತರ ಹೋಸ್ಟ್ ಗಳಲ್ಲಿ ವರ್ಷಪೂರ್ತಿ ಅಥವಾ ಮಣ್ಣಿನಲ್ಲಿ 18 ತಿಂಗಳಿಗಿಂತಲೂ ಹೆಚ್ಚಿನ ಸಮಯದವರೆಗೆ ಬದುಕುತ್ತದೆ. ಹೆಚ್ಚಿನ ಉಷ್ಣತೆ ಮತ್ತು ಹೆಚ್ಚಿನ ಮಣ್ಣಿನ ತೇವಾಂಶವು ಸಾಮಾನ್ಯವಾಗಿ ರೋಗಕ್ಕೆ ಅನುಕೂಲಕರವಾಗಿರುತ್ತವೆ. ಈ ರೋಗಕಾರಕವು ಮರದಿಂದ ಮರಕ್ಕೆ ಅಥವಾ ಹೊಲಗಳ ನಡುವೆ ಅನೇಕ ವಿಧಗಳಲ್ಲಿ ಹರಡಬಹುದು. ಎಲ್ಲಾ ಸಸ್ಯದ ಭಾಗಗಳು (ಬೇರಿನಿಂದ ಹಿಡಿದು ಹಣ್ಣು ಸಿಪ್ಪೆಯವರೆಗೆ) ಸೋಂಕಿನ ಸಂಭಾವ್ಯ ಮೂಲಗಳಾಗಿವೆ. ಈ ಕಾರಣಕ್ಕಾಗಿ, ಸಸ್ಯಗಳನ್ನು ಕತ್ತರಿಸುವುದು ಮತ್ತು ಅವುಗಳಿಗೆ ಗಾಯಗಳನ್ನುಂಟುಮಾಡುವುದನ್ನು ತಡೆಗಟ್ಟಬೇಕು. ಸೋಂಕಿತ ಮಣ್ಣು, ಕಾರಿನ ಟೈರ್, ಉಪಕರಣಗಳು, ಪಾದರಕ್ಷೆಗಳು ಅಥವಾ ಪ್ರಾಣಿಗಳ ಮೂಲಕ ಬಂದಾಗ, ಅದೂ ಸಾಹ ಮಾಲಿನ್ಯದ ಮತ್ತೊಂದು ಮೂಲವಾಗುತ್ತದೆ. ಹೂವುಗಳು ಮತ್ತು ಪರ್ಯಾಯ ಹೋಸ್ಟ್ ಗಳನ್ನು ತಿನ್ನುವ ಕೀಟಗಳು ಅಥವಾ ಪಕ್ಷಿಗಳು (ಜೇನುನೊಣಗಳು, ಕಣಜಗಳು ಮತ್ತು ಹಣ್ಣು ನೊಣಗಳು) ಸಹ ಈ ರೋಗವನ್ನು ಹರಡಬಹುದು. ನೀರಾವರಿ ಅಥವಾ ನೀರಿನ ಹರಿವಿನ ಮೂಲಕ ಸಹ ಈ ರೋಗ ಹರಡಬಹುದು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಪಡೆದ ಆರೋಗ್ಯಕರ ಸಸ್ಯ ವಸ್ತುಗಳನ್ನು ಮಾತ್ರ ಬಳಸಿ.
  • ರೋಗದ ಚಿಹ್ನೆಗಳನ್ನು ಗುರುತಿಸಲು ಹೊಲವನ್ನು ನಿಯಮಿತವಾಗಿ ಪರಿಶೀಲಿಸಿ.
  • ಸಸ್ಯದ ಯಾವುದೇ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಸುಟ್ಟು ಹಾಕಿ.
  • ಫರೋ ನೀರಾವರಿ ಮಾಡಬೇಡಿ ಮತ್ತು ಸಾಧ್ಯವಾದರೆ ಸೋಂಕುರಹಿತ ನೀರನ್ನು ಬಳಸಿ.
  • ರೋಗವು ಮತ್ತಷ್ಟು ಹರಡುವುದನ್ನು ತಡೆಯಲು ಕತ್ತರಿಸುವ ಉಪಕರಣಗಳು, ಪಾದರಕ್ಷೆಗಳು ಮತ್ತು ವಾಹನದ ಚಕ್ರಗಳಲ್ಲಿರಬಹುದಾದ ಸೋಂಕನ್ನು ತೆಗೆಯಿರಿ.
  • ಸಸ್ಯ ಜಲಾನಯನದಲ್ಲಿ 10% ನಷ್ಟು ತಾಜಾ ಹಸು ಸಗಣಿ ಹರಳನ್ನು ಹರಡಿರಿ.
  • ಹೊಲದಿಂದ ಕಳೆಗಳು ಮತ್ತು ಹೆಲಿಕೋನಿಯಾ ಜಾತಿಗಳನ್ನು ತೆಗೆದುಹಾಕಿ.
  • ಉತ್ತಮ ಒಳಚರಂಡಿ ವ್ಯವಸ್ಥೆ ಒದಗಿಸಿ.
  • ಕನಿಷ್ಟ 6 ತಿಂಗಳ ಕಾಲ ಹೊಲವನ್ನು ಖಾಲಿ ಬಿಡಿ.
  • 12 ತಿಂಗಳುಗಳ ಕಾಲ ಸರದಿ ಬೆಳೆ ಮಾಡಿ.
  • ರೋಗದ ಹರಡುವಿಕೆಯನ್ನು ತಡೆಗಟ್ಟಲು ಹೂಬಿಡುವ ಫ್ರೆಂಚ್ ಮಾರಿಗೋಲ್ಡ್ ಅನ್ನು ಹಸಿಗೊಬ್ಬರವಾಗಿ ಬಳಸಿ.
  • ಹೊಲ ಕೆಲಸದ ಸಮಯದಲ್ಲಿ ಸಸ್ಯಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ