ಸೋಯಾಬೀನ್

ಬ್ಯಾಕ್ಟೀರಿಯಾ ಗುಳ್ಳೆ (ಬ್ಯಾಕ್ಟೀರಿಯಲ್ ಪ್ಯುಸ್ಟೂಲ್)

Xanthomonas axonopodis pv. glycines

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಎಲೆಗಳ ಎರಡೂ ಬದಿಗಳಲ್ಲಿ, ಮಧ್ಯದಲ್ಲಿ ಊದಿರುವ ತಿಳಿ ಹಸಿರು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
  • ಗುಳ್ಳೆಗಳು ಕಲೆಗಳ ಮಧ್ಯದಲ್ಲಿ ಬೆಳೆಯುತ್ತವೆ.
  • ಕಂದು ಬಣ್ಣದ ಅನಿಯಮಿತ ನೆಕ್ರೋಟಿಕ್ ತೇಪೆಗಳು ಹುಟ್ಟುತ್ತವೆ.
  • ತೇಪೆಗಳು ಉದುರಿಹೋಗಬಹುದು ಮತ್ತು ಇದರಿಂದ ಎಲೆಗಳು ಸೊರಗಿದಂತೆ ಕಂಡುಬರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಅತೀ ಸಣ್ಣದಾದ, ತಿಳಿ ಹಸಿರು ಬಣ್ಣದ ಕಲೆಗಳು ಕಿರಿಯ ಎಲೆಗಳ ಒಂದು ಅಥವಾ ಎರಡೂ ಬದಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ಕಲೆಗಳ ಮಧ್ಯದಲ್ಲಿ ಊದಿದಂತಿರುತ್ತದೆ ಮತ್ತು ಅದು ನಂತರ ಎಲೆ ಸಿರೆಗಳ ಉದ್ದಕ್ಕೂ ಸಣ್ಣ ತಿಳಿ ಬಣ್ಣದ ಗುಳ್ಳೆಗಳಾಗಿ ಬೆಳೆಯುತ್ತವೆ. ರೋಗದ ನಂತರದ ಹಂತಗಳಲ್ಲಿ, ಈ ಕಲೆಗಳು ಒಂದುಗೂಡುತ್ತವೆ ಮತ್ತು ದೊಡ್ಡ ಕಂದು ಬಣ್ಣದ ಅನಿಯಮಿತ ಗಾಯಗಳಾಗಿ ಹರಡುತ್ತವೆ. ಈ ಸೋಂಕಿತ ಗಾಯಗಳು ಮತ್ತು ಗಾಳಿಯಿಂದ ಎಲೆಗಳು ಹರಿದು ಹೋಗಬಹುದು ಮತ್ತು ಇದರಿಂದ ಎಲೆಗಳು ಸೊರಗಿದಂತೆ ಕಂಡುಬರುತ್ತವೆ. ಬೀಜಕೋಶಗಳ ಮೇಲೂ ಕೂಡ ಸಣ್ಣ ಊದಿದ ಕಲೆಗಳು ಬೆಳೆಯುತ್ತವೆ. ರೋಗವು ಅಕಾಲಿಕ ವಿಪರ್ಣನವನ್ನು ಉಂಟುಮಾಡುತ್ತದೆ ಮತ್ತು ಬೀಜದ ಗಾತ್ರ ಮತ್ತು ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, ಝಾಂಥೋಮೊನಾಸ್ ಆಕ್ಸನೊಪೊಡಿಸ್ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ತಾಮ್ರ ಆಧಾರಿತ ಶಿಲೀಂಧ್ರನಾಶಕಗಳನ್ನು (ಉದಾಹರಣೆಗೆ ತಾಮ್ರದ ಆಕ್ಸಿಕ್ಲೋರೈಡ್, 3ಗ್ರಾಂ/ ನೀರಿನ ಪ್ರತಿ ಲೀ) ರೋಗದ ಆರಂಭಿಕ ಹಂತದಲ್ಲಿ ಹಾಕಿದರೆ ಬೇಕಾದ ಪರಿಣಾಮವನ್ನು ಪಡೆಯಬಹುದು.

ಅದಕ್ಕೆ ಏನು ಕಾರಣ

ಕ್ಸಂಥೋನಾನಸ್ ಆಕ್ಸನೊಪೊಡಿಸ್ ಪಿವಿ. ಗ್ಲೈಸಿನ್ಸ್ ನಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಬೆಳೆ ಉಳಿಕೆಗಳಲ್ಲಿ ಅಥವಾ ಮಣ್ಣಿನಲ್ಲಿರುವ ಬೀಜಗಳ ಮೇಲೆ ಚಳಿಗಾಲವನ್ನು ಕಳೆಯುವ ಬೀಜದಿಂದ ಹರಡುವ ಬ್ಯಾಕ್ಟೀರಿಯಾ. ಇದನ್ನು ಗಾಳಿ, ನೀರಿನ ಹನಿಗಳು, ಮತ್ತು ಕೀಟಗಳು ಹರಡುತ್ತವೆ ಮತ್ತು ಇದು ನೈಸರ್ಗಿಕ ರಂಧ್ರಗಳು ಅಥವಾ ಯಾಂತ್ರಿಕ ಗಾಯಗಳಿಂದ ಸಸ್ಯವನ್ನು ಪ್ರವೇಶಿಸುತ್ತದೆ. ರೋಗವು ಋತುವಿನ ಆರಂಭದಲ್ಲಿ ಸಂಭವಿಸುತ್ತದೆ, ಆದರೆ ನಂತರದ ಸೋಂಕುಗಳು ಸಹ ಸಾಧ್ಯವಿದೆ. ಬೆಚ್ಚಗಿನ ಮತ್ತು ಆರ್ದ್ರ ವಾತಾವರಣಗಳು ರೋಗಕ್ಕೆ ಸೂಕ್ತವಾದವು ಮತ್ತು ಆಗಾಗ್ಗೆ ಬರುವ ಮಳೆ ಮತ್ತು ತೇವವಾದ ಎಲೆಗೊಂಚಲುಗಳೂ ಸಹ ರೋಗಕ್ಕೆ ಸೂಕ್ತ ಪರಿಸ್ಥಿತಿಗಳು. ರೋಗದ ಬೆಳವಣಿಗೆಗೆ ಸೂಕ್ತ ತಾಪಮಾನವೆಂದರೆ 30-33 °C. ಪೊಟಾಶ್ ಮತ್ತು ಫಾಸ್ಪರಸ್ ಈ ರೋಗಕಾರಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳನ್ನು ನೆಡಿ.
  • ರೋಗಕಾರಕ-ಮುಕ್ತ ಬೀಜಗಳನ್ನು ಮಾತ್ರ ಬಳಸಿ.
  • ಹೋಸ್ಟ್ ಅಲ್ಲದ ಬೆಳೆಗಳೊಂದಿಗೆ ಸರದಿ ಬೆಳೆ ಮಾಡಿ.
  • ಹೊಲ ಕೆಲಸದ ಸಮಯದಲ್ಲಿ ಸಸ್ಯಗಳಿಗೆ ಗಾಯಮಾಡಬೇಡಿ, ವಿಶೇಷವಾಗಿ ಎಲೆಗಳು ತೇವವಾಗಿದ್ದಾಗ.
  • ನಿಮ್ಮ ಫಲವತ್ತತೆ ಕೆಲಸದಲ್ಲಿ ಪೊಟಾಷ್ ಮತ್ತು ಫಾಸ್ಪರಸ್ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಹೊಲದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.
  • ಕೊಯ್ಲಿನ ನಂತರ ಆಳವಾಗಿ ಉಳುಮೆ ಮಾಡಿ ಅಥವಾ ಎಲ್ಲಾ ಬೆಳೆ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಸುಟ್ಟು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ