ಆಲೂಗಡ್ಡೆ

ಅಲೂಗೆಡ್ಡೆಯ ಬ್ಲ್ಯಾಕ್ ಲೆಗ್ (ಕಪ್ಪು ಕಾಂಡ)

Pectobacterium atrosepticum

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಕಾಂಡದ ತಳದಲ್ಲಿ ನೀರಿನಲ್ಲಿ-ನೆನೆಸಿದಂತಹ ಗಾಯಗಳು ಕಂಡುಬಂದು, ಅವು ನಂತರ ಸಸ್ಯದ ಮೇಲ್ಭಾಗಕ್ಕೆ ಹರಡುತ್ತವೆ.
  • ಕಾಂಡದ ಆಂತರಿಕ ಅಂಗಾಂಶಗಳು ಕಪ್ಪು ಬಣ್ಣಕ್ಕೆ ತಿರುಗಿ, ಸಾಕಷ್ಟು ನೀರು ಮತ್ತು ಪೋಷಕಾಂಶಗಳ ಪೂರೈಕೆಯನ್ನು ತಡೆಗಟ್ಟುತ್ತದೆ.
  • ತೊಂದರೆಗೊಳಗಾದ ಕಾಂಡಗಳಲ್ಲಿ ಎಲೆಗಳು ಬಾಡಬಹುದು ಮತ್ತು ಬಣ್ಣ ಕಳೆದುಕೊಳ್ಳಬಹುದು.
  • ಅವುಗಳ ಅಂಚುಗಳು ಸುರುಳಿಯಾಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಆಲೂಗಡ್ಡೆ

ರೋಗಲಕ್ಷಣಗಳು

ಬ್ಲ್ಯಾಕ್ ಲೆಗ್ ಸಾಮಾನ್ಯವಾಗಿ ಮೊದಲು ಕಾಂಡದ ತಳದಲ್ಲಿ ನೀರಿನಲ್ಲಿ-ನೆನೆಸಿದಂತಹ ಗಾಯಗಳನ್ನು ತೋರಿಸುತ್ತದೆ. ಗಾಯಗಳು ನಂತರ ಒಗ್ಗೂಡಿ, ಗಾಢವಾಗುತ್ತವೆ ಮತ್ತು ಕಾಂಡದ ಮೇಲ್ಭಾಗಕ್ಕೆ ಹರಡುತ್ತವೆ. ಕಾಂಡದ ಆಂತರಿಕ ಅಂಗಾಂಶಗಳು ಕೊಳೆತು ಕಪ್ಪು ಬಣ್ಣಕ್ಕೆ ತಿರುಗುತ್ತವೆ ಮತ್ತು ಸಸ್ಯಗಳ ಮೇಲಿನ ಭಾಗಗಳಿಗೆ ಸಾಕಷ್ಟು ನೀರು ಮತ್ತು ಪೋಷಕಾಂಶಗಳ ಪೂರೈಕೆಯನ್ನು ತಡೆಗಟ್ಟುತ್ತವೆ. ಸೋಂಕಿಗೊಳಗಾದ ಕಾಂಡಗಳಲ್ಲಿ ಎಲೆಗಳು ಬಾಡಬಹುದು ಮತ್ತು ಮೊದಲು ಹಸಿರು ಬಣ್ಣ ಕಳೆದುಕೊಂಡು ನಂತರ ಕಂದು ಬಣ್ಣಕ್ಕೆ ತಿರುಗುತ್ತವೆ. ಅವುಗಳ ಅಂಚುಗಳು ಸುರುಳಿಯಾಗಿರುತ್ತವೆ. ಸಸ್ಯಗಳು ಕುಸಿಯಬಹುದು ಅಥವಾ ಸುಲಭವಾಗಿ ಮಣ್ಣಿನಿಂದ ಹೊರ ತೆಗೆಯಬಲ್ಲಂತೆ ಆಗುತ್ತವೆ. ಗೆಡ್ಡೆಗಳು ಸಾಮಾನ್ಯವಾಗಿ ಕಪ್ಪು ಬಣ್ಣಕ್ಕೆ ತಿರುಗಿ ಬಳ್ಳಿ ಬೇರುಗಳು ಕೊಳೆಯಲು ಪ್ರಾರಂಭಿಸುತ್ತವೆ. ರೋಗವು ಮುಂದುವರೆದಂತೆ ಸಂಪೂರ್ಣ ಗೆಡ್ಡೆ ಅಥವಾ ಒಳಗಿನ ಕೆಲ ಕೋಶವು ಕೊಳೆಯಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬ್ಯಾಕ್ಟೀರಿಯಾ ವಿರುದ್ಧ ಯಾವುದೇ ಜೈವಿಕ ವಿಧಾನವು ಸಾಧ್ಯವಿಲ್ಲ

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅವುಗಳನ್ನು ಮುಂಜಾಗ್ರತಾ ಕ್ರಮಗಳೊಂದಿಗೆ ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ರೋಗಕಾರಕವು ಹರಡುವುದನ್ನು ತಡೆಗಟ್ಟಲು ತಾಮ್ರದ ಸಂಯುಕ್ತಗಳನ್ನು ಬಳಸಬಹುದು. ಆದಾಗ್ಯೂ, ಇಂತಹ ಸಂಯುಕ್ತಗಳು ಪರಿಸರ ಮತ್ತು ಮಾನವ ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು.

ಅದಕ್ಕೆ ಏನು ಕಾರಣ

ರೋಗದ ಬೆಳವಣಿಗೆ ಸಾಮಾನ್ಯವಾಗಿ ಬೀಜ ಗೆಡ್ಡೆಯು ಹೊರಹೊಮ್ಮುವ ಮುಂಚೆ ಅಥವಾ ನಂತರವೇ ಕೊಳೆಯುವುದರಿಂದ ಪ್ರಾರಂಭವಾಗುತ್ತದೆ. ತೇವಾಂಶವುಳ್ಳ ಪರಿಸ್ಥಿತಿಗಳು ಕೊಳೆತವನ್ನು ಬೆಂಬಲಿಸುತ್ತವೆ. ಹೆಚ್ಚಿನ ಮಣ್ಣಿನ ಸಂಕೋಚನವಿರುವ ಮತ್ತು ನೀರು ನಿಂತಿರುವ ಪ್ರದೇಶಗಳಲ್ಲಿ ಸಸ್ಯಗಳು ಕಪ್ಪು ಕಾಂಡಕ್ಕೆ ಬೇಗ ಒಳಗಾಗುತ್ತವೆ. ಬ್ಯಾಕ್ಟೀರಿಯವು ನೆಲದ ಹತ್ತಿರವಿರುವ ಕೊಳೆತ ಬೇರುಗಳು ಅಥವಾ ಸತ್ತ ಎಲೆಗಳ ಮೂಲಕ ಸಸ್ಯವನ್ನು ಪ್ರವೇಶಿಸುತ್ತವೆ. ಕೀಟಗಳು ಅಥವಾ ಸಲಕರಣೆಗಳಿಂದ ಸಸ್ಯಗಳಿಗಾದ ಹಾನಿಯು ರೋಗಕಾರಕಗಳಿಗೆ ಪ್ರವೇಶ ಬಿಂದುಗಳಾಗಿ ಕಾರ್ಯನಿರ್ವಹಿಸುವ ಗಾಯಗಳಿಗೆ ಕಾರಣವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಬಳಸಿ.
  • ಸಹಿಷ್ಣು ಪ್ರಭೇದಗಳಿವೆಯೇ ಎಂದು ನೋಡಿ.
  • ಸಂಪೂರ್ಣ ಬೀಜ ಗೆಡ್ಡೆಯನ್ನು ನೆಡಿ.
  • ಅದರ ಒಂದು ಭಾಗವನ್ನಲ್ಲ.
  • 10 °C ಗಿಂತ ಕಡಿಮೆ ತಾಪಮಾನವಿರುವ ಶೀತ ಮಣ್ಣಿನಲ್ಲಿ ಆಲೂಗಡ್ಡೆಗಳನ್ನು ನೆಡಬೇಡಿ.
  • ಸಾಕಷ್ಟು ರಸಗೊಬ್ಬರ ಬಳಸಿ.
  • ವಿಶೇಷವಾಗಿ ಸಾರಜನಕವನ್ನು ಬಳಸಿ.
  • 2-3 ವರ್ಷಗಳ ಕಾಲ ಈ ರೋಗ ತಗುಲದ ಸಸ್ಯಗಳೊಂದಿಗೆ ಸರದಿ ಬೆಳೆ ಮಾಡಿ.
  • ಜಮೀನಿನಲ್ಲಿ ನೀರು ಸೂಕ್ತವಾಗಿ ಹರಿದು ಹೋಗುವಂತೆ ಮಾಡಿ ಮತ್ತು ನೀರನ್ನು ಅತಿಯಾಗಿ ಹಾಕಬೇಡಿ.
  • ಜಮೀನನ್ನು ಮೇಲ್ವಿಚಾರಣೆ ಮಾಡಿ ಮತ್ತು ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ.
  • ನಿರ್ವಹಣೆ ಕೆಲಸ ಅಥವಾ ಸುಗ್ಗಿಯ ಸಮಯದಲ್ಲಿ ಸಸ್ಯಕ್ಕೆ ಗಾಯಗಳಾಗುವುದನ್ನು ತಡೆಗಟ್ಟಿ.
  • ಬೆಳೆಗೆ ಬಳಸಲಾಗುವ ಉಪಕರಣಗಳು, ಸಂಗ್ರಹ ಜಾಗಗಳನ್ನು ಮತ್ತು ಯಂತ್ರಗಳನ್ನು ಸೋಂಕು ಮುಕ್ತಗೊಳಿಸಿ.
  • ಸುಗ್ಗಿಯ ನಂತರ ಗದ್ದೆಯಿಂದ ಎಲ್ಲಾ ಸಸ್ಯ ಉಳಿಕೆಗಳನ್ನು ತೆಗೆದುಹಾಕಿ.
  • ಸುಗ್ಗಿಯ ನಂತರ ಮಣ್ಣನ್ನು ಸೌರ ವಿಕಿರಣಕ್ಕೆ ಒಡ್ಡಿ.
  • ಆಲೂಗಡ್ಡೆಗಳನ್ನು ಒಣ ವಾತಾವರಣದಲ್ಲಿ ಕೊಯ್ಲು ಮಾಡಿ ಮತ್ತು ಉಷ್ಣಾಂಶ ಏರಿಳಿತವಿಲ್ಲದ, ಚೆನ್ನಾಗಿ ಗಾಳಿಯಾಡುವ ಸ್ಥಳದಲ್ಲಿ ಶೇಖರಿಸಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ