Xanthomonas sp.
ಬ್ಯಾಕ್ಟೀರಿಯಾ
ಮೊಟ್ಟಮೊದಲ ರೋಗಲಕ್ಷಣಗಳು ಎಳೆಯ ಎಲೆಗಳ ಮೇಲೆ ಸಣ್ಣ, ಹಳದಿ-ಹಸಿರು ಕಲೆಗಳು, ಅವು ಸಾಮಾನ್ಯವಾಗಿ ವಿಕಾರವಾಗಿ ಮತ್ತು ತಿರುಚಿದಂತೆ ಕಂಡುಬರುತ್ತವೆ. ಹಳೆಯ ಎಲೆಗೊಂಚಲುಗಳಲ್ಲಿ, ಕಲೆಗಳು ಹೆಚ್ಚಾಗಿ ಕೋನೀಯ, ಗಾಢ-ಹಸಿರು ಮತ್ತು ಜಿಡ್ಡಿನಂತಿದ್ದು, ಸಾಮಾನ್ಯವಾಗಿ ಹಳದಿ ವರ್ತುಲಗಳಿಂದ ಸುತ್ತುವರಿದಿರುತ್ತವೆ. ಅವು ಎಲೆಯ ಅಂಚಿನಲ್ಲಿ ಅಥವಾ ತುದಿಯಲ್ಲಿ ಹೆಚ್ಚಾಗಿ ಹಲವಾರು ಕಾಣುತ್ತವೆ. ಅಂತಿಮವಾಗಿ, ಮಚ್ಚೆಗಳು ಶಾಟ್ ಹೋಲ್ ಗಳಂತೆ ಕಾಣುತ್ತವೆ, ಏಕೆಂದರೆ ಕೇಂದ್ರವು ಒಣಗಿ ಹೋಗುತ್ತದೆ ಮತ್ತು ಬಿದ್ದುಹೋಗುತ್ತದೆ. ಹಣ್ಣಿನ ಚುಕ್ಕೆಗಳು (0.5 ಸೆ.ಮೀ ವರೆಗೆ) ತೆಳು ಹಸಿರು, ನೀರು-ನೆನೆಸಿದ ಕಲೆಗಳಂತೆ ಪ್ರಾರಂಭವಾಗುತ್ತವೆ, ಇದು ಅಂತಿಮವಾಗಿ ಒರಟಾಗಿ, ಕಂದು ಬಣ್ಣಕ್ಕೆ ತಿರುಗಿ ಸಿಪ್ಪೆ ಏಳುತ್ತದೆ.
ಬ್ಯಾಕ್ಟೀರಿಯಾದ ಸ್ಪಾಟ್ ಗೆ ಚಿಕಿತ್ಸೆ ತುಂಬಾ ಕಷ್ಟದಾಯಕ ಮತ್ತು ದುಬಾರಿ. ಋತುವಿನ ಆರಂಭದಲ್ಲಿ ರೋಗವು ತಗುಲಿದರೆ ಇಡೀ ಬೆಳೆಯನ್ನು ನಾಶಮಾಡುವುದು ಉತ್ತಮ. ಕಾಪರ್ ಹೊಂದಿರುವ ಬ್ಯಾಕ್ಟೀರಿಯಾನಾಶಕಗಳು ಎಲೆಗಳು ಮತ್ತು ಹಣ್ಣುಗಳಿಗೆ ರಕ್ಷಣೆ ನೀಡುತ್ತವೆ. ನಿರ್ದಿಷ್ಟವಾಗಿ ಬ್ಯಾಕ್ಟೀರಿಯಾವನ್ನು ಕೊಲ್ಲುವ ಬ್ಯಾಕ್ಟೀರಿಯಾದ ವೈರಸ್ ಗಳು (ಬ್ಯಾಕ್ಟೀರಿಯೊಫೇಜಸ್) ಲಭ್ಯವಿದೆ. ಬೀಜಗಳನ್ನು ಒಂದು ನಿಮಿಷ 1.3% ಸೋಡಿಯಂ ಹೈಪೋಕ್ಲೋರೈಟ್ ನಲ್ಲಿ ಅಥವಾ 25 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ (50 °C) ನೆನಸಿ ಅಥವಾ ಮುಳುಗಿಸಿ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ತಾಮ್ರ ಆಧಾರಿತ ಬ್ಯಾಕ್ಟೀರಿಯಾನಾಶಕಗಳನ್ನು ರಕ್ಷಕ ವಸ್ತುಗಳಂತೆ ಬಳಸಬಹುದು ಮತ್ತು ಇವು ಭಾಗಶಃ ರೋಗ ನಿಯಂತ್ರಣವನ್ನು ನೀಡುತ್ತವೆ. ರೋಗವು ಮೊದಲ ಬಾರಿಗೆ ಕಂಡುಬಂದ ತಕ್ಷಣವೇ ಇವನ್ನು ಸಿಂಪಡಿಸಬೇಕು ಮತ್ತು ಬೆಚ್ಚಗಿನ, ತೇವಾಂಶವುಳ್ಳ ಪರಿಸ್ಥಿತಿಗಳು ಇದ್ದಾಗ ಮತ್ತೊಮ್ಮೆ 10 ರಿಂದ 14 ದಿನಗಳ ಅಂತರದಲ್ಲಿ ಹಾಕಬೇಕು. ಸಕ್ರಿಯ ಘಟಕಾಂಶ ತಾಮ್ರ ಮತ್ತು ಮನ್ಕೊಜೆಬ್ ಉತ್ತಮ ರಕ್ಷಣೆ ನೀಡುತ್ತವೆ.
ಬ್ಯಾಕ್ಟೀರಿಯಾದ ಚುಕ್ಕೆ ರೋಗ ಪ್ರಪಂಚದಾದ್ಯಂತ ಸಂಭವಿಸುತ್ತದೆ ಮತ್ತು ಬೆಚ್ಚಗಿನ, ತೇವಭರಿತ ಪರಿಸರದಲ್ಲಿ ಬೆಳೆದ ಮೆಣಸು ಮತ್ತು ಇದು ಟೊಮೆಟೊಗಳ ಮೇಲೆ ಬರುವ ಅತ್ಯಂತ ವಿನಾಶಕಾರಿ ರೋಗಗಳಲ್ಲಿ ಒಂದಾಗಿದೆ. ರೋಗಕಾರಕವು ಬೀಜದ ಜೊತೆಜೊತೆಯೇ ಬದುಕುತ್ತದೆ, ಬಾಹ್ಯವಾಗಿ ಅಥವಾ ಆಂತರಿಕವಾಗಿ ಮತ್ತು ನಿರ್ದಿಷ್ಟ ಕಳೆಗಳಲ್ಲಿಯೂ ಬದುಕುತ್ತದೆ ಮತ್ತು ನಂತರ ಮಳೆ ಅಥವಾ ತುಂತುರು ನೀರಾವರಿ ಮೂಲಕ ಹರಡುತ್ತದೆ. ಇದು ಎಲೆ ರಂಧ್ರಗಳು ಮತ್ತು ಗಾಯಗಳ ಮೂಲಕ ಸಸ್ಯವನ್ನು ಪ್ರವೇಶಿಸುತ್ತದೆ. ತಾಪಮಾನವು 25 ರಿಂದ 30 °C ವರೆಗಿದ್ದರೆ ಇದಕ್ಕೆ ಅನುಕೂಲಕರ. ಬೆಳೆಗೆ ಒಮ್ಮೆ ಸೋಂಕಾದರೆ, ರೋಗವನ್ನು ನಿಯಂತ್ರಿಸುವುದು ತುಂಬಾ ಕಷ್ಟ ಮತ್ತು ಇದು ಒಟ್ಟು ಬೆಳೆ ನಷ್ಟಕ್ಕೆ ಕಾರಣವಾಗಬಹುದು.