Pseudomonas syringae pv. syringae
ಬ್ಯಾಕ್ಟೀರಿಯಾ
ಆರಂಭದಲ್ಲಿ ನಿಂಬೆ-ಹಸಿರು ಅಥವಾ ಆಲಿವ್-ಬಣ್ಣದ ಅರೆಪಾರದರ್ಶಕ ತೇಪೆಗಳ ರೂಪದಲ್ಲಿ ಕೆಳಗಿನ ಎಲೆಗಳ ನಾಳಗಳ ಉದ್ದಕ್ಕೂ ಗಾಯಗಳು ಕಾಣಿಸಿಕೊಳ್ಳುತ್ತವೆ. ಅವು ಕ್ರಮೇಣವಾಗಿ ಮೇಲಿನ ಎಲೆಯ ಗೊಂಚಲುಗಳಲ್ಲೂ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಗರಿಷ್ಟ ಹವಾಮಾನದ ಸ್ಥಿತಿಗಳಲ್ಲಿ, ಈ ಗಾಯಗಳು ಉದ್ದವಾಗಿ ಹರಡುತ್ತವೆ ಮತ್ತು ಒಟ್ಟಿಗೆ ಸೇರಿಕೊಳ್ಳುತ್ತವೆ. ರೋಗದ ಆರಂಭಿಕ ಹಂತಗಳಲ್ಲಿ ಸೋಂಕಿತ ಅಂಗಾಂಶಗಳಲ್ಲಿ ಬ್ಯಾಕ್ಟೀರಿಯಾದ ಸ್ರಾವಗಳು ಕೆಲವೊಮ್ಮೆ ಕಾಣಬಹುದಾಗಿದೆ. ಕಾಲಕಳೆದಂತೆ ಗಾಯಗಳ ಮಧ್ಯಭಾಗದಲ್ಲಿ ಕಂದು ಬಣ್ಣದ ಒಣ ಪಟ್ಟಿಗಳು ಬೆಳೆಯುತ್ತವೆ. ನಂತರ ಇವು ಒಣಗಿ ಬಿದ್ದು ಹೋಗುತ್ತವೆ. ಇದರಿಂದ ಎಲೆ ಹರಿದಂತೆ ಕಾಣುತ್ತದೆ. ಕೆಲವು ರೋಗಕ್ಕೆ ಸೂಕ್ಷ್ಮವಾಗಿರುವ ಜೋಳದ ಪ್ರಭೇದಗಳಲ್ಲಿ, ಸುರುಳಿ ಎಲೆಗಳ ಮೇಲೆ ಕ್ಲೋರೋಟಿಕ್ ತೇಪೆ ಮತ್ತು ಸಸ್ಯದ ಮೇಲಿನ ಗೆಣ್ಣುಗಳ ವಿರೂಪತೆಯನ್ನು ಗಮನಿಸಬಹುದು.
ಇಂದಿನವರೆಗೆ, ಯಾವುದೇ ಪರಿಣಾಮಕಾರಿ ಸಾವಯವ ಚಿಕಿತ್ಸೆ ಲಭ್ಯವಿಲ್ಲ. ಜೋಳದಲ್ಲಿ ಬ್ಯಾಕ್ಚೀರಿಯಲ್ ಚುಕ್ಕೆ ನಿಯಂತ್ರಣಕ್ಕೆ ಇರುವ ಪರ್ಯಾಯ ಮಾರ್ಗಗಳು, ತಡೆಗಟ್ಟುವ ಕ್ರಮಗಳು ಮತ್ತು ಉತ್ತಮ ಕೃಷಿಭೂಮಿ ಪದ್ಧತಿಗಳ ಬಳಕೆಗೆ ಸೀಮಿತವಾಗಿವೆ.
ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳೊಂದಿಗೆ, ಜೈವಿಕ ಚಿಕಿತ್ಸೆಗಳಿರುವ ಸಮಗ್ರ ಕೀಟ ಅಥವಾ ರೋಗ ನಿರ್ವಹಣೆ ಯೋಜಿಸಿ. ಪ್ರಸ್ತುತ, ರಾಸಾಯನಿಕ ಚಿಕಿತ್ಸೆ ತಾಮ್ರ ಅಥವಾ ತಾಮ್ರ ಸಂಯೋಜಿತ ಉತ್ಪನ್ನಗಳಿಗೆ ಸೀಮಿತವಾಗಿದೆ. ಅನೇಕ ದ್ರವೌಷಧಗಳು ಸ್ವಲ್ಪ ಮಾತ್ರ ಪರಿಣಾಮಕಾರಿಯಾಗಿವೆ. ಇದರಿಂದಾಗಿ ಸಾಂಕ್ರಾಮಿಕ ರೋಗವು ಒಮ್ಮೆ ಹರಡಿದ ಮೇಲೆ ಅದನ್ನು ನಿಯಂತ್ರಿಸುವುದು ಹೆಚ್ಚು ಕಷ್ಟವಾಗುತ್ತದೆ.
ರೋಗಲಕ್ಷಣಗಳು ಸಸ್ಯದ ಶಕ್ತಿ, ಜೋಳದ ವಿಧ ಮತ್ತು ಪರಿಸರ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ಅನೇಕ ಪರ್ಯಾಯ ಆಶ್ರಯದಾತ ಸಸ್ಯಗಳು ಮತ್ತು ಕಳೆಗಳು (ಹುಲ್ಲುಜೋಳ, ಚಿಕ್ಕಗೋಧಿ, ಕ್ಲೋವರ್) ಮತ್ತು ತಾನೇ ತಾನಾಗಿ ಬೆಳೆದ ಗಿಡಗಳ ಮೇಲೆ ಮಣ್ಣುಗಳಲ್ಲಿರುವ ಬೆಳೆಗಳ ಉಳಿಕೆಗಳಲ್ಲಿ ಈ ಬ್ಯಾಕ್ಟೀರಿಯಾಗಳು ಉಳಿದುಕೊಂಡಿರುತ್ತದೆ. ನೀರಾವರಿ ನೀರು, ಗಾಳಿ ಅಥವಾ ರೋಗಕಾರಕ ತಗಲಿರುವ ಕಾರ್ಮಿಕರು ಮತ್ತು ಉಪಕರಣಗಳಿಂದ ಇದು ಸಸ್ಯಗಳ ನಡುವೆ ಪ್ರಸಾರಣವಾಗುತ್ತದೆ. ನೈಸರ್ಗಿಕ ಬಿರುಕುಗಳು ಅಥವಾ ಗಾಯಗಳ ಮೂಲಕ ಸಸ್ಯಕ್ಕೆ ಸೋಂಕು ತಗುಲುವ ಮುಂಚೆಯೇ ಎಲೆಗಳ ಮೇಲೆ ಬ್ಯಾಕ್ಟೀರಿಯಾ ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ದಿ ಹೊಂದುತ್ತದೆ. ಇದು 0 ಮತ್ತು 35 °C ನಡುವಿನ ತಾಪಮಾನವನ್ನು ತಡೆದುಕೊಳ್ಳಬಲ್ಲದು. ಆದರೆ ಇದು 25-30 °C ವ್ಯಾಪ್ತಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಆರ್ದ್ರ, ಒದ್ದೆ ವಾತಾವರಣದ ಅವಧಿಯಲ್ಲಿ ರೋಗವು ಅಧಿಕವಾಗಿರುತ್ತದೆ. ಋತುವಿನ ಆರಂಭದಲ್ಲಿ ರೋಗ ತಗುಲಿದರೆ, ಕೆಲ ರೈತರು ಇಡೀ ಬೆಳೆಯನ್ನು ಡಿಸ್ಕಿಂಗ್ ಮೂಲಕ ನಾಶ ಮಾಡುತ್ತಾರೆ.