PEMV
ವೈರಸ್
ಇದರ ಮುಖ್ಯ ಲಕ್ಷಣ ಎಂದರೆ ಮೇಲ್ಮೈನಲ್ಲಿ ಹೊರಚಾಚಿಕೊಂಡಂತೆ ವಿಕಾರ ಬೆಳವಣಿಗೆ ಉಂಟಾಗುವುದು. ಎಲೆಗಳ ಕೆಳಭಾಗದಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತದೆ. ರೋಗ ಪ್ರವೇಶಿಸಿದ 5-7 ದಿನಗಳ ನಂತರ ಮೇಲ್ತುದಿಯಲ್ಲಿರುವ ಎಲೆಗಳು ಕೆಳಮುಖವಾಗಿ ಸುರಳಿ ಸುತ್ತಿಕೊಳ್ಳುತ್ತವೆ. ಇದಾದ ನಂತರ ಸಿರೆಗಳು ಬಣ್ಣಕಳೆದುಕೊಂಡು ಮಾಸಿದ ಮಚ್ಚೆಗಳು ಉಂಟಾಗುತ್ತವೆ. ಜೊತೆಗೆ ಎಲೆಗಳ ಮೇಲ್ಮೈನಲ್ಲಿ ಚಿಕ್ಕ ಅರೆ ಪಾರದರ್ಶಕ ಗಾಯಗಳು ಉಂಟಾಗುತ್ತವೆ. ಬೀಜಗಳ ಗಾತ್ರ ಮತ್ತು ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮ ಬೀರಿ ಇಳುವರಿ ನಷ್ಟವಾಗುತ್ತದೆ.
ಪ್ರತಿರೋಧಕ ಪ್ರಬೇಧಗಳನ್ನ ನೆಡಿ. ಗಿಡಹೇನುಗಳ ನಿಯಂತ್ರಣಕ್ಕೆ ಹಳದಿ ಬಣ್ಣದ ಅಂಟು ಬಲೆಗಳನ್ನ ಇಡಿ. ಗಿಡಹೇನುಗಳ ಸಂಖ್ಯೆಯನ್ನ ಕುಗ್ಗಿಸಲು ಮೆಕ್ಕೆ ಜೋಳ, ಹುಲ್ಲುಜೋಳ ಅಥವಾ ಸಜ್ಜೆಯಂತಹ ಎತ್ತರದ ಅಂಚಿನ ಬೆಳೆಗಳನ್ನ ನೆಡಿ.
ಯಾವಾಗಲೂ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಲಭ್ಯವಿರುವ ಜೈವಿಕ ಚಿಕಿತ್ಸೆಯ ಜೊತೆಗೆ ಸಮಗ್ರವಾದ ಮಾರ್ಗವನ್ನು ಆಯ್ದುಕೊಳ್ಳಿ. ಗಿಡಹೇನುಗಳ ಸಂಖ್ಯೆಯ ಮೇಲೆ ನಿಗಾ ಇಡಿ ಮತ್ತು ಸಮಯಕ್ಕೆ ಸರಿಯಾಗಿ ಅನುಮೋದಿಸಿದ ಕೀಟನಾಶಕಗಳನ್ನ ಸಿಂಪಡಿಸಿ.
ಈ ತೊಂದರೆಗೆ ಕಾರಣ ಮೊಸಾಯಿಕ್ ವೈರಸ್ ( Mosaic virus- Luteoviridae). ಇದು ಅಕಿರ್ಥೋಸಿಫೋನ್ ಪಿಸಮ್ (acyrthosiphon pisum) ಮತ್ತು ಮೈಝೂಸ್ ಒರ್ನಾಟಸ್ (myzus ornatus) ಎಂಬ ಗಿಡಹೇನುಗಳ ಮೂಲಕ ಹರಡುತ್ತದೆ. ರೋಗದ ತೀವ್ರತೆ ಗಿಡದ ವಯಸ್ಸಿನ ಮೇಲೆ ಮತ್ತು ವಾತಾವರಣದ ಸ್ಥಿತಿಯ ಮೇಲೆ ಅವಲಂಬಿಸಿದೆ.