ACLSV
ವೈರಸ್
ವೈರಸ್ ಸ್ಟ್ರೈನ್ ಮತ್ತು ಆತಿಥೇಯ ಸಸ್ಯದ ಜಾತಿ ಅಥವಾ ಸೋಂಕಿತ ತಳಿಯನ್ನು ಅವಲಂಬಿಸಿ ರೋಗವು ವೈವಿಧ್ಯಮಯ ರೋಗಲಕ್ಷಣಗಳನ್ನು ತೋರಿಸಬಹುದು. ಆದಾಗ್ಯೂ, ಹೆಚ್ಚಿನ ತಳಿಗಳಲ್ಲಿ, ವೈರಸ್ ಸುಪ್ತವಾಗಿರುತ್ತದೆ. ಅಂದರೆ ಇದರರ್ಥ ಸೋಂಕಿತ ಸಸ್ಯಗಳು ಗಮನಿಸಬಹುದಾದ ಲಕ್ಷಣಗಳನ್ನು ತೋರಿಸುವುದಿಲ್ಲ. ಎಲೆಗಳ ಮೇಲಿನ ರೋಗಲಕ್ಷಣಗಳು ಕ್ಲೋರೋಟಿಕ್ ಎಲೆಯ ಕಲೆಗಳು ಮತ್ತು ರೇಖೆ ಮಾದರಿಯ ಪಟ್ಟಿಗಳಿಂದ ನಿರೂಪಿಸಲ್ಪಡುತ್ತವೆ ಮತ್ತು ಅಕಾಲಿಕ ಎಲೆಗಳಚುವಿಕೆಗೆ ಕಾರಣವಾಗಬಹುದು. ಮರಗಳ ಬೆಳವಣಿಗೆ ಕುಂಠಿತವಾದಂತೆ ಕಾಣುತ್ತದೆ ಮತ್ತು ಅವುಗಳ ಒಳ ತೊಗಟೆ ಮತ್ತು ರೋಗಗ್ರಸ್ತ ಮೊಗ್ಗುಗಳು ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಟರ್ಮಿನಲ್ ಡೈ ಬ್ಯಾಕ್ (ಬುಡ ಒಣಗುವುದು) ಕೂಡ ವೈರಸ್‌ನ ಸ್ಪಷ್ಟ ಲಕ್ಷಣವಾಗಿದೆ. ಇದು ಸೇಬಿನ ಎಲೆಗಳ ಮೇಲೆ ಗಾಢ ಹಸಿರು ಬಣ್ಣದ ಗುಳಿಬಿದ್ದ ಕಲೆಗಳು ಅಥವಾ ಅಲೆಅಲೆಯಾದ ಗೆರೆಗಳನ್ನು ಉಂಟುಮಾಡಬಹುದು.
ಈ ರೋಗದ ವಿರುದ್ಧ ಲಭ್ಯವಿರುವ ಯಾವುದೇ ಜೈವಿಕ ನಿಯಂತ್ರಣ ವಿಧಾನದ ಬಗ್ಗೆ ನಮಗೆ ಇಂದಿಗೂ ತಿಳಿದಿಲ್ಲ. ರೋಗಲಕ್ಷಣಗಳ ಸಂಭವ ಅಥವಾ ಅದರ ಗುರುತ್ವವನ್ನು ಕಡಿಮೆ ಮಾಡಲು ಯಾವುದೇ ಯಶಸ್ವಿ ವಿಧಾನ ನಿಮಗೆ ತಿಳಿದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಈ ರೋಗದ ವಿರುದ್ಧ ಯಾವುದೇ ರಾಸಾಯನಿಕ ನಿಯಂತ್ರಣ ವಿಧಾನದ ಬಗ್ಗೆ ನಮಗೆ ತಿಳಿದಿಲ್ಲ. ರೋಗಲಕ್ಷಣಗಳ ಸಂಭವ ಅಥವಾ ಅದರ ಗುರುತ್ವವನ್ನು ಕಡಿಮೆ ಮಾಡಲು ಯಾವುದೇ ಯಶಸ್ವಿ ವಿಧಾನ ನಿಮಗೆ ತಿಳಿದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ರೋಗವು ಟ್ರೈಕೋವೈರಸ್ ಗುಂಪಿನ ವೈರಸ್‌ನಿಂದ ಉಂಟಾಗುತ್ತದೆ ಮತ್ತು ಇದು ಸ್ಟೋನ್ ಮತ್ತು ಪೋಮ್ ಹಣ್ಣುಗಳ ಮೇಲೆ ಪರಿಣಾಮ ಬೀರುವ ಆರ್ಥಿಕವಾಗಿ ಅತ್ಯಂತ ಪ್ರಮುಖವಾದ ವೈರಸ್‌ಗಳಲ್ಲಿ ಒಂದಾಗಿದೆ. ರೋಗವು ಸಸ್ಯಕ ಪ್ರಸರಣ, ಕಸಿ ಮತ್ತು ಮೇಲ್ಭಾಗವನ್ನು ಕತ್ತರಿಸುವ ಮೂಲಕ ಹರಡುತ್ತದೆ. ಈ ವೈರಸ್ ಸೇಬಿನ ಬೆಳವಣಿಗೆ ಮತ್ತು ಉತ್ಪಾದಕತೆಯ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಬಹುದು. ಹೆಚ್ಚಿನ ಸೋಂಕಿತ ಮರಗಳಲ್ಲಿ ಗೋಚರಿಸುವಂತಹ ರೋಗಲಕ್ಷಣಗಳು ಇಲ್ಲದಿರುವುದು, ಅರಿವಿಲ್ಲದೆಯೇ ಸೋಂಕಿತ ಸ್ಟಾಕ್ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ. ವೈರಸ್ ಸೇಬಿನ ಬೆಳವಣಿಗೆ ಮತ್ತು ಉತ್ಪಾದಕತೆಯ ಮೇಲೆ 30% ವರೆಗೂ ವಿನಾಶಕಾರಿ ಪರಿಣಾಮವನ್ನು ಬೀರಬಹುದು.