ಬೆಂಡೆಕಾಯಿ

ಬೆಂಡೆಕಾಯಿಯ ಹಳದಿ ನಾಳ ಮೊಸಾಯಿಕ್ ವೈರಸ್

BYVMV

ವೈರಸ್

ಸಂಕ್ಷಿಪ್ತವಾಗಿ

  • ಬೆಂಡೆಕಾಯಿಯ ಈ ವೈರಲ್ ರೋಗವು ಗಮನಾರ್ಹ ಇಳುವರಿ ನಷ್ಟಕ್ಕೆ ಕಾರಣವಾಗಬಹುದು.
  • ಇದು ಎಲ್ಲಾ ಬೆಳೆ ಹಂತಗಳಲ್ಲಿ ಸಂಭವಿಸುತ್ತದೆ ಮತ್ತು ಬಿಳಿನೊಣ (ಬೆಮಿಸಿಯಾ ಟ್ಯಾಬಾಸಿ)ದಿಂದ ಹರಡುತ್ತದೆ.
  • ಎಲೆಗಳ ಮೇಲೆ ಹಳದಿ ನಾಳಗಳು ಮತ್ತು ಮೊಸಾಯಿಕ್ ಮಾದರಿಗಳು ಉಂಟಾಗುತ್ತವೆ.
  • ಆರಂಭಿಕ ಹಂತದಲ್ಲೇ ಬೆಳೆ ಸೋಂಕಿಗೆ ಒಳಗಾಗಿದ್ದರೆ ಹಣ್ಣಿನ ಇಳುವರಿಯಲ್ಲಿ ಗರಿಷ್ಠ 96% ಇಳಿಕೆ ಕಂಡು ಬರಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬೆಂಡೆಕಾಯಿ

ರೋಗಲಕ್ಷಣಗಳು

ಈ ಕಾಯಿಲೆಯು ವಿವಿಧ ಹಂತದ ಕ್ಲೋರೋಸಿಸ್ ಮತ್ತು ನಾಳಗಳು ಮತ್ತು ಕಿರುನಾಳಗಳ ಹಳದಿಯಾಗುವಿಕೆ, ಮೊಸಾಯಿಕ್ ತರಹದ ಪರ್ಯಾಯ ಹಸಿರು ಮತ್ತು ಹಳದಿ ತೇಪೆಗಳು, ಸಣ್ಣ ಎಲೆಗಳು, ಕಡಿಮೆ ಮತ್ತು ಸಣ್ಣ ಹಣ್ಣುಗಳು ಮತ್ತು ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುವುದು ಮುಂತಾದವುಗಳನ್ನು ಒಳಗೊಂಡಿದೆ. ಆರಂಭದಲ್ಲಿ, ಸೋಂಕಿತ ಎಲೆಗಳು ಹಳದಿ ನಾಳಗಳನ್ನು ಮಾತ್ರ ತೋರಿಸುತ್ತವೆ. ಆದರೆ ನಂತರದ ಹಂತಗಳಲ್ಲಿ ಸಂಪೂರ್ಣ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮೊಳಕೆಯೊಡೆದ 20 ದಿನಗಳಲ್ಲಿ ಸಸ್ಯಗಳು ಸೋಂಕಿಗೆ ಒಳಗಾದಾಗ ಅವುಗಳು ಕುಂಠಿತವಾಗುತ್ತವೆ. ಆರಂಭಿಕ ಋತುವಿನಲ್ಲಿ ಎಳೆಯ ಎಲೆಗಳು ಸೋಂಕಿಗೆ ಒಳಗಾಗಿದ್ದರೆ, ಅವು ಸಂಪೂರ್ಣವಾಗಿ ಹಳದಿ, ಕಂದು ಬಣ್ಣಕ್ಕೆ ತಿರುಗಿ ನಂತರ ಒಣಗುತ್ತವೆ. ಹೂಬಿಟ್ಟ ನಂತರ ಸೋಂಕಿಗೆ ಒಳಗಾದ ಸಸ್ಯಗಳು, ಮೇಲಿನ ಎಲೆಗಳು ಮತ್ತು ಹೂಬಿಡುವ ಭಾಗಗಳಿಂದ ನಾಳಗಳು ಇಲ್ಲವಾಗುವ ಲಕ್ಷಣಗಳನ್ನು ತೋರಿಸುತ್ತವೆ. ಅವು ಕೆಲವು ಹಣ್ಣುಗಳನ್ನು ಉತ್ಪಾದಿಸುತ್ತವಾದರೂ, ಅವು ಹಳದಿ ಬಣ್ಣದ್ದಾಗಿರುತ್ತವೆ ಮತ್ತು ಗಟ್ಟಿಯಾಗಿರುತ್ತವೆ. ಋತುವಿನ ಅಂತ್ಯದವರೆಗೆ ಆರೋಗ್ಯಕರವಾಗಿದ್ದ ಮತ್ತು ಸಾಮಾನ್ಯವಾಗಿ ಹಣ್ಣುಗಳನ್ನು ಉತ್ಪಾದಿಸುತ್ತಿದ್ದ ಸಸ್ಯಗಳು ನಂತರ ಕಾಂಡದ ತಳದ ಭಾಗದಲ್ಲಿ ಕೆಲವು ಸಣ್ಣ ಚಿಗುರುಗಳನ್ನು ಪಡೆಯುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

5% ಬೇವಿನ ಬೀಜದ ಸಾರ ಅಥವಾ ಶುಂಠಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿ ಸಾರಗಳನ್ನು ಸಿಂಪಡಿಸುವ ಮೂಲಕ ವಾಹಕವನ್ನು ನಿರ್ಬಂಧಿಸಿ. ಕಳ್ಳಿ ತುಂಡುಗಳನ್ನು ಅಥವಾ ಮಿಲ್ಕ್ ಬುಷ್ ಕತ್ತರಿಸಿ, ನೀರಿನಲ್ಲಿ ಮುಳುಗಿಸಿ (ತುಂಡುಗಳು ತೇಲುವಷ್ಟು ಸಾಕು). ಇದನ್ನು 15 ದಿನಗಳವರೆಗೆ ಹುದುಗಲು ಬಿಡಿ. ಇದನ್ನು ಸೋಸಿ ಮತ್ತು ಪೀಡಿತ ಸಸ್ಯಗಳ ಮೇಲೆ ಸಿಂಪಡಿಸಿ. ಬೇವಿನ ಮತ್ತು ಸಾಸಿವೆ ಎಣ್ಣೆ, ರೈಜೋಬ್ಯಾಕ್ಟೀರಿಯಾ, ಪಾಮರೋಸಾ ಎಣ್ಣೆಯ ನಂತರ ಕ್ರೋಜೋಫೆರಾ ಎಣ್ಣೆಯನ್ನು ಸಿಂಪಡಿಸಿ. ಎಣ್ಣೆ @ 0.5% ಮತ್ತು 0.5% ಬಟ್ಟೆ ಸೋಪಿನ ಮಿಶ್ರಣವು ಸಹಾಯ ಮಾಡುತ್ತದೆ ಎಂದು ವರದಿಯಾಗಿದೆ.

ರಾಸಾಯನಿಕ ನಿಯಂತ್ರಣ

ವೈರಸ್ ಅನ್ನು ರಾಸಾಯನಿಕ ವಿಧಾನಗಳಿಂದ ಸಂಪೂರ್ಣವಾಗಿ ನಿಯಂತ್ರಿಸಲಾಗುವುದಿಲ್ಲ. ಆದ್ದರಿಂದ, ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸುವುದು ಸೂಕ್ತವಾಗಿದೆ. ಕೆಲವು ಬಿಳಿನೊಣಗಳ ಗುಂಪುಗಳು ಮತ್ತು ರೋಗಗಳ ವಿರುದ್ಧ ಮಣ್ಣಿಗೆ ಕೀಟನಾಶಕಗಳನ್ನು ಮೊದಲೇ ಹಾಕುವುದು ಅತ್ಯಂತ ಪರಿಣಾಮಕಾರಿ ವಿಧಾನವೆಂದು ಕಂಡುಬಂದಿದೆ. ಬಿಳಿನೊಣ ಎಲ್ಲಾ ಕೀಟನಾಶಕಗಳಿಗೆ ತ್ವರಿತವಾಗಿ ಪ್ರತಿರೋಧವನ್ನು ಬೆಳೆಸಿಕೊಳ್ಳುತ್ತವೆ. ಆದ್ದರಿಂದ ವಿಭಿನ್ನ ಸೂತ್ರೀಕರಣವನ್ನು ಸರದಿ ಪ್ರಕಾರ ಬಳಸುವುದನ್ನು ಶಿಫಾರಸು ಮಾಡಲಾಗುತ್ತದೆ. ಅಸೆಟಾಮಿಪ್ರಿಡ್ 20 ಎಸ್‌ಪಿ @ 40 ಗ್ರಾಂ ಎ.ಐ / ಹೆಕ್ಟೇರ್‌ನ ಎರಡು ದ್ರವೌಷಧಗಳು ಮೊಸಾಯಿಕ್ ವೈರಸ್‌ನ ಸಂಭವವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಸಾಬೀತಾಗಿದೆ ಮತ್ತು ನಂತರದಲ್ಲಿ ಬೆಂಡೆಕಾಯಿಯ ಇಳುವರಿಯನ್ನು ಹೆಚ್ಚಿಸುತ್ತದೆ. ಇಮಿಡಾಕ್ಲೋಪ್ರಿಡ್ 17.8% ಎಸ್ಎಲ್ ಎರಡು ಬಾರಿ ಬಳಸುವುದರಿಂದ ಮತ್ತು ಒಂದು ಬೀಜ ಸಂಸ್ಕರಣೆ (ಇಮಿಡಾಕ್ಲೋಪ್ರಿಡ್ @ 5 ಗ್ರಾಂ / ಕೆಜಿ ಬೀಜ)ಯಿಂದ ಕೀಟಗಳ ಸಂಖ್ಯೆಯನ್ನು 90.2% ವರೆಗೂ ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಅದಕ್ಕೆ ಏನು ಕಾರಣ

ಬಿಳಿನೊಣಗಳ ಮೂಲಕ ಹರಡುವ ಬೆಗೊಮೊವೈರಸ್‌ನಿಂದ ಹಾನಿ ಉಂಟಾಗುತ್ತದೆ. ವೈರಸ್‌ಗಳು ತಮ್ಮ ವಾಹಕಗಳಲ್ಲಿ ಸಂತಾನೋತ್ಪತ್ತಿ ಮಾಡುವುದಿಲ್ಲ ಆದರೆ ವಯಸ್ಕ ಬಿಳಿನೊಣಗಳ ಮೂಲಕ ವಿವಿಧ ವಿಧಾನಗಳಿಂದ ಸಸ್ಯದಿಂದ ಸಸ್ಯಕ್ಕೆ ಸುಲಭವಾಗಿ ಚಲಿಸುತ್ತವೆ. ವೈರಸ್ ಹರಡುವಲ್ಲಿ ಪುರುಷರಿಗಿಂತ ಹೆಣ್ಣು ಬಿಳಿನೊಣಗಳು ಹೆಚ್ಚು ಪರಿಣಾಮಕಾರಿ. ಈ ವೈರಲ್ ರೋಗವು ಬೆಳವಣಿಗೆಯ ಎಲ್ಲಾ ಹಂತಗಳಲ್ಲಿಯೂ ತಗುಲುತ್ತದೆ. ಆದಾಗ್ಯೂ, 35 ರಿಂದ 50 ದಿನಗಳವರೆಗಿನ ಕಾಲ ಹೆಚ್ಚು ರೋಗಕ್ಕೆ ಒಳಗಾಗುವ ಹಂತವಾಗಿದೆ. ಬಿಳಿನೊಣಗಳ ಸಂಖ್ಯೆ ಮತ್ತು ವೈರಸ್‌ನ ತೀವ್ರತೆಯು ಹೆಚ್ಚಾಗಿ ತಾಪಮಾನ, ತೇವಾಂಶ ಮತ್ತು ಕನಿಷ್ಠ 20-30°C ಉಷ್ಣಾಂಶದಿಂದ ಪ್ರಭಾವಿತವಾಗಿರುತ್ತದೆ. ಎರಡನೆಯ ಪ್ರಮುಖ ವಾಹಕವೆಂದರೆ ಓಕ್ರಾ ಲೀಫ್ ಹಾಪರ್ (ಅಮ್ರಾಸ್ಕಾ ಡೆವಾಸ್ಟಾನ್ಸ್)


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳಾದ ಪರಭಾನಿ ಕ್ರಾಂತಿ (ಅರ್ಕಾ ಅಭಯ್, ವರ್ಷಾ, ಉಪಹಾರ್) ಮತ್ತು ಅರ್ಕಾ ಅನಾಮಿಕಾ ಬೆಳೆಯಿರಿ.
  • ಸರಿಯಾದ ಬೆಳೆ ಅಂತರವನ್ನು ಕಾಪಾಡಿಕೊಳ್ಳಿ.
  • ವಾಹಕ ಕೀಟಗಳನ್ನು ಹಿಡಿದು ಹಾಕಲು ಮೆಕ್ಕೆ ಜೋಳ ಅಥವಾ ಮಾರಿಗೋಲ್ಡ್ ಅನ್ನು ಗಡಿ ಬೆಳೆಯಾಗಿ ನೆಡಬೇಕು.
  • ಬೇಸಿಗೆಯಲ್ಲಿ ನಾಟಿ ಮಾಡುವುದನ್ನು ತಪ್ಪಿಸಿ.
  • ಏಕೆಂದರೆ ಆ ಕಾಲದಲ್ಲಿ ಬಿಳಿನೊಣಗಳು ಗರಿಷ್ಠ ಪ್ರಮಾಣದಲ್ಲಿರುತ್ತವೆ.
  • ಬಿಳಿನೊಣಗಳ ಚಟುವಟಿಕೆಯು ಅಧಿಕವಾಗಿರುವ, ಬೇಸಿಗೆಯಲ್ಲಿ ರೋಗಕ್ಕೆ ಒಳಗಾಗುವ ಪ್ರಭೇದಗಳನ್ನು ಬಿತ್ತನೆ ಮಾಡುವುದನ್ನು ತಪ್ಪಿಸಿ.
  • ವಾಹಕ ಕೀಟಗಳನ್ನು ನಿಯಂತ್ರಿಸಲು ಮತ್ತು ಹಿಡಿಯಲು ಸಸ್ಯದ ಎತ್ತರಕ್ಕಿಂತ ಮೇಲೆ ಹಳದಿ ಜಿಗುಟಾದ ಬಲೆಗಳನ್ನು (12/ಎಕರೆ) ಇರಿಸಿ.
  • ಸಾಧ್ಯವಾದಾಗಲೆಲ್ಲಾ ಕಳೆಗಳು ಮತ್ತು ಇತರ ಕಾಡು ಆಶ್ರಯದಾತ ಸಸ್ಯಗಳನ್ನು ನಾಶಮಾಡಿ.
  • ವಿಶೇಷವಾಗಿ ಕ್ರೋಟಾನ್ ಸ್ಪಾರ್ಸಿಫ್ಲೋರಾ ಮತ್ತು ಅಜೆರಲಿಯಮ್ ಜಾತಿ, ಇತ್ಯಾದಿ.
  • ಪೀಡಿತ ಸಸ್ಯಗಳನ್ನು ಹೊಲದಿಂದ ತೆಗೆದುಹಾಕಿ ಮತ್ತು ಅವುಗಳನ್ನು ಸುಟ್ಟುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ