ಹತ್ತಿ

ಹತ್ತಿಯ ಎಲೆ ಸುರುಳಿ ವೈರಸ್

CLCuV

ವೈರಸ್

ಸಂಕ್ಷಿಪ್ತವಾಗಿ

  • ಹತ್ತಿಯ ಎಲೆ ಸುರುಳಿ ವೈರಸ್ ಬಿಳಿ ನೊಣಗಳಿಂದ ಹರಡುತ್ತವೆ ಮತ್ತು ಎಲೆಯು ಅಂಚಿನಲ್ಲಿ ಮೇಲ್ಮುಖವಾಗಿ ಸುತ್ತಿಕೊಳ್ಳುವುದು ಮತ್ತು ಎಲೆಗಳ ಕೆಳಭಾಗದಲ್ಲಿ ಎಲೆ ಆಕಾರದ ಬೆಳವಣಿಗೆಗಳಿಂದ ಗುರುತಿಸಲಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹತ್ತಿ

ರೋಗಲಕ್ಷಣಗಳು

ಹತ್ತಿ ಎಲೆ ಸುರುಳಿ ವೈರಸ್ ನ ಪ್ರಾಥಮಿಕ ಲಕ್ಷಣವೆಂದರೆ ಎಲೆಗಳು ಮೇಲ್ಮುಖವಾಗಿ ಸುರುಳಿ ಸುತ್ತುವುದು. ಇದಕ್ಕೆ ಹೆಚ್ಚುವರಿಯಾಗಿ, ಎಲೆಯ ನಾಳಗಳು ದಪ್ಪವಾಗಬಹುದು ಮತ್ತು ಗಾಢವಾಗಬಹುದು ಮತ್ತು ಸಾಮಾನ್ಯವಾಗಿ ಎಲೆಗಳ ಆಕಾರದಲ್ಲಿರುವ ಹೊರ ಬೆಳವಣಿಗೆ (ಎನಾಕ್ಷನ್ ಗಳು ) ಎಲೆಗಳ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಹೂವುಗಳು ತೆರೆದುಕೊಳ್ಳುವುದಿಲ್ಲ ಮತ್ತು ನಂತರ ಬೀಜಕೋಶಗಳ ಜೊತೆಗೆ ಉದುರುತ್ತವೆ. ಋತುವಿನ ಆರಂಭದಲ್ಲಿ ಸಸ್ಯಗಳು ಸೋಂಕಿಗೆ ಒಳಗಾಗಿದ್ದರೆ, ಅವುಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಮತ್ತು ಇಳುವರಿ ಗಮನಾರ್ಹವಾಗಿ ಕಡಿಮೆಯಾಗುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬಿಳಿ ನೊಣಗಳ ಸಂಖ್ಯೆಯನ್ನು ಸಾಮಾನ್ಯವಾಗಿ ನೈಸರ್ಗಿಕ ಶತ್ರುಗಳ ಮೂಲಕ ನಿಯಂತ್ರಿಸಬಹುದು (ಉದಾ. ಲೇಸ್ವಿಂಗ್ಸ್, ಬಿಗ್ ಐಯಡ್ ತಿಗಣೆ ಮತ್ತು ಮೈನ್ಯೂಟ್ ಪೈರೇಟ್ ತಿಗಣೆ). ಆದ್ದರಿಂದ ರಾಸಾಯನಿಕ ಕೀಟನಾಶಕಗಳ ಅತಿರೇಕದ ಸಿಂಪಡಿಸುವಿಕೆಯಿಂದ ಇವುಗಳನ್ನು ಕೊಲ್ಲದಂತೆ ಜಾಗರೂಕರಾಗಿರಿ. ಬೇವಿನ ಎಣ್ಣೆ ಅಥವಾ ಪೆಟ್ರೋಲಿಯಂ ಆಧಾರಿತ ತೈಲಗಳನ್ನು ಬಳಸಬಹುದು ಮತ್ತು ಸಸ್ಯಗಳ ಮೇಲೆ ಚೆನ್ನಾಗಿ ಅದರಲ್ಲೂ ಮುಖ್ಯವಾಗಿ ಎಲೆಗಳ ಕೆಳಭಾಗಕ್ಕೆ ಸರಿಯಾಗಿ ಹಾಕಬೇಕು. ಇತ್ತೀಚಿನ ಸಂಶೋಧನೆಯು ವೈರಾಣುವಿನ ಸಂಭವನೀಯತೆಯನ್ನು ಕಡಿಮೆ ಮಾಡುವ ವಿಧಾನವಾಗಿ ಲಾಭದಾಯಕ ಪ್ರತ್ಯೇಕಿತ ಬ್ಯಾಕ್ಟೀರಿಯಾದ ತಳಿಗಳನ್ನು (ಬಾಸಿಲಸ್, ಸ್ಯೂಡೋಮೊನಸ್ ಮತ್ತು ಬರ್ಕ್ಹೋಲ್ಡೆರಿಯಾ) ಜೈವಿಕ ನಿಯಂತ್ರಣ ಏಜೆಂಟ್ ಗಳಾಗಿ ಬಳಸುವ ಸಂಭಾವ್ಯತೆಯನ್ನು ಸೂಚಿಸಿವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಹತ್ತಿಯ ಎಲೆ ಸುರುಳಿ ವೈರಸ್ ಅನ್ನು ತಡೆಗಟ್ಟುವ ಅಥವಾ ಕಡಿಮೆ ಮಾಡುವ ಯಾವುದೇ ವಿಧಾನಗಳು ಇಲ್ಲ. ರಾಸಾಯನಿಕ ನಿಯಂತ್ರಣವನ್ನು ಇಮ್ಯಾಡಕ್ಲೋಪ್ರಿಡ್ ಅಥವಾ ಡೈನೋಟೆಫುರಾನ್ ಮುಂತಾದ ಕೀಟನಾಶಕಗಳ ರೂಪದಲ್ಲಿ ಬಿಳಿ ನೊಣಗಳ ಸಂಖ್ಯೆಯನ್ನು ನಿಯಂತ್ರಿಸಲು ಬಳಸಬಹುದು. ಆದಾಗ್ಯೂ, ಕೀಟನಾಶಕಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಏಕೆಂದರೆ ಕೀಟನಾಶಕಗಳ ಹೆಚ್ಚಿನ ಬಳಕೆಯು ಅನೇಕ ಬಿಳಿಯ ನೊಣಗಳ ಜಾತಿಗಳು ನಿರೋಧಕತೆ ಬೆಳೆಸಿಕೊಳ್ಳಲು ಕಾರಣವಾಗಿದೆ. ಇದು ಸಂಭವಿಸುವ ಸಾಧ್ಯತೆಯನ್ನು ಕಡಿಮೆ ಮಾಡಲು, ವಿವಿಧ ಕೀಟನಾಶಕಗಳನ್ನು ಸರದಿಯಲ್ಲಿ ಬಳಸಲು ಮರೆಯಬೇಡಿ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಹತ್ತಿ ಎಲೆಯ ಸುರುಳಿ ವೈರಸ್ ನಿಂದ ಉಂಟಾಗುತ್ತವೆ. ಇದು ಪ್ರಾಥಮಿಕವಾಗಿ ಬಿಳಿ ನೊಣಗಳ ಮೂಲಕ ಹರಡುತ್ತದೆ. ರೋಗದ ಹರಡುವಿಕೆಯು ಭಾಗಶಃ ಗಾಳಿಯಿಂದ ನಿರ್ಧರಿಸಲ್ಪಡುತ್ತದೆ. ಅದು ಬಿಳಿ ನೊಣಗಳು ಎಷ್ಟು ದೂರದವರೆಗೆ ಪ್ರಯಾಣಿಸಬಹುದೆಂದು ಸೂಚಿಸುತ್ತದೆ. ಮಧ್ಯ-ಕೊನೆಯ ಋತುವಿನಲ್ಲಿ ಬಿಳಿನೊಣಗಳು ಹೆಚ್ಚು ತೊಂದರೆದಾಯಕವಾಗಿವೆ. ರೋಗವು ಮರಗಳು ಮುಂತಾದ ಆಶ್ರಯತಾಣಗಳೊಂದಿಗೂ ಸಂಬಂಧ ಹೊಂದಿದೆ. ಈ ರೋಗವು ಬೀಜದಿಂದ ಹುಟ್ಟಿಕೊಳ್ಳದ ಕಾರಣ, ವೈರಸ್ ಗಳು ಪರ್ಯಾಯವಾದ ಆಶ್ರಯದಾತ ಸಸ್ಯಗಳಾದ (ತಂಬಾಕು ಮತ್ತು ಟೊಮೆಟೋನಂತಹ) ಮತ್ತು ಕಳೆಗಳಿಂದ ಭೂಮಿಯಲ್ಲಿ ಉಳಿಯುತ್ತದೆ. ರೋಗದ ಬೆಳವಣಿಗೆಯನ್ನು ಬೆಂಬಲಿಸುವ ಕೆಲವು ಹೆಚ್ಚುವರಿ ಅಂಶಗಳೆಂದರೆ ಇತ್ತೀಚಿಗೆ ಬಿದ್ದ ಮಳೆ, ಸೋಂಕಿತ ಕಸಿ, ಮತ್ತು ಕಳೆಗಳ ಉಪಸ್ಥಿತಿ. ಈ ವೈರಸ್ 25-30ºC ತಾಪಮಾನದ ವ್ಯಾಪ್ತಿಯಲ್ಲಿ ಹರಡಲು ಸಾಧ್ಯವಿದೆ. ನರ್ಸರಿಗಳಲ್ಲಿ, ಸಸಿ ಮತ್ತು ಸಸ್ಯಕ ಹಂತಗಳಲ್ಲಿ ಹತ್ತಿ ಸಸ್ಯಗಳು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ರೋಗ-ಮುಕ್ತ ಬೀಜಗಳನ್ನು ಬಳಸಿ ಮತ್ತು ಕಸಿಗಳು ಆರೋಗ್ಯಕರವಾಗಿದೆ ಎಂದು ಖಚಿತಪಡಿಸಿಕೊಳ್ಳಿ.
  • ಬಿಳಿ ನೊಣದ ಸಂಖ್ಯೆಯನ್ನು ನಿಯಂತ್ರಿಸಿ ಮತ್ತು ನಿರ್ದಿಷ್ಟವಾಗಿ ಸಸಿಗಳನ್ನು ಅವುಗಳಿಂದ ರಕ್ಷಿಸಿ.
  • ಹೊಲ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಕಳೆ-ಮುಕ್ತವಾಗಿಸಿ.
  • ಪರ್ಯಾಯ ಆಶ್ರಯದಾತ ಸಸ್ಯಗಳನ್ನು ಹತ್ತಿಯ ಹತ್ತಿರ ನಾಟಿ ಮಾಡದೆ ಬೆಳೆ ಸರದಿ ಯೋಜಿಸಿ.
  • ಸುಗ್ಗಿಯ ನಂತರ ಸಸ್ಯಗಳ ಎಲ್ಲಾ ಅವಶೇಷಗಳನ್ನು ನೆಲದ ಕೆಳಗೆ ಹೂತು ಬಿಡಿ ಅಥವಾ ಸುಟ್ಟು ಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ