ಭತ್ತ

ಭತ್ತದಲ್ಲಿ ಗ್ರಾಸಿ ಸ್ಟಂಟ್ ವೈರಸ್

RGSV

ವೈರಸ್

ಸಂಕ್ಷಿಪ್ತವಾಗಿ

  • ಸಾಮಾನ್ಯ ರೋಗಲಕ್ಷಣಗಳೆಂದರೆ ಎಲೆಗಳು ಹಳದಿಯಾಗುವುದು, ಸಸ್ಯದ ಬೆಳವಣಿಗೆ ಕುಂಠಿತವಾಗುವುದು ಮತ್ತು ಬಹಳ ನೇರ ಬೆಳವಣಿಗೆ.
  • ಗಾಢ-ಕಂದು ಅಥವಾ ತುಕ್ಕು ಬಣ್ಣದ ಚುಕ್ಕೆಗಳು ಎಲೆಗಳ ಮೇಲೆ ಇರುತ್ತವೆ.
  • ಸಸಿ ಹಂತದಲ್ಲಿ ಸೋಂಕಿಗೊಳಗಾದ ಸಸ್ಯಗಳು ಪಕ್ವತೆಯನ್ನು ತಲುಪುವುದು ಬಹಳ ಅಪರೂಪ.
  • ನಂತರದ ಹಂತಗಳಲ್ಲಿ ಸೋಂಕಿಗೊಳಗಾದ ಸಸ್ಯಗಳು ತೆನೆಯನ್ನು ಉತ್ಪಾದಿಸುವಲ್ಲಿ ವಿಫಲವಾಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಭತ್ತದ ಬೆಳೆಗಳ ಮೇಲೆ ಎಲ್ಲಾ ಬೆಳವಣಿಗೆಯ ಹಂತಗಳಲ್ಲಿ ಪರಿಣಾಮವಾಗಬಹುದು, ಆದರೆ ಟಿಲ್ಲರಿಂಗ್ ಎಂದು ಕರೆಯಲಾಗುವ ಸಸ್ಯಕ ಹಂತದಲ್ಲಿ ಅವುಗಳ ಮೇಲೆ ದಾಳಿಯಾಗುವ ಸಾಧ್ಯತೆ ಹೆಚ್ಚು. ಹೆಚ್ಚು ಸಾಮಾನ್ಯ ರೋಗಲಕ್ಷಣಗಳು ಹೀಗಿವೆ: ತೀವ್ರವಾದ ಕುಂಠಿತತೆ, ಅತಿಹೆಚ್ಚಿನ ಸಂಖ್ಯೆಯ ಟಿಲ್ಲರ್ ಗಳ ಕಾರಣದಿಂದ ಹುಲ್ಲಿನಂತಹ ನೋಟ ಮತ್ತು ಅತ್ಯಂತ ನೇರ ಸಸ್ಯ ಬೆಳವಣಿಗೆ. ಎಲೆಗಳು ಚಿಕ್ಕದಾಗಿ, ಕಿರಿದಾಗಿ, ತೆಳು-ಹಸಿರು ಅಥವಾ ಹಳದಿ ಬಣ್ಣದಲ್ಲಿರುತ್ತವೆ ಮತ್ತು ಮಚ್ಚೆಯ ರೂಪದಲ್ಲಿರುತ್ತವೆ. ಹತ್ತಿರದಿಂದ ನೋಡಿದಾಗ ಎಲೆಯ ಮೇಲ್ಮೈಯ ಮೇಲೆ ಹಲವಾರು ಕಡು-ಕಂದು ಅಥವಾ ತುಕ್ಕು ಬಣ್ಣದ ಕಲೆಗಳು ಅಥವಾ ತೇಪೆಗಳನ್ನೂ ಕಾಣಬಹುದು, ಅದು ಸಾಮಾನ್ಯವಾಗಿ ಇಡೀ ಎಲೆಯನ್ನು ಆವರಿಸುತ್ತದೆ. ಸಸಿ ಹಂತದಲ್ಲಿ ಸೋಂಕಾದಾಗ ಸಸ್ಯಗಳು ಪಕ್ವತೆಯನ್ನು ತಲುಪುವುದು ಬಹಳ ಅಪರೂಪ. ನಂತರದ ಹಂತದಲ್ಲಿ ಸೋಂಕಿಗೊಳಗಾಗುವ ಸಸ್ಯಗಳು ಸಾಮಾನ್ಯವಾಗಿ ಪಕ್ವತೆಯನ್ನು ತಲುಪುತ್ತವೆ ಆದರೆ ಸಾಮಾನ್ಯವಾಗಿ ತೆನೆಗಳನ್ನು ಉತ್ಪಾದಿಸುವಲ್ಲಿ ವಿಫಲಗೊಳ್ಳುತ್ತವೆ, ಹೀಗಾಗಿ ಇಳುವರಿಗಳ ಮೇಲೆ ಪರಿಣಾಮವಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ವೈರಲ್ ರೋಗಗಳ ನೇರ ಚಿಕಿತ್ಸೆ ಸಾಧ್ಯವಿಲ್ಲ. ಬೇವಿನ ಬೀಜದ ಕಷಾಯಗಳು ಕಂದು ಜಿಗಿ ಹುಳುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು RGSV ನ ಪ್ರಸರಣವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಜಿಗಿ ಹುಳುಗಳ ನೈಸರ್ಗಿಕ ವೈರಿಗಳೆಂದರೆ ವಾಟರ್ ಸ್ಟ್ರೈಡರ್ ಗಳು, ಮಿರಿಡ್ ತಿಗಣೆಗಳು, ಜೇಡಗಳು ಮತ್ತು ವಿವಿಧ ಮೊಟ್ಟೆ ಪ್ಯಾರಾಸೈಯಿಡ್ ಕಣಜಗಳು ಮತ್ತು ನೊಣಗಳು. ಒಂದು ದಿನದ ಕಾಲ ಸಸಿ ಮಡಿಯಲ್ಲಿ ನೀರು ನಿಲ್ಲುವ ಹಾಗೆ ಮಾಡಿದರೆ ಕಂದು ಜಿಗಿ ಹುಳುಗಳನ್ನು ಪರಿಶೀಲಿಸಬಹುದು, ಇದರಿಂದ ಕೀಟಗಳು ನೀರಿನೊಳಗೆ ಮುಳುಗುತ್ತವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ವೈರಲ್ ರೋಗಗಳ ನೇರ ಚಿಕಿತ್ಸೆ ಸಾಧ್ಯವಿಲ್ಲ, ಆದರೆ ಜಿಗಿ ಹುಳುಗಳ ನಿರ್ಣಾಯಕ ಸಂಖ್ಯೆಗಳು ಕಂಡುಬಂದರೆ ಕೀಟನಾಶಕಗಳನ್ನು ಬಳಸಬಹುದು. ಅಬಮೆಕ್ಟಿನ್, ಬುಪ್ರೊಫೆಸಿನ್ ಮತ್ತು ಎಥೊಫೆನ್ಪ್ರೋಕ್ಸ್ ಆಧಾರಿತ ಉತ್ಪನ್ನಗಳನ್ನು ಬಳಸಬಹುದು. ಕೀಟವಾಹಕಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಕೀಟನಾಶಕಗಳ ಬಳಕೆ ಯಾವಾಗಲೂ ಯಶಸ್ವಿಯಾಗುವುದಿಲ್ಲ, ವಿಶೇಷವಾಗಿ ಭತ್ತವನ್ನು ವರ್ಷವಿಡೀ ಬೆಳೆಯುವ ಪ್ರದೇಶಗಳಲ್ಲಿ.

ಅದಕ್ಕೆ ಏನು ಕಾರಣ

ನಿಲಪಾರ್ವತ (ಎನ್. ಲುಂಗನ್ಸ್, ಎನ್. ಬಾಕೆರಿ ಮತ್ತು ಎನ್. ಮುಯಿರಿ) ಜಾತಿಗಳ ಕಂದು ಜಿಗಿ ಹುಳುಗಳಿಂದ ಈ ವೈರಸ್ ಹರಡುತ್ತದೆ. ಮರಿಹುಳುಗಳು ಮತ್ತು ಪ್ರೌಢ ಹುಳುಗಳೆರಡೂ ದೀರ್ಘಕಾಲದವರೆಗೆ ವೈರಸ್ ಅನ್ನು ಹೊಯ್ಯುವ ಸಾಮರ್ಥ್ಯವನ್ನು ಹೊಂದಿವೆ, ಹೀಗಾಗಿ ಹೊಸ ಸಸ್ಯಗಳಿಗೆ ನಿರಂತರ ಮತ್ತು ಪ್ರಚೋದಕ ರೀತಿಯಲ್ಲಿ ಸೋಂಕು ತಗುಲಿಸಬಹುದು. ಆದಾಗ್ಯೂ, ಜಿಗಿ ಹುಳುಗಳು ಈ ವರಸ್ ಅನ್ನು ಪಡೆಯಲು ಸೋಂಕಿತ ಸಸ್ಯವನ್ನು ಕನಿಷ್ಠ 30 ನಿಮಿಷಗಳ ಕಾಲ ತಿನ್ನಬೇಕಾಗುತ್ತದೆ. ಈ ರೋಗವು ಮುಖ್ಯವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾ, ಚೀನಾ, ಜಪಾನ್, ಮತ್ತು ತೈವಾನ್, ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಭಾರತದಲ್ಲಿ ಕಂಡುಬರುತ್ತದೆ, ವಿಶೇಷವಾಗಿ ಭತ್ತದ ಏಕ ಬೇಸಾಯವನ್ನು ಅಭ್ಯಾಸ ಮಾಡುವ ಪ್ರದೇಶಗಳಲ್ಲಿ. ಅನುಕೂಲಕರ ಸ್ಥಿತಿಯಲ್ಲಿ, ಈ ವೈರಸ್ ಭತ್ತ ರಾಗ್ಗಡ್ ಸ್ಟಂಟ್ ವೈರಸ್ನೊಂದಿಗೆ ಸೇರಿಕೊಂಡು ಸಸ್ಯಗಳಿಗೆ ಒಟ್ಟಿಗೆ-ಸೋಂಕು ಉಂಟುಮಾಡಬಹುದು, ಇದು ಸಹ ಎನ್. ಲುಂಗನ್ಸ್ ನಿಂದ ಹರಡುತ್ತದೆ ಮತ್ತು ತೀವ್ರವಾದ ನಷ್ಟವನ್ನು ಉಂಟುಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ರೋಗದ ಚಿಹ್ನೆಗಳಿಗೆ ಮತ್ತು/ಅಥವಾ ಕೀಟಕ್ಕಾಗಿ ಗದ್ದೆಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ಸೂರ್ಯನ ಬೆಳಕು ಸಸ್ಯದ ತಳವನ್ನು ತಲುಪುವ ಸಲುವಾಗಿ ನಾಟಿ ಮಾಡುವಾಗ ಸಸ್ಯಗಳ ನಡುವಿನ ಅಂತರವನ್ನು ಹೆಚ್ಚಿಸಿ.
  • ಕೀಟದ ಗರಿಷ್ಟ ಸಂಖ್ಯೆಯನ್ನು ತಪ್ಪಿಸಲು ನಿಮ್ಮ ನೆರೆಯವರೊಂದಿಗೆ ಸರಿಹೊಂದಿಸಿ ಏಕಕಾಲಿಕವಾಗಿ ನೆಡಿ.
  • ಅವುಗಳ ದಾಳಿಗೆ ಹೆಚ್ಚು ನಿರೋಧಕವಾಗಿರುವ ತಳಿಗಳನ್ನು ಬಳಸಿ.
  • ರಸಗೊಬ್ಬರಗಳನ್ನು ಸಮಂಜಸವಾಗಿ ಬಳಸಿ.
  • ಗದ್ದೆ ಮತ್ತು ಅದರ ಸುತ್ತಲೂ ಇರುವ ಕಳೆಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ.
  • ಪ್ರಯೋಜನಕಾರಿ ಕೀಟಗಳ ಮೇಲೆ ಪರಿಣಾಮ ಬೀರುವ ವಿಶಾಲ-ಪ್ರಮಾಣದ ಕೀಟನಾಶಕಗಳನ್ನು ಬಳಸಬೇಡಿ.
  • ಸುಗ್ಗಿಯ ನಂತರ ಕೂಳೆಗಳನ್ನು ತೆಗೆದುಹಾಕಿ ಮತ್ತು ಗದ್ದೆಯಿಂದ ಹೊರಗೆ ಅವುಗಳನ್ನು ನಾಶಮಾಡಿ.
  • ಸೋಂಕಿತ ಕೂಳೆಗಳು ಕೊಳೆಯಲು ಅನುಕೂಲವಾಗುವ ಸಲುವಾಗಿ ಮತ್ತು ಕೀಟ ಚಕ್ರವನ್ನು ಮುರಿಯುವ ಸಲುವಾಗಿ ಅವುಗಳನ್ನು ಮಣ್ಣಿನಲ್ಲಿ ಆಳವಾಗಿ ಹೂತು ಉಳುಮೆ ಮಾಡಿ.
  • ರೋಗಕ್ಕೆ ಸೂಕ್ಷ್ಮವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿ ಯೋಜನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ