ಇತರೆ

ಕಲ್ಲಂಗಡಿ ಮೊಸಾಯಿಕ್ ವೈರಸ್

WMV

ವೈರಸ್

ಸಂಕ್ಷಿಪ್ತವಾಗಿ

  • ಸಂಪೂರ್ಣ ಎಲೆಗಳ ಮೇಲೆ ಮೊಸಾಯಿಕ್ ಕಲೆಗಳು ಅಥವಾ ತೇಪೆಗಳು ಮತ್ತು ಕೆಲವೊಮ್ಮೆ ಎಲೆಗಳು ವಿರೂಪಗೊಳ್ಳುತ್ತವೆ.
  • ಕಲ್ಲಂಗಡಿಯ ಮೇಲೆ ಗಾಢ ಹಸಿರು ಬಣ್ಣದ ತೇಪೆಗಳು.

ಇವುಗಳಲ್ಲಿ ಸಹ ಕಾಣಬಹುದು

4 ಬೆಳೆಗಳು
ಹಾಗಲಕಾಯಿ
ಸೌತೆಕಾಯಿ
ಕಲ್ಲಂಗಡಿ
ಕುಂಬಳಕಾಯಿ

ಇತರೆ

ರೋಗಲಕ್ಷಣಗಳು

ಬೆಳೆ, ಸೋಂಕಿನ ಸಮಯ ಮತ್ತು ಪರಿಸರ ಪರಿಸ್ಥಿತಿಗಳ ಆಧಾರದ ಮೇಲೆ ರೋಗಲಕ್ಷಣಗಳು ಬದಲಾಗುತ್ತವೆ. ಇದಲ್ಲದೆ, ಸೌತೆಕಾಯಿ ಮೊಸಾಯಿಕ್ ವೈರಸ್ ಮತ್ತು ಕುಂಬಳಕಾಯಿಯ ಹಳದಿ ಮೊಸಾಯಿಕ್ ವೈರಸ್ನಂತಹ ಇತರ ವೈರಸ್ಗಳೊಂದಿಗೆ ಮಿಶ್ರ ಸೋಂಕಿನಲ್ಲಿ ಸೋಂಕುಗಳು ಹೆಚ್ಚಾಗಿ ಕಂಡುಬರುತ್ತವೆ, ಇದು ರೋಗಲಕ್ಷಣಗಳನ್ನು ಮರೆಮಾಚಬಹುದು ಅಥವಾ ಮಾರ್ಪಡಿಸಬಹುದು. ಒಟ್ಟಾರೆಯಾಗಿ ಅವುಗಳನ್ನು ಗುರುತಿಸುವುದು ಹೇಗೆಂದರೆ, ಸಂಪೂರ್ಣ ಎಲೆಗಳ ಮೇಲೆ ಮೊಸಾಯಿಕ್ ಕಲೆಗಳು ಅಥವಾ ತೇಪೆಗಳು, ಅಂಗಾಂಶಗಳ ಮೇಲೆ ನರೂಲಿ ರೀತಿಯ ಗುಳ್ಳೆಗಳು ಮತ್ತು ಎಲೆಗಳು ವಿವಿಧ ರೀತಿಯಲ್ಲಿ ವಿರೂಪಗೊಳ್ಳುವುದು. ಹಣ್ಣಿನ ಬಣ್ಣ ಮಾಸುವುದು ಮತ್ತೊಂದು ಪ್ರಮುಖ ರೋಗಲಕ್ಷಣವಾಗಿದೆ. ಉದಾಹರಣೆಗೆ, ಕಲ್ಲಂಗಡಿಯಲ್ಲಿ, ಸಾಮಾನ್ಯವಾಗಿ ಹುಲ್ಲಿನ ಬಣ್ಣದ ಸಿಪ್ಪೆಯಿರುವ ಹಣ್ಣಿನ ಮೇಲೆ ಕಡು ಹಸಿರು ಬಣ್ಣದ ತೇಪೆಗಳು ಅಥವಾ ಬೊಬ್ಬೆಗಳು ಕಾಣಿಸುತ್ತವೆ. ಬಟಾಣಿಯ ಮೇಲೆ, ಎಲೆಗಳ ಮೇಲೆ ಬರುವ ಮಚ್ಚೆಗಳು ಸಾಮಾನ್ಯವಾಗಿ ನೆಕ್ರೋಟಿಕ್ ಗಾಯಗಳಿಗೆ ಬದಲಾಗುತ್ತದೆ. ಎಲೆಗಳಿಗಾಗುವ ಹಾನಿಯಿಂದಾಗಿ, ಈ ವೈರಸ್ನಿಂದಾಗುವ ಸೋಂಕಿನ ಕಾರಣದಿಂದ ಬೆಳವಣಿಗೆಯ ಪ್ರಮಾಣ ಮತ್ತು ಇಳುವರಿ ಕಡಿಮೆಯಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಖನಿಜ ತೈಲ ದ್ರವೌಷಧಗಳು ವೈರಸ್ ಪ್ರಸರಣಕ್ಕೆ ಅಡ್ಡಿ ಮಾಡುತ್ತವೆಂದು ತಿಳಿದುಬಂದಿದೆ ಮತ್ತು ಅವು ಪರಿಣಾಮಕಾರಿಯಾದ ನಿಯಂತ್ರಣವಾಗಬಹುದು. ಗಿಡಹೇನುಗಳ ಪರಭಕ್ಷಕಗಳು ಅಸಂಖ್ಯಾತವಾಗಿವೆ ಮತ್ತು ಉತ್ತಮ ಬೆಳೆ ಪದ್ಧತಿಗಳ ಮೂಲಕ ಅವುಗಳನ್ನು ನೋಡಿಕೊಳ್ಳಬೇಕು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ವೈರಸ್ಗಳಿಗೆ ರಾಸಾಯನಿಕಗಳಿಂದ ನೇರವಾಗಿ ಚಿಕಿತ್ಸೆ ನೀಡಲಾಗದಿದ್ದರೂ, ಪ್ರಸರಣದ ವಾಹಕಗಳು, ಮುಖ್ಯವಾಗಿ ಗಿಡಹೇನುಗಳನ್ನು, ನಿರ್ದಿಷ್ಟ ಹಂತದವರೆಗೆ ನಿಯಂತ್ರಿಸಬಹುದು. ಆದಾಗ್ಯೂ, ಅನೇಕ ಸೆಟ್ಟಿಂಗ್ಗಳಲ್ಲಿ, ಗಿಡಹೇನುಗಳಿಗೆ ಬಳಸುವ ಕೀಟನಾಶಕಗಳು ಕಡಿಮೆ ಮೌಲ್ಯದ್ದಾಗಿರುತ್ತವೆ. ಗಿಡಹೇನುಗಳು ಮತ್ತು ಅವುಗಳ ಸಂಭವನೀಯ ರಾಸಾಯನಿಕ ನಿಯಂತ್ರಣದ ಬಗ್ಗೆ ತಿಳಿಯಲು ನಮ್ಮ ಡೇಟಾಬೇಸ್ ಅಲ್ಲಿ ಹುಡುಕಿ.

ಅದಕ್ಕೆ ಏನು ಕಾರಣ

ಕಲ್ಲಂಗಡಿ ಮೊಸಾಯಿಕ್ ವೈರಸ್ನಿಂದ ವಿವಿಧ ರೀತಿಯ ರೋಗಲಕ್ಷಣಗಳು ಉಂಟಾಗುತ್ತವೆ. ಇದು ರೋಗವಾಹಕಗಳು (ಪ್ರಮುಖವಾಗಿ ಗಿಡಹೇನುಗಳು) ಅಥವಾ ವ್ಯಕ್ತಿ ಅಥವಾ ಉಪಕರಣಗಳು ಒಳಗೊಂಡಂತೆ ಅನೇಕ ವಿಧಗಳ ಮೂಲಕ ಹರಡಬಹುದು, ಆದರೆ ಬೀಜಗಳ ಮೂಲಕ ಅಲ್ಲ, ಏಕೆಂದರೆ ಇದು ಬೀಜಗಳಿಂದ ಹರಡುವಂಥ ವೈರಸ್ ಅಲ್ಲ. ಗಿಡಹೇನುಗಳು ಸಸ್ಯದ ರಸವನ್ನು ಹೀರಿಕೊಳ್ಳುವ ಸಮಯದಲ್ಲಿ ಅದನ್ನು ಪಡೆದುಕೊಳ್ಳುತ್ತವೆ ಮತ್ತು ಸಂಪರ್ಕದ ನಂತರ ಕೆಲವು ಗಂಟೆಗಳವರೆಗೆ ಅದನ್ನು ಸ್ಥಿರವಾಗಿ ಹರಡುತ್ತವೆ. ಕುಕುರ್ಬಿಟ್ಸ್ ಅಲ್ಲದೆ ಇದರ ಮುಖ್ಯ ಪರ್ಯಾಯ ರೋಗ ಬರುವ ಸಸ್ಯಗಳೆಂದರೆ ಬಟಾಣಿ ಸಸ್ಯಗಳು ಮತ್ತು ಅಲ್ಫಲ್ಫಾಗಳು. ಪ್ರಸರಣವು ನಿರಂತರವಾಗಿರುವುದಿಲ್ಲವಾದ್ದರಿಂದ, ಕೀಟನಾಶಕಗಳನ್ನು ಗಿಡಹೇನುಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರೋಧಕ ಕ್ರಮವಾಗಿ ಬಳಸದ ಹೊರತು ಅವು ವೈರಸ್ ನ ಪರಿಣಾಮಕಾರಿ ನಿಯಂತ್ರಣವನ್ನು ನೀಡುವುದಿಲ್ಲ. ವೈರಸ್ ಹೊಲಗಳಲ್ಲಿ ಕಂಡುಬಂದ ನಂತರ, ಕೀಟನಾಶಕಗಳು ಅವುಗಳನ್ನು ತೊಡೆದುಹಾಕುವ ಮೊದಲೇ ಗಿಡಹೇನುಗಳು ಹೊಸ ರೋಗ ಬರುವ ಸಸ್ಯಗಳಿಗೆ ಅದನ್ನು ಹರಡಬಲ್ಲವು.


ಮುಂಜಾಗ್ರತಾ ಕ್ರಮಗಳು

  • ಕೆಲವು ಬೆಳೆಗಳಿಗೆ, ನಿರೋಧಕ ಪ್ರಭೇದಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ.
  • ರೋಗಗಳ ಚಿಹ್ನೆಗಳನ್ನು, ಹಾಗೆಯೇ ಗಿಡಹೇನುಗಳು ಇವೆಯೇ ಎಂಬುದನ್ನು ಗುರುತಿಸಲು ಹೊಲವನ್ನು ನಿಯಮಿತವಾಗಿ ಪರಿಶೀಲಿಸಿ.
  • ರೋಗ ಬರದ ಸಸ್ಯಗಳೊಂದಿಗೆ ಸರದಿ ಬೆಳೆ ಮಾಡಿದರೆ ವೈರಸ್ ಅನ್ನು ತಡೆಗಟ್ಟಲು ಸಹಾಯ ಮಾಡಬಹುದು.
  • ಹಿಂದಿನ ಬೇಸಾಯದಲ್ಲಿನ ಸಸ್ಯ ಉಳಿಕೆಗಳನ್ನು ತೆಗೆದುಹಾಕಿ.
  • ಪ್ರಯೋಜನಕಾರಿ ಕೀಟಗಳ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಲು ಕೀಟನಾಶಕವನ್ನು ನಿಯಂತ್ರಿಸಿ.
  • ಗಿಡಹೇನುಗಳನ್ನು ರಕ್ಷಿಸುವ ಇರುವೆಗಳ ಸಂಖ್ಯೆಯನ್ನು ನಿಯಂತ್ರಿಸಲು ಜಿಗುಟಾದ ಬಲೆಗಳನ್ನು ಬಳಸಿ.
  • ಹೊಲದ ಸುತ್ತಮುತ್ತಲಿನ ಕಳೆಗಳು ಮತ್ತು ಕುದುರೆ ಮೇವಿನ ಸೊಪ್ಪುಗಳನ್ನು (ಆಲ್ಫಾಲ್ಫಾ) ತೆಗೆದುಹಾಕಿ.
  • ಈ ರೋಗದಿಂದಾಗುವ ನಷ್ಟವನ್ನು ಕಡಿಮೆಮಾಡಲು ಗಿಡಹೇನುಗಳನ್ನು ಹಿಮ್ಮೆಟ್ಟಿಸುವ ಪ್ಲಾಸ್ಟಿಕ್ ಹಸಿಗೊಬ್ಬರಗಳನ್ನು ಬಳಸಿ.
  • ಗಿಡಹೇನುಗಳು ಗಿಡಗಳನ್ನು ತಲುಪುವುದನ್ನು ತಡೆಯಲು ರೋ ಕವರ್ (ಬೆಳೆ ಸಾಲುಗಳನ್ನು ಕವರ್ ಗಳಿಂದ ಮುಚ್ಚುವುದು) ಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ