ಹುರುಳಿ

ತಂಬಾಕು ಸ್ಟ್ರೀಕ್ ವೈರಸ್

TSV

ವೈರಸ್

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ದೊಡ್ಡ ಹಳದಿ ಅಥವಾ ಕಂದು ಬಣ್ಣಗಳು ಎಲೆಯ ಗಾಢವಾದ ಹಸಿರು ಅಂಗಾಂಶಗಳೊಂದಿಗೆ ಮೊಸಾಯಿಕ್ ಮಾದರಿಯನ್ನು ರಚಿಸುತ್ತವೆ.
  • ಗಿಡಗಳ ಕುಂಠಿತ ಬೆಳವಣಿಗೆ, ಕಡಿಮೆ ಹೂವುಗಳು, ಬೀಜಕೋಶ ಉದುರುವುದು ಮತ್ತು ಕಡಿಮೆ ಮೇಲಾವರಣ.
  • ದಪ್ಪದಾದ, ಹಳದಿ ಬಣ್ಣಕ್ಕೆ ತಿರುಗಿದ ಮತ್ತು ವಿರೂಪಗೊಂಡ ಎಲೆ ನಾಳಗಳು.

ಇವುಗಳಲ್ಲಿ ಸಹ ಕಾಣಬಹುದು


ಹುರುಳಿ

ರೋಗಲಕ್ಷಣಗಳು

ಸೋಂಕಿತ ಗಿಡಗಳಲ್ಲಿ ಶುರುವಿಗೆ ಸಣ್ಣನೆಯ, ಅನಿಯಮಿತ ಆಕಾರದ ಕ್ಲೋರೊಟಿಕ್ ಪ್ರದೇಶಗಳು (ಕ್ಲೋರೋಫಿಲ್ ಉತ್ಪಾದನೆ ಕಡಿಮೆಯಾಗಿ ಎಲೆಗಳು ಹಸಿರು ಬಣ್ಣ ಕಳೆದುಕೊಂಡು ಮಂಕಾಗುವುದು) ಅಥವಾ ಎಲೆಗಳ ಮೇಲೆ ಬಣ್ಣಗೆಟ್ಟ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಇದು ವ್ಯಾಸದಲ್ಲಿ 2-5 ಮಿ.ಮೀ ವ್ಯಾಪ್ತಿಯಲ್ಲಿರುತ್ತದೆ. ಕಾಲಾನಂತರದಲ್ಲಿ, ಇದು ವಕ್ರ ಅಂಚುಗಳಿರುವ ದೊಡ್ಡದಾದ ಕ್ಲೋರೋಟಿಕ್ ಪ್ರದೇಶಗಳಾಗಿ ಬದಲಾಗುತ್ತವೆ.( ಹಳದಿಯಿಂದ ಕಂದು). 5-15 ಮಿಮೀ ವ್ಯಾಸದ ಕೊಳೆತ ಪಟ್ಟೆಗಳಾಗಿ ಇದು ಎಲೆಗಳ ಮೇಲೆ ಅನಿಯಮಿತ ಆಕಾರದ ಮೊಸಾಯಿಕ್ ಮಾದರಿಯಾಗಿ ಕಂಡುಬರುತ್ತದೆ. ಎಲೆಗಳು ಕೊಳೆತು ಅಕಾಲಿಕವಾಗಿ ಉದುರುತ್ತವೆ, ಇದರಿಂದ ಗಿಡಗಳ ಮೇಲಾವರಣ ಕಡಿಮೆಯಿರುತ್ತದೆ ಹಾಗೂ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ಹೂವುಗಳು ಕಡಿಮೆಯಿರುತ್ತದೆ ಹಾಗೂ ಬೀಜಕೋಶಗಳು ಅಕಾಲಿಕವಾಗಿ ಬಿದ್ದು ಹೋಗುತ್ತವೆ. ಇದರಿಂದಾಗಿ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ. ಸೋಂಕಿತ ಎಲೆಗಳ ನಾಳಗಳು ಹಳದಿ ಬಣ್ಣಕ್ಕೆ ತಿರುಗಿ, ದಪ್ಪಗಾಗಿ ವಿರೂಪಗೊಳ್ಳುತ್ತವೆ. ಎಳೆಯ ಎಲೆಗಳಲ್ಲಿ ರೋಗಲಕ್ಷಣಗಳು ಹೆಚ್ಚಾಗಿ ಕಂಡುಬಂದು ಆರೋಗ್ಯಕರ ಎಲೆಗಳಿಗಿಂತ ಮಂಕಾಗಿ ಕಾಣುತ್ತವೆ. ಎಲೆಯ ತುದಿ ಮುರುಟಿರುತ್ತದೆ. ತೋಟದಲ್ಲಿನ ಸೋಂಕಿತ ಪ್ರದೇಶಗಳು ಸಾಮಾನ್ಯವಾಗಿ ಮಂಕಾಗಿ ಕಾಣುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ತಂಬಾಕು ಸ್ಟ್ರೀಕ್ ವೈರಸ್ ವಿರುದ್ಧ ನೇರ ಸಾವಯವ ಚಿಕಿತ್ಸೆ ಯಾವುದೂ ಇಲ್ಲ. ಆದರೆ ಅದರ ವಾಹಕಗಳಾದ ಗಿಡಹೇನು ಮತ್ತು ಥ್ರಿಪ್ಸ್ ನುಸಿಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆಯ್ಕೆಗಳಿವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ವೈರಲ್ ರೋಗಗಳಿಗೆ ನೇರ ಚಿಕಿತ್ಸೆ ಸಾಧ್ಯವಿಲ್ಲ, ಆದರೆ ಗಿಡಹೇನು, ಥ್ರಿಪ್ಸ್ ನುಸಿ ಮತ್ತು ಇತರ ಹೀರುವ ಕೀಟಗಳಂತಹ ವಾಹಕಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಥ್ರಿಪ್ಸ್ ನುಸಿ ಮತ್ತು ಗಿಡಹೇನಿನ ವಿರುದ್ಧ ರಾಸಾಯನಿಕ ಚಿಕಿತ್ಸೆಗಳಿಗೆ ಸಂಬಂಧಿಸಿದ ಡೇಟಾಬೇಸ್ ಪರಿಶೀಲಿಸಿ. ಉದಾಹರಣೆಗೆ ಫೈಪ್ರೊನಿಲ್ (2 ಎಂ ಎಲ್/ ಲೀ) ಅಥವಾ ಥಿಯಾಮಿತೋಕ್ಸಾಮ್ ( 0.2ಗ್ರಾಂ /ಲೀ )

ಅದಕ್ಕೆ ಏನು ಕಾರಣ

ಇದೊಂದು ವೈರಸ್ಸಿನಿಂದಾಗಿ ಬರುವ ರೋಗ. ಇದು ಹಲವಾರು ಗಿಡಗಳಲ್ಲಿ ಆಶ್ರಯ ಹುಡುಕಿಕೊಳ್ಳುತ್ತದೆ. ಎಷ್ಟೋ ಇತರೆ ಬೆಳೆಗಳ ಜೊತೆ ತಂಬಾಕು(ಇದರಿಂದಾಗ ರೋಗದ ಸಾಮಾನ್ಯ ಹೆಸರು) ಶತಾವರಿ, ಸ್ಟ್ರಾಬೆರಿ, ಸೋಯಾಬೀನ್, ಸೂರ್ಯಕಾಂತಿ ಬೆಳೆಗಳನ್ನು ಇದು ಕಾಡುತ್ತದೆ. ರೋಗದ ವೈರಸ್ ಬೀಜದಲ್ಲಿರುವ ಕಾರಣ, ಸೋಂಕಿತ ಬೀಜಗಳು ರೋಗ ಹರಡುವ ಪ್ರಾಥಮಿಕ ಮೂಲವಾಗಿರಬಹುದು. ದ್ವಿತೀಯ ಸೋಂಕು ರೋಗವು ಗಿಡದಿಂದ ಗಿಡಕ್ಕೆ ವಾಹಕ ಕೀಟಗಳ ಮೂಲಕ (ಗಿಡಹೇನು - ಅಥವಾ ಥ್ರಿಪ್ಸ್ ನುಸಿ), ಅಥವಾ ತೋಟದ ಕೆಲಸದ ಸಮಯದಲ್ಲಿ ಗಿಡಗಳಿಗಾಗುವ ಯಾಂತ್ರಿಕ ಗಾಯದ ಮೂಲಕ ಹರಡುತ್ತದೆ. ರೋಗಲಕ್ಷಣಗಳು ಮತ್ತು ಇಳುವರಿಯ ಮೇಲಾಗುವ ಪರಿಣಾಮಗಳು ಗಿಡದ ಪ್ರಭೇದ, ವಾತಾವರಣ (ಉಷ್ಣಾಂಶ ಮತ್ತು ತೇವಾಂಶ) ಮತ್ತು ಗಿಡಕ್ಕೆ ಬೆಳವಣಿಗೆಯ ಯಾವ ಹಂತದಲ್ಲಿ ಸೋಂಕು ತಗುಲಿತು ಎನ್ನುವುದರ ಮೇಲೆ ಅವಲಂಬಿಸಿದೆ. ಗಿಡಹೇನುಗಳಿಂದ ತಡವಾಗಿ ಉಂಟಾದ ಸೋಂಕು ಸಾಮಾನ್ಯವಾಗಿ ಬೀಜದಿಂದಲೇ ಇದ್ದ ಸೋಂಕಿನಷ್ಟು ತೀವ್ರವಾಗಿರುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ವಿಶ್ವಾಸಾರ್ಹ ಮೂಲಗಳಿಂದ ಪಡೆದ ಆರೋಗ್ಯಕರ ಸಸಿಗಳನ್ನು ಬಳಸಿ.
  • ಕೃಷಿಗೆ ಸಂಬಂಧಿಸಿದ ಎಲ್ಲ ಸಾಧನಗಳೊಂದಿಗೆ ಕಟ್ಟುನಿಟ್ಟಾದ ನೈರ್ಮಲ್ಯ ಕ್ರಮಗಳನ್ನು ಪಾಲಿಸಿ.
  • ರೋಗದ ಕುರುಹುಗಳಿಗೆ ಮತ್ತು ಕರಿಹೇನು ಮತ್ತು ಥ್ರಿಪ್ಸ್ ನುಸಿ ಮುಂತಾದ ವಾಹಕಗಳಿಗಾಗಿ ಗಿಡಗಳನ್ನು ಮತ್ತು ತೋಟವನ್ನು ಪರಿಶೀಲಿಸಿ.
  • ತೋಟದಿಂದ ಸೋಂಕಿತ ಗಿಡಗಳು ಮತ್ತು ಉಳಿಕೆಗಳನ್ನು ತೆಗೆದು ಅದನ್ನು ಹೂಳುವ ಅಥವಾ ಸುಡುವ ಮೂಲಕ ನಾಶಮಾಡಿ.
  • ತೋಟಗಳ ನಡುವೆ ಸಕ್ಕರ್ ಗಳನ್ನು ಹರಡಬೇಡಿ.
  • ವೈರಸ್ಸಿನ ಪರ್ಯಾಯ ಆಶ್ರಯದಾತ ಗಿಡಗಳನ್ನು ಹತ್ತಿ ತೋಟದ ಬಳಿ ನೆಡುವುದನ್ನು ತಪ್ಪಿಸಿ.
  • ಉದಾ: ಶತಾವರಿ, ಸ್ಟ್ರಾಬೆರಿ, ಸೋಯಾಬೀನ್, ಸೂರ್ಯಕಾಂತಿ, ಲೆಟಿಸ್, ತಂಬಾಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ