ಮೆಕ್ಕೆ ಜೋಳ

ಮೆಕ್ಕೆ ಜೋಳದ ಕ್ಲೋರೋಟಿಕ್ ಮೋಟಲ್ ವೈರಸ್

MCMV

ವೈರಸ್

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಅನೇಕ ಸಣ್ಣ ಹಳದಿ ಚುಕ್ಕೆಗಳು ಮತ್ತು ಗೆರೆಗಳು.
  • ನಂತರದ ಹಂತದಲ್ಲಿ, ಹಸಿರು ಬಣ್ಣ ಕಳೆದುಕೊಂಡ ಗೆರೆಗಳು ಅಥವಾ ಕಲೆಗಳು ಮತ್ತು ಅವು ನಂತರ ಸಂಪೂರ್ಣ ಎಲೆಗೆ ವಿಸ್ತರಿಸಬಹುದು.
  • ತೆನೆ ವಿರೂಪತೆ, ಗೆಣ್ಣುಗಳ ನಡುವೆ ಕಡಿಮೆ ಅಂತರ ಮತ್ತು ಕುಂಠಿತ ಸಸ್ಯ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು


ಮೆಕ್ಕೆ ಜೋಳ

ರೋಗಲಕ್ಷಣಗಳು

ವಿವಿಧ ಮಿಶ್ರತಳಿಗಳು/ಪ್ರಭೇದಗಳು ಮತ್ತು ಸಸ್ಯ ಸೋಂಕಿಗೆ ಒಳಗಾದ ಹಂತದ ಆಧಾರದ ಮೇಲೆ ರೋಗಲಕ್ಷಣಗಳ ತೀವ್ರತೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಎಲೆಗಳ ಮೇಲಿನ ನಾಳಗಳಿಗೆ ಸಮಾನಾಂತರವಾಗಿ ಹರಡಿರುವ ಅನೇಕ ಸಣ್ಣ ಹಳದಿ ಚುಕ್ಕೆಗಳು ಮತ್ತು ಪಟ್ಟೆಗಳನ್ನು ರೋಗ ಲಕ್ಷಣ ಒಳಗೊಂಡಿರುತ್ತದೆ. ಅವು ಬೆಳೆದು ಒಗ್ಗೂಡಿದಂತೆ, ಉದ್ದನೆಯ ಪಟ್ಟೆಗಳು, ಗೆರೆಗಳು ಅಥವಾ ಕ್ಲೋರೋಟಿಕ್ ಅಂಗಾಂಶವನ್ನು ಉತ್ಪತ್ತಿ ಮಾಡುತ್ತವೆ. ಅಂತಿಮವಾಗಿ ಎಲೆಗಳು ಸಾಯುತ್ತವೆ. ಗಿಡವು ಗೆಣ್ಣುಗಳ ನಡುವಿನ ಕಡಿಮೆ ಅಂತರದಿಂದಾಗಿ ಸಣ್ಣದಾಗಿರುತ್ತವೆ. ಸಣ್ಣ ಹೂವುಗಳು ಮತ್ತು ಕೆಲವು ಸ್ಪೈಕ್ಲೆಟ್ ಗಳಿಂದ ಪುರುಷ ಹೂಗೊಂಚಲುಗಳು ವಿರೂಪಗೊಂಡಿರುತ್ತವೆ. ವಿಶೇಷವಾಗಿ ರೋಗಕ್ಕೆ ಬೇಗ ಒಳಗಾಗುವ ಸಸ್ಯಗಳಲ್ಲಿ ಅಥವಾ ಆರಂಭಿಕ ಸೋಂಕಿನ ಸಂದರ್ಭದಲ್ಲಿ, ತೆನೆಗಳು ಸರಿಯಾಗಿ ಬೆಳೆಯುವುದಿಲ್ಲ ಮತ್ತು ಅವುಗಳ ಸಂಖ್ಯೆ ಪ್ರತೀ ಸಸ್ಯಗಳಲ್ಲೂ ಕಡಿಮೆ ಇರುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ವೈರಸ್ ಗಳಿಂದ ಉಂಟಾಗುವ ಕಾಯಿಲೆಗೆ ಯಾವುದೇ ನೇರ ನಿಯಂತ್ರಣವಿಲ್ಲ. ಈ ವೈರಸ್ ಸಂಭವಿಸುವಿಕೆಯನ್ನು ತಡೆಯಲು, ನಿರೋಧಕ ಪ್ರಭೇದಗಳನ್ನು ಬಳಸುವುದು ಉತ್ತಮ ವಿಧಾನವಾಗಿದೆ. ಈ ವೈರಸ್ ಗೆ ವಾಹಕವಾಗಿ ಕಾರ್ಯನಿರ್ವಹಿಸುವ ಜೀರುಂಡೆಗಳು, ಥ್ರಿಪ್ಸ್ ಅಥವಾ ಮಿಟೆಗಳ ಜೈವಿಕ ನಿಯಂತ್ರಣಕ್ಕಾಗಿ ಡೇಟಾಬೇಸ್ ಅನ್ನು ಪರಿಶೀಲಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ರಾಸಾಯನಿಕ ಉತ್ಪನ್ನಗಳ ಬಳಕೆಯಿಂದ ವೈರಸ್ ರೋಗಗಳನ್ನು ನೇರವಾಗಿ ನಿಯಂತ್ರಿಸಲಾಗುವುದಿಲ್ಲ. ಆದರೂ, ವೈರಸ್ ಅನ್ನು ಹೊಂದಿರುವ ಕೀಟ ವಾಹಕಗಳನ್ನು ಕೀಟನಾಶಕಗಳ ಮೂಲಕ ನಿರ್ವಹಿಸಬಹುದು.

ಅದಕ್ಕೆ ಏನು ಕಾರಣ

ಹಲವಾರು ವಿಧದ ಕೀಟಗಳಿಂದ ಹರಡಬಹುದಾದ ವೈರಸ್ (MCMV)ನಿಂದ ಈ ಲಕ್ಷಣಗಳು ಉಂಟಾಗುತ್ತವೆ: ಎಲೆ ಜಿಗಿ ಹುಳುಗಳು, ಜೀರುಂಡೆಗಳು ಮತ್ತು ಬಹುಶಃ ಕೆಲವು ಜಾತಿಗಳ ಮಿಟೆಗಳು (ಟೆಟ್ರಾನಿಚಸ್ ಜಾತಿ) ಮತ್ತು ಥ್ರಿಪ್ಸ್ (ಫ್ರಾಂಕ್ಲಿನಿಯೆಲಾ ಜಾತಿ). ಸೋಂಕಿತ ಸಸ್ಯ ವಸ್ತುಗಳ ಮೂಲಕ ಮೆಕ್ಕೆ ಜೋಳ ಬೆಳೆಯುವ ಹೊಸ ಪ್ರದೇಶಗಳಲ್ಲಿ MCMV ಸಾಮಾನ್ಯವಾಗಿ ಸೇರಿಕೊಳ್ಳುತ್ತದೆ. ಒಮ್ಮೆ ಸೇರಿದ ಬಳಿಕ ಇದು ಮೇಲೆ ತಿಳಿಸಲಾದ ಕೀಟಗಳ ಆಹಾರ ಚಟುವಟಿಕೆಯಿಂದ, ಆರೋಗ್ಯಕರ ಮೆಕ್ಕೆ ಜೋಳದ ಸಸ್ಯಗಳಿಗೆ ಹರಡುತ್ತದೆ. ಮೆಕ್ಕೆ ಜೋಳದ ಸಸ್ಯಗಳು ಲಭ್ಯವಿಲ್ಲದಾಗ ಅವುಗಳ ಲಾರ್ವಾ ಹಂತಗಳಲ್ಲೇ ಸುಪ್ತಾವಸ್ಥೆ ಕಳೆಯುತ್ತವೆ. ಇವು ಬೀಜದಿಂದ ಹರಡುತ್ತವೆ ಎಂದು ಭಾವಿಸಲಾಗಿಲ್ಲ. ಆದಾಗ್ಯೂ ಯಾಂತ್ರಿಕ ಗಾಯಗಳ ಮೂಲಕ ಹರಡುವಿಕೆ ಸಾಧ್ಯ. ಅಧಿಕ ಉಷ್ಣಾಂಶ, ಸಸ್ಯದ ಒತ್ತಡ ಮತ್ತು ದೀರ್ಘಕಾಲದವರೆಗಿನ ತೇವ ಹವಾಮಾನ ರೋಗದ ಬೆಳವಣಿಗೆಗೆ ಅನುಕೂಲವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದಲ್ಲಿ, ರೋಗ ನಿರೋಧಕ ಪ್ರಭೇದಗಳನ್ನು ನೆಡಿ.
  • ಇದು ಈ ರೋಗದ ವಿರುದ್ಧ ಪ್ರಮುಖ ಹಂತವಾಗಿದೆ.
  • ನಿಯಮಿತವಾಗಿ ಹೊಲದ ಮೇಲ್ವಿಚಾರಣೆ ಮಾಡಿ ಮತ್ತು ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ.
  • ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಮೆಕ್ಕೆ ಜೋಳದ ಸಸ್ಯಗಳಿಗೆ ಆಗುವ ಯಾಂತ್ರಿಕ ಹಾನಿ ತಪ್ಪಿಸಿ.
  • ಪರ್ಯಾಯ ಆಶ್ರಯದಾತ ಕಳೆ ಸಸ್ಯಗಳನ್ನು ನಿಯಂತ್ರಿಸಿ.
  • ವಿಶೇಷವಾಗಿ ಹುಲ್ಲಿನ ಕಳೆಗಳನ್ನು ನಿಯಂತ್ರಿಸಿ.
  • ಮಣ್ಣಿನೊಳಗೆ ಬೆಳೆಯ ಉಳಿಕೆಗಳನ್ನು ಸೇರಿಸಲು ಸುಗ್ಗಿಯ ನಂತರ ಹೊಲವನ್ನು ಉಳುಮೆ ಮಾಡಿ.
  • ಒಂದು ವರ್ಷದ ಕಾಲ ರೋಗಕ್ಕೆ ಒಳಗಾಗದ ಬೆಳೆಗಳೊಂದಿಗೆ ಬೆಳೆ ಸರದಿ ಯೋಜನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ