ಹುರುಳಿ

ಹುರುಳಿಯಲ್ಲಿ ಹಳದಿ ಮೊಸಾಯಿಕ್ ವೈರಸ್

BYMV

ವೈರಸ್

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ, ಎಲೆ ತುದಿಯ ಬಣ್ಣ ಬದಲಾವಣೆ, ಮೊಸಾಯಿಕ್ಸ್ ಇರುವಿಕೆ, ಮತ್ತು ಹಳದಿ ತೇಪೆಗಳ ಬೆಳವಣಿಗೆ ರೋಗಲಕ್ಷಣಗಳಲ್ಲಿ ಸೇರಿವೆ.
  • ಎಲೆಗೊಂಚಲುಗಳು ವಿರೂಪಗೊಳ್ಳಬಹುದು ಮತ್ತು ಅಂಚು ಕೆಳಕ್ಕೆ ಸುರುಳಿಯಾಗಿರುತ್ತದೆ.
  • ಬೀಜಕೋಶಗಳು ಸಾಮಾನ್ಯವಾಗಿ ಕಡಿಮೆ ಅಭಿವೃದ್ಧಿ ಹೊಂದಿರುತ್ತವೆ ಅಥವಾ ವಿರೂಪಗೊಂಡು, ಕಡಿಮೆ ಬೀಜಗಳನ್ನು ಹೊಂದಿರುತ್ತವೆ.
  • ಒಟ್ಟಾರೆ, ಸಸ್ಯಗಳು ಕುಂಠಿತ ಬೆಳವಣಿಗೆ ತೋರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

4 ಬೆಳೆಗಳು
ಹುರುಳಿ
ಮಸೂರ ಅವರೆ
ಬಟಾಣಿ
ಕಡಲೆಕಾಯಿ

ಹುರುಳಿ

ರೋಗಲಕ್ಷಣಗಳು

ರೋಗಲಕ್ಷಣಗಳು ವೈರಸ್ ನ ಪ್ರಭೇದ, ಬೆಳೆದಿರುವ ಬೆಳೆಯ ಪ್ರಭೇದ, ಸೋಂಕಿನ ಸಮಯದಲ್ಲಿ ಬೆಳವಣಿಗೆಯ ಹಂತ ಮತ್ತು ಪರಿಸರ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತವೆ. ಎಲೆಗಳ ಮೇಲಿನ ರೋಗಲಕ್ಷಣಗಳೆಂದರೆ ತುದಿ ಬಣ್ಣ ಕಳೆದುಕೊಳ್ಳುವುದು, ಗೆರೆಗಳು ಮತ್ತು ಹಳದಿ ತೇಪೆಗಳ ಬೆಳವಣಿಗೆ. ಆದರೆ, ಎಲ್ಲಕ್ಕಿಂತ ಅತ್ಯಂತ ಸ್ಪಷ್ಟವಾದ ಚಿಹ್ನೆಯೆಂದರೆ ಎಲೆಗಳ ಮೇಲೆ ಪರ್ಯಾಯ ಹಳದಿ ಮತ್ತು ಹಸಿರು ಮಚ್ಚೆಗಳು. ಕೆಲವು ಸಂದರ್ಭಗಳಲ್ಲಿ, ಗಾಢ ಹಸಿರು ಅಂಗಾಂಶದ ಪ್ರದೇಶಗಳು ಸುತ್ತಮುತ್ತಲಿನ ಹಳದಿ ಅಂಗಾಂಶದ ಮೇಲೆ ಬೆಳೆಯುತ್ತವೆ. ಎಲೆ ನಾಡಿಗಳು ಇಲ್ಲದೇ ಹೋಗುವ ಸಂಭವವೂ ಕೆಲವು ಬೆಳೆಗಳಲ್ಲಿ ಇದೆ. ಎಲೆಗಳು ಅಸಮ ಬೆಳವಣಿಗೆಯ ಪರಿಣಾಮವಾಗಿ ವಿರೂಪಗೊಳ್ಳಬಹುದು, ಮತ್ತು ಅಂಚು ಕೆಳಕ್ಕೆ ಸುರುಳಿಯಾಗಿ ಸುತ್ತಬಹುದು. ಬೀಜಕೋಶಗಳ ಮೇಲೆ ನೇರವಾಗಿ ಪರಿಣಾಮ ಬೀರದಿದ್ದರೂ ಸಹ, ಅವುಗಳು ಕಡಿಮೆ ಅಭಿವೃದ್ಧಿ ಹೊಂದುತ್ತವೆ ಅಥವಾ ವಿರೂಪಿಯಾಗಿರುತ್ತವೆ ಮತ್ತು ಕಡಿಮೆ ಬೀಜಗಳನ್ನು ಹೊಂದಿರುತ್ತವೆ. ಒಟ್ಟಾರೆ, ಸಸ್ಯಗಳು ಕುಂಠಿತ ಬೆಳವಣಿಗೆಯನ್ನು ತೋರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಹುರುಳಿ ಮೊಸಾಯಿಕ್ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಗಿಡಹೇನುಗಳ ಸಂಖ್ಯೆಯ ನಿಯಂತ್ರಣವು ಅತ್ಯಗತ್ಯ. ಗಿಡಹೇನುಗಳಿಗಾಗಿ ಎಲೆಗಳ ಕೆಳಭಾಗವನ್ನು ಪರಿಶೀಲಿಸಿ ಮತ್ತು ಕಂಡುಬಂದರೆ, ಕೀಟನಾಶಕ ಸಾಬೂನು, ಬೇವಿನ ಎಣ್ಣೆ ಅಥವಾ ಪೈರೆಥ್ರಾಯ್ಡ್ ಗಳನ್ನು ಆಧರಿಸಿದ ಸಾವಯವ ಉತ್ಪನ್ನಗಳೊಂದಿಗೆ ತಕ್ಷಣವೇ ಚಿಕಿತ್ಸೆ ನೀಡಿ. ಗಿಡಹೇನುಗಳನ್ನು ತಿನ್ನುವ ಪರಭಕ್ಷಕಗಳನ್ನು ಸಹ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ವೈರಸ್ ಗಳ ವಿರುದ್ಧ ಯಾವುದೇ ಚಿಕಿತ್ಸೆಗಳಿಲ್ಲ ಮತ್ತು ಗಿಡಹೇನುಗಳ ಸಂಖ್ಯೆಯ ಸಂಪೂರ್ಣ ನಿಯಂತ್ರಣ ಕಷ್ಟ. ವಾಸ್ತವವಾಗಿ, ವೈರಸ್ ಹರಡುವಿಕೆಯನ್ನು ತಡೆಯಲು ಗಿಡಹೇನುಗಳು ಸಾಕಷ್ಟು ವೇಗವಾಗಿ ಸಾಯುವುದಿಲ್ಲ. ಖನಿಜ ತೈಲ (1%)ವನ್ನು ಕೀಟನಾಶಕಗಳೊಂದಿಗೆ ಅಥವಾ ಪ್ರತ್ಯೇಕವಾಗಿ ಬಳಸಲಾಗುತ್ತದೆ. ಇದು ವೈರಸ್ ಹರಡುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಆದರೆ, ಅವು ದುಬಾರಿ ಮತ್ತು ಹೊಸದಾಗಿ ಬೆಳೆಯುತ್ತಿರುವ ಚಿಗುರುಗಳನ್ನು ರಕ್ಷಿಸಲು ಚಿಕಿತ್ಸೆಯನ್ನು ಪದೇ ಪದೇ ಪುನರಾವರ್ತಿಸಬೇಕಾಗುತ್ತದೆ. ಸಸ್ಯ ಇಳುವರಿ ಸಹ ಕಡಿಮೆಯಾಗಬಹುದು.

ಅದಕ್ಕೆ ಏನು ಕಾರಣ

ಬೀನ್ ಹಳದಿ ಮೊಸಾಯಿಕ್ ವೈರಸ್ ನಿಂದ (BYMV) ರೋಗಲಕ್ಷಣಗಳು ಉಂಟಾಗುತ್ತವೆ. ಅನೇಕ ವೈರಸ್ ಗಳು ಇದರ ಜೊತೆಯಾಗಿ ಸಹ-ಸೋಂಕು ಉಂಟಾಗಬಹದು. ಉದಾಹರಣೆಗೆ ಸೌತೆಕಾಯಿ ಮೊಸಾಯಿಕ್ ವೈರಸ್ (CMV). ಇದು ರೋಗಲಕ್ಷಣಗಳ ವೈವಿಧ್ಯತೆಯನ್ನು ವಿವರಿಸುತ್ತದೆ. ಹುರುಳಿ ಜೊತೆಗೆ, ಇದು ಕಡಲೆಕಾಯಿ, ಸೋಯಾಬೀನ್, ಬ್ರಾಡ್ ಬೀನ್ಸ್ ಮುಂತಾದ ಇತರ ಪ್ರಮುಖ ದ್ವಿದಳ ಧಾನ್ಯಗಳ ಬೆಳೆಗಳಿಗೆ ಸಹ ಸೋಂಕು ಉಂಟುಮಾಡುತ್ತದೆ. ಕ್ಲೋವರ್, ಅಲ್ಫಲ್ಫಾ ಮತ್ತು ಲುಪಿನ್ ಗಳ ಹಲವಾರು ಜಾತಿಗಳು ಚಳಿಗಾಲ ಕಳೆಯಲು ಆಶ್ರಯದಾತ ಸಸ್ಯಗಳಂತೆ ಸಹ ಕಾರ್ಯನಿರ್ವಹಿಸುತ್ತವೆ. ಇತರ ದ್ವಿದಳ ಧಾನ್ಯಗಳಲ್ಲದ ಆಶ್ರಯದಾತ ಸಸ್ಯಗಳೆಂದರೆ ಗ್ಲಾಡಿಯೋಲಸ್ ನಂತಹ ಕೆಲವು ಹೂವುಗಳು. ಈ ವೈರಸ್ ಮುಖ್ಯವಾಗಿ ಸಸ್ಯದಿಂದ ಸಸ್ಯಕ್ಕೆ ಒಂದು ಕೀಟ ವಾಹಕದ ಮೂಲಕ ಹರಡುತ್ತದೆಯಾದರೂ, ಇದು ಬೀಜ-ಹರಡುವಿಕೆ ಇರಬಹುದು ಎಂಬ ಸಂದೇಹವೂ ಇದೆ. ಇಪ್ಪತ್ತಕ್ಕೂ ಹೆಚ್ಚು ಜಾತಿಯ ಗಿಡಹೇನುಗಳು ಇದನ್ನು ನಿರಂತರವಾಗಿ ಹೊತ್ತು ಹರಡಬಲ್ಲವು. ಇದು ಕಲುಷಿತವಾದ ಸಸ್ಯದ ಭಾಗಗಳು ಅಥವಾ ಯಾಂತ್ರಿಕ ಇನಾಕ್ಯುಲೇಷನ್ ಗಳ ಮೂಲಕ ಕಸಿ ಮಾಡುವುದರಿಂದಲೂ ಹರಡಬಹುದು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಆರೋಗ್ಯಕರ ಬೀಜಗಳು ಅಥವಾ ಸಸ್ಯಗಳನ್ನೇ ನೆಡಿ.
  • ಲಭ್ಯವಿದ್ದರೆ ನಿರೋಧಕ ಸಸ್ಯಗಳನ್ನು ಬಳಸಿ.
  • ಮೇಲಾವರಣ ಹೆಚ್ಚು ದಟ್ಟವಾಗುವಂತೆ ಮಾಡಲು ಸಸ್ಯ ಸಾಂದ್ರತೆಯನ್ನು ಹೆಚ್ಚಿಸಿ.
  • ಕುದುರೆ ಮೇವಿನ ಸೊಪ್ಪು, ಕ್ಲೋವರ್, ಅಥವಾ ಇತರ ದ್ವಿದಳ ಧಾನ್ಯಗಳು ಅಥವಾ ಗ್ಲಾಡಿಯೋಲಸ್ ನಂತಹ ಹೂವಿನ ಸಸ್ಯಗಳ ಹತ್ತಿರ ಹುರುಳಿ ಸಸ್ಯಗಳನ್ನು ನೆಡಬೇಡಿ.
  • ಹೊಲದ ಸುತ್ತಲಿನಲ್ಲಿ ಧಾನ್ಯಗಳನ್ನು ಪಟ್ಟಿಗಳಲ್ಲಿ ಬೆಳೆದು ತಡೆ ಬೆಳೆಯಾಗಿ ಬಳಸಿ.
  • ಗಿಡಹೇನುಗಳ ಜೀವನ ಚಕ್ರಕ್ಕೆ ಅಡ್ಡಿಪಡಿಸಲು ಪ್ಲಾಸ್ಟಿಕ್ ಅಥವಾ ಸಾವಯವ ಮಲ್ಚ್ ಬಳಸಿ.
  • ಹೊಲಗಳು ಮತ್ತು ಸುತ್ತಲಿನ ಪ್ರದೇಶಗಳನ್ನು ಕಳೆ ಮುಕ್ತವಾಗಿ ಇರಿಸಿಕೊಳ್ಳಿ.
  • ಪ್ರಯೋಜನಕಾರಿ ಕೀಟಗಳನ್ನು ಉತ್ತೇಜಿಸಲು ಕೀಟನಾಶಕಗಳ ಬಳಕೆ ಕಡಿಮೆ ಮಾಡಿ.
  • ಬೆಳೆ ಸರದಿ ಯೋಜಿಸಿ.
  • ಅದರಲ್ಲೂ ವಿಶೇಷವಾಗಿ ಕೃಷಿ ಭೂಮಿ ಸೋಂಕಿನ ಇತಿಹಾಸವನ್ನು ಹೊಂದಿದ್ದಲ್ಲಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ