TSWV
ವೈರಸ್
ಆರಂಭಿಕ ರೋಗಲಕ್ಷಣವೆಂದರೆ ಎಲೆಗಳ ಮೇಲೆ ನೇರಳೆ ಅಥವಾ ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿರುವ ಎಳೆಯ ಎಲೆಗಳಲ್ಲು ಬರುವ ರೋಗ. ಇದು ಸಾಮಾನ್ಯವಾಗಿ ಸಸ್ಯದ ಮೇಲಿನ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ನೇರಳೆ ಗೆರೆಗಳು ಮತ್ತು ಸಣ್ಣ ಗಾಢ ಕಂದು ಕಲೆಗಳು ಕಾಂಡಗಳು ಮತ್ತು ಎಳೆಯ ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ, ಕೆಲವೊಮ್ಮೆ ಏಕಕೇಂದ್ರಕ ಉಂಗುರಗಳನ್ನು ಬರುತ್ತವೆ. ಅವು ಒಗ್ಗೂಡಿದಾಗ, ಎಲೆಯ ಅಗಲಕ್ಕೂ ಹರಡುತ್ತವೆ, ಅಂತಿಮವಾಗಿ ಅಂಗಾಂಶಗಳಲ್ಲಿ ನೆಕ್ರೋಸಿಸ್ ಉಂಟಾಗುತ್ತದೆ. ಕಾಂಡಗಳು ಮತ್ತು ತೊಟ್ಟುಗಳಲ್ಲಿ ಗಾಢ ಕಂದು ಬಣ್ಣದ ಪಟ್ಟೆಗಳು ಕಂಡುಬರುತ್ತವೆ. ಬೆಳೆಯುತ್ತಿರುವ ಭಾಗಗಳಲ್ಲಿ ಸಾಮಾನ್ಯವಾಗಿ ಸಂಪೂರ್ಣ ಸಸ್ಯ ಭಾಗವನ್ನು ಹಾಳುಮಾಡಬಹುದಾದ ತೀವ್ರವಾದ ನೆಕ್ರೋಸಿಸ್ ಉಂಟಾಗುತ್ತದೆ. ಸಸ್ಯಗಳಲ್ಲಿ ಬೆಳವಣಿಗೆ ಕುಂಠಿತಗೊಳ್ಳಬಹುದು ಅಥವಾ ಕೇವಲ ಕೆಲವು ಭಾಗಗಳು ಬೆಳೆಯಬಹುದು. ತೀವ್ರವಾಗಿ ಸೋಂಕಿತ ಸಸ್ಯಗಳಲ್ಲಿ ಮಚ್ಚೆಯಿರುವ, ತಿಳಿ ಹಸಿರು ಬಣ್ಣದ ಉಂಗುರಗಳಿರುವ ಮತ್ತು ಆ ಮಚ್ಚೆಗಳ ಮಧ್ಯಭಾಗ ಊದಿರುವ ಅಪಕ್ವವಾದ ಟೊಮಾಟೊಗಳನ್ನು ಕಾಣಬಹುದು. ಕಳಿತ, ಕೆಂಪು ಹಣ್ಣುಗಳ ಮೇಲೆ, ಕ್ಲೋರೋಟಿಕ್ ಕಲೆಗಳು ಮತ್ತು ಹೊಪ್ಪಳೆಯ ಜೊತೆ ಎದ್ದು ಕಾಣುವ ಕಂದು ಬಣ್ಣದ ಉಂಗುರಗಳಿರುತ್ತವೆ. ಈ ಕಾರಣದಿಂದ ಹಣ್ಣುಗಳು ಮಾರಾಟ ಮಾಡಲಾಗದಂತಾಗುತ್ತವೆ.
ಕೆಲವು ಪರಭಕ್ಷಕ ಮಿಟೆಗಳು ಥ್ರೈಪ್ ಗಳ ಲಾರ್ವಾ ಅಥವಾ ಪ್ಯೂಪಾಗಳನ್ನು ತಿನ್ನುತ್ತವೆ ಮತ್ತು ಇವು ವಾಣಿಜ್ಯಿಕವಾಗಿ ಲಭ್ಯವಿವೆ. ಹೂವುಗಳಲ್ಲದೆ ಎಲೆಗಳ ಮೇಲೆ ದಾಳಿಮಾಡುವ ವೈವಿಧ್ಯತೆಗಳ ವಿರುದ್ಧ, ವಿಶೇಷವಾಗಿ ಎಲೆಗಳ ಕೆಳಭಾಗದಲ್ಲಿ, ನೀಮ್ ತೈಲ ಅಥವಾ ಸ್ಪಿನೋಸಾಡ್ ಅನ್ನು ಹಾಕಿ ಪ್ರಯತ್ನಿಸಿ. ಸ್ಪಿನೊಸಾಡ್ ಹಾಕುವುದು ಬಹಳ ಪರಿಣಾಮಕಾರಿ ಆದರೆ ಅದು ಕೆಲವು ನೈಸರ್ಗಿಕ ಶತ್ರುಗಳಿಗೆ (ಉದಾಹರಣೆಗೆ, ಪರಭಕ್ಷಕ ಹುಳಗಳು, ಸಿರಿಫಿಡ್ ಫ್ಲೈ ಲಾರ್ವಾ, ಜೇನುನೊಣಗಳು) ವಿಷಕಾರಿಯಾಗಿದೆ ಮತ್ತು ಹೂಬಿಡುವ ಸಮಯದಲ್ಲಿ ಇದನ್ನು ಹಾಕದಿರುವುದು ಉತ್ತಮ. ಹೂವಿಗಾಗುವ ಥ್ರೈಪ್ಸ್ ಸೋಂಕಿಗೆ ಸಂಬಂಧಿಸಿದಂತೆ, ಕೆಲವು ಪರಭಕ್ಷಕ ಮಿಟೆಗಳು ಅಥವಾ ಹಸಿರು ಲೇಸ್ವಿಂಗ್ ಲಾರ್ವಾಗಳನ್ನು ಬಳಸಬಹುದಾಗಿದೆ. ಕೆಲವು ಕೀಟನಾಶಕಗಳೊಂದಿಗಿನ ಬೆಳ್ಳುಳ್ಳಿ ಸಾರಗಳ ಸಂಯೋಜನೆಯು ಸಹ ಚೆನ್ನಾಗಿ ಕೆಲಸ ಮಾಡುತ್ತದೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಹೆಚ್ಚಿನ ಸಂತಾನೋತ್ಪತ್ತಿ ಪ್ರಮಾಣಗಳು ಮತ್ತು ಅವುಗಳ ಜೀವನ ಚಕ್ರಗಳ ಕಾರಣದಿಂದ, ಥ್ರೈಪ್ಗಳು ವಿವಿಧ ವರ್ಗಗಳ ಕೀಟನಾಶಕಗಳಿಗೆ ಪ್ರತಿರೋಧವನ್ನು ಬೆಳೆಸಿಕೊಂಡಿವೆ. ಪರಿಣಾಮಕಾರಿ ಸಂಪರ್ಕ ಕೀಟನಾಶಕಗಳೆಂದರೆ ಅಜಡಿರಾಕ್ಟಿನ್, ಕೀಟನಾಶಕ ಸೋಪ್ಗಳು, ಕಿರುವ್ಯಾಪ್ತಿಯ ತೈಲಗಳು ಮತ್ತು ಪೈರೆಥ್ರಿನ್ಗಳನ್ನು ಒಳಗೊಂಡಿವೆ, ಇವುಗಳು ಪೈಪರೋನಿಲ್ ಬ್ಯುಟೊಕ್ಸೈಡ್ನೊಂದಿಗೆ ಅನೇಕ ಉತ್ಪನ್ನಗಳು ಸಂಯೋಜಿಸುತ್ತವೆ.
ಟೊಮೇಟೊ ಸ್ಪಾಟೆಡ್ ವಿಲ್ಟ್ ವೈರಸ್ (TSWV) ಅನ್ನು ವಿವಿಧ ಜಾತಿಗಳ ಥ್ರೈಪ್ಗಳು ಹರಡುತ್ತವೆ, ಅವುಗಳಲ್ಲಿ ಪಶ್ಚಿಮ ಭಾಗದ ಹೂವಿನ ಥ್ರೈಪ್ಗಳು (ಫ್ರಾಂಕ್ಲಿನಿಯೆಲಾ ಆಕ್ಸಿಡೆಂಟಲಿಸ್), ಈರುಳ್ಳಿ ಥ್ರೈಪ್ಗಳು (ಥೈಪ್ಸ್ ಟೊಬಾಸಿ) ಮತ್ತು ಮೆಣಸಿನಕಾಯಿ ಥ್ರೈಪ್ಗಳು (ಸ್ಕರ್ಟೋಥ್ರೈಪ್ಸ್ ಡೋರ್ಸಲಿಸ್) ಸೇರಿವೆ. TSWVಯು ಥ್ರೈಪ್ಸ್ ವಾಹಕಗಳಲ್ಲಿಯೂ ಸಹ ಸಕ್ರಿಯವಾಗಿರುತ್ತದೆ, ಮತ್ತು ಅದನ್ನು ನಿರಂತರವಾಗಿ ಪ್ರಸರಣ ಮಾಡಬಹುದು. ಸೋಂಕಿತ ಸಸ್ಯಗಳನ್ನು ತಿನ್ನುವ ಮರಿಹುಳುಗಳು ವೈರಸ್ಗಳನ್ನು ಪಡೆದುಕೊಳ್ಳುತ್ತವೆ ಮತ್ತು ತಮ್ಮ ಸಂಪೂರ್ಣ ಜೀವಿತಾವಧಿಯಲ್ಲಿ ಅದನ್ನು ಪ್ರಸರಣ ಮಾಡುವ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತವೆ. ಆದಾಗ್ಯೂ, ಸೋಂಕಿತ ಹೆಣ್ಣುಹುಳುಗಳಿಂದ ಮೊಟ್ಟೆಗಳಿಗೆ TSWV ಸಾಗುವುದಿಲ್ಲ. ಟೊಮ್ಯಾಟೊ, ಮೆಣಸು, ಆಲೂಗೆಡ್ಡೆ, ತಂಬಾಕು, ಲೆಟಿಸ್ ಮತ್ತು ಇತರ ಸಸ್ಯಗಳನ್ನೂ ಒಳಗೊಂಡಂತೆ ಈ ವೈರಸ್ ಗೆ ವ್ಯಾಪಕ ಹೋಸ್ಟ್ ಗಳಿವೆ.