ಭತ್ತ

ಟಂಗ್ರೋ

RTBV

ವೈರಸ್

ಸಂಕ್ಷಿಪ್ತವಾಗಿ

  • ಕುಂಠಿತಗೊಂಡ ಬೆಳವಣಿಗೆ.
  • ಕುಗ್ಗಿದ ಟಿಲ್ಲರಿಂಗ್.
  • ಸಣ್ಣ, ಗಾಢ-ಕಂದು ಬಣ್ಣದ ಬೊಬ್ಬೆಗಳೊಂದಿಗೆ ಹಳದಿಯಾದ ಎಲೆಗಳು.
  • ಪೊಟ್ಯಾಸಿಯಮ್ ಕೊರತೆಯಂತೆಯೇ ಕಾಣುವುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಸಸ್ಯಗಳು ಆರ್ಟಿಬಿವಿ ಅಥವಾ ಆರ್ಟಿಎಸ್ವಿ ಎರಡರಿಂದಲೂ ಅಥವಾ ಈ ಪ್ರತಿ ವೈರಸ್ನಿಂದಲೂ ಸೋಂಕಿಗೆ ಒಳಗಾಗಬಹುದು. ಭತ್ತದ ಹಸಿರು ಲೀಫ್ ಹಾಪರ್ ರೋಗವಾಹಕವಾಗಿದೆ.ದುಪ್ಪಟ್ಟು ಸೋಂಕಿಗೊಳಗಾದ ಸಸ್ಯಗಳು ಅವುಗಳ ಕುಂಠಿತ ಬೆಳವಣಿಗೆ ಮತ್ತು ಕಡಿಮೆಯಾದ ಟಿಲ್ಲೆರಿಂಗ್ ಒಳಗೊಂಡಂತೆ ‘ಟಂಗ್ರೋ ರೋಗಲಕ್ಷಣಗಳನ್ನು’ ತೋರಿಸುತ್ತವೆ. ಎಲೆ ತುದಿಯಿಂದ ಪ್ರಾರಂಭಿಸಿ ಕೆಳಭಾಗದವರೆಗೂ ವಿಸ್ತೃತವಾಗಿ ಅವುಗಳ ಎಲೆಗಳು ಹಳದಿ ಬಣ್ಣ ಅಥವಾ ಕಿತ್ತಳೆ-ಹಳದಿ ಬಣ್ಣಕ್ಕೆ ತಿರುಗುತ್ತವೆ. ಬಣ್ಣ ಕಳೆದುಕೊಂಡ ಎಲೆಗಳು ಸಹ ಅನಿಯಮಿತ, ಸಣ್ಣ, ಗಾಢ-ಕಂದು ಬಣ್ಣದ ಕಲೆಗಳನ್ನು. ಕಿರಿಯ ಸಸ್ಯಗಳು ಇಂಟರ್ವೆನ್ನಲ್ ಕ್ಲೋರೋಸಿಸ್ ಅನ್ನು ತೋರಿಸಬಹುದು. ಕಡಿಮೆ ಪ್ರಮಾಣದ ರೋಗಲಕ್ಷಣಗಳು ಆರ್ಟಿಬಿವಿ ಅಥವಾ ಆರ್ಟಿಎಸ್ವಿಯ ಸೋಂಕಿನಲ್ಲಿ ಕಂಡುಬರುತ್ತವೆ (ಉದಾಹರಣೆಗೆ, ಸ್ವಲ್ಪವಾಗಿ ಕುಂಠಿತವಾಗುತ್ತವೆ ಮತ್ತು ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದಿಲ್ಲ). ರೋಗಲಕ್ಷಣಗಳನ್ನು ಪೊಟ್ಯಾಸಿಯಮ್ ಕೊರತೆಯೆಂದು ತಪ್ಪುತಿಳಿಯಬಹುದು, ಆದರೆ ಟಂಗ್ರೊ ಒಂದು ಗದ್ದೆಯ ಕೆಲವು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ, ಆದರೆ ಪೊಟ್ಯಾಸಿಯಮ್ ಕೊರತೆಯು ಇಡೀ ಗದ್ದೆಯಲ್ಲಿ ಕಂಡುಬರುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಹಸಿರು ಲೀಫ್ ಹಾಪರ್ ರೋಗವಾಹಕಗಳನ್ನು ಆಕರ್ಷಿಸಲು ಮತ್ತು ನಿಯಂತ್ರಿಸಲು ಮತ್ತು ಅವುಗಳ ಸಂಖ್ಯೆಯನ್ನು ಪರಿಶೀಲಿಸಲು ಬೆಳಕಿನ ಬಲೆಗಳನ್ನು ಯಶಸ್ವಿಯಾಗಿ ಬಳಸಲಾಗಿದೆ. ಬೆಳಗಿನ ಜಾವದಲ್ಲಿ, ಬೆಳಕು ಬಲೆಯ ಬಳಿ ಇಳಿಯುತ್ತಿರುವ ಲೀಫ್ ಹಾಪರುಗಳ ಗುಂಪನ್ನು ಹಿಡಿಯಬೇಕು ಮತ್ತು ಅವುಗಳನ್ನು ಹೊರಹಾಕಬೇಕು ಪರ್ಯಾಯವಾಗಿ ಕೀಟನಾಶಕಗಳನ್ನು ಸಿಂಪಡಿಸುವುದು/ ಉದುರಿಸುವುದರ ಮೂಲಕವೂ ಇವುಗಳನ್ನು ಕೊಲ್ಲಬಹುದು. ಇದನ್ನು ಪ್ರತಿ ದಿನವೂ ಮಾಡಬೇಕು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಬ್ಯುಪ್ರೋಫೆಜಿನ್ ಅಥವಾ ಪೈಮೆಟ್ರೋಜೈನ್ ಇರುವ ಕೀಟನಾಶಕಗಳನ್ನು ಕಸಿ ಮಾಡಿದ 15 ಮತ್ತು 30 ದಿನಗಳ ನಂತರ ನಿಯಮಿತವಾಗಿ ಸಿಂಪಡಿಸುವುದೂ ಸಹ ಸಹಕಾರಿಯಾಗಿದೆ. ಹೀಗಿದ್ದರೂ, ಕೀಟಗಳು ಸುತ್ತಲಿನ ಹೊಲಗಳಿಗೆ ಹೋಗಬಹುದು ಮತ್ತು ಅತಿ ಕಡಿಮೆ ಅವಧಿಗಳಲ್ಲಿ ಟಂಗ್ರೋ ಅನ್ನು ಅತಿ ಬೇಗನೆ ಹರಡಬಲ್ಲವು. ಆದ್ದರಿಂದ ಹೊಲದ ಸುತ್ತಲಿನ ಸಸ್ಯಗಳ ಮೇಲೂ ಕೀಟನಾಶಕಗಳನ್ನು ಸಿಂಪಡಿಸಬೇಕು. ಕ್ಲೋರೊಪೈರಿಫೋಸ್, ಲಾಮ್ಡ ಸಿಹಾಲೋಥ್ರಿನ್ ಅಥವಾ ಇನ್ನಿತರ ಕೃತಕ ಪೈರಿಥ್ರಾಯಿಡ್ ಸಂಯುಕ್ತಗಳನ್ನು ಆಧರಿಸಿದ ಉತ್ಪನ್ನಗಳನ್ನು ಬಳಸಬೇಡಿ, ಇವುಗಳಿಗೆ ಲೀಫ್ ಹಾಪರುಗಳು ಭಾಗಶಃ ಪ್ರತಿರೋದಕವಾಗಿದೆ.

ಅದಕ್ಕೆ ಏನು ಕಾರಣ

ನೆಫೊಟೆಟ್ಟಿಕ್ಸ್ ವೈರೆಸೆನ್ಸ್ ಎಂಬ ಲೀಫ್ ಹಾಪರ್ ಮೂಲಕ ವೈರಸ್ಗಳು ಹರಡುತ್ತವೆ. ಹೆಚ್ಚು ಇಳುವರಿಯುಳ್ಳ ಅಕ್ಕಿ ಬೆಳೆಗಳ ಹೊಲಗಳಲ್ಲಿ ಹೆಚ್ಚಾಗಿ ಇರುತ್ತದೆ ಇದು ಕಡಿಮೆ ಬೆಳವಣಿಗೆಯ ಅವಧಿಯನ್ನು ಹೊಂದಿದ್ದು, ಅಕ್ಕಿ ಬೆಳೆಗಾರರಿಗೆ ವರ್ಷದಲ್ಲಿ ಅಕ್ಕಿಯ ಎರಡು ಬೆಳೆಗಳನ್ನು ನೀಡುತ್ತದೆ. ಒಮ್ಮೆ ಅಕ್ಕಿಯ ಸಸ್ಯ ಟಂಗ್ರೋದಿಂದ ಸೋಂಕಿಗೊಳಗಾದ ನಂತರ, ಅದನ್ನು ಗುಣಪಡಿಸಲಾಗುವುದಿಲ್ಲ. ನೇರ ರೋಗ ನಿಯಂತ್ರಣಕ್ಕಿಂತ ರೋಗನಿರೋಧಕ ಕ್ರಮಗಳು ಹೆಚ್ಚು ಪರಿಣಾಮಕಾರಿ. ಅಕ್ಕಿಯ ಎರಡು-ಬೆಳೆ ಸರದಿ ವ್ಯವಸ್ಥೆ ಮತ್ತು ಅಕ್ಕಿಯ ಅನುವಂಶಿಕ ಏಕರೂಪತೆಯು ಟಂಗ್ರೋ ರೋಗ ಹೊಲಗಳಲ್ಲಿ ಕಾಣಿಸಿಕೊಳ್ಳಲು ಬಹು ದೊಡ್ಡ ಕಾರಣಗಳಾಗಿವೆ. ಮಳೆನೀರಿನಲ್ಲಿ ಬೆಳೆದ ಅಥವಾ ಎತ್ತರ ಪ್ರದೇಶದಲ್ಲಿ ಬೆಳೆದ ಅಕ್ಕಿಯ ಸಸ್ಯಗಳಿಗಿಂತ ನೀರಾವರಿ ಪ್ರದೇಶಗಳಲ್ಲಿನ ಅಕ್ಕಿ ಸಸ್ಯಗಳು ಈ ರೋಗಕ್ಕೆ ಹೆಚ್ಚು ತುತ್ತಾಗಬಲ್ಲವು. ಬೆಳವಣಿಗೆ ನಿಂತಿರುವ ಸಸ್ಯಗಳು ಮತ್ತು ಕೊಯ್ದ ಪೈರಿನ ಕೂಳೆಗಳು ಸಹ ಸೋಂಕಿನ ಮೂಲವಾಗಿದೆ.


ಮುಂಜಾಗ್ರತಾ ಕ್ರಮಗಳು

  • ರೋಗವಾಹಕಗಳಿಗೆ ಸ್ವಲ್ಪ ಮಟ್ಟಿಗೆ ಪ್ರತಿರೋಧವನ್ನು ಹೊಂದಿರುವ ತಳಿಗಳನ್ನು ಬಳಸಿ.
  • ರೋಗವಾಹಕಗಳ ಸಂಖ್ಯೆಯು ಕಡಿಮೆಯಾಗಿರುವ ತಿಂಗಳುಗಳಲ್ಲಿ ಎರಡು ಬೆಳೆಗಳನ್ನು ನೆಡಿ.
  • ಹೋಸ್ಟ್ ಅಲ್ಲದ ಬೆಳೆಗಳೊಂದಿಗೆ ಬೆಳೆ ಸರದಿ ಮಾಡಿ.
  • ಪ್ರತಿ ಜಾಗದಲ್ಲಿ ಹೆಚ್ಚು ಕಡಿಮೆ ಒಂದೇ ತೆರನಾದ ಬೆಳವಣಿಗೆಗಾಗಿ ನಾಟಿ ಮಾಡುವ ಸಮಯವು ಹೊಂದುವಂತೆ ಯೋಜಿಸಿ.
  • ಉಳುಮೆ ಮೂಲಕ ಮೊಟ್ಟೆಗಳನ್ನು ಮತ್ತು ಸಂತಾನೋತ್ಪತ್ತಿ ಮಾಡುವ ಸ್ಥಳಗಳನ್ನು ನಾಶಮಾಡಿ.
  • ಹೊಲಗಳ ಪರ್ಯಾಯ ವೆಟ್ಟಿಂಗ್ ಮತ್ತು ಡ್ರೈಯಿಂಗನ್ನು ರೂಢಿಸಿಕೊಳ್ಳಿ.
  • ಅನುಕೂಲಕರ ಕೀಟಗಳನ್ನು ರಕ್ಷಣೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ