ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ ಎಕ್ಸೋಕಾರ್ಟಿಸ್ ವೈರಾಯ್ಡ್

CEVd

ವೈರಸ್

ಸಂಕ್ಷಿಪ್ತವಾಗಿ

  • ರೋಗಕ್ಕೆ ಸೂಕ್ಷ್ಮವಾಗಿರುವ ಬೇರುಕಾಂಡಗಳಿಂದ ಬೆಳೆಯುವ ಮರದ ಮೇಲೆ ರೋಗಲಕ್ಷಣಗಳು ಬರುತ್ತವೆ.
  • ಅವುಗಳ ಲಕ್ಷಣಗಳೇನೆಂದರೆ ತೊಗಟೆಯಲ್ಲಿ ಸಿಪ್ಪೆ ಕಿತ್ತುಬರುವುದು, ಕ್ಯಾನೋಪಿಯಲ್ಲಿ ದೊಡ್ಡ ಪ್ರಮಾಣದ ಕ್ಲೋರೋಸಿಸ್ ಮತ್ತು ಮರದ ಬೆಳವಣಿಗೆಯಲ್ಲಿ ತೀವ್ರವಾದ ಕುಂಠಿತ.
  • ಬೇರುಕಾಂಡಗಳು ವೈರಸ್ಗೆ ತುತ್ತಾಗುವ ತೀವ್ರತೆಯಲ್ಲಿ ಬದಲಾವಣೆಗಳಿರುತ್ತವೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಸುಮಾರು 4 ವರ್ಷಗಳ ಕಾಲ ಬೆಳೆದಿರುವ, ರೋಗಕ್ಕೆ ಸೂಕ್ಷ್ಮವಾಗಿರುವ ಬೇರುಕಾಂಡಗಳಿಂದ ಬೆಳೆಯುವ ಮರಗಳ ಮೇಲೆ ರೋಗಲಕ್ಷಣಗಳು ಬರುತ್ತವೆ ಅವುಗಳ ಲಕ್ಷಣಗಳೇನೆಂದರೆ ತೊಗಟೆಯಲ್ಲಿ ಸಿಪ್ಪೆ ಕಿತ್ತುಬರುವುದು, ಕ್ಯಾನೋಪಿಯಲ್ಲಿ ದೊಡ್ಡ ಪ್ರಮಾಣದ ಕ್ಲೋರೋಸಿಸ್ ಮತ್ತು ಮರದ ಬೆಳವಣಿಗೆಯಲ್ಲಿ ತೀವ್ರವಾದ ಕುಂಠಿತ. ತೊಗಟೆಯ ಸಿಪ್ಪೆ ಕಿತ್ತುಬರುವುದು ಎಂದರೆ ಕಸಿ ಮಾಡುವ ಸಂಯೋಜನೆಯ ಕೆಳಗಿನ ತೊಗಟೆಯಲ್ಲಿ ಬಿರುಕು ಮತ್ತು ಸಿಪ್ಪೆ ಕಿತ್ತುಬರುವುದು. ಪೊನ್ಸಿರಸ್ ಟ್ರೈಫೋಲಿಯಾಟಾದ (ಟ್ರೈಫೋಲಿಯೇಟ್ ಕಿತ್ತಳೆ) ಬೇರುಕಾಂಡಗಳಿಂದ ಬೆಳೆದ ಮರಗಳ ಮೇಲೆ ಇವು ಅತ್ಯಂತ ಗಂಭೀರವಾಗಿ ಪರಿಣಾಮ ಬೀರುತ್ತವೆ. ಸಿಟ್ರೇಂಜ್ನ ಬೇರುಕಾಂಡದಿಂದ ಬೆಳೆದ ಮರಗಳಲ್ಲಿ ಸ್ವಲ್ಪ ಸಮಯದ ನಂತರ ರೋಗಲಕ್ಷಣಗಳು ಬರುತ್ತವೆ, ಇದರಲ್ಲಿ ಮರದ ಬೆಳವಣಿಗೆ ಕುಂಠಿತಗೊಳ್ಳುವ ಪ್ರಮಾಣ ಸಾಮಾನ್ಯವಾಗಿ ತೀವ್ರವಾಗಿರುವುದಿಲ್ಲ ಮತ್ತು ಅವುಗಳಲ್ಲಿ ಯಾವಾಗಲೂ ತೊಗಟೆಯ ಸಿಪ್ಪೆ ಕಿತ್ತುಬರುವ ರೋಗಲಕ್ಷಣ ಕಂಡುಬರುವುದಿಲ್ಲ. ಇತರ ಸೂಕ್ಷ್ಮ ಬೇರುಕಾಂಡಗಳ ಮೇಲೆ, ಮರಗಳು ಬಾಗುವುದು ಮತ್ತು ಬೇರುಕಾಂಡದ ತಳದಲ್ಲಿ ತೊಗಟೆಯು ಆಗಾಗ ಕಿತ್ತುಬರುವುದು ಸಹ ಕಂಡುಬರಬಹುದು. ಎಕ್ಸೊಕಾರ್ಟಿಸ್ ನಿಂದ ಹಣ್ಣಿನ ಗುಣಮಟ್ಟದ ಮೇಲೆ ಯಾವುದೇ ನೇರ ಪರಿಣಾಮ ಆಗುವುದಿಲ್ಲ ಆದರೆ ದ್ಯುತಿಸಂಶ್ಲೇಷಣೆ ಪ್ರಮಾಣ ಕಡಿಮೆಯಾಗುವುದರಿಂದ ಇಳುವರಿಯಲ್ಲಿ ಗಣನೀಯವಾದ ಕಡಿತವುಂಟಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, ಈ ವೈರಸ್ ವಿರುದ್ಧ ಯಾವುದೇ ಜೈವಿಕ ಚಿಕಿತ್ಸೆಯ ಬಗ್ಗೆ ನಮಗೆ ತಿಳಿದಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. 1% ಬ್ಲೀಚ್ ದ್ರಾವಣದಲ್ಲಿ (1% ಲಭ್ಯವಿರುವ ಕ್ಲೋರಿನ್) ಸಿಟ್ರಸ್ ಬೆಳೆಸಲು ಉಪಯೋಗಿಸುವ ಸಲಕರಣೆಗಳನ್ನು ಕ್ರಿಮಿರಹಿತಗೊಳಿಸಬೇಕು.

ಅದಕ್ಕೆ ಏನು ಕಾರಣ

ಸಿಟ್ರಸ್ ಎಕ್ಸೊಕಾರ್ಟಿಸ್ ವೈರಾಯ್ಡ್ ನಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಸಿಟ್ರಸ್ ನ ಎಲ್ಲಾ ಪ್ರಭೇದಗಳಲ್ಲಿಯೂ ಅವುಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸದೆಯೇ ಬದುಕಬಲ್ಲವು. ಸೋಂಕಿಗೊಳಗಾದ ಬಡ್ ವುಡ್ ಗಳನ್ನು ಕಸಿಮಾಡಿದಾಗ ಮತ್ತು ರೋಗಕ್ಕೆ ಸೂಕ್ಷ್ಮವಾಗಿರುವ ಬೇರುಕಾಂಡಗಳು (ಟ್ರೈಫಿಯೇಟ್ ಕಿತ್ತಳೆ, ಸಿಟ್ರೇಂಜ್) ಅವುಗಳ ಮೇಲೆ ಬೆಳೆದಾಗ ಮಾತ್ರ ರೋಗಲಕ್ಷಣಗಳು ಕಂಡುಬರುತ್ತವೆ. ಸಸ್ಯದ ರಸದಲ್ಲಿ ಈ ವೈರಾಯ್ಡ್ ಗಳು ಬದುಕುತ್ತವೆ ಮತ್ತು ಇದು ಮೊಳಕೆಯೊಡೆಯುವಾಗ ಅಥವಾ ಕಸಿ ಮಾಡುವ ಕೆಲಸಗಳ ಮೂಲಕ ಮರದಿಂದ ಮರಕ್ಕೆ ಹರಡಬಹುದು. ಕಲುಷಿತ ಉಪಕರಣಗಳೊಂದಿಗೆ ಕತ್ತರಿಸುವ ಕೆಲಸವನ್ನು ಮಾಡಿದರೂ ಸಹ ಅದು ರೋಗವನ್ನು ಹರಡುತ್ತದೆ. ಮರದ ಬೇರುಗಳು ನೈಸರ್ಗಿಕವಾಗಿ ಕಸಿಯಾದಾಗಲೂ ಸಹ ಮರಗಳಿಂದ ಮರಕ್ಕೆ ವೈರಾಯ್ಡ್ ಗಳು ಹರಡುತ್ತವೆ. ಅನೇಕ ಇತರ ಸಿಟ್ರಸ್ ವೈರಸ್ಗಳಂತೆ, ಎಕ್ಸೊಕಾರ್ಟಿಸ್ ಅನ್ನು ಸಸ್ಯರಸ ಹೀರುವ ಕೀಟಗಳು ಹರಡುವುದಿಲ್ಲ, ಏಕೆಂದರೆ ಈ ರೋಗಕ್ಕೆ ಯಾವುದೇ ಕೀಟ ವಾಹಕ ಇಲ್ಲ. ಬೀಜದಿಂದ ಹರಡಿರುವ ಬಗ್ಗೆ ತಿಳಿದುಬಂದಿಲ್ಲ. ಎಕ್ಸೊಕಾರ್ಟಿಸ್ ವೈರಾಯ್ಡ್ ಹೆಚ್ಚಿನ ಉಷ್ಣತೆ ಮತ್ತು ಶುಷ್ಕ ಸ್ಥಿತಿಗಳಿಗೆ ತುಂಬಾ ನಿರೋಧಕವಾಗಿರುತ್ತದೆ ಮತ್ತು ಪ್ರಸರಣ ವಸ್ತು ಮತ್ತು ಕತ್ತರಿಸುವ ಸಾಧನಗಳಲ್ಲಿ ದೀರ್ಘಕಾಲದವರೆಗೆ ಸೋಂಕು ಉಂಟುಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಬಡ್‌ವುಡ್ ಗಳನ್ನು ಪಡೆಯಿರಿ.
  • ವೈರಸ್ ನ ಉಪಸ್ಥಿತಿಯನ್ನು ಪರೀಕ್ಷಿಸಲು ಸಸ್ಯ ಮತ್ತು ಪ್ರಸರಣ ವಸ್ತುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ.
  • ರೋಗದ ಲಕ್ಷಣಗಳನ್ನು ಗುರುತಿಸಲು ಹಣ್ಣಿನ ತೋಟವನ್ನು ನಿಯಮಿತವಾಗಿ ಪರಿಶೀಲಿಸಿ.
  • ಇತರ ಮರಗಳು ಅಥವಾ ಬ್ಲಾಕ್ಗಳಿಗೆ ವೈರಾಯ್ಡ್ ಹರಡದಂತೆ ನೋಡಿಕೊಳ್ಳಲು ಹಣ್ಣಿನ ತೋಟದಿಂದ ಸೋಂಕಿತ ಮರಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ.
  • ಸೋಂಕಿತ ಬೇರುಗಳು ಕುಡಿಯೊಡೆಯುವುದನ್ನು ತಡೆಯಲು ಬೇರಿನ ಭಾಗಗಳನ್ನು ತೆಗೆದುಹಾಕಿ.
  • ಸಿಟ್ರಸ್ ಬೆಳವಣಿಗೆಯಲ್ಲಿ ಉಪಯೋಗಿಸಲಾಗುವ ಉಪಕರಣಗಳು ಮತ್ತು ಇದರಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಉನ್ನತ ಮಟ್ಟದ ನೈರ್ಮಲ್ಯ ಇರುವಂತೆ ಕಾಪಾಡಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ