ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ ಸೊರೋಸಿಸ್ ವೈರಸ್

CPsV

ವೈರಸ್

ಸಂಕ್ಷಿಪ್ತವಾಗಿ

  • ಅಂತರನಾಳೀಯ ಕ್ಲೋರೋಸಿಸ್ ಅಥವಾ ಎಲೆಗಳ ಮೇಲೆ ಹಳದಿ ಬಣ್ಣದ ಮಚ್ಚೆಗಳು.
  • ತೊಗಟೆಯ ಸಿಪ್ಪೆ ಕಿತ್ತುಬರುವುದು ಮತ್ತು ಚಕ್ಕೆ ಕಿತ್ತುಬರುವುದು.
  • ತೊಗಟೆಗಳ ಮೇಲಿರುವ ಗಾಯಗಳ ಸುತ್ತ ಅಂಟಾದ ವಸ್ತುವಿನ ಉತ್ಪತ್ತಿ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಸಿಟ್ರಸ್ ರಿಂಗ್ಸ್ಪಾಟ್ ವೈರಸ್ ನಿಂದಾಗುವ ರೋಗಲಕ್ಷಣಗಳನ್ನು ಈ ವೈರಸ್ ನ ರೋಗಲಕ್ಷಣಗಳೆಂದುಕೊಳ್ಳಬೇಡಿ. ಅವು ಎಲೆಗಳು, ಹಣ್ಣು, ತೊಗಟೆ, ಕಾಂಡ, ಬೇರುಗಳು ಮತ್ತು ಶಾಖೆಗಳಲ್ಲಿ ಕಂಡುಬರುತ್ತವೆ. ಕ್ಲೋರೋಟಿಕ್ ಮಚ್ಚೆಗಳು ಅಥವಾ ಕಲೆಗಳಿಂದ ಹಿಡಿದು, ಬಣ್ಣ ಬಣ್ಣದ ಚುಕ್ಕೆಗಳ ರೂಪದಲ್ಲಿ ವಿಪರ್ಣನದ ತನಕ ಎಲೆಗಳು ವಿವಿಧ ರೀತಿಯ ಲಕ್ಷಣಗಳನ್ನು ತೋರುತ್ತವೆ. ಎಲೆಗಳು ಬೆಳೆದಂತೆ ಈ ರೋಗಲಕ್ಷಣಗಳು ಮರೆಯಾಗಬಹುದು. ಸೋರೋಸಿಸ್- ಸೋಂಕಿತ ಹಣ್ಣುಗಳು ರಿಂಗ್-ಆಕಾರದ ಕ್ಲೋರೊಟಿಕ್ ಕಲೆಗಳನ್ನು ತೋರಬಹುದು. ಆದಾಗ್ಯೂ, ರೋಗದ ಸಾಮಾನ್ಯ ಲಕ್ಷಣವೆಂದರೆ ತೊಗಟೆಯು ಹಾಳಾಗುವುದು. ಇದು ಸಾಮಾನ್ಯವಾಗಿ ಗುಳ್ಳೆಗಳು ಅಥವಾ ಬೊಬ್ಬೆಗಳು ಕಾಣಿಸಿಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ, ಅದು ನಂತರದಲ್ಲಿ ದೊಡ್ಡದಾಗಿ ಒಡೆಯುತ್ತವೆ, ಇದರಿಂದಾಗಿ ತೇಪೆಗಳು ಮತ್ತು ಸಡಿಲವಾದ ಚಕ್ಕೆಗಳು ತೊಗಟೆಯಲ್ಲಿ ಕಂಡುಬರುತ್ತವೆ. ಸಿಪ್ಪೆ ಕಿತ್ತುಬರುವುದು ಮತ್ತು ಚಕ್ಕೆ ಕಿತ್ತುಬರುವುದರ ನಂತರ ಉಳಿದ ಕಾಂಡ ಮತ್ತು ಮುಖ್ಯ ಶಾಖೆಗಳಿಗೆ ಹರಡುತ್ತದೆ. ಗಾಯಗಳ ಸುತ್ತ ಅಂಟಾದ ವಸ್ತು ಉತ್ಪತ್ತಿಯಾಗುತ್ತದೆ. ಮುಂದುವರಿದ ಹಂತಗಳಲ್ಲಿ, ತೊಗಟೆ ಮತ್ತು ಮರದ ಆಳವಾದ ಪದರಗಳಲ್ಲಿ ಅಂಟು ಸೇರಿಕೊಂಡು ಅವು ಸಾಯುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಇಲ್ಲಿಯವರೆಗೆ ಈ ರೋಗದ ಪರಿಣಾಮ ಅಥವಾ ತೀವ್ರತೆಯನ್ನು ಕಡಿಮೆ ಮಾಡಲು ಯಾವುದೇ ಜೈವಿಕ ನಿಯಂತ್ರಣದ ಚಿಕಿತ್ಸೆ ಇಲ್ಲ. ನಿಮಗೆ ಯಾವುದಾದರೂ ವಿಧ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ರಾಸಾಯನಿಕ ಚಿಕಿತ್ಸೆಗಳ ಬಳಕೆಯಿಂದ ವೈರಸ್ ರೋಗಗಳನ್ನು ನೇರವಾಗಿ ನಿಯಂತ್ರಿಸಲಾಗುವುದಿಲ್ಲ. ಒಂದು ತೋಪಿನಲ್ಲಿ ಸೊರೋಸಿಸ್ ಇದ್ದರೆ, ಬ್ಲೀಚ್ನ ದ್ರಾವಣದಲ್ಲಿ ಕತ್ತರಿಸುವ ಅಥವಾ ಬಡ್ಡಿಂಗ್ ಮಾಡುವ ಉಪಕರಣಗಳನ್ನು ನೆನೆಸುವ ಮೂಲಕ ಉಪಕರಣಗಳ ಸೋಂಕನ್ನು ತೆಗೆಯಬಹುದು. ರೋಗವನ್ನು ತಡೆಗಟ್ಟಲು ಅತ್ಯುತ್ತಮ ಮಾರ್ಗವೆಂದರೆ ಕಸಿ ಮಾಡಲು ಪ್ರಮಾಣೀಕೃತ, ರೋಗ-ಮುಕ್ತ ಬಡ್ ವುಡ್ ಗಳನ್ನು ಪಡೆಯುವುದು.

ಅದಕ್ಕೆ ಏನು ಕಾರಣ

ಸಿಟ್ರಸ್ ಸೊರೋಸಿಸ್ ವೈರಸ್ ನಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ, ಇದು ವಿಶ್ವಾದ್ಯಂತ ಸಿಟ್ರಸ್ ಮರಗಳ ಅತ್ಯಂತ ಹಾನಿಕರ ವೈರಸ್ ರೋಗಕಾರಕವೆಂದು ಪರಿಗಣಿಸಲ್ಪಟ್ಟಿದೆ. ಇದು ಮುಖ್ಯವಾಗಿ ಕಸಿ ಮಾಡುವ ಸಮಯದಲ್ಲಿ ಸೋಂಕಿತ ಬಡ್ ವುಡ್ ಗಳು ಅಥವಾ ಕಲುಷಿತ ಉಪಕರಣಗಳ ಮೂಲಕ ಹರಡುತ್ತದೆ. ಕೆಲವೊಮ್ಮೆ, ರೋಗವು ನೈಸರ್ಗಿಕವಾಗಿ ಬೇರು ಕಸಿಯಾಗುವ ಸಮಯದಲ್ಲಿ ಸೋಂಕಿತ ಮರದಿಂದ ಆರೋಗ್ಯವಂತ ಮರಕ್ಕೆ ಹರಡುತ್ತದೆ. ಕೆಲವು ಸಿಟ್ರೇಂಜ್ ಪ್ರಭೇದಗಳ ಬೀಜಗಳು ರೋಗವನ್ನು ಪ್ರಸರಣ ಮಾಡುತ್ತವೆಂದು ತಿಳಿದುಬಂದಿದೆ. ಇದು ನೈಸರ್ಗಿಕವಾಗಿಯೂ ಸಹ ಹರಡುತ್ತದೆಂದು ಕೆಲವು ಸಾಕ್ಷ್ಯಾಧಾರಗಳಿವೆ, ಬಹುಶಃ ಓಲ್ಪಿಡಿಯಮ್ ಬ್ರಾಸ್ಸಿಕಾ ಎಂಬ ಶಿಲೀಂಧ್ರದಿಂದ ಅಥವಾ ಇನ್ನೂ ಅಪರಿಚಿತ ವೈಮಾನಿಕ ವಾಹಕಗಳ ಮೂಲಕ. ಬಡ್ವುಡ್ ಪ್ರಮಾಣೀಕರಣ ಕಾರ್ಯಕ್ರಮಗಳನ್ನು ಬಳಸಿಕೊಂಡು ಅನೇಕ ಪ್ರದೇಶಗಳಲ್ಲಿ ಸೊರೋಸಿಸ್ ನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಮುಖ್ಯವಾಗಿ ಕಿತ್ತಳೆ ಮತ್ತು ಚಕ್ಕೋತ ಹಣ್ಣಿನ ಮೇಲೆ ಇದು ಪರಿಣಾಮ ಬೀರುತ್ತದೆ ಆದರೆ ಮ್ಯಾಂಡರಿನ್, ಟ್ಯಾಂಜರಿನ್, ನಿಂಬೆ, ಪೊಮೆಲೊ ಮತ್ತು ಲಿಂಬೆ ಸಹ ಇದರ ಲಕ್ಷಣಗಳನ್ನು ತೋರುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ದೇಶದಲ್ಲಿರುವ ಸಂಪರ್ಕತಡೆ ನಿಬಂಧನೆಗಳ ಬಗ್ಗೆ ಪರಿಶೀಲಿಸಿ.
  • ನಿಮ್ಮ ಬೇರುಕಾಂಡಗಳನ್ನು ಕಸಿ ಮಾಡಲು ರೋಗ ಮುಕ್ತ, ಪ್ರಮಾಣೀಕೃತ ಬಡ್ ವುಡ್ ಗಳನ್ನು ಬಳಸಿ.
  • ಗಾಯದ ಜಡ್ಡು ರಚನೆಯನ್ನು ಉತ್ತೇಜಿಸಲು ಸೋಂಕಿಗೊಳಗಾದ ತೊಗಟೆ ಭಾಗವನ್ನು ಕೆರೆದು ಹೊರತೆಗೆದುಹಾಕಿ, ಅದು ತಾತ್ಕಾಲಿಕ ಚೇತರಿಕೆಗೆ ಸಹಾಯ ಮಾಡುತ್ತದೆ.
  • ಉತ್ಪಾದನೆ ಮತ್ತು ಇಳುವರಿಯಲ್ಲಿ ಲಾಭ ಪಡೆಯಲು ಸೋಂಕಿತ ಮರಗಳನ್ನು ಬದಲಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ