CTV
ವೈರಸ್
CTV ಸೋಂಕಿನ ಲಕ್ಷಣಗಳು ಬದಲಾಗುತ್ತಿರುತ್ತವೆ ಮತ್ತು ಹೋಸ್ಟ್, ನಿರ್ದಿಷ್ಟವಾದ ವೈರಸ್ನ ವಿಷಮತೆ ಮತ್ತು ಪರಿಸರದ ಪರಿಸ್ಥಿತಿಗಳೂ ಸೇರಿದಂತೆ ಹಲವು ಅಂಶಗಳ ಮೇಲೆ ಇವು ಅವಲಂಬಿತವಾಗಿವೆ. ಮೂರು ಪ್ರಮುಖ ರೋಗಲಕ್ಷಣಗಳೆಂದರೆ: ಮರಗಳು ಕುಗ್ಗುವುದು ("ಟ್ರಿಸ್ಟೆಜಾ"), ಶಾಖೆ ಮತ್ತು ಕಾಂಡಗಳಲ್ಲಿ ಗುಳಿಗಳ ಬೆಳವಣಿಗೆ ಮತ್ತು ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು. ಕುಗ್ಗುವುದು ಎಂದರೆ ಕ್ಲೋರೋಟಿಕ್ ಎಲೆಗಳು ಮತ್ತು ಸೋಂಕಿತ ಮರಗಳು ಸಾಯುವುದು. ಈ ಪ್ರಕ್ರಿಯೆ ನಿಧಾನವಾಗಿರುತ್ತದೆ, ಮೊದಲ ರೋಗಲಕ್ಷಣಗಳು ಗಮನಕ್ಕೆ ಬಂದ ನಂತರ ಹಲವಾರು ತಿಂಗಳುಗಳವರೆಗೆ ಅಥವಾ ವರ್ಷಗಳವರೆಗೆ ಇದು ಆಗಬಹುದು. ಕುಗ್ಗುವುದು ಅತಿವೇಗವಾಗಿಯೂ ಆಗಬಹುದು, ಮೊದಲ ರೋಗಲಕ್ಷಣಗಳು ಗಮನಕ್ಕೆ ಬಂದ ಕೆಲವೇ ದಿನಗಳ ನಂತರ ಹೋಸ್ಟ್ ಸಾಯಬಹುದು. ರೋಗಕ್ಕೆ ತುತ್ತಾಗಬಹುದಾದ ಸಸ್ಯಗಳ ಶಾಖೆಗಳು ಮತ್ತು ಕಾಂಡಗಳ ಮೇಲೆ ಅಧಿಕ ಸಂಖ್ಯೆಯ ಗುಳಿಗಳು ಬೆಳೆಯುತ್ತವೆ. ಕೆಲವು ಪ್ರಭೇದಗಳಲ್ಲಿ ಹಣ್ಣಿನ ಮೇಲೆ ಅಂಟು ಉತ್ಪತ್ತಿಯಾಗುವುದರ ಜೊತೆಗೆ ಸಿಪ್ಪೆ-ಎಣ್ಣೆ ಕಲೆಗಳು, ಅಥವಾ ಕಂದು ಬಣ್ಣದ ಚುಕ್ಕೆಗಳು ಬೆಳೆಯುತ್ತವೆ.
ಪ್ಯಾರಾಸಿಟೊಯಿಡ್ ಕಣಜಗಳು ಅಥವಾ ಗಾಲ್ ಮಿಡ್ಜಸ್ ಗಳನ್ನು ಬಳಸಿಕೊಂಡು ಕೆಲವು ಕ್ಷೇತ್ರ ಪ್ರಯೋಗಗಳು ನಡೆಯುತ್ತಿವೆ, ಇವು ಸಿಟ್ರಸ್ ತೋಪುಗಳಲ್ಲಿ ಕೆಲವು ಗಿಡಹೇನುಗಳನ್ನು ನೈಸರ್ಗಿಕವಾಗಿ ನಿಯಂತ್ರಿಸಬಲ್ಲವು. ಇವುಗಳ ಸಂಖ್ಯೆಯನ್ನು ನಿಯಂತ್ರಿಸಲು ವಾಣಿಜ್ಯಿಕವಾಗಿ ಲಭ್ಯವಿರುವ ಸೂತ್ರಗಳನ್ನು (ನೈಸರ್ಗಿಕ ಪೈರೆಥ್ರಮ್, ಕೊಬ್ಬಿನಾಮ್ಲಗಳು), ಕೀಟನಾಶಕ ಸಾಬೂನುಗಳು ಅಥವಾ ತೋಟಗಾರಿಕಾ ತೈಲಗಳನ್ನು (ಸಸ್ಯ ಅಥವಾ ಮೀನು ತೈಲಗಳು) ಬಳಸಿ. ಸಸ್ಯಗಳ ಎಲೆಗಳ ಮೇಲೆ ನೀರು ಮತ್ತು ಕೆಲವು ಹನಿಗಳ ಮಾರ್ಜಕದ ಸೌಮ್ಯ ದ್ರಾವಣವನ್ನು ಸಿಂಪಡಿಸುವ ಮೂಲಕ ಗಿಡಹೇನುಗಳನ್ನು ನಾಶಗೊಳಿಸಬಹುದು.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ವೈರಸ್ಗಳನ್ನು ರಾಸಾಯನಿಕ ಆಯ್ಕೆಗಳಿಂದ ನೇರವಾಗಿ ನಿಯಂತ್ರಿಸಲಾಗುವುದಿಲ್ಲ. ಗಿಡಹೇನುಗಳ ರಾಸಾಯನಿಕ ನಿಯಂತ್ರಣದ ಬಗ್ಗೆ ತಿಳಿಯಲು ನಮ್ಮ ಡೇಟಾಬೇಸನ್ನು ಪರಿಶೀಲಿಸಿ.
ವಿಶೇಷವಾಗಿ ಸಿಟ್ರಸ್ ತೋಪುಗಳಲ್ಲಿ ವಿಷಪೂರಿತ ಮತ್ತು ವಿನಾಶಕಾರಿ ವೈರಸ್ ಎನಿಸಿಕೊಂಡಿರುವ ಸಿಟ್ರಸ್ ಟ್ರಿಸ್ಟೆಜಾ ವೈರಸ್ ನಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಮುಖ್ಯವಾಗಿ ಕಪ್ಪು ಸಿಟ್ರಸ್ ಗಿಡಹೇನಾದ, ಟೊಕ್ಸೊಪ್ಟೆರಾ ಸಿಟ್ರಿಸಿಡಾದಿಂದ ನಿರಂತರವಾಗಿ ಹರಡುತ್ತದೆ. ಈ ಗಿಡಹೇನು ಸೋಂಕಿತ ಸಸ್ಯಗಳನ್ನು 5-60 ನಿಮಿಷಗಳು ತಿನ್ನುವಾಗ ವೈರಸ್ ಅನ್ನು ಪಡೆದುಕೊಳ್ಳಬಹುದು, ಆದರೆ ಅದು 24 ಗಂಟೆಗಳ ನಂತರ ಅದನ್ನು ಪ್ರಸರಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಈ ಕುಟುಂಬದ ಇತರೆ ಕೀಟಗಳು ಸಹ ಅದರ ಹರಡುವಿಕೆಗೆ ಸಹಕಾರಿಯಾಗಬಲ್ಲವು (ಉದಾಹರಣೆಗೆ ಹತ್ತಿ ಗಿಡಹೇನು, ಆಫಿಸ್ ಗೊಸ್ಸಿಪಿ). ಕಲುಷಿತ ವಸ್ತುಗಳೊಂದಿಗೆ ಕಸಿ ಮಾಡುವುದರಿಂದಲೂ ಸಹ ಇತರ ತೋಟಳಿಗೆ ವೈರಸ್ ಹರಡುವುದಕ್ಕೆ ಸಹಾಯವಾಗುತ್ತದೆ. ರೋಗಲಕ್ಷಣಗಳ ತೀವ್ರತೆ ವೈರಸ್ನ ವಿಷಮತೆಯ ಮೇಲೆ ಅವಲಂಬಿಸಿರುತ್ತದೆ. ಕೆಲವು ವಿಧಗಳು ಕಾಣುವಂತಹ ರೋಗಲಕ್ಷಣಗಳನ್ನು ಉಂಟುಮಾಡದಿರಬಹುದು. ಇತರ ವಿಧಗಳು ಮರಗಳಲ್ಲಿ ತೀವ್ರ ಕುಸಿತವನ್ನುಂಟುಮಾಡುತ್ತವೆ ಮತ್ತು ಮರವನ್ನು ನಿರ್ಜೀವಗೊಳಿಸುತ್ತವೆ ಅಥವಾ ಶಾಖೆ ಮತ್ತು ಕಾಂಡಗಳಲ್ಲಿ ಆಳವಾದ ಗುಳಿಗಳನ್ನು ಉಂಟುಮಾಡುತ್ತವೆ. ವೈರಸ್ ಸೋಂಕು ಮತ್ತು ಬೆಳವಣಿಗೆಗೆ ಗರಿಷ್ಟ ತಾಪಮಾನವು 20-25 °C ಆಗಿರುತ್ತದೆ.