ಮೆಕ್ಕೆ ಜೋಳ

ಮೆಕ್ಕೆ ಜೋಳದ ಲೀಫ್ ಸ್ಟ್ರೀಕ್ ವೈರಸ್

MSV

ವೈರಸ್

ಸಂಕ್ಷಿಪ್ತವಾಗಿ

  • ಆರಂಭಿಕ ಸೋಂಕಿನ ಹಂತಗಳಲ್ಲಿ, ಎಳೆಯ ಎಲೆಗಳ ತಳದಲ್ಲಿ ಸಣ್ಣ, ಕ್ಲೋರೋಟಿಕ್, ವೃತ್ತಾಕಾರದ ಚುಕ್ಕೆಗಳು ಕಂಡುಬರುತ್ತವೆ.
  • ನಂತರ ಕಲೆಗಳ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಅವುಗಳು ಒಟ್ಟಾಗಿ ಸೇರಿಕೊಳ್ಳುತ್ತವೆ.
  • ಅವು ಕಿರಿದಾದ, ಬಿಳಿ ಅಥವಾ ಹಳದಿ ಬಣ್ಣದ ಗೆರೆಗಳಾಗಿ ಬೆಳೆಯುತ್ತವೆ ಮತ್ತು ಅವು ಎಲೆಗಳ ನಾಳಗಳಿಗೆ ಸಮಾನಾಂತರವಾಗಿ ಬೆಳೆಯುತ್ತವೆ.
  • ಅವುಗಳು ಸಂಪೂರ್ಣ ಎಲೆಗೆ ಹರಡಿ, ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ, ಜೊಂಡುಗಳು ಅಪೂರ್ಣವಾಗಿ ಬೆಳೆಯುತ್ತವೆ ಮತ್ತು ಕಾಳುಗಳು ಸರಿಯಾಗಿ ತುಂಬುವುದಿಲ್ಲ.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ಸಸ್ಯದ ಪ್ರಭೇದ ಮತ್ತು ಪರಿಸರ ಪರಿಸ್ಥಿತಿಗಳ ಆಧಾರದ ಮೇಲೆ ರೋಗಲಕ್ಷಣಗಳು ಸ್ವಲ್ಪ ವ್ಯತ್ಯಾಸಗೊಳ್ಳುತ್ತವೆ. ಆರಂಭಿಕ ಸೋಂಕಿನ ಹಂತಗಳಲ್ಲಿ, ಎಳೆ ಎಲೆಗಳ ತಳದಲ್ಲಿ ಸಣ್ಣ, ಕ್ಲೋರೋಟಿಕ್, ವೃತ್ತಾಕಾರದ ಚುಕ್ಕೆಗಳು ಕಂಡುಬರುತ್ತವೆ. ರೋಗವು ಹೆಚ್ಚಾದಂತೆ, ಕಲೆಗಳ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಅವುಗಳು ಒಟ್ಟಾಗಿ ಸೇರಿಕೊಳ್ಳುತ್ತವೆ. ರೋಗಕ್ಕೆ ಬೇಗ ತುತ್ತಾಗುವ ಸಸ್ಯ ಪ್ರಭೇದಗಳಲ್ಲಿ, ಚುಕ್ಕೆಗಳು ಕಿರಿದಾದ, ಬಿಳಿ ಅಥವಾ ಹಳದಿ ಬಣ್ಣದ ಗೆರೆಗಳಾಗಿ ಬೆಳೆಯುತ್ತವೆ ಮತ್ತು ಅವು ಎಲೆಗಳ ಸಿರೆಗಳಿಗೆ ಸಮಾನಾಂತರವಾಗಿ ಬೆಳೆಯುತ್ತವೆ. ಸಸ್ಯದ ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ಸೋಂಕಾದರೆ, ಈ ಗೆರೆಯು ಸಂಪೂರ್ಣ ಎಲೆಗೆ ಹರಡಿ, ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ, ಹೂಗೊಂಚಲುಗಳು ಮತ್ತು ಜೊಂಡುಗಳು ಅಪೂರ್ಣವಾಗಿ ಬೆಳೆಯುತ್ತವೆ ಮತ್ತು ಕಾಳುಗಳು ಸರಿಯಾಗಿ ತುಂಬುವುದಿಲ್ಲ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, MSV ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ವೈರಸ್ ರೋಗಗಳಿಗೆ ರಾಸಾಯನಿಕ ಚಿಕಿತ್ಸೆ ಇಲ್ಲ. ರೋಗವಾಹಕಗಳ ಸಂಖ್ಯೆಯನ್ನು ಕಡಿಮೆ ಮಾಡಿದರೆ ಅದು ಸಾಮಾನ್ಯವಾಗಿ ರೋಗ ಹರಡುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಡಿಮೀಥೋಯೇಟ್ ಅಥವಾ ಮ್ಯಾಲಥಿಯಾನ್ ಅನ್ನು ಆಧರಿಸಿದ ಉತ್ಪನ್ನಗಳನ್ನು ಎಲೆಗೊಂಚಲುಗಳಿಗೆ ಹಾಕಬಹುದು ಆದರೆ ಸಂಭವನೀಯ ಇಳುವರಿ ನಷ್ಟ ಮತ್ತು ರೋಗ ಹೆಚ್ಚಾಗುವ ಅನಿಶ್ಚಿತತೆಗಳಿಗೆ ಸಂಬಂಧಿಸಿದಂತೆ ಎಚ್ಚರವಹಿಸಬೇಕಾಗುತ್ತದೆ.

ಅದಕ್ಕೆ ಏನು ಕಾರಣ

ಮೆಕ್ಕೆಜೋಳದ ಲೀಪ್ ಸ್ಟ್ರೀಕ್ ಪ್ರಧಾನವಾಗಿ ಆಫ್ರಿಕಾದ ರೋಗವಾಗಿದೆ, ಆದರೆ ಇದು ಆಗ್ನೇಯ ಏಷ್ಯಾದಲ್ಲಿಯೂ ಸಹ ವರದಿಯಾಗಿದೆ. ಇದು ಸಿಕಡಲಿನಾ ಲೀಫ್ ಹಾಪರ್ ನ ಕೆಲವು ಪ್ರಭೇದಗಳ ಮೂಲಕ ಹರಡುವ ಒಂದು ವೈರಸ್ನಿಂದ ಉಂಟಾಗುತ್ತದೆ. ಇವುಗಳು ಎಳೆಯದಾದ ಬೆಳೆಯುತ್ತಿರುವ ಎಲೆಗಳನ್ನು ತಿನ್ನುವುದರ ಮೂಲಕ ವೈರಸ್ ಅನ್ನು ಪಡೆದುಕೊಳ್ಳುತ್ತವೆ. ಹವಾಮಾನದ ಆಧಾರದ ಮೇಲೆ ಕೀಟಗಳ ಬೆಳವಣಿಗೆಯ ಚಕ್ರವು 22 ರಿಂದ 45 ದಿನಗಳವರೆಗೆ ಇರುತ್ತದೆ. ಸುಮಾರು 20 ರಿಂದ 35 ಡಿಗ್ರಿ ತಾಪಮಾನವು ಅದರ ಬೆಳವಣಿಗೆಗೆ ಸೂಕ್ತವಾಗಿರುತ್ತದೆ ಮತ್ತು ಈ ತಾಪಮಾನವು ಬೆಳೆಗಳಿಗೆ ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಧಾನ್ಯಗಳ ದೊಡ್ಡ ವರ್ಗ ವೈರಸ್ ನ ಪರ್ಯಾಯ ಆಶ್ರಯದಾತ ಸಸ್ಯಗಳಾಗಿ ಕೆಲಸ ಮಾಡುತ್ತವೆ (ಗೋಧಿ, ಓಟ್, ರೈ, ಬಾರ್ಲಿ, ಸೋರ್ಗಮ್ ... ಇತ್ಯಾದಿ).


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಮಾತ್ರ ಬೀಜಗಳನ್ನು ಬಳಸಿ.
  • ಲಭ್ಯವಿದ್ದರೆ ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ಬಳಸಿ.
  • ಮಿಡತೆಗಳನ್ನು ಆಕರ್ಷಿಸುವ ಮತ್ತು ಅದರಿಂದ ಬೆಳೆಗಳ ಮೇಲೆ ಆಗುವ ಸೋಂಕಿನ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಪರ್ಯಾಯ ಆಶ್ರಯದಾತ ಸಸ್ಯಗಳೊಂದಿಗೆ ಮಿಶ್ರ ಬೆಳೆ ಮಾಡಿ.
  • ಎಲೆ ಜಿಗಿ ಹುಳುಗಳು ಬರದಂತೆ ನೋಡಿಕೊಳ್ಳಲು ಅಡೆತಡೆಗಳನ್ನು ಬಳಸಿ.
  • ಭೂಮಿಯನ್ನು ಆಗಾಗ್ಗೆ ಪರೀಕ್ಷೆ ಮಾಡಿ, ಯಾವುದೇ ಸೋಂಕಿತ ಸಸ್ಯ ಕಂಡುಬಂದರೆ ಅದನ್ನು ತೆಗೆದುಹಾಕಿ ನಾಶ ಮಾಡಿ.
  • ಹೊಲದ ಸುತ್ತ ಮುತ್ತ ಕಳೆಗಳ ಬೆಳವಣಿಗೆಯನ್ನು ನಿಯಂತ್ರಿಸಿ.
  • ಒಂದೇ ಹೊಲದಲ್ಲಿ ಎರಡು ಮೆಕ್ಕೆ ಜೋಳ ಬೆಳೆಗಳನ್ನು ಒಂದರ ನಂತರ ಒಂದರಂತೆ ಬೆಳೆಸಬೇಡಿ.
  • ಬೀನ್ಸ್, ಅಲಸಂದೆಯಂತಹ ದ್ವಿದಳ ಧಾನ್ಯಗಳ ಬೆಳೆಗಳೊಂದಿಗೆ ಅಥವಾ ಇತರ ಆಶ್ರಯದಾತವಲ್ಲದ ಸಸ್ಯಗಳೊಂದಿಗೆ ಸರದಿ ಬೆಳೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ