ಮೆಕ್ಕೆ ಜೋಳ

ಮೆಕ್ಕೆ ಜೋಳದ ಮಾರಕ ನೆಕ್ರೋಸಿಸ್ ರೋಗ

MLND

ವೈರಸ್

ಸಂಕ್ಷಿಪ್ತವಾಗಿ

  • ಎಲೆಗಳಲ್ಲಿ ಹಳದಿ-ಹಸಿರು ಬಣ್ಣದ ಮಚ್ಚೆ ಮಾದರಿಯನ್ನು ಕಾಣಬಹುದು.
  • ಅವು ಸಾಮಾನ್ಯವಾಗಿ ನಾಳಗಳಿಗೆ ಸಮಾನಾಂತರವಾಗಿರುತ್ತವೆ.
  • ಎಲೆಗಳು ಅಂಚಿನಿಂದ ಮಧ್ಯ ನಾಳದವರೆಗೆ ಒಣಗುತ್ತಾ ಬರುತ್ತವೆ.
  • ಸೋಂಕು ತೀವ್ರವಾಗಿದ್ದಾಗ, ಇಡೀ ಸಸ್ಯವು ಒಣಗುತ್ತದೆ ಮತ್ತು ಕಾಂಡಗಳಲ್ಲಿ ನಿರ್ಜೀವಗೊಂಡ ಕೋಶಗಳು ಗೋಚರಿಸುತ್ತವೆ.
  • ಬೆಳವಣಿಗೆ ಕುಂಠಿತಗೊಳ್ಳುತ್ತದೆ, ಹೂಗೊಂಚಲುಗಳು ಬರಡಾಗುತ್ತವೆ, ಮತ್ತು ತೆನೆಗಳು ವಿರೂಪವಾಗಿರುತ್ತವೆ ಮತ್ತು ಅವುಗಳೊಳಗೆ ಕಾಳುಗಳು ಸರಿಯಾಗಿ ಬೆಳೆದಿರುವುದಿಲ್ಲ.
  • ಸೋಂಕಿತ ಸಸ್ಯಗಳು ಅವಕಾಶವಾದಿ ಶಿಲೀಂಧ್ರಗಳು ಮತ್ತು ನೆಮಟೋಡ್ಗಳಿಗೆ ಗುರಿಯಾಗುತ್ತವೆ ಮತ್ತು ಇದರಿಂದ ಕೊಳೆತವುಂಟಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ಆರಂಭಿಕ ಸೋಂಕಿನ ಹಂತಗಳಲ್ಲಿ ಎಲೆಗಳಲ್ಲಿ ಹಳದಿ-ಹಸಿರು ಬಣ್ಣದ ಮಚ್ಚೆ ಮಾದರಿಯನ್ನು ಕಾಣಬಹುದು. ಅವು ಸಾಮಾನ್ಯವಾಗಿ ನಾಳಗಳಿಗೆ ಸಮಾನಾಂತರವಾಗಿರುತ್ತವೆ ಮತ್ತು ತಳದಲ್ಲಿ ಪ್ರಾರಂಭವಾಗುತ್ತವೆ. ರೋಗವು ಮುಂದುವರೆದಂತೆ, ಸಾಮಾನ್ಯವಾಗಿ ಅಂಚುಗಳಿಂದ ಮಧ್ಯ ನಾಳದ ಕಡೆಗೆ ಎಲೆಗಳು ಒಣಗುತ್ತವೆ. ಸೋಂಕು ತೀವ್ರವಾಗಿದ್ದಾಗ, ಈ ರೋಗವು ನಿಧಾನವಾಗಿ ಸಸ್ಯದ ಉಳಿದ ಭಾಗಗಳಿಗೆ ಹರಡುತ್ತದೆ ಮತ್ತು ಕತ್ತರಿಸಿದ ಕಾಂಡ ಭಾಗಗಳಲ್ಲಿ ನಿರ್ಜೀವಗೊಂಡ ಕೋಶಗಳು ಗೋಚರಿಸುತ್ತವೆ. ಸೋಂಕಿತ ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ, ಹೂಗೊಂಚಲುಗಳು ಬರಡಾಗುತ್ತವೆ, ಮತ್ತು ತೆನೆಗಳು ವಿರೂಪವಾಗಿರುತ್ತವೆ, ಚಿಕ್ಕದಾಗಿರುತ್ತವೆ ಮತ್ತು ಅವುಗಳೊಳಗೆ ಕಾಳುಗಳು ಸರಿಯಾಗಿ ಬೆಳೆದಿರುವುದಿಲ್ಲ. ಸೋಂಕಿತ ಸಸ್ಯಗಳು ದುರ್ಬಲಗೊಳ್ಳುತ್ತವೆ ಮತ್ತು ಅವಕಾಶವಾದಿ ಶಿಲೀಂಧ್ರಗಳು ಮತ್ತು ನೆಮಟೋಡ್ಗಳಿಗೆ ಗುರಿಯಾಗುತ್ತವೆ ಮತ್ತು ಇದರಿಂದ ಅಂಗಾಂಶಗಳಲ್ಲಿ ಕೊಳೆತವುಂಟಾಗುತ್ತದೆ ಮತ್ತು ಧಾನ್ಯದ ಪ್ರಮಾಣ ಮತ್ತು ಗುಣಮಟ್ಟ ಕ್ಷೀಣಿಸುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, ಈ ರೋಗದ ವಿರುದ್ಧ ಯಾವುದೇ ಜೈವಿಕ ನಿಯಂತ್ರಣ ಕ್ರಮಗಳ ಬಗ್ಗೆ ನಮಗೆ ತಿಳಿದಿಲ್ಲ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ವೈರಸ್ ರೋಗಗಳಿಗೆ ರಾಸಾಯನಿಕ ಚಿಕಿತ್ಸೆ ಇಲ್ಲ. ವೈರಸ್ ಹರಡುವ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಲು ಬೀಜ ಸಂಸ್ಕರಣೆಗಾಗಿ ಮತ್ತು ಎಲೆಗಳ ಸಿಂಪಡಣೆಯಾಗಿ ಕೆಲವು ಕೀಟನಾಶಕಗಳನ್ನು ಬಳಸಬಹುದು.

ಅದಕ್ಕೆ ಏನು ಕಾರಣ

ಎಲ್ಲಾ ಮೆಕ್ಕೆ ಜೋಳದ ಸಸ್ಯಗಳು ಈ ರೋಗಕ್ಕೆ ಒಳಗಾಗುತ್ತವೆ. ಹೀಗಿದ್ದರೂ, ರೋಗಲಕ್ಷಣಗಳು ಅಲ್ಲಿರುವ ವೈರಸ್ ಗಳು, ಪರಿಸರ ಪರಿಸ್ಥಿತಿಗಳು ಮತ್ತು ಸಸ್ಯದ ಸಸ್ಯಕ ಹಂತದ ಆಧಾರದ ಮೇಲೆ ಗಣನೀಯವಾಗಿ ಬದಲಾಗುತ್ತವೆ. ಈ ರೋಗವು ವಾಸ್ತವವಾಗಿ ಎರಡು ವೈರಸ್ಗಳ ಸಂಯೋಜನೆಯಿಂದ ಉಂಟಾಗುತ್ತದೆ, ಮೆಕ್ಕೆ ಜೋಳದ ಕ್ಲೋರೋಟಿಕ್ ಮೊಟಲ್ ವೈರಸ್ ಮತ್ತು ಮತ್ತೊಂದು ವೈರಸ್. ಹೆಚ್ಚಿನ ಸಂದರ್ಭಗಳಲ್ಲಿ ಇದು ಕಬ್ಬಿನ ಮೊಸಾಯಿಕ್ ವೈರಸ್ಆಗಿರುತ್ತದೆ. ಈ ಸೋಂಕಿನ ಏಜೆಂಟ್ಗಳನ್ನು ಮೆಕ್ಕೆ ಜೋಳದ ಥ್ರೈಪ್ಗಳು, ರೂಟ್ವರ್ಮ್ಗಳು, ಮತ್ತು ಎಲೆ ಜೀರುಂಡೆಗಳು ಮತ್ತು ಏಕದಳ ಎಲೆ ಜೀರುಂಡೆಗಳು ಮುಂತಾದ ರೋಗಕಾರಕಗಳು ಹೊಲದಲ್ಲಿ ಎಲ್ಲೆಡೆ ಹರಡುತ್ತವೆ. ಬರಗಾಲ, ಮಣ್ಣಿನ ಕಡಿಮೆ ಫಲವತ್ತತೆ ಮತ್ತು ಅಸಮರ್ಪಕ ಕೃಷಿ ಪದ್ಧತಿಗಳಂತಹ ಪ್ರತಿಕೂಲ ವಾತಾವರಣದ ಪರಿಸ್ಥಿತಿಗಳಿಂದಾಗಿ ರೋಗಲಕ್ಷಣಗಳು ಹದಗೆಡುತ್ತವೆ.


ಮುಂಜಾಗ್ರತಾ ಕ್ರಮಗಳು

  • ಸಹಿಷ್ಣು ಪ್ರಭೇದಗಳು ಲಭ್ಯವಿದ್ದರೆ ಅವುಗಳನ್ನು ನೆಡಿ.
  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಬಳಸಿ.
  • ನಿಮ್ಮ ಪ್ರದೇಶದಲ್ಲಿ ರೋಗ ವಾಹಕಗಳ ಸಂಖ್ಯೆಯು ಹೆಚ್ಚಾಗದಂತೆ ನೋಡಿಕೊಳ್ಳಲು ಋತುವಿಗಿಂತ ಬೇಗ ಅಥವಾ ತಡವಾಗಿ ನಾಟಿ ಮಾಡಿ.
  • ರೋಗವು ಹರಡುವುದನ್ನು ತಡೆಯಲು ತೀವ್ರವಾಗಿ ಸೋಂಕಿತ ಸಸ್ಯಗಳನ್ನು ಬುಡದಿಂದ ಕಿತ್ತು ಸುಟ್ಟು ಹಾಕಿ.
  • ಹೊಲದಲ್ಲಿ ಮತ್ತು ಅದರ ಸುತ್ತಲೂ ಕಳೆಗಳ ಬೆಳವಣಿಗೆಯನ್ನು ನಿಯಂತ್ರಿಸಿ.
  • ಒಂದೇ ಪ್ರದೇಶದಲ್ಲಿ ಮೆಕ್ಕೆ ಜೋಳದ ಏಕ ಬೇಸಾಯವನ್ನು ಮಾಡಬೇಡಿ. ಕಾಳುಗಳು, ಅಲಸಂದೆ, ಆಲೂಗಡ್ಡೆ, ಮರಗೆಣಸು ಮತ್ತು ಇತರ ಆಶ್ರಯದಾತವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ