ಭತ್ತ

ಅಕ್ಕಿಯ ಹಳದಿ ಮಾಟಲ್ ವೈರಸ್

RYMV

ವೈರಸ್

ಸಂಕ್ಷಿಪ್ತವಾಗಿ

  • ಹೊಸ ಎಲೆಗಳ ಮೇಲೆ ಹಳದಿ ಪಟ್ಟೆಗಳು ಮತ್ತು ಕಲೆಗಳು.
  • ಹಳೆಯ ಎಲೆಗಳ ಮೇಲೆ ಹಳದಿ ಬಣ್ಣದಿಂದ ಕಿತ್ತಳೆ ಬಣ್ಣದ ಕಲೆಗಳು.
  • ಗೆರೆಗಳ ಮಧ್ಯದಲ್ಲಿ ಗಾಢವಾದ ಪ್ಯಾಚುಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಎಳೆಯ ಎಲೆಗಳಲ್ಲಿ ಹಳದಿಯಿಂದ ಹಸಿರು ಕಲೆಗಳ ಮಚ್ಚೆಯಿರುತ್ತವೆ (ಮಾಟಲ್). ಸೋಂಕಿನ ನಂತರ (2 ವಾರಗಳು) ಈ ಕಲೆಗಳು ಎಲೆಯ ಸಿರೆಗಳಿಗೆ ಸಮಾನಾಂತರವಾಗಿ ಉದ್ದವಾಗುತ್ತವೆ. ಹಳದಿ ಗೆರೆಗಳ ಮಧ್ಯದಲ್ಲಿ ಗಾಢವಾದ ಪ್ಯಾಚುಗಳು ಬೆಳೆಯುತ್ತವೆ. ಹಳೆಯ ಎಲೆಗಳು ಹಳದಿ ಅಥವಾ ಕಿತ್ತಳೆ ಬಣ್ಣದ ಕಂದುವಿಕೆಯನ್ನು ತೋರಿಸುತ್ತವೆ. ಸಸ್ಯಗಳ ಬೆಳವಣಿಗೆ ಕುಂಠಿತವಾಗಬಹುದು ಮತ್ತು ಇಳುವರಿ ಕಡಿಮೆಯಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸೋಂಕಿಗೊಳಗಾದ ಸಸ್ಯಗಳನ್ನು ನಾಶಮಾಡಿ ಮತ್ತು ಸೋಂಕಿತ ಸಸ್ಯದ ಉಳಿಕೆಗಳನ್ನು ಅಡಿಯಲ್ಲಿ ಉಳುಮೆ ಮಾಡಿ ಅಥವಾ ಇನ್ನೂ ಉತ್ತಮವೆಂದರೆ ಅವುಗಳನ್ನು ಸುಟ್ಟು ಹಾಕಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ವೈರಸ್ ಅನ್ನು ನಿಯಂತ್ರಿಸಲು ನೇರ ರಾಸಾಯನಿಕ ಚಿಕಿತ್ಸೆ ಇಲ್ಲ.

ಅದಕ್ಕೆ ಏನು ಕಾರಣ

ವೈರಸ್ ಅನೇಕ ಜಾತಿ ಜೀರುಂಡೆಗಳು ಅಥವಾ ಮಿಡತೆಗಳಿಂದ ಹಾಗು ಹಸುಗಳಿಂದ, ಇಲಿಗಳು ಮತ್ತು ಕತ್ತೆಗಳಿಂದ ಕೂಡ ಹರಡುತ್ತದೆ. ಇದು ಸಸ್ಯದೊಳಗಿನ ಸಸ್ಯದ ಜೀವರಸದ ಚಲನೆಯಿಂದ ಮೂಲಕವೂ ಹರಡುತ್ತದೆ. ಉದಾಹರಣೆಗೆ ನೀರಾವರಿ ನೀರಿನಿಂದ ಅಥವಾ ಸೋಂಕಿಗೊಳಗಾದ ಹಾಗು ಆರೋಗ್ಯಕರ ಸಸ್ಯಗಳ ನಡುವಿನ ಸಂಪರ್ಕ ಮತ್ತು ನಾಶಪಡಿಸದ/ಉಳುಮೆ ಮಾಡಿದ ಬೆಳೆ ಉಳಿಕೆಗಳ ಮೂಲಕ.


ಮುಂಜಾಗ್ರತಾ ಕ್ರಮಗಳು

  • ಹೆಚ್ಚು ನಿರೋಧಕ ಪ್ರಭೇದಗಳನ್ನು ನೆಡಿ.
  • ಕೀಟಗಳು ಹೆಚ್ಚಾಗುವುದನ್ನು ತಪ್ಪಿಸಲು ಸಸ್ಯಗಳನ್ನು ಬೇಗನೆ ನೆಡಿ.
  • ಗದ್ದೆಯಲ್ಲಿ ಮತ್ತು ಅದರ ಸುತ್ತಲಿರುವ ಕಳೆಗಳನ್ನು ತೆಗೆಯಿರಿ.
  • ಪ್ರಯೋಜನಕಾರಿ ಕೀಟಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಕೀಟನಾಶಕಗಳ ನಿಯಂತ್ರಣ ಮಾಡಿ.
  • ಸೋಂಕಿತ ಬೆಳೆ ಉಳಿಕೆಗಳನ್ನು ಉಳುಮೆ ಮಾಡಿ ಅಥವಾ ಅವನ್ನು ಸುಟ್ಟು ಹಾಕುವುದು ಇನ್ನೂ ಉತ್ತಮ.
  • ಪರ್ಯಾಯವಾಗಿ, ಕೊಯ್ಲಿನ ನಂತರ ಸೋಂಕಿತ ಸಸ್ಯಗಳನ್ನು ನಾಶಪಡಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ