ಬಾಳೆಹಣ್ಣು

ಬಂಚಿ ಟಾಪ್ ವೈರಸ್

Bunchy Top Virus

ವೈರಸ್

ಸಂಕ್ಷಿಪ್ತವಾಗಿ

  • ಎಲೆಗಳ ಕೆಳ ಭಾಗದಲ್ಲಿರುವ ತೊಟ್ಟುಗಳು, ಮಧ್ಯನಾಳಗಳು ಮತ್ತು ಸಿರೆಗಳ ಮೇಲೆ ಗಾಢ-ಹಸಿರು ಗೆರೆಗಳು ಗೋಚರಿಸುತ್ತವೆ.
  • ನಂತರ ಮೋರ್ಸ್ ಕೋಡ್ ಮಾದರಿಯಲ್ಲಿ (ಸಣ್ಣ ಗಾಢ ಹಸಿರು ಚುಕ್ಕೆಗಳು ಮತ್ತು ಗೆರೆಗಳು) ಎಲೆಯ ಸಿರೆಗಳಿಗೆ ಸಮಾನಾಂತರವಾಗಿ ಬೆಳೆಯುತ್ತವೆ.
  • ಬಾಧಿತ ಎಲೆಗಳ ಬೆಳವಣಿಗೆ ಕುಂಠಿತವಾಗಿರುತ್ತದೆ.
  • ತೆಳ್ಳಗಿರುತ್ತವೆ ಮತ್ತು ನೆಟ್ಟಗಿರುತ್ತವೆ.
  • ಮತ್ತು ಇವು ಸುರುಳಿಯಂತಹ, ಕ್ಲೋರೋಟಿಕ್ ಅಂಚುಗಳನ್ನು ಹೊಂದಿರುತ್ತವೆ.
  • ಗಿಡದ ತುದಿಯಲ್ಲಿ ಸಣ್ಣ ತಿಳಿ ಹಸಿರು ಎಲೆಗಳು ಗುಂಪಾಗಿ ಸೇರಿ, ಅದು "ಬಂಚೀ ಟಾಪ್" ಅನ್ನು ರೂಪಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ವೈರಸ್, ಎಲ್ಲಾ ಬೆಳವಣಿಗೆಯ ಹಂತಗಳಲ್ಲೂ, ಎಲ್ಲಾ ಸಸ್ಯ ಭಾಗಗಳ ಮೇಲೂ ಪರಿಣಾಮ ಬೀರಬಹುದು. ಆರಂಭಿಕ ರೋಗಲಕ್ಷಣಗಳೆಂದರೆ ಹೊಸ ಎಲೆಗಳ ಕೆಳ ಭಾಗದಲ್ಲಿ ತೊಟ್ಟುಗಳ, ಮಧ್ಯನಾಳಗಳ ಮತ್ತು ಸಿರೆಗಳ ಮೇಲೆ ಗಾಢ-ಹಸಿರು ಗೆರೆಗಳು ಗೋಚರಿಸುತ್ತವೆ. ನಂತರ ಎಲೆಗಳೂ ಕೂಡ ಈ ಸಣ್ಣ ಗಾಢ ಹಸಿರು ಚುಕ್ಕೆಗಳು ಮತ್ತು ಎಲೆಯ ಸಿರೆಗಳಿಗೆ ಸಮಾನಾಂತರವಾಗಿ ಗೆರೆಗಳನ್ನೂ (ಮೋರ್ಸ್ ಕೋಡ್ ಮಾದರಿ ಎನ್ನಲಾಗುವ) ತೋರಿಸಬಹುದು. ಬಾಧಿತ ಎಲೆಗಳ ಬೆಳವಣಿಗೆ ಕುಂಠಿತವಾಗಿರುತ್ತದೆ. ತೆಳ್ಳಗಿರುತ್ತವೆ ಮತ್ತು ನೆಟ್ಟಗಿರುತ್ತವೆ. ಸುರುಳಿಯಂತಹ, ಕ್ಲೋರೋಟಿಕ್ ಅಂಚುಗಳನ್ನು ಹೊಂದಿರುತ್ತವೆ. ಇವು ಮುಂದೆ ಕೊಳತಂತೆ ಆಗುತ್ತವೆ. ಮುಂದುವರಿದ ಸೋಂಕಿನ ಹಂತಗಳಲ್ಲಿ ಹೊಸ ಎಲೆಗಳಲ್ಲಿ ಈ ರೋಗಲಕ್ಷಣಗಳು ತುಂಬಾ ಹೆಚ್ಚಾಗಿರುತ್ತವೆ. ಗಿಡದ ಮೇಲ್ಭಾಗವು ಚಿಕ್ಕದಾದ ಹಸಿರು ಅಥವಾ ಹಳದಿ ಎಲೆಗಳನ್ನು ಗುಂಪಾಗಿ ಹೊಂದುವ ಮೂಲಕ "ಬಂಚೀ ಟಾಪ್ " ಲಕ್ಷಣ ತೋರಿಸುತ್ತವೆ. ಒಟ್ಟಾರೆ ಬೆಳವಣಿಗೆ ಕುಂಠಿತಗೊಂಡಿರುತ್ತದೆ ಮತ್ತು ಸಸ್ಯವು ಗೊನೆ ಅಥವಾ ಹಣ್ಣುಗಳನ್ನು ಉತ್ಪಾದಿಸುವುದಿಲ್ಲ. ಉತ್ಪಾದಿಸಿದರೂ ಕೂಡ, ಹಣ್ಣುಗಳು ವಿರೂಪಗೊಳ್ಳುತ್ತವೆ ಮತ್ತು ಸಣ್ಣದಾಗಿರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ರೋಗವನ್ನು ಆರಂಭಿಕ ಹಂತಗಳಲ್ಲಿ ಗುರುತಿಸಿದರೆ, ಸಾಬೂನು ನೀರು ಅಥವಾ ಕೀಟನಾಶಕ ಸೋಪನ್ನು ಚೆನ್ನಾಗಿ ಸಸ್ಯಗಳಿಗೆ ಸಿಂಪಡಿಸುವ ಮೂಲಕ ಗಿಡಹೇನುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರವಾದ ವಿಧಾನ ಲಭ್ಯವಿದ್ದರೆ ಮೊದಲು ಅದನ್ನು ಪರಿಗಣಿಸಿ. ವೈರಲ್ ರೋಗಗಳಿಗೆ ನೇರ ರಾಸಾಯನಿಕ ಚಿಕಿತ್ಸೆ ಇಲ್ಲ. ಗಿಡಹೇನುಗಳ ಸಂಖ್ಯೆಯನ್ನು ಸೈಪರ್ಮೆಥರಿನ್, ಅಸಿಟಾಮಿಡ್, ಕ್ಲೋರಿಪಿರಿಫೋಸ್ ಅಥವಾ ಸಂಬಂಧಿತ ಕೀಟನಾಶಕಗಳನ್ನು ಬಳಸಿ ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ತೋಟದಲ್ಲಿ ಬೇಡದ ಸಸ್ಯಗಳಿದ್ದರೆ, ಎಲ್ಲ ಗಿಡಹೇನುಗಳನ್ನು ಕೊಲ್ಲಲು ಪವರ್ ಕೆರೋಸಿನ್ ಅಥವಾ ಕೀಟನಾಶಕ ಬಳಸಿ.

ಅದಕ್ಕೆ ಏನು ಕಾರಣ

ಈ ರೋಗಲಕ್ಷಣಗಳು ಮರದಿಂದ ಮರಕ್ಕೆ ಅಥವಾ ತೋಟದಿಂದ ತೋಟಕ್ಕೆ ಬಾಳೆಯ ಗಿಡಹೇನುಗಳ (ಪೆಂಟಲೋನಿಯಾ ನಿಗ್ರೋನೆರ್ವೋಸಾ) ಮೂಲಕ ಹರಡುವ ವೈರಸ್ ನಿಂದ ಉಂಟಾಗುತ್ತವೆ. ಒಂದು ತೋಟದಿಂದ ಇನ್ನೊಂದಕ್ಕೆ ಸೋಂಕುಳ್ಳ ನಾಟಿಮಾಡುವ ವಸ್ತುವನ್ನು ಸಾಗಿಸುವುದರ ಮೂಲಕ ದೂರದವರೆಗೂ ಈ ರೋಗ ಹರಡುತ್ತದೆ. ಈ ವೈರಸ್ ನ ಇನ್ನಷ್ಚು ಆಶ್ರಯದಾತ ಸಸ್ಯಗಳೆಂದರೆ ಶುಂಠಿ, ಹೆಲಿಕೋನಿಯಾ ಮತ್ತು ಟಾರೊ. ಬಾಳೆಯ ಪ್ರಭೇದಗಳು ಅವು ರೋಗಕ್ಕೆ ಒಳಗಾಗುವ ರೀತಿ ಭಿನ್ನವಾಗಿರುತ್ತದೆ. ಈ ವ್ಯತ್ಯಾಸವು ಮುಖ್ಯವಾಗಿ ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ತೆಗೆದುಕೊಳ್ಳುವ ಸಮಯದಲ್ಲಿ ಇರುತ್ತದೆ. ಸಸ್ಯಗಳು ಸೋಂಕಿನಿಂದ ಚೇತರಿಸಿಕೊಳ್ಳುವುದಿಲ್ಲ. ಸೋಂಕಿತಮೊಳಕೆಗಳಿಂದ ಆಗುವ ಪ್ರಾಥಮಿಕ ಸೋಂಕು, ಸಾಮಾನ್ಯವಾಗಿ ಗಿಡಹೇನುಗಳ ಮೂಲಕ ಆಗುವ ದ್ವಿತೀಯಕ ಸೋಂಕಿಗಿಂತ ಕೆಟ್ಟದಾಗಿರುತ್ತದೆ. ವಸಂತಕಾಲದಲ್ಲಿ ಅಥವಾ ಬೆಚ್ಚಗಿನ, ಶುಷ್ಕ ಹವಾಮಾನದಲ್ಲಿ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತವೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಪಡೆದ ಆರೋಗ್ಯಕರ ಸಸಿಗಳನ್ನು ಮಾತ್ರ ಬಳಸಿ.
  • ಲಭ್ಯವಿದ್ದರೆ ಹೆಚ್ಚು ಸಹಿಷ್ಣು ಪ್ರಭೇದಗಳನ್ನು ಬೆಳೆಸಿ.
  • ನಿಯಮಿತವಾಗಿ ಸಸ್ಯಗಳ ಪರಿಶೀಲನೆ ಮಾಡಿ ಮತ್ತು ರೋಗ ಬಂದ ಸಸ್ಯಗಳಿವೆಯೇ ಎಂದು ಪರೀಕ್ಷಿಸಿ.
  • ಸೋಂಕಿತ ಬಾಳೆ ಸಸ್ಯಗಳನ್ನು ತೆಗೆದುಹಾಕಿ, ಅವುಗಳನ್ನು ಒಣಗಲು ಬಿಡಿ ಮತ್ತು ನಂತರ ಹೂತು ಹಾಕಿ.
  • ತಾವಾಗಿಯೇ ಬೆಳೆದ ಸಸ್ಯಗಳನ್ನು ಅಥವಾ ಶುಂಠಿ, ಹೆಲಿಕೋನಿಯಾ ಮತ್ತು ಟಾರೊ ಮುಂತಾದ ಪರ್ಯಾಯ ಆಶ್ರಯದಾತ ಸಸಿಗಳನ್ನು ನಿಯಂತ್ರಿಸಿ.
  • ವಿವಿಧ ತೋಟಗಳ ನಡುವೆ ಬಾಳೆ-ಮುಕ್ತ ಹೆಚ್ಚುವರಿ ವಲಯಗಳನ್ನು ರೂಪಿಸಿ.
  • ಬಾಳೆ ಸಸ್ಯಗಳನ್ನು ವಿವಿಧ ಪ್ರದೇಶಗಳಿಗೆ ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ