ಪಪ್ಪಾಯಿ

ಪಪ್ಪಾಯಿಯ ಮೊಸಾಯಿಕ್ ವೈರಸ್

PapMV

ವೈರಸ್

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಮೊಸಾಯಿಕ್ ಮಾದರಿಗಳು.
  • ಸ್ವಲ್ಪ ವಿರೂಪವಾಗಿರುವ ಎಲೆಗಳು.
  • ಸಸ್ಯಗಳ ಬೆಳವಣಿಗೆ ಕುಂಠಿತವಾಗಿರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಪಪ್ಪಾಯಿ

ರೋಗಲಕ್ಷಣಗಳು

ಸೋಂಕಿನ ರೋಗಲಕ್ಷಣಗಳು ಹೊಸ ಎಲೆಗಳಲ್ಲಿ ಕೇಂದ್ರೀಕೃತವಾಗಿರುತ್ತವೆ ಮತ್ತು ತೆಳುವಾದ ಎಲೆ ಮೊಸಾಯಿಕ್ ಮಾದರಿ ಮತ್ತು ಸ್ವಲ್ಪಮಟ್ಟಿನ ವಿರೂಪತೆಯನ್ನು ಒಳಗೊಂಡಿರುತ್ತವೆ. ಹಳದಿ-ಹಸಿರು ಬಣ್ಣದಲ್ಲಿರುವ ಎಲೆಯ ಮುಖ್ಯಭಾಗದ ಮೇಲೆ ಕಡು ಹಸಿರು ಬಣ್ಣದ ಗುಳ್ಳೆ ರೀತಿಯ ತೇಪೆಗಳು ಕಾಣಿಸಿಕೊಳ್ಳುತ್ತವೆ. ರೋಗದ ನಂತರದ ಹಂತಗಳಲ್ಲಿ, ಎಲೆಯ ನಾಳಗಳು ಮಾಯವಾಗುವ ಲಕ್ಷಣಗಳನ್ನು ತೋರಿಸಬಹುದು. ತೊಟ್ಟುಗಳು ಸ್ವಲ್ಪ ಗಿಡ್ಡವಾಗಿರುತ್ತವೆ ಮತ್ತು ಎಲೆಗಳು ಕೆಳಮುಖವಾಗಿ ಮಡಚಿಕೊಳ್ಳುತ್ತವೆ. ಮತ್ತು ನೆಟ್ಟಗಿನ ಸ್ಥಾನ ಪಡೆದುಕೊಳ್ಳುತ್ತವೆ. ಇತರ ಸಸ್ಯ ಭಾಗಗಳ (ಕಾಂಡಗಳು, ಹೂವುಗಳು) ಮೇಲೆ ಇದು ಪರಿಣಾಮ ಬೀರುವುದಿಲ್ಲ. ಸಸ್ಯಗಳು ಸ್ವಲ್ಪ ಮಟ್ಟದ ಕುಂಠಿತ ಬೆಳವಣಿಗೆಯನ್ನು ತೋರಿಸುತ್ತವೆ. ಆರೋಗ್ಯಕರ ಸಸ್ಯಗಳೊಂದಿಗೆ ನೇರವಾಗಿ ಹೋಲಿಸಿದಾಗ ಮಾತ್ರ ಇದು ಗೋಚರಿಸುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕೆಲಸದ ಉಪಕರಣಗಳನ್ನು ಸೋಂಕುರಹಿತವಾಗಿಸಿ ಅಥವಾ ವೈರಸ್ ಅನ್ನು ಕೊಲ್ಲಲು ಅವುಗಳನ್ನು 1 ಗಂಟೆಗಳ ಕಾಲ 150 ಡಿಗ್ರಿ ಸೆಲ್ಸಿಯಸ್ ನಲ್ಲಿ ಓವನ್ ನಲ್ಲಿ ಬಿಸಿಮಾಡಿ. ಕೆಲಸದ ಉಪಕರಣಗಳು ಅಥವಾ ಕೈಗವಸುಗಳನ್ನೂ ಸಹ 0.525% ಸೋಡಿಯಂ ಹೈಪೋಕ್ಲೋರೈಟ್ನಲ್ಲಿ ಮುಳುಗಿಸಿ ನಂತರ ನೀರಿನಲ್ಲಿ ತೊಳೆಯಬಹುದು. ವರ್ಟಿಸಿಲ್ಲಿಯಮ್ ಲೀಕಾನಿ ಆಧಾರಿತ ಜೈವಿಕ-ಶಿಲೀಂಧ್ರನಾಶಕವು ಗಿಡಹೇನು ಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಕೀಟನಾಶಕ ಸೋಪ್ ಗಳು ಸೋಂಕಿನ ಆರಂಭದಲ್ಲಿ ಪರಿಣಾಮಕಾರಿಯಾಗಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಕ್ರಮಗಳೊಂದಿಗೆ ತಡೆಗಟ್ಟುವ ವಿಧಾನಗಳಿರುವ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ವೈರಲ್ ಸೋಂಕುಗಳಿಗೆ ರಾಸಾಯನಿಕ ಚಿಕಿತ್ಸೆ ಇಲ್ಲ. ಸೈಪರ್ಮೆಟ್ರಿನ್, ಕ್ಲೋರ್ಪಿರಿಫೋಸ್, ಇಮಿಡಾಕ್ಲೋಪ್ರಿಡ್, ಪಿರಿಮಿಕಾರ್ಬ್ ನಂತಹ ಹಲವಾರು ರಾಸಾಯನಿಕ ಉತ್ಪನ್ನಗಳ ಮೂಲಕ ಗಿಡಹೇನುಗಳನ್ನು ನಿಯಂತ್ರಿಸಬಹುದು.

ಅದಕ್ಕೆ ಏನು ಕಾರಣ

ಪಪ್ಪಾಯ ಮತ್ತು ಇತರ ಬೆಳೆಗಳ ಮೇಲೆ ಈ ವೈರಸ್ ಪರಿಣಾಮ ಬೀರುತ್ತದೆ. ಉದಾಹರಣೆಗೆ ಕುಕುರ್ಬಿಟ್ ಕುಟುಂಬಕ್ಕೆ ಸೇರಿದ ಗಿಡಗಳು. ಇದು ಗಿಡಹೇನುಗಳು ಅಥವಾ ಯಾಂತ್ರಿಕ ಗಾಯಗಳಿಂದ ಸಸ್ಯದಿಂದ ಸಸ್ಯಕ್ಕೆ ಹರಡುತ್ತದೆ. ಇಲ್ಲವಾದರೆ ಸೋಂಕಿತ ಸಸ್ಯಗಳ ಕಸಿ ಅಥವಾ ಯಾಂತ್ರಿಕ ಗಾಯಗಳ ಮೂಲಕ ಈ ರೋಗ ಹರಡುತ್ತದೆ. ಹೆಚ್ಚಾಗಿ ಇದು ಇತರ ವೈರಲ್ ರೋಗಗಳಿಗೆ ಸಂಬಂಧಿಸಿರುತ್ತದೆ ಮತ್ತು ಆ ಸಂದರ್ಭಗಳಲ್ಲಿ ರೋಗಲಕ್ಷಣಗಳು ಸ್ವಲ್ಪಮಟ್ಟಿಗೆ ಬದಲಾಗಬಹುದು. ವಾಸ್ತವವಾಗಿ ಪಪ್ಪಾಯಿಯಲ್ಲಿ ಈ ವೈರಸ್ ಅಲ್ಪ ಪ್ರಾಮುಖ್ಯತೆಯನ್ನು ಹೊಂದಿದೆ. ಆದರೆ ಸರಿಯಾದ ಪರಿಸ್ಥಿತಿಗಳಿದ್ದರೆ, ಇದು ಇಳುವರಿ ನಷ್ಟಕ್ಕೆ ಕಾರಣವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಸಸಿ ಮತ್ತು ಬೀಜಗಳನ್ನು ಪಡೆಯಿರಿ.
  • ಆಶ್ರಯದಾತವಲ್ಲದ ಬೆಳೆಗಳೊಂದಿಗೆ ಸರದಿ ಬೆಳೆ ಮಾಡಿ.
  • ಸೋಂಕಿತ ಮಣ್ಣು ಅಥವಾ ಸೋಂಕಿತ ಸಸ್ಯ ವಸ್ತುಗಳನ್ನು ಸೋಕಿತವಲ್ಲದ ಜಮೀನಿಗೆ ತಗೆದುಕೊಂಡ ಹೋಗಬೇಡಿ.
  • ಸೋಂಕಿತ ಸಸ್ಯಗಳು ಅಥವಾ ಸಸ್ಯ ಭಾಗಗಳನ್ನು ಗುರುತಿಸಿ, ನಾಶಗೊಳಿಸಿ.
  • ಶಾಖ ನೀಡುವುದು ಅಥವಾ ಇತರ ವಿಧಾನಗಳನ್ನು ಬಳಸಿ ನಿಮ್ಮ ಉಪಕರಣಗಳು ಮತ್ತು ಸಲಕರಣೆಗಳನ್ನು ಸೋಂಕು ರಹಿತವಾಗಿಸಿ.
  • ಕೈಗಳು ಮತ್ತು ಬಟ್ಟೆಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ ಮತ್ತು ಕೈಗವಸುಗಳನ್ನು ಧರಿಸಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ