ತೊಗರಿ ಬೇಳೆ & ಮಸೂರ್ ಬೇಳೆ

ಹೆಸರುಕಾಳು ಹಳದಿ ಮೊಸಾಯಿಕ್ ವೈರಸ್

MYMV

ವೈರಸ್

ಸಂಕ್ಷಿಪ್ತವಾಗಿ

  • ಅನಿಯಮಿತ ಆಕಾರದ ಹಳದಿ-ಹಸಿರು ಮಿಶ್ರಿತ ಕಲೆಗಳು ಎಲೆಗಳಲ್ಲಿ ಸುಕ್ಕುಬಿದ್ದಂತೆ ಕಂಡುಬರುತ್ತವೆ.
  • ಗಾಯಗಳು ಅಗಲವಾಗುತವೆ, ಗಾಢ ಕಂದು ಬಣ್ಣಕ್ಕೆ ತಿರುಗುತ್ತವೆ.
  • ಬಾಧಿತ ಗಿಡಗಳು ಕಡಿಮೆ ಪ್ರಮಾಣದಲ್ಲಿ, ಸಣ್ಣ ರೋಗಗ್ರಸ್ತ ಬೀಜಕೋಶಗಳನ್ನು ಉತ್ಪಾದಿಸುತ್ತವೆ.
  • ಈ ಬೀಜಕೋಶಗಳು ಕೆಲವೊಮ್ಮೆ ಮೇಲ್ಮುಖವಾಗಿ ಸುತ್ತುತ್ತವೆ.
  • ಕುಂಠಿತ ಬೆಳವಣಿಗೆ.
  • ಕಾಳುಗಳ ಗುಣಮಟ್ಟ ಮತ್ತು ಪ್ರಮಾಣ ಸಹ ಕಡಿಮೆಯಾಗುತ್ತದೆ.


ತೊಗರಿ ಬೇಳೆ & ಮಸೂರ್ ಬೇಳೆ

ರೋಗಲಕ್ಷಣಗಳು

ಎಳೆಯ ಎಲೆಗಳು ಸಂಪೂರ್ಣವಾಗಿ ಹಸಿರು ಬಣ್ಣ ಕಳೆದುಕೊಳ್ಳುತ್ತವೆ (ಕ್ಲೋರೋಟಿಕ್), ಕೆಳಕ್ಕೆ ಸುರುಳಿಯಾಗಬಹುದು ಅಥವಾ ಕಾಗದದ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಹಳೆಯ ಎಲೆಗಳಲ್ಲಿ ಕಾಣಿಸಿಕೊಳ್ಳುವ ಚದುರಿದ ಹಳದಿ ಕಲೆಗಳು ಬಳಿಕ ಅನಿಯಮಿತ ಆಕಾರದ ಹಸಿರು ಮತ್ತು ಹಳದಿ ಗುರುತುಗಳಾಗಿ ಬೆಳೆಯುತ್ತವೆ. ಹಸಿರು ಪ್ರದೇಶಗಳು ಸ್ವಲ್ಪಮಟ್ಟಿಗೆ ಎಲೆಯ ಮೇಲ್ಮೈಗಿಂತ ಮೇಲಕ್ಕೆದ್ದು ಎಲೆಯು ಸುಕ್ಕುಗಟ್ಟಿದಂತೆ ಕಾಣುತ್ತದೆ. ಗಾಯಗಳು ದೊಡ್ಡದಾಗಿ ಒಂದಕ್ಕೊಂದು ಸೇರಿಕೊಂಡು ಕೊಳೆಯಲು ಪ್ರಾರಂಭಿಸುತ್ತವೆ (ನೆಕ್ರೋಸಿಸ್). ಪೀಡಿತ ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ. ಅವು ಕಡಿಮೆ ಹೂವುಗಳನ್ನು ಮತ್ತು ಬೀಜಕೋಶಗಳನ್ನ ಉತ್ಪಾದಿಸುತ್ತವೆ. ಪೀಡಿತ ಗಿಡಗಳಲ್ಲಿ ಬೆಳೆದ ಬೀಜಕೋಶಗಳು ಸಣ್ಣಗೆ, ತೆಳ್ಳಕ್ಕಿದ್ದು ಅಲ್ಲಲ್ಲಿ ಕಲೆಗಳಿರುತ್ತವೆ. ಅಲ್ಲದೆ ಕೆಲವೊಮ್ಮೆ ಮೇಲ್ಮುಖವಾಗಿ ಸುರುಳಿಯಾಗಿರುತ್ತವೆ. ಅವುಗಳಲ್ಲಿ ಕಡಿಮೆ ಕಾಳುಗಳಿದ್ದು ಕಾಳುಗಳು ಸಣ್ಣಗಿರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ವೈರಸ್ಸಿನಿಂದ ಉಂಟಾಗುವ ರೋಗಗಳನ್ನು ನಿಯಂತ್ರಿಸಲು ಯಾವುದೇ ಸಾವಯವ ಕ್ರಮ ಇಲ್ಲ. ಆದರೂ ಬೇವಿನ ತೈಲಗಳಂತಹ ಸಸ್ಯದ ಸಾರಗಳು ಬಿಳಿ ಪತಂಗದ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಸೋಂಕಿತ ಗಿಡಗಳ ಇಳುವರಿಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಇಮಿಡಾಕ್ಲೋಪ್ರಿಡ್, ಸೈಪರ್ಮೆಥರಿನ್, ಡೆಲ್ಟಾಮೆಥ್ರಿನ್ ಅಥವಾ ಡಿಮೀಥೊಯೇಟ್ನೊಂದಿಗಿನ ದ್ರವೌಷಧಗಳನ್ನು ಎಲೆಗಳ ಮೇಲೆ ಬಳಸುವುದರಿಂದ ವಾಹಕ ಕೀಟವಾದ ಬಿಳಿ ಪತಂಗದ ಸಂಖ್ಯೆಯನ್ನು ಕಡಿಮೆ ಮಾಡಬಹುದು. ವಾಹಕಗಳನ್ನು ಕಡಿಮೆಗೊಳಿಸಲು ತೋಟದ ಸುತ್ತಲೂ ಬೆಳೆದ ಗಡಿ ಬೆಳೆಗಳ (ಮೆಕ್ಕೆ ಜೋಳ, ಹುಲ್ಲು ಜೋಳ ಮತ್ತು ಸಜ್ಜೆ) ಮೇಲೆ ಕೀಟನಾಶಕಗಳನ್ನು ಸಿಂಪಡಿಸಬಹುದು.

ಅದಕ್ಕೆ ಏನು ಕಾರಣ

ಬೆಮಿಸಿಯ ಟಾಬಾಸಿ ಎಂಬ ಬಿಳಿ ಪತಂಗದ ಮೂಲಕ ಈ ವೈರಸ್ ಹರಡುತ್ತದೆ. ಬೀಜದಿಂದ ರೋಗ ಹರಡುವುದು ಸಾಧ್ಯವಿಲ್ಲ. ಏಷ್ಯಾ ಖಂಡದ ಹಲವಾರು ದೇಶಗಳಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ ಈ ರೋಗ ಕಂಡುಬರುತ್ತದೆ. ಎಲೆಗಳ ಮೇಲಿರುವ ಹಳದಿ ತೇಪೆಗಳಿಂದ ಗಿಡದ ಉತ್ಪಾದನಾ ಸಾಮರ್ಥ್ಯ ಗಣನೀಯವಾಗಿ ಕಡಿಮೆಯಾಗುತ್ತದೆ. ಬೆಚ್ಚಗಿನ ತಾಪಮಾನ ಮತ್ತು ಅಧಿಕ ಆರ್ದ್ರತೆಯು ವಾಹಕ ಕೀಟಗಳ ಸಂಖ್ಯೆ ಹೆಚ್ಚಲು ಅನುಕೂಲಕರ. ಹೆಸರುಕಾಳು ಹಳದಿ ಮೊಸಾಯಿಕ್ ವೈರಸ್ ಸೋಂಕು 100% ವರೆಗೆ ಇಳುವರಿ ನಷ್ಟಕ್ಕೆ ಕಾರಣವಾಗಬಹುದು. ಹೆಸರುಕಾಳು ಹಳದಿ ಮೊಸಾಯಿಕ್ ವೈರಸ್ ಹೆಸರುಕಾಳಿಗಿಂತ ಹೆಚ್ಚಾಗಿ ಉದ್ದಿನ ಕಾಳಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ದೇಶದಲ್ಲಿ ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ನೆಡಿ.
  • ತೋಟದ ಸುತ್ತಲೂ ಹುಲ್ಲುಜೋಳ (ಸೋರ್ಗಮ್), ಮೆಕ್ಕೆ ಜೋಳ ಅಥವಾ ಸಜ್ಜೆ ಬೆಳೆಯಿರಿ.
  • ನಿಯಮಿತವಾಗಿ ರೋಗಲಕ್ಷಣಗಳಿಗಾಗಿ ತೋಟವನ್ನು ಪರೀಕ್ಷಿಸಿ ಮತ್ತು ಸೋಂಕಿತ ಗಿಡಗಳನ್ನು ತೆಗೆದುಹಾಕಿ.
  • ಹಳದಿ ಬಣ್ಣದ ಜಿಗುಟು ಬಲೆಗಳನ್ನು ಉಪಯೋಗಿಸಿ ಕೀಟಗಳ ಸಂಖ್ಯೆ ನಿಯಂತ್ರಿಸಿ ಅಥವಾ ಗುಂಪಿನಲ್ಲಿ ಹಿಡಿದು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ