ಸೋಯಾಬೀನ್

ಸೊಯಾಬೀನ್ ಮೊಸಾಯಿಕ್ ವೈರಸ್

SMV

ವೈರಸ್

ಸಂಕ್ಷಿಪ್ತವಾಗಿ

  • ತಿಳಿಯಾದ- ಮತ್ತು ಗಾಢ-ಹಸಿರು ಬಣ್ಣದ ಮೊಸಾಯಿಕ್ ಮಾದರಿಯು ಎಲೆಗಳ ಮೇಲೆ ಬೆಳೆಯುತ್ತದೆ.
  • ಸುಕ್ಕುಗಟ್ಟಿದ ಎಲೆಗಳು ಕೆಳಮುಖವಾಗಿ ಸುರುಳಿಯಾಗುತ್ತವೆ.
  • ವಿಪರ್ಣನೆ, ಸಸ್ಯ ಕುಂಠಿತಗೊಳ್ಳುವುದು, ಮತ್ತು ಬೀಜಕೋಶಗಳ ಸಂಖ್ಯೆ ಮತ್ತು ಗಾತ್ರ ಕಡಿಮೆಯಾಗುವುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಸಸ್ಯಗಳಿಗೆ ಯಾವ ಸಮಯದಲ್ಲಾದರೂ ಸೋಂಕಾಗಬಹುದು. ನಿರೋಧಕ ಪ್ರಭೇದಗಳು ಯಾವುದೇ ಸ್ಪಷ್ಟವಾದ ಲಕ್ಷಣಗಳನ್ನು ತೋರಿಸುವುದಿಲ್ಲ. ರೋಗಕ್ಕೆ ಬೇಗ ಈಡಾಗುವ ಸಸ್ಯಗಳಲ್ಲಿ, ಸೋಂಕಿನ ಆರಂಭಿಕ ಹಂತದಲ್ಲಿ ಎಳೆಯದಾದ, ವೇಗವಾಗಿ ಬೆಳೆಯುತ್ತಿರುವ ಎಲೆಗಳಲ್ಲಿ ತೆಳುವಾದ- ಮತ್ತು ಗಾಢ-ಹಸಿರು ಬಣ್ಣದ ಮೊಸಾಯಿಕ್ ಮಾದರಿಯ ಬೆಳವಣಿಗೆ ಕಂಡುಬರುತ್ತದೆ. ನಂತರ ಅವುಗಳು ತೀವ್ರವಾಗಿ ಹರಡುತ್ತವೆ, ಸಿರೆಗಳ ಉದ್ದಕ್ಕೂ ಸುಕ್ಕುಗಟ್ಟಿ ಕೆಳಮುಖವಾಗಿ ಸುರುಳಿಯಾಗುತ್ತವೆ. ವಿಪರ್ಣನ, ಸಸ್ಯ ಕುಂಠಿತಗೊಳ್ಳುವುದು, ಮತ್ತು ಬೀಜಕೋಶಗಳ ಸಂಖ್ಯೆ ಮತ್ತು ಗಾತ್ರ ಕಡಿಮೆಯಾಗುತ್ತದೆ. ತಂಪಾದ ವಾತಾವರಣದಲ್ಲಿ ರೋಗಲಕ್ಷಣಗಳು ತೀವ್ರವಾಗಿರುತ್ತವೆ ಮತ್ತು 32 °C ಗಿಂತ ಹೆಚ್ಚಿನ ತಾಪಮಾನದಲ್ಲಿ ಅದನ್ನು ಪತ್ತೆಹಚ್ಚಲಾಗುವುದಿಲ್ಲ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, SMV ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಗಾಗಿ ನಾವು ಎದುರು ನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ವೈರಸ್ ರೋಗಗಳ ರಾಸಾಯನಿಕ ಚಿಕಿತ್ಸೆ ಸಾಧ್ಯವಿಲ್ಲ. ಗಿಡಹೇನುಗಳ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಇದರಿಂದಾಗಿ ವೈರಸ್ ಹರಡುವುದನ್ನು ನಿಯಂತ್ರಿಸಲು ಕೀಟನಾಶಕಗಳ ಬಳಕೆ ಪರಿಣಾಮಕಾರಿಯಾಗುವುದಿಲ್ಲ.

ಅದಕ್ಕೆ ಏನು ಕಾರಣ

ಈ ವೈರಸ್ ಗೆ ವ್ಯಾಪಕವಾದ ಹೋಸ್ಟ್ ಗಳಿವೆ, ಇದರಲ್ಲಿ ಬಟಾಣಿ, ಸ್ನೀಪ್ ಬೀನ್ಸ್, ಮತ್ತು ಅನೇಕ ಕಳೆಗಳು ಸೇರಿವೆ. ರೋಗಕಾರಕವನ್ನು ಗಿಡಹೇನುಗಳು, ಸೋಂಕಿತ ಬೀಜಗಳು ಹರಡುತ್ತದೆ ಮತ್ತು ಸಮೀಪವಿರುವ ಹೋಸ್ಟ್ ಗಳಲ್ಲಿ ಇದು ಬದುಕಬಲ್ಲದು. ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ಸೋಂಕಾದರೆ ಅದು ಇಳುವರಿಯಲ್ಲಿ ನಷ್ಟವನ್ನುಂಟುಮಾಡುತ್ತದೆ, ಬೀಜದ ಗುಣಮಟ್ಟದ ಪರಿಣಾಮ ಬೀರುತ್ತದೆ ಮತ್ತು ಬೀಜ ಮೊಳಕೆಯೊಡೆಯುವಿಕೆ ಮತ್ತು ನೋಡ್ಯುಲೇಶನ್ ಅನ್ನು ಕಡಿಮೆ ಮಾಡುತ್ತದೆ. ಋತುವಿನ ನಂತರದ ಸಮಯದಲ್ಲಿ ಆಗುವ ಸೋಂಕುಗಳ ತೀವ್ರತೆ ಕಡಿಮೆಯಿರುತ್ತದೆ. ಹೆಚ್ಚಿನ ಇಳುವರಿ ಸಾಮರ್ಥ್ಯ ಮತ್ತು ಹೆಚ್ಚಿನ ಗಿಡಹೇನು ಸಂಖ್ಯೆ ಇರುವ ಉತ್ತಮ ಫಲವತ್ತಾದ ಹೊಲಗಳು ವೈರಸ್ ನ ಪ್ರಸರಣಕ್ಕೆ ಸೂಕ್ತವಾದವು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ, ವೈರಸ್-ಮುಕ್ತ ಬೀಜಗಳನ್ನು ಬಳಸಲು ಮರೆಯದಿರಿ.
  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ಸಾಧ್ಯವಾದರೆ, ಋತುವಿಗಿಂತ ಮೊದಲೇ ನಾಟಿ ಮಾಡುವ ಕಾರ್ಯಕ್ರಮಗಳನ್ನು ಆಯ್ಕೆ ಮಾಡಿ.
  • ವೈರಸ್ನ ಇತರ ಹೋಸ್ಟ್ ಗಳೊಂದಿಗೆ ಸೋಯಾಬೀನಿನ ಸರದಿ ಬೆಳೆ ಮಾಡಬೇಡಿ.
  • ಹೊಲದ ಸುತ್ತ ಮುತ್ತಲೂ ಇರುವ ಕಳೆಗಳನ್ನು ನಿಯಂತ್ರಿಸಿ.
  • ಸಸ್ಯದ ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ನಿಮ್ಮ ಹೊಲವನ್ನು ಅತಿಯಾಗಿ ಫಲೀಕರಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ