GBNV
ವೈರಸ್
ರೋಗದ ಪ್ರಾಥಮಿಕ ಲಕ್ಷಣವೆಂದರೆ ಎಳೆಯ ಎಲೆಗಳ ಮೇಲೆ ಲಘುವಾದ ಕ್ಲೋರೋಟಿಕ್ ತೇಪೆಗಳು, ನಂತರ ಇದು ಕ್ಲೋರೋಟಿಕ್ ಮತ್ತು ನೆಕ್ರೋಟಿಕ್ ರಿಂಗ್ ಕಲೆಗಳು ಮತ್ತು ಗೆರೆಗಳಾಗಿ ಬೆಳೆಯುತ್ತದೆ. ನೆಕ್ರೋಸಿಸ್ ನಂತರ ಎಲೆ ತೊಟ್ಟುಗಳಿಗೆ ಹರಡುತ್ತದೆ ಮತ್ತು ಕಾಂಡಗಳ ಮೇಲ್ಭಾಗಕ್ಕೆ ಹರಡುತ್ತಾ ಕೊನೆಯ ಮೊಗ್ಗುಗಳಿಗೆ ತಗುಲುತ್ತದೆ, ಇದರಿಂದಾಗಿ ಹೂವಿನ ರಚನೆಗಳು ಕೊಳೆಯುತ್ತವೆ, ಈ ಕಾರಣದಿಂದಲೇ ಇದಕ್ಕೆ ಬಡ್ ನೆಕ್ರೋಸಿಸ್ ರೋಗ (ಮೊಗ್ಗಿನ ಕೊಳೆತ) ಎಂಬ ಹೆಸರಿದೆ. ಈ ಸನ್ನಿವೇಶವು ಮಧ್ಯಮ ಅಧಿಕ ತಾಪಮಾನದಿಂದ ಬರುತ್ತದೆ. ಸೋಂಕಿಗೊಳಗಾದ ಸಸ್ಯಗಳು ಕುಂಠಿತಗೊಂಡ ಬೆಳವಣಿಗೆ, ಸಾಮಾನ್ಯ ಕ್ಲೋರೋಸಿಸ್, ಹೊಸ ಚಿಗುರಿನ ಪ್ರಸರಣ ಮತ್ತು ಹೊಸ ಎಲೆಗಳಲ್ಲಿ ವಿರೂಪತೆಯನ್ನು ತೋರಿಸುತ್ತವೆ. ಗೂಟಗಳ ಮೇಲೆ ತೇಪೆಗಳು ಬಂದು ಅವು ಬಣ್ಣರಹಿತವಾಗಬಹುದು ಮತ್ತು ಅವುಗಳಲ್ಲಿ ಕೆಟ್ಟ ವಾಸನೆ, ಕಲೆಗಳು ಇರುವ ಸಣ್ಣ, ಗಟ್ಟಿಯಾದ ಬೀಜಗಳು ಇರುತ್ತವೆ. ಆರಂಭದ ಹಂತಗಳಲ್ಲಿ ಸಸ್ಯಗಳು ಸೋಂಕಿಗೆ ಒಳಗಾದಾಗ ಇಳುವರಿ ನಷ್ಟವನ್ನು ಗಮನಿಸಬಹುದು.
ಬಿತ್ತನೆಯ 20 ದಿನಗಳ ನಂತರ ಹುಲ್ಲುಜೋಳ ಅಥವಾ ತೆಂಗಿನ ಎಲೆಯ ಸಸ್ಯದ ಸಾರಗಳನ್ನು ಸಿಂಪಡಿಸುವುದು ಥ್ರೈಪ್ಸ್ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿರುತ್ತದೆ.
ತಡೆಗಟ್ಟುವ ಕ್ರಮಗಳು ಮತ್ತು ಸಂಭವನೀಯ ಜೈವಿಕ ಚಿಕಿತ್ಸೆಗಳೊಂದಿಗೆ ಯಾವಾಗಲೂ ಸಂಯೋಜಿತ ವಿಧಾನವನ್ನು ಪರಿಗಣಿಸಿ. ವೈರಲ್ ಸೋಂಕುಗಳ ರಾಸಾಯನಿಕ ಚಿಕಿತ್ಸೆ ಸಾಧ್ಯವಿಲ್ಲ. ಆದಾಗ್ಯೂ, ಥ್ರೈಪ್ಸ್ ವಾಹಕಗಳ ನಿಯಂತ್ರಣಕ್ಕೆ ಕೆಲವು ಚಿಕಿತ್ಸೆಗಳು ಲಭ್ಯವಿದೆ. ಮೊನೊಕ್ರೊಟೋಫೊಸ್ ಅಥವಾ ಡಿಮೀಥೋನೇಟ್ನಂತಹ ಕೀಟನಾಶಕಗಳನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಬಿತ್ತಿದ 30-35 ದಿನಗಳ ನಂತರ ಸಿಂಪಡಿಸಿದರೆ ಅದು ಬಡ್ ನೆಕ್ರೋಸಿಸ್ನ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. 2 ಮಿಲೀ/ಕೆಜಿ ಬೀಜಕ್ಕೆ ಇಮಿಡಾಕ್ಲೋಪ್ರಿಡ್ ಬೀಜ ಚಿಕಿತ್ಸೆಯು ಥ್ರೈಪ್ಗಳ ವಿರುದ್ಧ ಪರಿಣಾಮಕಾರಿಯಾಗಿದೆ.
ಪೀನಟ್ ಬಡ್ ನೆಕ್ರೋಸಿಸ್ ರೋಗವು ವೈರಸ್ನಿಂದ ಉಂಟಾಗುತ್ತದೆ. ಸಸ್ಯಗಳಿಗಾಗುವ ಸೋಂಕು ನಿರಂತರವಾಗಿರುತ್ತದೆ ಮತ್ತು ಸಸ್ಯದ ಅಂಗಾಂಶಗಳು ಹಾಗು ಸಸ್ಯರಸವನ್ನು ಆಹಾರವನ್ನಾಗಿ ತೆಗೆದುಕೊಳ್ಳುವ ಕೀಟಗಳ (ಥ್ರೈಪ್ಸ್ ಪಾಲ್ಮಿ) ಜಾತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಕಡಲೆಕಾಯಿ ಗಿಡಗಳ ಅನುಪಸ್ಥಿತಿಯಲ್ಲಿ, ಥ್ರೈಪ್ಸ್(ಥೈಸನೊಪ್ಟರ ವರ್ಗದ ಒಂದು ಕೀಟ) ಗದ್ದೆ ಅಥವಾ ಅದರ ಸುತ್ತಲಿನ ಪರ್ಯಾಯ ಅತಿಥೇಯಗಳನ್ನು ಆಹಾರಕ್ಕಾಗಿ ಆಕ್ರಮಿಸುತ್ತವೆ, ಉದಾಹರಣೆಗೆ ದಕ್ಷಿಣದ ಮಾರಿಗೋಲ್ಡ್ (ಟ್ಯಾಗೆಟೆಸ್ ಮ್ಯುನಾಟಾ), ಮತ್ತು ನೆಲದಡಿಯ ಕ್ಲೋವರ್ (ಟ್ರಿಫೊಲಿಯಮ್ ಸಬ್ಟೆರ್ರೇನಿಯಮ್). ಆದ್ದರಿಂದ, ಈ ಸಸ್ಯಗಳನ್ನು ತೆಗೆಯುವುದು ಕೀಟ ಸಂಖ್ಯೆಯನ್ನು ನಿಯಂತ್ರಿಸಲು ಮುಖ್ಯವಾಗಿದೆ. ದಟ್ಟವಾಗಿ ನೆಡುವುದರಿಂದಲೂ ಸಹ ನೆಲಗಡಲೆ ಬೆಳೆ ಮೇಲೆ ಥ್ರಿಪ್ ಗಳು ಇಳಿಯುವುದನ್ನು ನಿರುತ್ಸಾಹಗೊಳಿಸಬಹುದು.