ಆಲೂಗಡ್ಡೆ

ಆಲೂಗಡ್ಡೆ Y ವೈರಸ್

PVY

ವೈರಸ್

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಹಳದಿ ಜೊತೆ ಕಡು ಹಸಿರು ಬಣ್ಣದ ಮಿಶ್ರಿತ ತೇಪೆಗಳು- ತುದಿಯಿಂದ ಪ್ರಾರಂಭವಾಗುತ್ತದೆ.
  • ಎಲೆಗಳು ಮತ್ತು ಚಿಗುರುಗಳ ಮೇಲೆ ಕಪ್ಪು ನೆಕ್ರೋಟಿಕ್ ಕಲೆಗಳು.
  • ಕ್ಷೀಣಿಸಿದ ಸಸ್ಯ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಆಲೂಗಡ್ಡೆ
ತಂಬಾಕು

ಆಲೂಗಡ್ಡೆ

ರೋಗಲಕ್ಷಣಗಳು

ಸೋಂಕಿನ ಲಕ್ಷಣಗಳು ಪ್ರಭೇದಗಳು, ಸಸ್ಯಗಳ ವಯಸ್ಸು ಮತ್ತು ಪರಿಸರದ ಸ್ಥಿತಿಗತಿಗಳೊಂದಿಗೆ ಬದಲಾಗುತ್ತವೆ. ಹಳದಿಯಿಂದ ಕಡು ಹಸಿರು ಮೊಸಾಯಿಕ್ ಮಾದರಿಗಳು ಎಲೆಯ ದಳಗಳಲ್ಲಿ ಕಾಣಿಸಿಕೊಳ್ಳುತ್ತವೆ, ಅವುಗಳು ಮಚ್ಛೆಯ ಮತ್ತು ವಿರೂಪಗೊಂಡ ಆಕಾರವನ್ನು ನೀಡುತ್ತವೆ, ಅವು ಸಾಮಾನ್ಯವಾಗಿ ತುದಿಯಿಂದ ಪ್ರಾರಂಭವಾಗುತ್ತವೆ. ಕಂದು ಮತ್ತು ಕಪ್ಪು ರೇಖೆಗಳು ಮತ್ತು ಸತ್ತ ಅಂಗಾಂಶದ ದುಂಡಗಿನ ಕಲೆಗಳು ಎಲೆ ಸಿರೆ ಮತ್ತು ಚಿಗುರುಗಳ ಮೇಲೆ ಹೊರಹೊಮ್ಮುತ್ತವೆ. ಮೊಗ್ಗುಗಳು ಮತ್ತು ಹೂವುಗಳು ಮತ್ತಷ್ಟು ಬೆಳವಣಿಗೆಯಾಗುವುದಿಲ್ಲ. ಸೋಂಕಿತ ಸಸ್ಯಗಳಿಂದ ಉಂಟಾಗುವ ಗೆಡ್ಡೆಗಳು ಚಿಕ್ಕದಾಗಿರುತ್ತವೆ ಮತ್ತು ಚರ್ಮದ ಮೇಲೆ ಮೃದುವಾದ ಅಥವಾ ಸತ್ತ ಉಂಗುರಗಳನ್ನು ಹೊಂದಿರುತ್ತವೆ. ಇಡೀ ಸಸ್ಯದ ಬೆಳವಣಿಗೆಗೆ ಧಕ್ಕೆಯಾಗುತ್ತದೆ ಮತ್ತು ಬೆಳೆ ಇಳುವರಿ ಕಡಿಮೆಯಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಪ್ರತಿ ವಾರ ಖನಿಜ ತೈಲ ಬಳಸುವದರಿಂದ ವೈರಸ್ ಹರಡುವುದನ್ನು ಕಡಿಮೆಗೊಳಿಸುತ್ತವೆ. ಇದು ಗಿಡಹೇನುಗಳು ವೈರಸ್ ಅನ್ನು ಪಡೆಯುವುದನ್ನು ನಿಧಾನಗೊಳಿಸುತ್ತದೆ ಮತ್ತು ಅವುಗಳ ತಿನ್ನುವ ನಡವಳಿಕೆಯನ್ನು ಮಾರ್ಪಡಿಸುತ್ತದೆ, ಇದರಿಂದ ಸಸ್ಯಗಳಿಗೆ ಸೋಂಕು ಕಡಿಮೆಯಾಗುವುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ವೈರಸ್ ರೋಗಗಳಿಗೆ ರಾಸಾಯನಿಕ ಚಿಕಿತ್ಸೆ ಸಾಧ್ಯವಿಲ್ಲ. ಆದಾಗ್ಯೂ, ಗಿಡಹೇನುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೀಟನಾಶಕಗಳನ್ನು ಬಳಸಬಹುದು.

ಅದಕ್ಕೆ ಏನು ಕಾರಣ

ವೈರಸ್ ನ ಸೋಂಕು ಹೆಚ್ಚು ಅಪಾಯಕಾರಿ. ಇದು ಹೆಚ್ಚಾಗಿ ಟೊಮ್ಯಾಟೊ, ಆಲೂಗೆಡ್ಡೆ ಮತ್ತು ಮೆಣಸು ಮುಂತಾದ ಸೊಲ್ಯಾನೇಸಿಯಸ್ ಕುಟುಂಬದ ಸಸ್ಯಗಳನ್ನು ಆಕ್ರಮಿಸುತ್ತದೆ. ಇದು ವಿವಿಧ ರೆಕ್ಕೆಯಿರುವ ಗಿಡಹೇನುಗಳು, ಸೋಂಕಿತ ಸಸ್ಯ ವಸ್ತು ಮತ್ತು ಕಲುಷಿತ ಉಪಕರಣಗಳ ಮೂಲಕ ಹರಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕರಿಸಿದ ಬೀಜಗಳನ್ನು ಮಾತ್ರ ಹಾಕಿ.
  • ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ಆರಿಸಿ.
  • ಭೂಮಿಯ ಮೇಲ್ವಿಚಾರಣೆ ಮಾಡಿ ಎಲ್ಲಾ ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮತ್ತು ನಾಶಪಡಿಸಿ.
  • ರೋಗಕ್ಕೆ ಸೂಕ್ಷ್ಮವಿರುವ ಸಸ್ಯಗಲ ಬಳಿ ಆಲೂಗಡ್ಡೆಗಳನ್ನು ನೆಡಬೇಡಿ.
  • ತೋಟ ಮತ್ತು ಸುತ್ತಲಿನಿಂದ ಹಿಂದಿನ ಬೆಳೆಗಳ ಕಳೆಗಳನ್ನು ಅಥವಾ ಅನಗತ್ಯ ಆಲೂಗಡ್ಡೆ ಸಸ್ಯಗಳನ್ನು ತೊಡೆದುಹಾಕಿ.
  • ಸಸ್ಯಗಳಿಗೆ ಹಾನಿಯಾಗುವುದನ್ನು ತಪ್ಪಿಸಿ.
  • ನಿಮ್ಮ ಸಾಧನಗಳಿಂದ ಸೋಂಕನ್ನು ತೆಗೆಯಿರಿ.
  • ಚಳಿಗಾಲದಲ್ಲಿ ಸುಪ್ತವಾಗಿರುವ ವೈರಸ್ನ ಮೂಲಗಳನ್ನು ನಾಶಮಾಡಿ, ಉದಾಹರಣೆಗೆ ಆಲೂಗಡ್ಡೆಗಳ ಹೆಕ್ಕು ರಾಶಿಗಳು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ