ಸೌತೆಕಾಯಿ

ಸೌತೆಕಾಯಿಯ ಹಸಿರು ಚುಕ್ಕೆ ವೈರಸ್

CGMMV

ವೈರಸ್

ಸಂಕ್ಷಿಪ್ತವಾಗಿ

  • ಹೊಸದಾದ ಎಳೆಯ ಎಲೆಗಳ ಮೇಲೆ ತಿಳಿ ಹಸಿರು ಅಥವಾ ಹಳದಿ ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುವುದು ಮತ್ತು ಎಲೆಯ ನಾಳಗಳು ಮರೆಯಾಗುವುದು.
  • ಎಲೆಗಳು ಹಳದಿಯಾಗುವುದು, ಕುಸಿಯುವುದು ಮತ್ತು ವಿರೂಪತೆ.
  • ಕುಂಠಿತಗೊಂಡ ಬೆಳವಣಿಗೆ.
  • ಕಲೆಗಳು, ಗೆರೆಗಳು ಅಥವಾ ವಿರೂಪಗೊಂಡ ಹಣ್ಣುಗಳು.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು
ಹಾಗಲಕಾಯಿ
ಸೌತೆಕಾಯಿ
ಕಲ್ಲಂಗಡಿ
ಕುಂಬಳಕಾಯಿ
ಇನ್ನಷ್ಟು

ಸೌತೆಕಾಯಿ

ರೋಗಲಕ್ಷಣಗಳು

ರೋಗದ ಆರಂಭಿಕ ಹಂತಗಳಲ್ಲಿ, ಹೊಸದಾದ ಎಳೆಯ ಎಲೆಗಳ ಮೇಲೆ ತಿಳಿ ಹಳದಿಮಿಶ್ರಿತ ಹಸಿರು ಕಲೆಗಳು ಕಾಣಿಸಿಕೊಳ್ಳಬಹುದು. ಮತ್ತು ನಾಳಗಳು ಕಾಣೆಯಾಗಬಹುದು. ಬೆಳವಣಿಗೆಯ ನಂತರದ ಹಂತಗಳಲ್ಲಿ ಸೋಂಕು ತೀವ್ರವಾದಾಗ ಎಲೆಗಳ ಮೇಲೆ ಕ್ಲೋರೋಟಿಕ್ ಕಲೆಗಳು ಕಾಣುತ್ತವೆ. ಎಲೆಗಳು ಉದುರುತ್ತವೆ ಮತ್ತು ವಿರೂಪಗೊಳ್ಳುತ್ತವೆ. ಸಸ್ಯದ ಬೆಳವಣಿಗೆ ಕುಂಠಿತವಾಗುತ್ತದೆ. ಬೆಳೆದ ಎಲೆಗಳು ಬಿಳುಚಿಕೊಳ್ಳಬಹುದು ಅಥವಾ ಹಳದಿ-ಬಿಳುಪು ಬಣ್ಣಕ್ಕೆ ತಿರುಗಿ, ಅಕಾಲಿಕವಾಗಿ ಉದುರಬಹುದು. ಹಣ್ಣುಗಳ ಮೇಲೆ ಯಾವುದೇ ರೋಗಲಕ್ಷಣಗಳು ಕಾಣದೇ ಇರಬಹುದು (ಕನಿಷ್ಚ ಹೊರಭಾಗದಲ್ಲಿ) ಅಥವಾ ತೀವ್ರ ಕಲೆಗಳು ಹಾಗು ಗೆರೆಗಳು, ವಿರೂಪತೆ ಕಂಡು ಬರಬಹುದು. ಅಥವಾ ಉದುರಬಹುದು. ಎರಡನೆಯ ಲಕ್ಷಣಗಳು ಹೆಚ್ಚಿನ ತಾಪಮಾನದಲ್ಲಿ ವಿಶೇಷವಾಗಿ ಗೋಚರಿಸುತ್ತವೆ. ಕೆಲವು ಸಂದರ್ಭಗಳಲ್ಲಿ, ಬಾಹ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ತೋರಿಸದ ಹಣ್ಣುಗಳು ಆಂತರಿಕವಾಗಿ ಬಣ್ಣ ಕಳೆದುಕೊಂಡು, ಕೊಳೆತಿರಬಹುದು. ಅಕಾಲಿಕ ಉದುರುವಿಕೆ ಕೂಡ ಸಾಮಾನ್ಯವಾಗಿದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ನೀವು ಮೂರು ದಿನಗಳವರೆಗೆ 70 °C ಒಣ ಶಾಖಕ್ಕೆ ಬೀಜಗಳನ್ನು ಒಡ್ಡಿದರೆ ಅವು ಸಕ್ರಿಯ ವೈರಾಣುಗಳಿಂದ ಮುಕ್ತವಾಗುತ್ತವೆ. ಹಾಗು ಮೊಳಕೆಯೊಡೆಯಲು ಸಮರ್ಥವಾಗಿ ಉಳಿಯುತ್ತವೆ. ಲಭ್ಯವಿದ್ದರೆ ಸಿಜಿಎಂಎಂವಿ ಪರೀಕ್ಷಾ ಕಿಟ್ ಗಳನ್ನು ಬಳಸಿ. ಜಗಿಯುವ ಕೀಟಗಳನ್ನು ಗುರಿಯಾಗಿಸಿ ಸಾವಯವ ಕೀಟನಾಶಕಗಳನ್ನು ಹಾಕಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗವನ್ನು ಮೊದಲು ಪರಿಗಣಿಸಿ. ಜಗಿಯುವ ಕೀಟಗಳನ್ನು ಗುರಿಯಾಗಿಸಿಕೊಂಡು ಬಳಸುವ ರಾಸಾಯನಿಕ ಕೀಟನಾಶಕಗಳಿಂದ ಈ ವೈರಸ್ ಹರಡುವುದನ್ನು ತಡೆಯಬಹುದು. ಕುಕುಂಬರ್ ಗ್ರೀನ್ ಮೊಟೈಲ್ ವೈರಸ್ ನಂತಹ ವೈರಲ್ ರೋಗಗಳಿಗೆ ನೇರ ಚಿಕಿತ್ಸೆ ಸಾಧ್ಯವಿಲ್ಲ.

ಅದಕ್ಕೆ ಏನು ಕಾರಣ

ಸೌತೆಕಾಯಿ, ಕಲ್ಲಂಗಡಿ ಮತ್ತು ಕ್ಯಾಂಟಲುಪ್ ಸೇರಿದಂತೆ ಕುಕುರ್ಬಿಟ್ ಪ್ರಭೇದದ ಸಸ್ಯಗಳಲ್ಲಿ ಸೋಂಕು ಉಂಟು ಮಾಡುವ ಕುಕುಂಬರ್ ಗ್ರೀನ್ ಮೋಟೆಲ್ ಮೊಸಾಯಿಕ್ ವೈರಸ್ (ಸಿಜಿಎಮ್ಎಂವಿ) ನಿಂದಾಗಿ ಈ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಣ್ಣಿನಲ್ಲಿರುವ ಸತ್ತ ಸಸ್ಯ ವಸ್ತುಗಳಲ್ಲಿ ದೀರ್ಘಕಾಲದವರೆಗೆ ಈ ವೈರಸ್ ಸಕ್ರಿಯವಾಗಿ ಉಳಿಯಬಹುದು. ಸೋಂಕಿನ ಹರಡುವಿಕೆಯು ಸಾಮಾನ್ಯವಾಗಿ ಬೀಜಗಳು, ಕತ್ತರಿಸುವ ಸಲಕರಣೆಗಳು, ಕೃಷಿ ಸಲಕರಣೆಗಳಿಂದಾದ ಯಾಂತ್ರಿಕ ಗಾಯಗಳು ಮತ್ತು ಗಿಡಗಳನ್ನು ತಿನ್ನುವ ಜೀರುಂಡೆಗಳಂತಹ ಕೀಟಗಳ ಮೂಲಕ ಆಗುತ್ತದೆ. ಕಸಿ ಮಾಡುವ ಮೂಲಕ ಅಥವಾ ಸಸ್ಯಗಳಿಗೆ ಗಾಯ ಮಾಡುವ ಇತರ ಕ್ರಿಯೆಗಳ ಮೂಲಕ ಕೂಡ ಬೇರೆ ಸಸ್ಯಗಳಿಗೆ ಇದು ಹರಡಬಹುದು. ಹೀರುವ ಕೀಟಗಳಿಂದ (ಉದಾ: ಗಿಡಹೇನುಗಳು, ಹುಳಗಳು, ಬಿಳಿನೊಣ) ಈ ವೈರಸ್ ಹರಡುವುದಿಲ್ಲ. ಒಮ್ಮೆ ಸಸ್ಯಕ್ಕೆ ಸೋಂಕು ತಗುಲಿದರೆ, ಈ ವೈರಸ್ ವಿರುದ್ಧ ಯಾವುದೇ ಚಿಕಿತ್ಸೆ ಇಲ್ಲ. ಹಸಿರುಮನೆಗಳಲ್ಲಿ ವಿಶೇಷವಾಗಿ, ಈ ವೈರಸ್ ನಿಂದ ಉಂಟಾಗುವ ಸೋಂಕಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಮಾತ್ರ ಬೀಜಗಳು ಅಥವಾ ಕಸಿಗಳನ್ನು ಬಳಸಿ.
  • ನಿರೋಧಕ ಪ್ರಭೇದಗಳು ಲಭ್ಯವಿದ್ದರೆ ಅವುಗಳನ್ನು ನೆಡಿ.
  • ಬೇರೆ ಬೇರೆ ಆಶ್ರಯದಾತ ಸಸಿಗಳನ್ನು ಒಂದಕ್ಕೊಂದು ಹತ್ತಿರ ನೆಡಬೇಡಿ.
  • ಯಾವುದೇ ಸಸ್ಯದ ಭಾಗಗಳು ಮತ್ತು ಬೀಜಗಳನ್ನು ನಿಭಾಯಿಸುವಾಗ ಸೋಂಕುರಹಿತ ಉಪಕರಣಗಳೊಂದಿಗೆ ಕೆಲಸ ಮಾಡುವುದನ್ನು ಮರೆಯದಿರಿ.
  • ಜಮೀನಿನಲ್ಲಿ ಕೆಲಸ ಮಾಡುವಾಗ ಸಸ್ಯಗಳಿಗೆ ಗಾಯವಾಗದಂತೆ ನೋಡಿಕೊಳ್ಳಿ.
  • ರೋಗಕ್ಕೆ ಒಳಗಾಗುವ ಸಾಧ್ಯತೆ ಇರುವ ಬೆಳೆಗಳಲ್ಲಿ CGMMV ರೋಗಲಕ್ಷಣಗಳನ್ನು ಗುರುತಿಸಲು ಅವುಗಳನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಸೋಂಕಿತ ಸಸ್ಯಗಳನ್ನು ಮತ್ತು ಸಸ್ಯದ ಯಾವುದೇ ಉಳಿಕೆಗಳನ್ನು ತಕ್ಷಣವೇ ತೆಗೆದುಹಾಕಿ.
  • ಹೀಗೆ ತೆಗೆಯಲಾದ ಸೋಂಕಿತ ವಸ್ತುಗಳನ್ನು ಸುಟ್ಟು ಹಾಕಿ ಅಥವಾ ಹೂತು ಬಿಡಿ.
  • ರೋಗಕ್ಕೆ ಸೂಕ್ಷ್ಮವಾಗಿರುವ ಬೆಳೆಗಳನ್ನು ಒಂದೇ ಕಡೆ ಬೆಳೆಯಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ