ಕಲ್ಲಂಗಡಿ

ಸೌತೆಕಾಯಿಯ ಮೊಸಾಯಿಕ್ ವೈರಸ್

CMV

ವೈರಸ್

ಸಂಕ್ಷಿಪ್ತವಾಗಿ

  • ಎಲೆಗಳು ಮತ್ತು ಹಣ್ಣುಗಳ ಮೇಲೆ ಹಳದಿ ಮೊಸಾಯಿಕ್ ಮಾದರಿಗಳು ಕಾಣಿಸಿಕೊಳ್ಳುತ್ತವೆ.
  • ಎಲೆಗಳು ಮತ್ತು ತೊಟ್ಟುಗಳು ಕೆಳಕ್ಕೆ ಬಾಗುತ್ತವೆ ಮತ್ತು ತಿರುಚಿಕೊಳ್ಳುತ್ತವೆ.
  • ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ವಿರೂಪವಾಗುತ್ತದೆ.
  • ಹೂವುಗಳ ಮೇಲೆ ಬಿಳಿ ಗೆರೆಗಳು ಕಾಣಿಸಿಕೊಳ್ಳುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

7 ಬೆಳೆಗಳು
ಹಾಗಲಕಾಯಿ
ಸೌತೆಕಾಯಿ
ಕಲ್ಲಂಗಡಿ
ಕುಂಬಳಕಾಯಿ
ಇನ್ನಷ್ಟು

ಕಲ್ಲಂಗಡಿ

ರೋಗಲಕ್ಷಣಗಳು

ಸೋಂಕಿತ ಸಸ್ಯಗಳ ಪ್ರಭೇದ ಮತ್ತು ಪರಿಸರ ಸ್ಥಿತಿಗಳನ್ನು ಅವಲಂಬಿಸಿ ರೋಗಲಕ್ಷಣಗಳು ಬದಲಾಗುತ್ತವೆ. ಕೆಲವು ಸಂದರ್ಭಗಳಲ್ಲಿ, ವೈರಸ್ ಅಸ್ತಿತ್ವದಲ್ಲಿದ್ದರೂ, ರೋಗಲಕ್ಷಣಗಳು ಮರೆಯಲ್ಲಿರುತ್ತವೆ ಅಥವಾ ಅಡಗಿರುತ್ತವೆ. ಎಲೆಗಳು ಮತ್ತು ಹಣ್ಣುಗಳ ಮೇಲೆ ಹಳದಿ ಬಣ್ಣದ ಅಥವಾ ತಿಳಿ ಹಸಿರು ಮತ್ತು ಹಳದಿ ಮಿಶ್ರಿತ ತೇಪೆಗಳು ಕಾಣಬಹುದು. ಅಡ್ಡ ಶಾಖೆಗಳು ಮತ್ತು ಎಲೆಯ ತೊಟ್ಟುಗಳು ಉದ್ದವಾಗಿ ಬೆಳೆಯುವುದು ಹೆಚ್ಚಾಗುತ್ತದೆ. ಇದರಿಂದ ಎಲೆಗಳು ಮತ್ತು ತೊಟ್ಟುಗಳು ಕೆಳಕ್ಕೆ ಬಾಗುತ್ತವೆ. ಹೊಸ ಎಲೆಗಳು ತಿರುಚಿಕೊಂಡು, ಕಿರಿದಾಗುತ್ತವೆ. ಮತ್ತು ಇಡೀ ಸಸ್ಯದ ಬೆಳವಣಿಗೆ ತೀವ್ರವಾಗಿ ಕುಂಠಿತಗೊಂಡು, ದುರ್ಬಲವಾಗುತ್ತದೆ. ಇದು ಸಸ್ಯಕ್ಕೆ ಪೊದೆಯ ಆಕಾರ ನೀಡುತ್ತದೆ. ಹೂವುಗಳಲ್ಲಿ ಬಿಳಿಯ ಗೆರೆಗಳು ಕಾಣಬಹುದು. ಹಣ್ಣುಗಳು ಮೇಲ್ಮುಖವಾಗಿ-ಬಾಗಿರುವ ಉಬ್ಬುಗಳನ್ನು ಪಡೆಯುತ್ತವೆ. ಇದರಿಂದಾಗಿ ಅವುಗಳನ್ನು ಮಾರಾಟ ಮಾಡುವುದು ಸಾಧ್ಯವಾಗುವುದಿಲ್ಲ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಎಲೆಗಳ ಮೇಲೆ ಖನಿಜ ತೈಲದ ದ್ರವೌಷಧಗಳನ್ನು ಹಾಕುವುದರಿಂದ ಗಿಡಹೇನುಗಳು ಅವುಗಳನ್ನು ತಿನ್ನದಂತೆ ಹಿಮ್ಮೆಟ್ಟಿಸಬಹುದು ಮತ್ತು ಆ ಮೂಲಕ ಅವುಗಳ ಸಂಖ್ಯೆಯನ್ನು ನಿಯಂತ್ರಿಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಒಂದು ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಸಿ ಎಂ ವಿ ವಿರುದ್ಧ ಯಾವುದೇ ಪರಿಣಾಮಕಾರಿ ರಾಸಾಯನಿಕಗಳು ಇಲ್ಲ, ಅಥವಾ ಸಸ್ಯಗಳು ಸೋಂಕಿಗೆ ಒಳಗಾಗದಂತೆ ರಕ್ಷಿಸುವ ರಾಸಾಯನಿಕಗಳು ಇಲ್ಲ. ಸೈಪರ್ಮೆಥರಿನ್ ಅಥವಾ ಕ್ಲೋರಿಪಿರಿಫೊಸ್ ಗಳನ್ನು ಹೊಂದಿರುವ ಕೀಟನಾಶಕಗಳನ್ನು ಗಿಡಹೇನುಗಳ ವಿರುದ್ಧ ಎಲೆಗಳ ಮೇಲೆ ಸಿಂಪಡಿಸಬಹುದು.

ಅದಕ್ಕೆ ಏನು ಕಾರಣ

ಕುಕಂಬರ್ ಮೊಸಾಯಿಕ್ ವೈರಸ್ ನಿಂದ (ಸಿ ಎಂ ವಿ) ರೋಗಲಕ್ಷಣಗಳು ಉಂಟಾಗುತ್ತವೆ. ಇವು ವಿವಿಧ ಪ್ರಭೇದಗಳ (ಕುಕುರ್ಬಿಟ್ಸ್, ಸ್ಪಿನಾಚ್, ಲೆಟಿಸ್ ಮತ್ತು ಸೆಲರಿ ಹಾಗೆಯೇ ಅನೇಕ ಹೂವುಗಳು, ವಿಶೇಷವಾಗಿ ಲಿಲ್ಲೀಸ್, ಡೆಲ್ಫಿನಿಯಮ್, ಪ್ರಿಮುಲಾ ಮತ್ತು ಡಾಫ್ನೆಸ್) ಮೇಲೆ ಪ್ರಭಾವ ಬೀರುತ್ತವೆ. 60-80 ವಿವಿಧ ಜಾತಿಯ ಗಿಡಹೇನುಗಳ ಮೂಲಕ ಈ ವೈರಸ್ ಹರಡುತ್ತದೆ. ಸೋಂಕಿತ ಬೀಜಗಳು ಮತ್ತು ಕಸಿಗಳು, ಕೆಲಸಗಾರರ ಕೈಗಳು ಅಥವಾ ಉಪಕರಣಗಳ ಮೂಲಕವೂ ಯಾಂತ್ರಿಕವಾಗಿ ಈ ವೈರಸ್ ಹರಡುತ್ತದೆ. ವಾರ್ಷಿಕ ಹೂವಿನ ಕಳೆಗಿಡಗಳಲ್ಲಿ ಸಿ ಎಂ ವಿ ಪ್ರತಿಕೂಲ ಅವಧಿಯನ್ನು ಕಳೆಯುತ್ತವೆ. ಎಷ್ಟೋ ಬಾರಿ ಸ್ವತಃ ಬೆಳೆಯ ಬೇರುಗಳು, ಬೀಜಗಳು ಅಥವಾ ಹೂವುಗಳಲ್ಲೂ ಇರುತ್ತವೆ. ಪ್ರಾಥಮಿಕ ಸೋಂಕುಗಳಲ್ಲಿ, ಹೊಸದಾಗಿ ಹೊರಹೊಮ್ಮಿದ ಮೊಳಕೆಯ ಒಳಗೆ ವೈರಸ್ ವ್ಯವಸ್ಥಿತವಾಗಿ ಬೆಳೆಯುತ್ತದೆ ಮತ್ತು ಮೇಲಿನ ಎಲೆಗಳನ್ನು ತಲುಪುತ್ತದೆ. ಈ ಗಿಡಗಳನ್ನು ತಿನ್ನುವ ಗಿಡಹೇನುಗಳು ವೈರಸ್ ಗಳನ್ನು ಇತರ ಅತಿಥೇಯ ಸಸ್ಯಗಳಿಗೆ ತಲುಪಿಸುತ್ತವೆ (ದ್ವಿತೀಯ ಸೋಂಕು). ಸಸ್ಯದ ಬೇರೆ ಬೇರೆ ಅಂಗಗಳ ನಡುವೆ ಹರಡಲು, ದೂರದ ಪ್ರಯಾಣಕ್ಕಾಗಿ ಅತಿಥೇಯ ಸಸ್ಯಗಳ ನಾಳೀಯ ಅಂಗಾಂಶವನ್ನು ವೈರಸ್ ಬಳಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲದಿಂದ ವೈರಸ್-ಮುಕ್ತ ಬೀಜಗಳು ಮತ್ತು ಸಸಿಗಳನ್ನು ಬಳಸಿ.
  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು (ಪಾಲಕ್ ಮತ್ತು ಕುಕುರ್ಬಿಟ್ಸ್ ಜಾತಿಗೆ ಹಲವು ಲಭ್ಯವಿದೆ) ನೆಡಿ.
  • ಜಮೀನಿನ ಮೇಲ್ವಿಚಾರಣೆ ಮಾಡಿ ಮತ್ತು ರೋಗದ ಲಕ್ಷಣಗಳನ್ನು ಹೊಂದಿರುವ ಸಸ್ಯಗಳನ್ನು ತೆಗೆದುಹಾಕಿ.
  • ಮೊಸಾಯಿಕ್ ಮಾದರಿಯನ್ನು ತೋರಿಸುವ ಯಾವುದೇ ಕಳೆಗಳಿದ್ದರೂ ಅದನ್ನು ತೆಗೆದುಹಾಕಿ.
  • ನಿಮ್ಮ ಬೆಳೆಗಳ ಬಳಿ ಬೆಳೆಯುತ್ತಿರುವ ಕಳೆಗಳನ್ನು ಮತ್ತು ಪರ್ಯಾಯ ಆಶ್ರಯದಾತ ಸಸ್ಯಗಳನ್ನು ತೆಗೆದುಹಾಕಿ.
  • ಸಸ್ಯಕ ಪ್ರಸರಣಕ್ಕಾಗಿ ಬಳಸುವ ಉಪಕರಣಗಳು ಅಥವಾ ಸಲಕರಣೆಗಳು ಸೋಂಕುರಹಿತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಬೆಳೆಗಳ ಆರಂಭಿಕ ಬೆಳವಣಿಗೆಯ ಹಂತದಲ್ಲಿ ವಲಸಿಗ ಗಿಡಹೇನುಗಳನ್ನು ಹೊರಹಾಕಲು ತೇಲು ಹೊದಿಕೆಗಳನ್ನು ಬಳಸಿ.
  • ಗಿಡಗಳ ಈ ಹೆಚ್ಚು ದುರ್ಬಲ ಅವಧಿಯ ನಂತರ ಹೊದಿಕೆಗಳನ್ನು ತೆಗೆದುಹಾಕಿ ಪರಾಗಸ್ಪರ್ಶಕ್ಕೆ ಅನುವು ಮಾಡಿಕೊಡಿ.
  • ಗಿಡಹೇನುಗಳನ್ನು ಆಕರ್ಷಿಸುವ ಸಸ್ಯ ತಡೆಗೋಡೆಗಳನ್ನು ಬೆಳೆಸಿ.
  • ಗಿಡಹೇನುಗಳನ್ನು ಹಿಡಿಯಲು ಜಿಗುಟು ಬಲೆಗಳನ್ನು ಬಳಸಿ.
  • ಅಲ್ಯುಮಿನಿಯಮ್ ಫಾಯಿಲ್ ನಂತಹ ಗಿಡಹೇನು ನಿರೋಧಕ ವಸ್ತುಗಳಿಂದ ನೆಲವನ್ನು ಮುಚ್ಚಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ