ಹುರುಳಿ

ಹುರುಳಿಯ ಸಾಮಾನ್ಯ ಮೊಸಾಯಿಕ್ ವೈರಸ್

BCMV

ವೈರಸ್

ಸಂಕ್ಷಿಪ್ತವಾಗಿ

  • ಎಲೆಯ ಮೇಲೆ ತೆಳು ಮತ್ತು ಕಡು ಹಸಿರು ಬಣ್ಣದ ಮೊಸಾಯಿಕ್ ಮಾದರಿಗಳು (ಹಸಿರಿನ ಮೇಲೆ ಹಸಿರು ಮೊಸಾಯಿಕ್) ಕಾಣಿಸಿಕೊಳ್ಳುತ್ತವೆ.
  • ಎಲೆಗಳ ಭಾಗಗಳು ಉಬ್ಬುತ್ತವೆ, ಸುಕ್ಕಾಗುತ್ತವೆ ಅಥವಾ ವಿಕೃತವಾಗುತ್ತವೆ.
  • ನಂತರದ ಹಂತಗಳಲ್ಲಿ, ಎಲೆಗಳು ಕೆಳಕ್ಕೆ ಸುರುಳಿಯಾಗುತ್ತವೆ ಅಥವಾ ಸುತ್ತಿಕೊಳ್ಳಲು ಪ್ರಾರಂಭಿಸುತ್ತವೆ.
  • ಆರಂಭಿಕ ಬೆಳವಣಿಗೆಯ ಹಂತಗಳಲ್ಲಿ ಸೋಂಕಿಗೆ ಒಳಗಾದ ಸಸ್ಯಗಳ ಬೆಳವಣಿಗೆ ತೀವ್ರವಾಗಿ ಕುಂಠಿತವಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು


ಹುರುಳಿ

ರೋಗಲಕ್ಷಣಗಳು

ಆರಂಭದಲ್ಲಿ, ಮೂರು ದಳಗಳ ಎಲೆಗಳ ಬಣ್ಣ ಸ್ವಲ್ಪ ತೆಳುವಾಗುತ್ತದೆ. ಕ್ರಮೇಣ, ತೆಳು ಮತ್ತು ಗಾಢ ಹಸಿರು ಮೊಸಾಯಿಕ್ ಮಾದರಿಯು ಎಲೆಯ ಮೇಲ್ಮೈ ಗಳಲ್ಲಿ ಕಾಣಿಸಿಕೊಳ್ಳುತ್ತದೆ (ಹಸಿರಿನ ಮೇಲೆ ಹಸಿರು ಮೊಸಾಯಿಕ್). ಕೆಲವು ನಾಳಗಳು ಅಥವಾ ಅವುಗಳ ಭಾಗಗಳು ಹಸಿರು ಬಣ್ಣ ಕಳೆದುಕೊಳ್ಳುತ್ತವೆ (ಹಳದಿ ಬಣ್ಣ). ಕಾಯಿಲೆಯು ಮುಂದುವರೆದಂತೆ, ಎಲೆಗಳ ಭಾಗಗಳು ಸುಕ್ಕಾಗುತ್ತವೆ, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ ಅಥವಾ ವಿರೂಪಗೊಳ್ಳುತ್ತವೆ. ಸುತ್ತಿಕೊಂಡಿರುವ ಅಥವಾ ಸುರುಳಿಯಾದ ಎಲೆಗಳು ತಡವಾಗಿ ಕಾಣಿಸಿಕೊಳ್ಳುವ ಇತರ ಲಕ್ಷಣಗಳಾಗಿವೆ. ಬೆಳವಣಿಗೆಯ ಆರಂಭಿಕ ಹಂತದಲ್ಲಿ ಸೋಂಕಿಗೊಳಗಾದ ಸಸ್ಯಗಳು ತೀವ್ರವಾಗಿ ಕುಂಠಿತಗೊಳ್ಳುತ್ತವೆ ಮತ್ತು ಅನುತ್ಪಾದಕವಾಗುತ್ತವೆ. ಮತ್ತು ಕಡಿಮೆ ಬೀಜಕೋಶಗಳು ಮತ್ತು ಬೀಜಕೋಶಗಳಲ್ಲಿ ಕಡಿಮೆ ಬೀಜಗಳು ಇರಬಹುದು. ಕೆಲವು ಸೂಕ್ಷ್ಮ ಪ್ರಭೇದಗಳಲ್ಲಿ, ವೈರಸ್ ಗಳು ಬೇರುಗಳ ಕಪ್ಪಾಗುವಿಕೆಗೆ ಕಾರಣವಾಗಬಹುದು. ಇದು 30 °C ಗಿಂತ ಅಧಿಕ ತಾಪಮಾನದಲ್ಲಿ ಮಾತ್ರ ಕಂಡುಬರುವ ರೋಗಲಕ್ಷಣ.

ಶಿಫಾರಸುಗಳು

ಜೈವಿಕ ನಿಯಂತ್ರಣ

ವೈರಸ್ ಗೆ ನೇರ ಚಿಕಿತ್ಸೆ ಸಾಧ್ಯವಿಲ್ಲ. ದುರ್ಬಲವಾದ ಖನಿಜ ತೈಲಗಳು ಗಿಡಹೇನುಗಳ ಮೂಲಕ ವೈರಸ್ ಹರಡುವುದನ್ನು ಕಡಿಮೆಗೊಳಿಸುತ್ತವೆ. ಆದರೆ ಹೆಚ್ಚಿನ ಸಾಂದ್ರತೆಗಳಲ್ಲಿ ಈ ತೈಲಗಳು ಸಸ್ಯಗಳಿಗೆ ವಿಷಕಾರಿಯಾಗಬಹುದು.

ರಾಸಾಯನಿಕ ನಿಯಂತ್ರಣ

ಸಂಭವನೀಯ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ವೈರಲ್ ಸೋಂಕುಗಳಿಗೆ ರಾಸಾಯನಿಕ ಚಿಕಿತ್ಸೆ ಸಾಧ್ಯವಿಲ್ಲ. ಗಿಡಹೇನು ವಾಹಕದ ರಾಸಾಯನಿಕ ನಿಯಂತ್ರಣವು ನಿಷ್ಪರಿಣಾಮಕಾರಿಯಾಗಿರುತ್ತದೆ.

ಅದಕ್ಕೆ ಏನು ಕಾರಣ

ಇನಾಕ್ಯುಲಮ್ ನ ಪ್ರಾಥಮಿಕ ಮೂಲ ಸೋಂಕಿತ ಬೀಜ. ಸಸ್ಯದಿಂದ ಸಸ್ಯಕ್ಕೆ ದ್ವಿತೀಯಕ ಪ್ರಸರಣವು ಸೋಂಕಿತ ಪರಾಗ, ವಾಹಕ ಕೀಟಗಳು (ಹೆಚ್ಚಾಗಿ ಗಿಡಹೇನುಗಳು) ಅಥವಾ ಹೊಲದ ಕೆಲಸದ ಸಮಯದಲ್ಲಿ ಸಸ್ಯಗಳಿಗೆ ಆಗುವ ಯಾಂತ್ರಿಕ ಗಾಯದ ಮೂಲಕ ಸಂಭವಿಸುತ್ತದೆ. ಇಳುವರಿಯ ಮೇಲೆ ರೋಗಲಕ್ಷಣಗಳು ಮತ್ತು ಪರಿಣಾಮಗಳು ಸಸ್ಯದ ಪ್ರಭೇದ, ಪರಿಸರ ಪರಿಸ್ಥಿತಿಗಳು (ತಾಪಮಾನ ಮತ್ತು ಆರ್ದ್ರತೆ) ಮತ್ತು ಸೋಂಕಿನ ಸಮಯವನ್ನು ಅವಲಂಬಿಸಿರುತ್ತದೆ. ರನ್ನರ್ ಬೀನ್ಸ್ ಈ ವೈರಸ್ ಗೆ ನಿರೋಧಕವಾಗಿರುವಂತೆ ತೋರುತ್ತದೆ, ಪೋಲ್ ಬೀನ್ಸ್ ಮತ್ತು ಬುಷ್ ಬೀನ್ಸ್ ಹೆಚ್ಚು ದುರ್ಬಲವಾಗಿರುತ್ತದೆ. ವೈರಸ್ (ಬೀಜದಿಂದ-ಹರಡುವ ಸೋಂಕು) ಸೋಂಕಿರುವ ಬೀಜಗಳಿಂದ ಬೆಳೆದ ಸಸ್ಯಗಳಲ್ಲಿ 100% ನಷ್ಚು ನಷ್ಟ ಉಂಟಾಗಬಹುದು. ಗಿಡಹೇನುಗಳಿಂದಾಗುವ ನಂತರದ ಸೋಂಕುಗಳು ಸಾಮಾನ್ಯವಾಗಿ ಕಡಿಮೆ ತೀವ್ರವಾಗಿರುತ್ತದೆ. 30 °C ಕ್ಕಿಂತ ಅಧಿಕ ತಾಪಮಾನದಲ್ಲಿ ರೋಗಲಕ್ಷಣಗಳು ಇನ್ನಷ್ಟು ಉಲ್ಬಣಗೊಳ್ಳುತ್ತವೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಆರೋಗ್ಯಕರ ಬೀಜವನ್ನು ಬಳಸಿ.
  • ಸಾಧ್ಯವಾದಾಗಲೆಲ್ಲಾ ಬೇಗ ಚೇತರಿಸಿಕೊಳ್ಳುವ ಪ್ರಭೇದಗಳನ್ನು ನೆಡಿ.
  • ಗಿಡಹೇನುಗಳು ಮೇಲಾವರಣ ಪ್ರವೇಶಿಸದಂತೆ ತಡೆಯಲು ಸಸ್ಯಗಳನ್ನು ಹತ್ತಿರ ಹತ್ತಿರ ನೆಡಿ.
  • ಗಿಡಹೇನುಗಳ ಅತ್ಯಧಿಕ ಸಂಖ್ಯೆಯನ್ನು ತಪ್ಪಿಸಲು ಬೇಗ ನೆಡಿ.
  • ಮೊದಲು ರೋಗಲಕ್ಷಣಗಳನ್ನು ಗಮನಿಸಿದಾಗಲೇ ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ.
  • ಹುರುಳಿ ಉತ್ಪಾದಿಸುವ ಇತರ ಸ್ಥಳಗಳಿಂದ ದೂರದಲ್ಲಿ ನಿಮ್ಮ ಹುರುಳಿಯನ್ನು ಬೆಳೆಸಿ.
  • ಆಶ್ರಯದಾತವಲ್ಲದ ಸಸ್ಯಗಳೊಂದಿಗೆ ಬೆಳೆ ಸರದಿ ಮಾಡಿ.
  • ಗಿಡಹೇನುಗಳನ್ನು ತಡೆಯಲು ಜೊತೆಗಾರ ಬೆಳೆಗಳನ್ನು ನೆಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ