ಸೇಬು

ಆಪಲ್ ಮೊಸಾಯಿಕ್ ವೈರಸ್

APMV

ವೈರಸ್

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಪ್ರಕಾಶಮಾನವಾದ ಹಳದಿ ಕಲೆಗಳು ಅಥವಾ ಪಟ್ಟಿಗಳು.
  • ಮೊದಲು ರೋಗಲಕ್ಷಣಗಳು ಒಂದೇ ಚಿಗುರಿನಲ್ಲಿ ಕಾಣಿಸಿಕೊಳ್ಳುತ್ತವೆ.
  • ಮರದ ಬೆಳವಣಿಗೆಯು ಕುಂಠಿತವಾಗಿರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

8 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಚೆರ್ರಿ
ಇನ್ನಷ್ಟು

ಸೇಬು

ರೋಗಲಕ್ಷಣಗಳು

ಆರಂಭದಲ್ಲಿ, ಒಂದೇ ಚಿಗುರಿನ ಹೊಸ ಎಲೆಗಳ ಮೇಲಿನ ಪ್ರಮುಖ ನಾಳಗಳ ಉದ್ದಕ್ಕೂ ಪ್ರಕಾಶಮಾನವಾದ ಹಳದಿ ಕಲೆಗಳು ಅಥವಾ ಪಟ್ಟಿಗಳು ಕಾಣಲು ಪ್ರಾರಂಭಿಸುತ್ತವೆ. ರೋಗವು ಹರಡುತ್ತಿದ್ದಂತೆ, ಈ ರೋಗಲಕ್ಷಣಗಳು ಎಲ್ಲಾ ಚಿಗುರುಗಳ ಎಲೆಗಳ ಮೇಲೂ ಕಾಣಿಸಿಕೊಳ್ಳುತ್ತವೆ. ಬಾಧಿತ ಎಲೆಗಳು ಅಕಾಲಿಕವಾಗಿ ಉದುರಬಹುದು. ಮರಗಳ ಬೆಳವಣಿಗೆಯು ಕುಂಠಿತವಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ವೈರಸ್ ಅನ್ನು ಗುಣಪಡಿಸಲು ಸಾಧ್ಯವಿಲ್ಲ. ಇತರ ಮರಗಳಿಗೆ ಹರಡುವುದನ್ನು ತಡೆಯಲು ಸೋಂಕಿತ ಮರವನ್ನು ತೆಗೆದುಹಾಕಬೇಕು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಈ ವೈರಲ್ ಕಾಯಿಲೆಗೆ ಯಾವುದೇ ರಾಸಾಯನಿಕ ಚಿಕಿತ್ಸೆ ಇಲ್ಲ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಆಪಲ್ ಮೊಸಾಯಿಕ್ ವೈರಸ್‌ನಿಂದ ಉಂಟಾಗುತ್ತವೆ. ಇದು ಮರದಿಂದ ಹಿಡಿದು, ಮೂಲಿಕೆ ಸಸ್ಯಗಳವರೆಗೆ ವ್ಯಾಪಕವಾದ ಆಶ್ರಯದಾತ ಸಸ್ಯಗಳನ್ನು ಹೊಂದಿದೆ. ಈ ವೈರಸ್ ಗೆ ನೈಸರ್ಗಿಕ ವಾಹಕ ಇಲ್ಲ. ಸೋಂಕಿತ ಕೊಂಬೆಗಳನ್ನು ಕಸಿ ಮಾಡಲು ಸ್ಲಿಪ್‌ಗಳಂತೆ ಬಳಸಿದಾಗ ವೈರಸ್ ಹರಡುತ್ತವೆ. ವೈರಸ್ ಬೇರುಗಳ ಮೂಲಕವೂ ಹರಡಬಹುದು. ಮಿತವಾದ ವಸಂತಕಾಲದ ತಾಪಮಾನದ ವರ್ಷಗಳಲ್ಲಿ ರೋಗಲಕ್ಷಣಗಳು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ವೈರಸ್-ಮುಕ್ತ ವಸ್ತುಗಳನ್ನು ಬಳಸಿ.
  • ಕಸಿ ಮಾಡಲು ಸೋಂಕಿತ ಮರಗಳ ಸ್ಲಿಪ್‌ಗಳನ್ನು ಬಳಸಬೇಡಿ.
  • ವೈರಸ್ ಹರಡುವಿಕೆಯನ್ನು ಮಿತಿಗೊಳಿಸಲು 24 ರಿಂದ 32 ದಿನಗಳವರೆಗೆ 38 °C ನಲ್ಲಿ ಥರ್ಮೋಥೆರಪಿ ಬಳಸಿ.
  • ನಿಮ್ಮ ಜಮೀನಿನಲ್ಲಿ ಸೋಂಕಿತ ಸಸ್ಯ ಭಾಗಗಳು ಮತ್ತು ಕಳೆಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ