ಕಲ್ಲಂಗಡಿ

ಹತ್ತಿಯಂತಹ ಸೋರಿಕೆ (ಕಾಟನಿ ಲೀಕ್‌)

Pythium aphanidermatum

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಹಣ್ಣಿನ ಮೇಲೆ ಕಂದು ಬಣ್ಣದ, ಮೃದುವಾದ, ಕೊಳೆತ ಪ್ರದೇಶಗಳು.
  • ಹಣ್ಣಿನ ಮೇಲೆ ಬಿಳಿ, ಹತ್ತಿಯಂತಹ ಬೆಳವಣಿಗೆ.
  • ಹೊಸದಾಗಿ ಚಿಗುರಿದ ಸಸಿಗಳು ಸಾಯುವುದು.

ಇವುಗಳಲ್ಲಿ ಸಹ ಕಾಣಬಹುದು

4 ಬೆಳೆಗಳು
ಸೌತೆಕಾಯಿ
ಕಲ್ಲಂಗಡಿ
ಕುಂಬಳಕಾಯಿ
ಝುಕಿನಿ

ಕಲ್ಲಂಗಡಿ

ರೋಗಲಕ್ಷಣಗಳು

ಮಣ್ಣಿನೊಂದಿಗೆ ನೇರ ಸಂಪರ್ಕದಲ್ಲಿರುವ ಹಣ್ಣುಗಳ ಮೇಲೆ ಕಂದು ಬಣ್ಣದ ಕಲೆಗಳಾಗಿ ರೋಗಲಕ್ಷಣಗಳು ಪ್ರಾರಂಭವಾಗುತ್ತವೆ. ಇವು ಮೃದುವಾದ, ಕೊಳೆತ ಪ್ರದೇಶಗಳಾಗಿ ಬೆಳೆಯುತ್ತವೆ. ಆರ್ದ್ರ ಪರಿಸ್ಥಿತಿಗಳಲ್ಲಿ, ಬಿಳಿ, ಹತ್ತಿಯಂತಹ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ ಮತ್ತು ಹಣ್ಣಿನ ಈ ಕೊಳೆತ ಪ್ರದೇಶವನ್ನು ಆವರಿಸುತ್ತದೆ. ನರ್ಸರಿಯಲ್ಲಿ, ಅದೇ ರೋಗಕಾರಕವು ಎಳೆಯ ಮತ್ತು ಹಳೆಯ ಸಸಿಗಳಿಗೆ ಹಾನಿ ಮಾಡಿ, ಅವುಗಳ ಸಾವಿಗೆ ಕಾರಣವಾಗುತ್ತದೆ. ರೋಗಕಾರಕವು ಬೇರುಗಳನ್ನು ಹಾನಿಗೊಳಿಸುತ್ತದೆ ಮತ್ತು ಅವುಗಳು ಕೊಳೆಯಲು ಕಾರಣವಾಗುತ್ತದೆ: ಎಲೆಗಳು ಆಗ ಹಳದಿ ಬಣ್ಣಕ್ಕೆ ತಿರುಗುತ್ತವೆ ಏಕೆಂದರೆ ಸಸ್ಯಕ್ಕೆ ಪೋಷಕಾಂಶಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಪೈಥಿಯಂನಿಂದ ಉಂಟಾಗುವ ಹಣ್ಣು ಕೊಳೆತವು ಫೈಟೊಫ್ಥೊರಾ ಮತ್ತು ಸ್ಕ್ಲೆರೋಟಿನಿಯಾದಿಂದ ಉಂಟಾಗುವ ಹಣ್ಣು ಕೊಳೆತದಂತೆ ಕಾಣಿಸಬಹುದು. ಅವುಗಳನ್ನು ಪ್ರತ್ಯೇಕವಾಗಿ ಗುರುತಿಸಲು ನೆನಪಿಡಿ: ಪೈಥಿಯಂ ಹತ್ತಿ ಅಥವಾ ಶೇವಿಂಗ್ ಕ್ರೀಮ್‌ನಂತೆ ಕಾಣುತ್ತದೆ. ಫೈಟೊಫ್ಥೊರಾ ಹಿಟ್ಟು ಅಥವಾ ಪುಡಿಯಂತೆ ಕಾಣುತ್ತದೆ. ಸ್ಕ್ಲೆರೋಟಿನಿಯಾವು ಕಪ್ಪು, ಗಟ್ಟಿಯಾದ ಕಲೆಗಳಿರುವ ದಪ್ಪವಾದ ಬಿಳಿ ಹತ್ತಿಯಂತಹ ಬೆಳವಣಿಗೆಯನ್ನು ಹೊಂದಿದ್ದು, ಕಾಂಡದ ಮೇಲೂ ಪರಿಣಾಮ ಬೀರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಯಾವುದೇ ಪ್ರಮಾಣೀಕೃತ ಮತ್ತು ಬಳಸಬಹುದಾದ ಜೈವಿಕ ನಿಯಂತ್ರಣವಿಲ್ಲ.

ರಾಸಾಯನಿಕ ನಿಯಂತ್ರಣ

ರೋಗಲಕ್ಷಣಗಳು ಕಾಣಿಸಿಕೊಂಡ ನಂತರ, ಪೀಡಿತ ಸಸಿ ಅಥವಾ ಹಣ್ಣುಗಳನ್ನು ಉಳಿಸಲು ಸಾಧ್ಯವಿಲ್ಲ. ಸೋಂಕನ್ನು ತಡೆಗಟ್ಟಲು, ಬೀಜಗಳು ಮತ್ತು ಮೊಳಕೆಗಳಿಗೆ ರಾಸಾಯನಿಕ ಚಿಕಿತ್ಸೆಯನ್ನು ಮಾಡಿ. ನಾಟಿ ಮಾಡುವ ಮೊದಲು ಬೀಜಗಳನ್ನು ಸಂಸ್ಕರಿಸಿ ಮತ್ತು ಶಿಫಾರಸು ಮಾಡಿದ ಸಾಂದ್ರತೆಯಲ್ಲಿ ಸಸಿಗಳನ್ನು ಅದ್ದಿರಿ. ಹೆಚ್ಚುವರಿಯಾಗಿ, ಮೇಲ್ಮೈ ಮಣ್ಣಿನ ಚಿಕಿತ್ಸೆಗಳನ್ನು ಬಳಸಿ. ಈ ಚಿಕಿತ್ಸೆಗಳ ಪರಿಣಾಮಕಾರಿತ್ವವು ನೀರಾವರಿ ಅಥವಾ ಮಳೆಯ ಮೂಲಕ ಮಣ್ಣಿನ ಮೇಲಿನ ಪದರದೊಳಗೆ ಹರಡುವ ಶಿಲೀಂಧ್ರನಾಶಕವನ್ನು ಅವಲಂಬಿಸಿರುತ್ತದೆ.

ಅದಕ್ಕೆ ಏನು ಕಾರಣ

ಹತ್ತಿಯಂತಹ ಸೋರಿಕೆಗೆ ಕಾರಣವಾಗುವ ರೋಗಕಾರಕವು ಮಣ್ಣಿನಲ್ಲಿ ವಾಸಿಸುತ್ತದೆ! ಇದು ಬಿಸಿ, ಆರ್ದ್ರ ವಾತಾವರಣದಲ್ಲಿ ಹೆಚ್ಚು ಚೆನ್ನಾಗಿ ಅಭಿವೃದ್ಧಿ ಹೊಂದುತ್ತದೆ ಮತ್ತು ನಿಂತ ನೀರನ್ನು ಇಷ್ಟಪಡುತ್ತದೆ. ಇದು ನೀರಾವರಿ ನೀರಿನಿಂದ ಹರಡುತ್ತದೆ. ಇದು ಸುಲಭವಾಗಿ ಸಸ್ಯದ ಜೀವಕೋಶಗಳಿಗೆ ಪ್ರವೇಶಿಸುತ್ತದೆ ಮತ್ತು ಸಸ್ಯ ಪೋಷಕಾಂಶಗಳನ್ನು ಹೀರಿಕೊಳ್ಳದಂತೆ ತಡೆಯುತ್ತದೆ ಮತ್ತು ಪೀಡಿತ ಭಾಗಗಳನ್ನು ಕೊಳೆಯಿಸುತ್ತದೆ. ಸಮರುವಿಕೆ, ತೆಳುಗೊಳಿಸುವಿಕೆ ಅಥವಾ ಎಲೆಗಳನ್ನು ತೆಗೆದುಹಾಕುವುದರಿಂದ ಉಂಟಾಗುವ ಗಾಯಗಳು, ರೋಗಕಾರಕವನ್ನು ಸುಲಭವಾಗಿ ಹರಡಲು ಅನುವು ಮಾಡಿಕೊಡುವ ಮೂಲಕ ಸಸ್ಯಗಳು ಈ ರೋಗಕ್ಕೆ ಹೆಚ್ಚಾಗಿ ಒಳಗಾಗುವಂತೆ ಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಮಣ್ಣಿನಲ್ಲಿ ನೀರಿನ ಇಂಗುವಿಕೆ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಸಾಧ್ಯವಾದರೆ ಎತ್ತರಿಸಿದ ಸಸಿಮಡಿಗಳು ಮತ್ತು ಹನಿ ನೀರಾವರಿ ಬಳಸಿ.
  • ಹುಲ್ಲು ಮತ್ತು ಧಾನ್ಯಗಳಂತಹ ಆಶ್ರಯದಾತವಲ್ಲದ ಸಸ್ಯಗಳೊಂದಿಗೆ ಬೆಳೆ ಸರದಿ ಮಾಡಿ.
  • ತಂಪಾದ ದಿನಗಳಲ್ಲಿ ನೆಡಿ.
  • ದಟ್ಟವಾದ ಬಳ್ಳಿಯ-ಪದರವನ್ನು ತಪ್ಪಿಸಲು ಸಸ್ಯಗಳ ನಡುವೆ ಸಾಕಷ್ಚು ಅಂತರ ಕಾಪಾಡಿ.
  • ಹಣ್ಣುಗಳು ಮತ್ತು ಮಣ್ಣಿನ ನಡುವೆ ತಡೆಗಳನ್ನು ರಚಿಸಿ.
  • ಇದು ಸಣ್ಣ ಬೆಳೆಗಾರರಿಗೆ ಹೆಚ್ಚು ಪ್ರಾಯೋಗಿಕವಾಗಿದೆ.
  • ಹಣ್ಣುಗಳನ್ನು ತಂತಿ, ಮರ ಅಥವಾ ಬಳ್ಳಿಗಳ ಮೇಲೆ ಇರಿಸಿ.
  • ಒಣ ಪ್ರದೇಶಗಳಲ್ಲಿ ಹನಿ ನೀರಾವರಿಯೊಂದಿಗೆ ಪ್ಲಾಸ್ಟಿಕ್ ಮಲ್ಚ್ಅನ್ನು ಬಳಸಿ, ಆದರೆ ಮಳೆಯ ಪ್ರದೇಶಗಳಲ್ಲಿ ಜಾಗರೂಕರಾಗಿರಿ.
  • ಏಕೆಂದರೆ ಅದು ನೀರನ್ನು ಹಿಡಿದಿಟ್ಟುಕೊಳ್ಳಬಹುದು ಮತ್ತು ಕೊಳೆತವನ್ನು ಉಂಟುಮಾಡಬಹುದು.
  • ಬ್ಲೀಚ್ ದ್ರಾವಣದಿಂದ ನಿಮ್ಮ ಉಪಕರಣಗಳು, ಮಡಕೆಗಳು ಮತ್ತು ಟ್ರೇಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಮತ್ತು ಸೋಂಕುರಹಿತಗೊಳಿಸಿ.
  • ಕಲುಷಿತ ಮಣ್ಣನ್ನು ಬಳಸ ಬೇಡಿ.
  • ಒದ್ದೆ ವಾತಾವರಣದಲ್ಲಿ ಕೊಯ್ಲು ಮಾಡಬೇಡಿ ಮತ್ತು ಕೊಯ್ಲು ಮಾಡಿದ ಹಣ್ಣುಗಳನ್ನು ಪ್ಯಾಕ್ ಮಾಡಬೇಡಿ.
  • ಆರೋಗ್ಯಕರವಾಗಿ ಕಾಣುವ ಹಣ್ಣುಗಳನ್ನು ಮಾತ್ರ ಕೊಯ್ಲು ಮಾಡಿ ಮತ್ತು ಪ್ಯಾಕ್ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ