Rhizoctonia solani
ಶಿಲೀಂಧ್ರ
ನೆಲಕ್ಕೆ ಹತ್ತಿರವಿರುವ ಸೊಪ್ಪಿನ ಮೇಲ್ಬಾಗದಲ್ಲಿ ಸಣ್ಣ 2-3 ಮಿಲಿಮೀಟರ್‌ನ ಬಿಳಿ ಅಥವಾ ಕಂದುಬಣ್ಣದ ಮೂಲ ಗಾಯಗಳು ಕಾಣಿಸಿಕೊಳ್ಳುತ್ತವೆ. ರೋಗ ಉಲ್ಭಣಿಸಿದಂತೆ ಹೊರಮುಖವಾಗಿ ಹಬ್ಬುತ್ತಾ ಹೋಗುತ್ತದೆ. ಮೂಲ ಗಾಯಗಳ ಸುತ್ತ ಕೊಳೆತ ಉಂಗುರಗಳು ಉಂಟಾಗುತ್ತವೆ. ಹೊಲದಲ್ಲಿ ಟಾರ್ಗೆಟ್ ಸ್ಪಾಟ್ ಮೊದಲು ಕೆಳಗಿನ, ಹಳೆಯ ಎಲೆಗಳಿಂದ ಶುರುವಾಗಿ ಸಮಯ ಕಳೆದಂತೆ ಮೇಲ್ಬಾಗದ ಎಲೆಗಳಿಗೆ ಹರಡುತ್ತದೆ.
ಆರ್. ಸೋಲಾನಿ ವಿರುಧ್ಧ ಜೈವಿಕ ನಾಶಕ ಪರಿಣಾಮಕಾರಿಯಾಗಿರುವುದು ಟ್ರೈಚೋಡೆರ್ಮಾ ಎಸ್.ಪಿ ಟಿ. ಹರ್ಝಿಯನುಮ್ ಅನ್ನು ಬೇರ್ಪಡಿಸುವುದರ ಮೂಲಕ ಆರ್. ಸೋಲಾನಿ ಬೆಳವಣಿಗೆಯನ್ನು ತಡೆದು ಈ ರೋಗ ತಂಬಾಕು ಗಿಡಗಳಲ್ಲಿ ಹರಡುವುದನ್ನು ನಿಯಂತ್ರಿಸುವುದು ದೃಢಪಟ್ಟಿದೆ.
ಯಾವಾಗಲೂ ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಯ ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳ ಸಮಗ್ರ ಮಾರ್ಗವನ್ನು ಆಯ್ದುಕೊಳ್ಳಿ. ಶಿಲೀಂಧ್ರದಿಂದಾದ ಎಲೆ ಚುಕ್ಕೆಗಳಿಗೆ ಎಲೆಗಳಿಗೆ ಸಿಂಪಡಿಸುವ ಮ್ಯಾಂಕೋಝೆಬ್ ಮತ್ತು ಅಝೋಕ್ಸಿಸ್ಟ್ರೋಬಿನ್ನನ್ನು ಸಿಂಪಡಿಸಬಹುದು.
ಮಣ್ಣಿನಲ್ಲಿರುವ ಆರ್. ಸೋಲಾನಿ ಎಂಬ ರೋಗಕಾರಕದಿಂದ ಈ ತೊಂದರೆ ಉಂಟಾಗುತ್ತದೆ. ಈ ಶಿಲೀಂಧ್ರ ಪ್ರಮುಖವಾಗಿ ಹೈಫೆ ಅಥವಾ ಸ್ಕ್ಲೆರೋಶಿಯಾ ರೂಪದಲ್ಲಿ ಮಣ್ಣಿನಲ್ಲಿರುತ್ತದೆ. ರೋಗಲಕ್ಷಣಗಳಿರುವ ಹಸಿರು ಮನೆ ಕಸಿಗಳಿಂದ ಈ ರೋಗ ಹರಡಬಹುದು ಅಥವ ಹೊಲದ ಸುತ್ತಮುತ್ತ ಸ್ವಾಭಾವಿಕವಾಗೇ ಇರುವ ಟಾರ್ಗೆಟ್ ಸ್ಪಾಟ್ ಶಿಲೀಂಧ್ರದಿಂದ ಸೋಂಕು ಉಂಟಾಗಬಹದು. ಸಮಶೀತೋಷ್ಣ, ಹೆಚ್ಚಿನ ಆರ್ದ್ರತೆ ಅಥವಾ ಹೆಚ್ಚಿನ ಸಮಯ ಎಲೆಗಳು ಹಸಿಯಾಗಿರುವಂತ ಸಂದರ್ಭಗಳು ಈ ರೋಗಕ್ಕೆ ಅನುಕೂಲಕರ. ಸರಿಯಾದ ನಿರ್ವಹಣೆ ಮಾಡದಿದ್ದಲ್ಲಿ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ.