ತೊಗರಿ ಬೇಳೆ & ಮಸೂರ್ ಬೇಳೆ

ತೊಗರಿಯ ಫಿಲೋಸ್ಟಿಕ್ಟಾ ಎಲೆ ಚುಕ್ಕೆ

Phoma cajanicola

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲಿನ ಗಾಯಗಳು.
  • ಹಲವಾರು ಸಣ್ಣ, ಕಪ್ಪು ಚುಕ್ಕೆಗಳು.

ಇವುಗಳಲ್ಲಿ ಸಹ ಕಾಣಬಹುದು


ತೊಗರಿ ಬೇಳೆ & ಮಸೂರ್ ಬೇಳೆ

ರೋಗಲಕ್ಷಣಗಳು

ವೃತ್ತಾಕಾರದ, ಅಂಡಾಕಾರದ ಮತ್ತು ಅನಿಯಮಿತ ಅಥವಾ ವಿ-ಆಕಾರದ ಗಾಯಗಳು ಎಲೆಗಳ ಮೇಲೆ ಸಂಭವಿಸುತ್ತವೆ. ಗಾಯಗಳು ಬೂದು ಅಥವಾ ಕಂದು ಬಣ್ಣದಲ್ಲಿರುತ್ತವೆ ಮತ್ತು ಕಿರಿದಾದ, ಗಾಢ ಬಣ್ಣದ ಅಂಚು ಹೊಂದಿರುತ್ತವೆ. ಹಳೆಯ ಗಾಯಗಳಲ್ಲಿ, ಹಲವಾರು ಸಣ್ಣ ಕಪ್ಪು ಚುಕ್ಕೆಗಳಿರುತ್ತವೆ (ಪೈಕ್ನಿಡಿಯಲ್ ಬಾಡೀಸ್ ಎಂಬ ಅಲೈಂಗಿಕ ಬೀಜಕಗಳನ್ನು ಹರಡುವ ಸಾಧನಗಳು).

ಶಿಫಾರಸುಗಳು

ಜೈವಿಕ ನಿಯಂತ್ರಣ

ರೋಗವನ್ನು ಯಶಸ್ವಿಯಾಗಿ ನಿಯಂತ್ರಿಸಲು, ಯಾವುದೇ ಜೈವಿಕ ವಿಧಾನಗಳು ಇನ್ನೂ ತಿಳಿದಿಲ್ಲ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ನಿಯಂತ್ರಿತ ಉತ್ಪನ್ನಗಳನ್ನು ಎಲೆಗಳ ಮೇಲೆ ಚುಕ್ಕೆಗಳು ಕಾಣಿಸಿಕೊಳ್ಳಲು ಆರಂಭಿಸಿದ ತಕ್ಷಣ ಬಳಸಬೇಕು.

ಅದಕ್ಕೆ ಏನು ಕಾರಣ

ಫಿಲೋಸ್ಟಿಕ್ಟಾ ಕ್ಯಾಜಾನಿಕೋಲಾ ಎಂಬ ಶಿಲೀಂಧ್ರದಿಂದ ಹಾನಿ ಉಂಟಾಗುತ್ತದೆ. ಎಲೆಗಳ ಮೇಲೆ ಫ್ರುಟಿಂಗ್ ಮಾಡಿದಾಗ ಈ ಕುಲವನ್ನು ಫಿಲೋಸ್ಟಿಕ್ಟಾ ಎಂದು ಕರೆಯಲಾಗುತ್ತದೆ. ಆದರೆ ಸಸ್ಯದ ಇತರ ಭಾಗಗಳಲ್ಲಿ ಉಂಟಾದಾಗ ಫೋಮಾ ಎಂದು ವರ್ಗೀಕರಣ ಮಾಡಲಾಗುತ್ತದೆ. ಶಿಲೀಂಧ್ರವು ಸೋಂಕಿತ ಬೆಳೆಗಳ ಅವಶೇಷಗಳಲ್ಲಿ ಉಳಿದುಕೊಂಡಿರುತ್ತದೆ ಮತ್ತು ಬೀಜಗಳ ಮೂಲಕ ಹರಡುತ್ತದೆ. ಬೆಚ್ಚಗಿನ, ಆರ್ದ್ರ ಪರಿಸ್ಥಿತಿಗಳು ರೋಗದ ಬೆಳವಣಿಗೆಗೆ ಅನುಕೂಲಕರವಾಗಿವೆ.


ಮುಂಜಾಗ್ರತಾ ಕ್ರಮಗಳು

  • ಶಿಲೀಂಧ್ರದ ಬದುಕುಳಿಯುವಿಕೆಯನ್ನು ಕಡಿಮೆ ಮಾಡಲು ಬೆಳೆ ಸರದಿ ಮತ್ತು ನಿಯಮಿತ ಉಳುಮೆಯನ್ನು ಅಭ್ಯಾಸ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ