ಕಡಲೆಕಾಯಿ

ಮೆಣಸಿನ ಕಲೆ ಮತ್ತು ಸುಡು ರೋಗ

Leptosphaerulina arachidicola

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ತುದಿಯಲ್ಲಿ ದೊಡ್ಡ V-ಆಕಾರದ ಸುಟ್ಟ ಕಲೆಯ ಜಾಗಗಳು ಉಂಟಾಗುತ್ತವೆ.
  • ಮೆಣಸಿನ ಕಲೆ ಚಿಕ್ಕ ದಟ್ಟ ಗಾಯಗಳಾಗಿ ಕಾಣಿಸಿಕೊಂಡು (1 ಮಿಲಿಮೀಟರ್‌ಗಿಂತ ಕಮ್ಮಿ) ಎಲೆಗಳ ಮೇಲ್ಭಾಗದಲ್ಲಿ ಬೆಳೆಯುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಕಡಲೆಕಾಯಿ

ರೋಗಲಕ್ಷಣಗಳು

ಮೆಣಸಿನ ಕಲೆಯ ಹಂತದ ಲಕ್ಷಣ ಎಂದರೆ ಮಣ್ಣಿನ ಮೇಲ್ಭಾಗದ ಹತ್ತಿರವಿರುವ ಎಲೆಗಳ ಮೇಲೆ ಚಿಕ್ಕ ಕೊಳೆತ ಕಲೆಗಳು ಇರುವುದು. ಕಲೆಗಳು ಸಿಕ್ಕಾಪಟ್ಟೆ ಇದ್ದು ಚಿಕ್ಕ ಕಾಳಿನ ಗಾತ್ರವಿರುತ್ತವೆ. ಎಲೆಯ V-ಆಕಾರದ ಭಾಗ ಸತ್ತು ಅದರ ಪಕ್ಕಕ್ಕೆ ಹಳದಿ ಪ್ರದೇಶ ಕಾಣಿಸಿಕೊಳ್ಳುವಾಗ ಸುಡುವಿಕೆ ಉಂಟಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಪ್ರತಿರೋಧಕ ತಳಿಗಳನ್ನು ನೆಡಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಲಭ್ಯವಿರುವ ಜೈವಿಕ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನೊಳಗೊಂಡ ಸಮಗ್ರವಾದ ಮಾರ್ಗವನ್ನು ಆಯ್ದುಕೊಳ್ಳಿ. ಗಿಡದ ಸೊಪ್ಪಿಗೆ ತಗಲುವ ಕ್ಲೋರೋಥಲೋನಿಲ್‌ನಂತಹ ರೋಗಗಳ ನಿಯಂತ್ರಣಕ್ಕೆ ಬಳಸುವ ಶಿಲೀಂದ್ರ ನಾಶಕಗಳನ್ನು ಬಳಸಿ. ಬೇರಾವುದೇ ರೋಗ ಇಲ್ಲವಾದಲ್ಲಿ ಸಂರಕ್ಷಕ ಶಿಲೀಂಧ್ರ ನಾಶಕವನ್ನು ಬಳಸಿ.

ಅದಕ್ಕೆ ಏನು ಕಾರಣ

ಲೆಪ್ಟೋಸ್ಫೇರುಲಿನಾ ಅರಾಕಿಡಿಕೋಲಾ ಎಂಬ ಶಿಲೀಂಧ್ರದಿಂದ ಈ ತೊಂದರೆ ಉಂಟಾಗುತ್ತದೆ. ಶೇಂಗಾದ ಉಳಿಕೆಗಳಲ್ಲಿ ಇದು ಬದುಕುಳಿದು ಗಾಳಿಯ ಮೂಲಕ ಹರಡುತ್ತದೆ. ಕೊಳೆತ ಎಲೆಯ ಅಂಗಾಂಶದಲ್ಲಿ ಸೂಡೋಥೆಸಿಯಾ ಯಥೇಚ್ಛವಾಗಿ ಬೆಳೆಯುತ್ತದೆ. ಇಬ್ಬನಿ ನಿಂತು ಮಳೆ ಬೀಳುವ ಕಾಲ, ಹೊರಬಿದ್ದ ಬೀಜಕಗಳು ಹೆಚ್ಚಿನ ಮಟ್ಟದಲ್ಲಿ ಹರಡುವ ಸಮಯವಾಗಿದೆ.


ಮುಂಜಾಗ್ರತಾ ಕ್ರಮಗಳು

  • ಬೇಗ ಬಿತ್ತವುದು ಮತ್ತು ಬೆಳೆ ಸರದಿಯನ್ನು ರೂಡಿಸಿಕೊಳ್ಳಿ.
  • ರೋಗಕಾರಕಗಳ ಸಂಖ್ಯೆ ಹೆಚ್ಚಾಗುವುದು ಮತ್ತು ಅವು ಹರಡುವುದನ್ನು ಕಡಿಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ