Fusarium moniliforme
ಶಿಲೀಂಧ್ರ
ರೋಗ ಮೂರು ಪ್ರಮುಖ ಹಂತಗಳಲ್ಲಿ ಸಂಭವಿಸುತ್ತದೆ. ಚಿಗುರೆಲೆಗಳ ಬುಡದಲ್ಲಿ ಬಣ್ಣ ಮಾಸಿದ ಮಚ್ಚೆಗಳು ಕಾಣಿಸಿಕೊಳ್ಳುವುದು ಮೊದಲ ಲಕ್ಷಣ. ಜೊತೆಗೆ ಮೊದಲ ಹಂತದಲ್ಲಿ ಕೆಲವೊಮ್ಮೆ ಎಲೆಯ ಬೇರೆ ಭಾಗದಲ್ಲೂ ಕಾಣಿಸಿಕೊಳ್ಳುತ್ತದೆ. ಎಲೆಗಳು ಸುಕ್ಕು ಬಿದ್ದು, ತಿರುಚಿಕೊಂಡು ಗಿಡ್ಡವಾಗಿರುತ್ತವೆ. ಅನೇಕ ವೇಳೆ ರೋಗಪೀಡಿತ ಎಲೆಗಳ ಬುಡ ಬೇರೆ ಎಲೆಗಳಿಗಿಂತ ಚಿಕ್ಕದಾಗಿರುತ್ತದೆ. ಮೇಲೆ ಕೊಳೆಯುವ ಹಂತ ತುಂಬಾ ಗಂಭೀರವಾದುದು. ಈ ಹಂತದಲ್ಲಿ ಎಲೆಗಳು ವಿರೂಪಗೊಂಡು ತಿರುಚಿಕೊಳ್ಳುತ್ತವೆ. ಕೆಂಪು ಚುಕ್ಕೆಗಳು ಕರಗಿ ಇಡೀ ಕದರಿನ ಬುಡ ಕೊಳೆತು ಒಣಗಿ ಹೋಗುತ್ತದೆ. ರೋಗ ತೀವ್ರವಿದ್ದಲ್ಲಿ ಮೊಗ್ಗುಗಳು ಚಿಗುರುತ್ತವೆ ಮತ್ತು ಕಾಂಡದ ಮೇಲ್ತುದಿ ಗಂಭೀರವಾಗಿ ಜಖಂ ಆಗುತ್ತದೆ. ಕೊಡಲಿ ಪೆಟ್ಟು ಎಂದು ಕರೆಯುವ ಮೂರನೇ ಹಂತದಲ್ಲಿ ಕಾಂಡದ ತೊಗಟೆಯಲ್ಲಿ ಕಚ್ಚುಗಳು ಕಂಡುಬರುತ್ತವೆ. ಎಲೆಗಳನ್ನ ಸವರಿದಾಗ ದೊಡ್ಡ ಎದ್ದು ಕಾಣುವಂತಹ ಬಣ್ಣ ಮಾಸಿದ ಕಲೆಗಳು ಕಾಂಡದ ಮೇಲೆ ನೋಡಲು ಸಿಗುತ್ತವೆ.
ಪ್ರತಿರೋಧಕ ಅಥವಾ ಸಾಧಾರಣ ಪ್ರತಿರೋಧಕ ಪ್ರಭೇದಗಳು ಲಭ್ಯವಿದ್ದರೆ ಅವುಗಳನ್ನೇ ನೆಡಿ.
ಯಾವಾಗಲೂ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಲಭ್ಯವಿರುವ ಜೈವಿಕ ಚಿಕಿತ್ಸೆಗಳಿಂದ ಕೂಡಿದ ಸಮಗ್ರವಾದ ಮಾರ್ಗವನ್ನು ಆಯ್ದುಕೊಳ್ಳಿ. ಪೊಕ್ಕಾ ಬೊಯೆಂಗ್ ರೋಗವನ್ನ ಪರಿಣಾಮಕಾರಿಯಾಗಿ ತಗ್ಗಿಸಲು ಕಾಪರ್ ಆಕ್ಸಿಕ್ಲೋರೈಡ್ (copper oxychloride) ತರಹದ ಶಿಲೀಂಧ್ರನಾಶಕಗಳನ್ನ ಬಳಸಿ.
ಈ ತೊಂದರೆಗೆ ಕಾರಣ ಹಲವು ಬಗೆಯ ಫ್ಯುಸಾರಿಯಮ್ ಪ್ರಭೇದಗಳು: ಫ್ಯುಸಾರಿಯಮ್ ಸಬ್‌ಗ್ಲುಟಿನಾನ್ಸ್ (fusarium subglutinans), ಫ್ಯುಸಾರಿಯಮ್ ಸಚ್ಚಾರಿ (fusarium sacchari), ಫ್ಯುಸಾರಿಯಮ್ ಮೊನಿಲಿಫೋರ್ಮೆ ಶೆಲ್ಡನ್ (fusarium moniliforme Sheldon). ರೋಗಕಾರಕಗಳು ಪ್ರಮುಖವಾಗಿ ಗಾಳಿಯ ಮೂಲಕ ಹರಡುತ್ತವೆ ಮತ್ತು ಗಾಳಿಯಲ್ಲಿನ ಬೀಜಕಗಳು ಕೀಟ ಕಚ್ಚಿದ ಗಾಯ, ಕೊರಕ ಅಥವಾ ಇನ್ಯಾವುದೇ ಸ್ವಾಭಾವಿಕ ಬಿರುಕುಗಳಿಂದ ಎಲೆ, ಹೂವು, ಕಾಂಡಗಳನ್ನ ಮನೆ ಮಾಡಿಕೊಳ್ಳುತ್ತವೆ. ಎರಡನೇ ಹಂತದ ಹರಡುವಿಕೆ ರೋಗಪೀಡಿತ ಗಿಡ, ನೀರಾವರಿ ನೀರು, ಮಳೆಯ ಎರಚಲು, ನೀರು ಮತ್ತು ಮಣ್ಣಿನ ಮೂಲಕ ಆಗುತ್ತದೆ. ಸಾಮಾನ್ಯವಾಗಿ ರೋಗ ಕದಿರಿನ ಮೂಲಕ ಅರೆ ಚಾಚಿರುವ ಎಲೆಯಗುಂಟ ಸಂಭವಿಸುತ್ತದೆ. ಕದಿರಿನ ಒಳ ಸೇರುವ ಬೀಜಕಗಳು ಮರಿಯಾಗಿ ಕದಿರನ ಎಲೆಯ ಒಳಕ್ಕೆ ಬೆಳೆಯುತ್ತವೆ. ಇದರಿಂದಾಗಿ ಎಲೆಗಳು ವಿರೂಪವಾಗಿ ಕುಗ್ಗುತ್ತವೆ. ಬೀಜಕಗಳ ಹರಡುವಿಕೆ ವಾತಾವರಣದ ಹಲವಾರು ಅಂಶಗಳ ಮೇಲೆ ಅವಲಂಬಿಸಿದೆ ಮತ್ತು ಬೇಸಿಗೆಯಿಂದ ಆರ್ದ್ರತೆಯ ಕಾಲದಲ್ಲಿ ಇದರ ಹಾವಳಿ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಎಲೆಗಳ ನಂಜು ವೇಗವಾಗಿ ವೃದ್ಧಿಸುತ್ತದೆ ಮತ್ತು ಪ್ರತಿರೋಧಕ ಪ್ರಭೇದಗಳಲ್ಲೂ ಕೂಡ ಒಂದೊಂದು ಸಲ ರೋಗ ಲಕ್ಷಣ ಕಂಡುಬರುತ್ತದೆ. ಸ್ವಾಭಾವಿಕ ಸ್ಥಿತಿಗಳಲ್ಲಿ ರೋಗಕಾರಕಗಳು 12 ತಿಂಗಳುಗಳ ಕಾಲ ಜೀವಂತವಾಗಿರಬಲ್ಲವು.