Hemileia vastatrix
ಶಿಲೀಂಧ್ರ
ಇದರ ಮೊದಲ ಲಕ್ಷಣ ಅಂದರೆ ಕಾಫಿ ಎಲೆಗಳ ಮೇಲೆ 2-3 ಮಿಲಿಮೀಟರ್‌ನ ಹಳದಿ ಚುಕ್ಕೆ ಉಂಟಾಗುವುದು. ಈ ಚುಕ್ಕೆಗಳು ಇನ್ನೂ ದೊಡ್ಡವಾಗುತ್ತಾ ದಟ್ಟ ಕೇಸರಿ ಬಣ್ಣದಿಂದ ಕೆಂಪು ಬಣ್ಣಕ್ಕೆ ಕೊನೆಯದಾಗಿ ಹಳದಿ ಅಂಚಿನ ಕಂದು ಬಣ್ಣಕ್ಕೆ ತಿರುಗುತ್ತವೆ. ಎಲೆಗಳ ಕೆಳಭಾಗದಲ್ಲಿ, ಆಯಾ ಚುಕ್ಕೆಗಳು ಹಿಟ್ಟಿನ ರೀತಿ ಕಾಣುವ, ಕೇಸರಿಯಿಂದ ಕಂದುಬಣ್ಣದವರೆಗೂ ಇರುವ ಬೀಜಕಗಳನ್ನು ಉತ್ಪಾದಿಸತೊಡಗುತ್ತವೆ. ಕೊನೆಗೆ ಎಲೆಗಳು ಗಿಡದಿಂದ ಉದುರುತ್ತವೆ. ಎಲೆಗಳು ಇಲ್ಲದೇ ದ್ಯುತಿಸಂಶ್ಲೇಷಣೆ ನಡೆಯದ ಕಾರಣ ಗಿಡಗಳು ಪೋಷಕಾಂಶಗಳ ಕೊರತೆಯಿಂದ ಬಳಲಿ ಕಾಫಿ ಇಳುವರಿ ಸಾಕಷ್ಟು ಕಮ್ಮಿಯಾಗುತ್ತದೆ.
ಈ ರೋಗದ ನಿಯಂತ್ರಣಕ್ಕೆ ವಾಣಿಜ್ಯ ಜೈವಿಕ ನಿಯಂತ್ರಣದ ತಂತ್ರಗಳು ಅಷ್ಟಾಗಿ ಲಭ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸುವುದು ಈ ರೋಗದ ನಿಯಂತ್ರಣದಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
ಯಾವಾಗಲೂ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಯ ಜೊತೆಗೆ ಸಮಗ್ರವಾದ ಮಾರ್ಗವನ್ನು ಆಯ್ದುಕೊಳ್ಳಿ. ಬೋರ್ಡ್ಯೂ (Bordeaux) ಮಿಶ್ರಣ ಅಥವಾ ಕಾಪರ್ ಅಕ್ಸಿಕ್ಲೋರೈಡ್ 50%WG (Copper Oxychloride 50% WG) ರೋಗನಿರೋಧಕವನ್ನ ಸಿಂಪಡಿಸಬಹುದು. ರೋಗಕ್ಕೆ ಅನುಕೂಲಕರ ವಾತಾವರಣದ ಅಂಶಗಳು ಸೇರುವ ಮುನ್ನ ಒಂದು ಬಾರಿ ಮತ್ತು ಅದರ ನಂತರ ಒಂದು ಬಾರಿ.
ಈ ತೊಂದರೆಗೆ ಕಾರಣ ಹೆಮಿಲೇಯ ವ್ಯಾಸ್ಟ್ಯಾಟ್ರಿಕ್ಸ್ (hemileia vastatrix) ಎನ್ನುವ ಶಿಲೀಂಧ್ರ. ಕಾಫಿ ಕಿಲುಬು ತುಂಬಾ ಬೇಗ ಹರಡುತ್ತದೆ ಮತ್ತು ವಾತಾವರಣದ ಅಂಶಗಳೂ ಶಿಲೀಂಧ್ರ ಹರಡುವುದರ ಮೇಲೆ ಮುಖ್ಯ ಪಾತ್ರ ವಹಿಸುತ್ತವೆ. ಪ್ರಧಾನವಾಗಿ ಇದು ಹರಡುವ ವಿಧಾನ ಎಂದರೆ ಗಾಳಿ ಅಥವಾ ನೀರಿನ ಮೂಲಕ. ಧೂಳು ಮತ್ತು ಶಿಲೀಂಧ್ರದ ಬೀಜಕಗಳು ಒಂದು ತೋಟದಿಂದ ತೇಲಿಕೊಂಡು ಇನ್ನೊಂದು ತೋಟಕ್ಕೆ ಅಂಟಿಕೊಂಡಾಗ ಅಥವಾ ಬೀಜಕಗಳು ನೆಲಕ್ಕೆ ಬಿದ್ದು ಮಳೆ ನೀರಿನ ಮೂಲಕ ಮತ್ತೊಂದು ತೋಟ ಸೇರಿದಾಗ ಈ ರೋಗ ಹರಡುತ್ತದೆ. ತೇವದ ವಾತಾವರಣದಲ್ಲಿ ಕಾಫಿಕಿಲುಬು ವೃದ್ಧಿಯಾಗುತ್ತದೆ ಮತ್ತು ಎಲೆಗಳ ಮೇಲೆ ಬಿದ್ದು ಸುತ್ತಲೂ ಸಿಡಿಯುವ ಮಳೆ ನೀರು ಈ ರೋಗ ಗಿಡದಿಂದ ಗಿಡಕ್ಕೆ ಹರಡಲು ಸಹಾಯ ಮಾಡುತ್ತದೆ. ರೋಗ ಹಿಡಿದ ಗಿಡದ ಕಾಫಿ ಹಣ್ಣುಗಳು ಕುಂದಿ ಹುಗುರವಾಗಬಹುದು. ತೀವ್ರ ರೋಗದ ಸ್ಪೋಟ ಇರುವ ಕಡೆ ಕಾಫಿ ಕಿಲುಬಿನ ಸ್ಫೋಟದಿಂದ 75% ಕ್ಕಿಂತ ಹೆಚ್ಚು ಇಳುವರಿ ನಷ್ಟವಾಗಬಹುದು.