ಬಾರ್ಲಿ

ಬಾರ್ಲಿಯ ಮಸಿ ಪದರ ರೋಗ

Ustilago segetum var. hordei

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕಪ್ಪು ಕಾಳುಗಳು.
  • ಸುಕ್ಕಾದ ಕುಗ್ಗಿದ ಮತ್ತು ವಿರೂಪಗೊಂಡ ಓನ್ಸ್.
  • ಕುಂಠಿತಗೊಂಡ ಸಸ್ಯಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಬಾರ್ಲಿ

ಬಾರ್ಲಿ

ರೋಗಲಕ್ಷಣಗಳು

ಬಾಧಿತ ಸಸ್ಯಗಳು ಸಾಮಾನ್ಯವಾಗಿ ತೆನೆ ಹೊರಹೊಮ್ಮುವವರೆಗೆ ಯಾವುದೇ ರೋಗಲಕ್ಷಣಗಳನ್ನು ತೋರುವುದಿಲ್ಲ. ಸೋಂಕಿತ ತೆನೆಗಳು ಸಾಮಾನ್ಯವಾಗಿ ಅದೇ ಸಮಯದಲ್ಲಿ ಅಥವಾ ಆರೋಗ್ಯಕರವಾದವುಗಳಿಗಿಂತ ಸ್ವಲ್ಪ ನಂತರದಲ್ಲಿ ಹೊರಹೊಮ್ಮುತ್ತವೆ. ಅವು ಸಾಮಾನ್ಯವಾಗಿ ತುದಿಯ ಎಲೆಯ ಕೆಳಗಿನ ಎಲೆಕವಚದ ಮೂಲಕ ಹೊರಹೊಮ್ಮುತ್ತವೆ. ಅತ್ಯಂತ ಸ್ಪಷ್ಟವಾದ ಲಕ್ಷಣವೆಂದರೆ ಕಾಳುಗಳ ಬಣ್ಣಗೆಡುವುದು. ಅವುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಸೋಂಕಿತ ತೆನೆಗಳಲ್ಲಿನ ಧಾನ್ಯಗಳು ಗಟ್ಟಿಯಾದ, ಬೂದು-ಬಿಳಿ ಪೊರೆಯಿಂದ ಹಿಡಿದಿಡಲ್ಪಟ್ಟಿರುತ್ತವೆ. ಕೊಯ್ಲಿನ ಸಮಯ ಹತ್ತಿರವಾದಂತೆ, ಧಾನ್ಯಗಳು ಸಂಪೂರ್ಣವಾಗಿ ಬೀಜಕಗಳಾಗಿ ಬದಲಾಯಿಸಲ್ಪಡುತ್ತವೆ. ಓನ್ ಗಳು ವಿರೂಪಗೊಂಡಂತೆ ಕಂಡುಬರುತ್ತವೆ. ಬಾರ್ಲಿ ಗಿಡಗಳ ಬೆಳವಣಿಗೆ ಕುಂಠಿತವಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ವಿಟೆಕ್ಸ್ ನೆಗುಂಡೋ ಎಲೆಯ ಪುಡಿಯೊಂದಿಗೆ ಬೀಜ ಚಿಕಿತ್ಸೆಗಳು ಪರಿಣಾಮಕಾರಿ. ಟ್ರೈಕೋಡರ್ಮಾ ಹಾರ್ಜಿಯಾನಮ್, ಟಿ.ವಿರೈಡ್ ಮತ್ತು ಸ್ಯೂಡೋಮೊನಾಸ್ ಫ್ಲೋರೊಸೆನ್ಸ್‌ಗಳಂತಹ ಜೈವಿಕ ನಿಯಂತ್ರಣ ಏಜೆಂಟ್‌ಗಳೊಂದಿಗೆ ನಿಮ್ಮ ಬೀಜಗಳನ್ನು ಸಂಸ್ಕರಿಸುವುದು ರೋಗವನ್ನು ನಿಯಂತ್ರಿಸುವಲ್ಲಿ ಶಿಲೀಂಧ್ರನಾಶಕಗಳಿಗಿಂತ ಕಡಿಮೆ ಪರಿಣಾಮಕಾರಿಯಾಗಿದೆ.

ರಾಸಾಯನಿಕ ನಿಯಂತ್ರಣ

ತಡೆಗಟ್ಟುವ ಕ್ರಮಗಳು ಮತ್ತು ಲಭ್ಯವಿರುವ ಜೈವಿಕ ಚಿಕಿತ್ಸೆಗಳೊಂದಿಗೆ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. 1 ಕೆಜಿ ಬೀಜಗಳಿಗೆ ಕಾರ್ಬೆಂಡಜಿಮ್ 50 WP (2.5 ಗ್ರಾಂ), ಮ್ಯಾಂಕೋಜೆಬ್ 50 WP + ಕಾರ್ಬೆಂಡಾಜಿಮ್ 50 WP (1 ಗ್ರಾಂ), ಕಾರ್ಬಾಕ್ಸಿನ್ 37.5 WP + ಥಿರಮ್ 37.5 WP (1.5 ಗ್ರಾಂ) ಮತ್ತು ಟೆಬುಕೊನಜೋಲ್ 2 DS (1.5 ಗ್ರಾಂ) ಜೊತೆಗೆ ಬೀಜ ಸಂಸ್ಕರಣೆ ಮಾಡಿದರೆ ಸಂಪೂರ್ಣ ರೋಗ ನಿಯಂತ್ರಣವನ್ನು ಸಾಧಿಸಬಹುದಾಗಿದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಉಸ್ಟಿಲಾಗೊ ಸೆಗೆಟಮ್ ವರ್. ಹೋರ್ಡಿ ಎಂಬ ರೋಗಕಾರಕದಿಂದ ಉಂಟಾಗುತ್ತವೆ. ಇದು ಬಾಹ್ಯದಲ್ಲಿ ಬೀಜದಿಂದ ಹರಡುತ್ತದೆ, ಅಂದರೆ ರೋಗಪೀಡಿತ ಸಸ್ಯದ ತೆನೆಗಳು ಬೀಜಕಗಳನ್ನು ಆರೋಗ್ಯಕರ ಧಾನ್ಯಗಳ ಮೇಲ್ಮೈಗೆ ಹರಡುತ್ತವೆ. ಕೊಯ್ಲಿನ ನಂತರ ಬಾರ್ಲಿ ಕಾಳುಗಳನ್ನು ಬೇರ್ಪಡಿಸಿದಾಗ ಬೀಜಕ ರಾಶಿಗಳು ತೆರೆದುಕೊಂಡು, ಹಲವಾರು ಬೀಜಕಗಳು ಬಿಡುಗಡೆಯಾಗುತ್ತವೆ. ಅನೇಕ ಬೀಜಕಗಳು ಆರೋಗ್ಯಕರ ಕಾಳುಗಳ ಮೇಲೆ ನೆಲೆಸುತ್ತವೆ ಮತ್ತು ಬೀಜವನ್ನು ಬಿತ್ತುವವರೆಗೆ ಅವುಗಳು ಸುಪ್ತವಾಗಿರುತ್ತವೆ. ಬಾರ್ಲಿ ಬೀಜವು ಮೊಳಕೆಯೊಡೆಯಲು ಪ್ರಾರಂಭಿಸಿದಾಗ ಬೀಜಕಗಳು ಮೊಳಕೆಯೊಡೆಯುತ್ತವೆ ಮತ್ತು ಸಸಿಗೆ ಸೋಂಕು ತಗುಲುತ್ತವೆ. ಬೆಚ್ಚಗಿನ, ತೇವಾಂಶವುಳ್ಳ, ಆಮ್ಲೀಯ ಮಣ್ಣು ಸಸಿಯ ಸೋಂಕನ್ನು ಬೆಂಬಲಿಸುತ್ತದೆ. ರೋಗವು ಮೊಳಕೆಯೊಡೆಯುವ ಅವಧಿಯಲ್ಲಿ 10 °C ಮತ್ತು 21 °C ನಡುವಿನ ಮಣ್ಣಿನ ತಾಪಮಾನ ಹೆಚ್ಚು ಸೂಕ್ತವಾಗಿರುತ್ತದೆ. ಮಸಿರೋಗವನ್ನು ಲೂಸ್ ಸ್ಮಟ್ ನಿಂದ ಪ್ರತ್ಯೇಕಿಸಲು ಕೆಲವೊಮ್ಮೆ ಕಷ್ಟವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಬಳಸಿ.
  • ನಾಟಿ ಮಾಡಲು ರೋಗವಿಲ್ಲದ ಬೀಜ ಸಾಮಗ್ರಿಗಳನ್ನು ಬಳಸಿ.
  • ಸ್ವಲ್ಪ ಒಣಗಿದ ಮಣ್ಣಿನಲ್ಲಿ ಬೀಜವನ್ನು ಬಿತ್ತಿ.
  • 2.5 ಸೆಂ.ಮೀ ಆಳದಲ್ಲಿ ಬೀಜಗಳನ್ನು ಬಿತ್ತುವ ಮೂಲಕ ರೋಗ ತಗುಲುವ ಘಟನೆಗಳನ್ನು ಕಡಿಮೆ ಮಾಡಬಹುದು.
  • ಸಾಧ್ಯವಾದರೆ ಆಮ್ಲೀಯ ಮಣ್ಣಿನ ಬದಲು ಬಾರ್ಲಿಯನ್ನು ಸಾಮಾನ್ಯ ಅಥವಾ ಕ್ಷಾರೀಯ ಮಣ್ಣಿನಲ್ಲಿ ನೆಡಬೇಕು.
  • ಕಳೆಯಿಂದ ಬಾಧಿತವಾದ ಸಸ್ಯಗಳನ್ನು ಕಿತ್ತು ಸುಟ್ಟುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ