ದ್ರಾಕ್ಷಿ

ದ್ರಾಕ್ಷಿಯ ಕಪ್ಪು ಕೊಳೆತ

Phyllosticta ampelicida

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆ ಮಚ್ಚೆಯೊಂದಿಗೆ ಗಾಢ ಅಂಚು.
  • ಚಿಗುರುಗಳು, ಕಾಂಡಗಳು ಮತ್ತು ಎಲೆಗಳ ತೊಟ್ಟಗಳ ಮೇಲೂ ಸಹ ಪರಿಣಾಮ ಬೀರುತ್ತವೆ.
  • ಹಣ್ಣಿನಲ್ಲಿ ಕಪ್ಪು ಕೊಳೆತ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ಎಲೆಗಳ ಮೇಲೆ ಅನಿಯಮಿತ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಪ್ಪಾದ ಅಂಚು ಇರುತ್ತದೆ. ಚಿಗುರುಗಳು, ಕಾಂಡಗಳು ಮತ್ತು ಎಲೆಗಳ ತೊಟ್ಟುಗಳು ಸಹ ಈ ಕಲೆಗಳ ಲಕ್ಷಣಗಳನ್ನು ತೋರಿಸಬಹುದು. ಎಲೆಗಳ ತೊಟ್ಟುಗಳು ಬಾಧಿತವಾದರೆ ಇಡೀ ಎಲೆ ಒಣಗುತ್ತದೆ. ದ್ರಾಕ್ಷಿಗಳ ಮೇಲೆ ಆರಂಭದಲ್ಲಿ ಬೂದು ಬಣ್ಣದ ಕಲೆಗಳು ಕಾಣಬಹುದು. ಅದು ನಂತರ ಕೆಂಪು-ಕಂದು ಅಥವಾ ನೇರಳೆ ಕಲೆಗಳಾಗುತ್ತವೆ. ಹಣ್ಣು ವಿರೂಪಗೊಳ್ಳುತ್ತದೆ ಮತ್ತು ಅಂತಿಮವಾಗಿ ಸುಕ್ಕುಗಟ್ಟುತ್ತದೆ ಮತ್ತು ಕಪ್ಪು ಮಮ್ಮಿಯಾಗಿ ಮಾರ್ಪಾಡಾಗುತ್ತದೆ

ಶಿಫಾರಸುಗಳು

ಜೈವಿಕ ನಿಯಂತ್ರಣ

ಹೂಬಿಟ್ಟ ತಕ್ಷಣ ನೀವು ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಅನ್ನು ಸಿಂಪಡಿಸಬಹುದು.

ರಾಸಾಯನಿಕ ನಿಯಂತ್ರಣ

ರಾಸಾಯನಿಕಗಳ ಬಳಕೆಯನ್ನು ರೋಗ ತಡೆಗಟ್ಟುವ ರೀತಿಯಲ್ಲಿ ಮಾಡಲಾಗುತ್ತದೆ. ಕ್ಯಾಪ್ಟಾನ್ + ಮೈಕೋಬುಟಾನಿಲ್ ಅಥವಾ ಮ್ಯಾಂಕೋಜೆಬ್ + ಮೈಕೋಬುಟಾನಿಲ್ ಗಳನ್ನು ಹೂಬಿಡುವ ಎರಡು ವಾರಗಳ ಮೊದಲೇ ಸಿಂಪಡಿಸಲು ಪ್ರಾರಂಭಿಸಿ. ಹೂವುಗಳು ತೆರೆಯುವ ಮೊದಲು ನೀವು ಕಾರ್ಬರಿಲ್ ಅಥವಾ ಇಮಿಡಾಕ್ಲೋಪ್ರಿಡ್ ಅನ್ನು ಸಹ ಬಳಸಬಹುದು. ಹೂಬಿಟ್ಟ ನಂತರ ಮ್ಯಾಂಕೋಜೆಬ್ + ಮೈಕೋಬುಟಾನಿಲ್, ಇಮಿಡಾಕ್ಲೋಪ್ರಿಡ್ ಅಥವಾ ಅಜಾಡಿರಾಕ್ಟಿನ್ ಸಿಂಪಡಿಸಿ. ಹೂಟ್ಟ ಹತ್ತು ದಿನಗಳ ನಂತರ ನೀವು ಕ್ಯಾಪ್ಟನ್ ಮತ್ತು ಗಂಧಕದ ಮಿಶ್ರಣವನ್ನು ನಿಮ್ಮ ಬಳ್ಳಿಗಳಿಗೆ ಹಾಕಬಹುದು. ಹೆಚ್ಚಿನ ದ್ರಾಕ್ಷಿ ಪ್ರಭೇದಗಳು ಹೂಟ್ಟ ಮೂರರಿಂದ ನಾಲ್ಕು ವಾರಗಳ ನಂತರ ಸೋಂಕಿಗೆ ನಿರೋಧಕವಾಗುವುದರಿಂದ, ಆ ಸಮಯದಲ್ಲಿ ರಾಸಾಯನಿಕ ಸಿಂಪಡಣೆಯನ್ನು ತಪ್ಪಿಸಬೇಕು.

ಅದಕ್ಕೆ ಏನು ಕಾರಣ

ಫಿಲೋಸ್ಟಿಕ್ಟಾ ಆಂಪೆಲಿಸಿಡಾ ಎಂಬ ಶಿಲೀಂಧ್ರದಿಂದ ಹಾನಿ ಉಂಟಾಗುತ್ತದೆ. ರೋಗಕಾರಕವು ದ್ರಾಕ್ಷಿಬಳ್ಳಿ ಅಥವಾ ಮಣ್ಣಿನ ಮೇಲೆ ಸೋಂಕಿತ ಚಿಗುರುಗಳು ಅಥವಾ ಹಣ್ಣಿನ ಮಮ್ಮಿಗಳಲ್ಲಿ ಚಳಿಗಾಲವನ್ನು ಕಳೆಯುತ್ತದೆ. ಬೀಜಕಗಳು ಸಣ್ಣ ಮಳೆಯಿಂದ ಹೊರಹಾಕಲ್ಪಡುತ್ತವೆ ಮತ್ತು ನಂತರ ಗಾಳಿಯ ಮೂಲಕ ಹರಡುತ್ತವೆ. ಸೂಕ್ತವಾದ ಬೆಳವಣಿಗೆಯ ಪರಿಸ್ಥಿತಿಗಳೆಂದರೆ 25 °C ಮತ್ತು 6 ಗಂಟೆಗಳ ನಿರಂತರ ಎಲೆ ತೇವ. ಶಿಲೀಂಧ್ರವು ಬೆಚ್ಚಗಿನ ಮತ್ತು ಆರ್ದ್ರ ವಾತಾವರಣಕ್ಕೆ ಆದ್ಯತೆ ನೀಡುತ್ತದೆ. ಹಣ್ಣಿನ ಇಳುವರಿ ಕಡಿಮೆಯಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಹೆಚ್ಚು ನಿರೋಧಕ ಪ್ರಭೇದವನ್ನು ಆರಿಸಿ.
  • ಬಳ್ಳಿಯಿಂದ ಹಣ್ಣಿನ ಮಮ್ಮಿಗಳನ್ನು(ಸತ್ತು ಮರದಲ್ಲೇ ಒಣಗಿದ) ತೆಗೆದುಹಾಕಿ.
  • ಕೊಯ್ಲಿನ ನಂತರ ಸೋಂಕಿತ ಮರ ಮತ್ತು ಬಳ್ಳಿಗಳನ್ನು ತೆಗೆದು ನಾಶಪಡಿಸಬೇಕು.
  • ದ್ರಾಕ್ಷಿತೋಟದಿಂದ ಸೋಂಕಿತ ಎಲೆಗಳನ್ನು ತೆಗೆದುಹಾಕಿ.
  • ನಿಮ್ಮ ದ್ರಾಕ್ಷಿತೋಟವನ್ನು ಕಳೆಗಳಿಂದ ದೂರವಿಡಿ.
  • ಸರಿಯಾದ ಗಾಳಿಯ ಪ್ರಸರಣ ಮತ್ತು ಬೆಳಕನ್ನು ಒದಗಿಸಿ.
  • ಸಸ್ಯಕ ಹಂತಕ್ಕೂ ಮೊದಲು ಪ್ರತಿ ವರ್ಷ ನಿಮ್ಮ ಬಳ್ಳಿಗಳನ್ನು ಸಮರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ