ದ್ರಾಕ್ಷಿ

ದ್ರಾಕ್ಷಿಯ ಕಹಿ ಕೊಳೆತ

Greenaria uvicola

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಬಲಿತ ಹಣ್ಣಿನ ಮೇಲೆ ಕಪ್ಪು ಗಾಯಗಳು.
  • ಅನಿಯಮಿತ ಗಾತ್ರದ ಮಸಿ ಕಪ್ಪು ಹಣ್ಣುಗಳು.
  • ಕಹಿ ಮತ್ತು ಹಳಸು ರುಚಿ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ಅತ್ಯಂತ ಸ್ಪಷ್ಟವಾದ ರೋಗಲಕ್ಷಣಗಳು ಹಣ್ಣುಗಳಲ್ಲಿ ಕಂಡುಬರುತ್ತವೆ. ಆರಂಭಿಕ ರೋಗಲಕ್ಷಣವು ಕಂದುಬಣ್ಣದ, ನೀರಿನಲ್ಲಿ ನೆನೆದಂತಹ ಗಾಯಗಳಾಗಿ ಕಾಣಿಸಿಕೊಳ್ಳುತ್ತವೆ. ಇದು ಬಲಿಯುತ್ತಿರುವ ಹಣ್ಣಿನ ಮೇಲೆ ಕಂಡುಬರುತ್ತದೆ. ಹಣ್ಣುಗಳು ಹಣ್ಣಾಗಲು ಪ್ರಾರಂಭಿಸಿದಾಗ ಸೋಂಕಿಗೆ ಒಳಗಾಗುತ್ತವೆ. ಹಣ್ಣುಗಳು ಸೋಂಕಿಗೆ ಒಳಗಾದ ನಂತರ, ಅವು ಮೃದುವಾಗುತ್ತವೆ ಮತ್ತು ಸಣ್ಣ ಶಿಲೀಂಧ್ರದ ಫ್ರುಟಿಂಗ್ ರಚನೆಗಳು ಮೇಲ್ಮೈಯಲ್ಲಿ ಕೇಂದ್ರೀಕೃತ ಉಂಗುರಗಳ ರೀತಿ ರೂಪುಗೊಳ್ಳುತ್ತವೆ. ಗಾಯಗಳು ಕೇಂದ್ರೀಕೃತ ಉಂಗುರಗಳಾಗಿ ತ್ವರಿತವಾಗಿ ಹರಡುತ್ತದೆ ಮತ್ತು ಸಾಮಾನ್ಯವಾಗಿ ಕಡಿಮೆ ಅವಧಿಯಲ್ಲೇ ಸಂಪೂರ್ಣ ಹಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ತಿಳಿ ಬಣ್ಣದ ಹಣ್ಣುಗಳು ಸೋಂಕಿಗೆ ಒಳಗಾದಾಗ, ಅವು ಕಂದು ಬಣ್ಣಕ್ಕೆ ತಿರುಗುತ್ತವೆ. 2 ರಿಂದ 3 ದಿನಗಳ ನಂತರ, ಹಣ್ಣಿನ ಸಿಪ್ಪೆಯು ಕಪ್ಪು ಗುಳ್ಳೆಗಳಿಂದಾಗಿ ಛಿದ್ರವಾಗುತ್ತದೆ. ತೇವಾಂಶವುಳ್ಳ ಪರಿಸ್ಥಿತಿಗಳಲ್ಲಿ, ಗುಳ್ಳೆಗಳು ಒಗ್ಗೂಡಿ ಹಣ್ಣಿನ ಮೇಲ್ಮೈಯಲ್ಲಿ ಅನಿಯಮಿತ ಗುಳ್ಳೆಗಳನ್ನು ರೂಪಿಸುತ್ತವೆ. ಹಣ್ಣಿನ ಸಿಪ್ಪೆಯು ಹರಿದುಹೋಗಬಹುದು, ಮತ್ತು ಹಣ್ಣುಗಳು ಕಪ್ಪು ಮಮ್ಮಿಗಳಾಗಿ ಸುಕ್ಕುಗಟ್ಟಬಹುದು. ಇದು ಕಪ್ಪು ಕೊಳೆತ, ಫಿಲೋಸ್ಟಿಕ್ಟಾ ಆಂಪೆಲಿಸಿಡಾವನ್ನು ಹೋಲುತ್ತದೆ. ಎಳೆಯ ಚಿಗುರುಗಳು ಮತ್ತು ಹಣ್ಣಿನ ಗೊಂಚಲುಗಳ ತೊಟ್ಟುಗಳ ಮೇಲೂ ಸಹಾ ರೋಗಲಕ್ಷಣಗಳು ಬೆಳೆಯುತ್ತವೆ, ಆದರೆ ಕಡಿಮೆ ಸ್ಪಷ್ಟವಾಗಿರುತ್ತವೆ. ಸೋಂಕಿತ ಎಲೆಗಳ ಮೇಲೆ, ಹಳದಿ ಹೊರವರ್ತುಲದೊಂದಿಗೆ ಸಣ್ಣ, ಗುಳಿಬಿದ್ದ, ಕೆಂಪು-ಕಂದು ಬಣ್ಣದ ಚುಕ್ಕೆಗಳಂತೆ ರೋಗಲಕ್ಷಣಗಳು ಕಂಡುಬರುತ್ತವೆ. ಬೀಜಕಗಳು ಚಿಗುರುಗಳು, ತೊಟ್ಟುಗಳನ್ನು ಸಹ ಸೋಂಕಿಸಬಹುದು. ತೊಟ್ಟುಗಳು ಸೋಂಕಿಗೆ ಒಳಗಾದಾಗ, ಹಣ್ಣು ಹಣ್ಣಾಗುವವರೆಗೆ ಶಿಲೀಂಧ್ರವು ನಿಷ್ಕ್ರಿಯವಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಎಣ್ಣೆಗಳು, ರಂಜಕದ ಆಮ್ಲ, ಪೊಟ್ಯಾಸಿಯಮ್ ಬೈ-ಕಾರ್ಬೊನೇಟ್, ಪೊಟ್ಯಾಸಿಯಮ್ ಮೊನೊಫಾಸ್ಫೇಟ್, ಆಕ್ಸಿಡೇಟ್, ಕಾಂಪೋಸ್ಟ್ ಟೀ ಮುಂತಾದ ಸಾವಯವ ಅಥವಾ ಕಡಿಮೆ ಅಪಾಯಕಾರಿ ಸಂಯುಕ್ತಗಳು ಕಹಿ ಕೊಳೆತವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಬೆಚ್ಚಗಿನ ಋತುವಿನಲ್ಲಿ ಹೂಬಿಡುವಿಕೆಯಿಂದ ಕೊಯ್ಲಿನವರೆಗೆ ಹಣ್ಣುಗಳನ್ನು ಶಿಲೀಂಧ್ರನಾಶಕಗಳೊಂದಿಗೆ ರಕ್ಷಿಸಿ, ವಿಶೇಷವಾಗಿ ರೋಗಕ್ಕೆ ಒಳಗಾಗುವ ತಳಿಗಳನ್ನು. ಬೇಸಗೆಯ ಆರಂಭದಿಂದ ಮಧ್ಯದವರೆಗೆ ಡೌನಿ ಶಿಲೀಂಧ್ರ ಮತ್ತು ಕಪ್ಪು ಕೊಳೆತದಂತಹ ಇತರ ರೋಗಗಳ ವಿರುದ್ಧ ಇರುವ ಶಿಲೀಂಧ್ರನಾಶಕ ಸಿಂಪಡಣೆಗಳ ಮೂಲಕ ರೋಗವನ್ನು ನಿಯಂತ್ರಿಸಬಹುದು. ತೋಟ ಮತ್ತು ಶೇಖರಣೆಯಲ್ಲಿ ಪರಿಣಾಮಕಾರಿ ನಿಯಂತ್ರಣಕ್ಕಾಗಿ, ಇಪ್ರೋಡಿಯನ್ 75 WG (0.2%), ಬಿಟರ್ಟಾನಾಲ್ 25 WP (0.1%) ಮತ್ತು ಥಿಯೋಫನೇಟ್ ಮೀಥೈಲ್ (0.1%) ಸಿಂಪಡಿಕೆಗಳನ್ನು ಬಳಸಿ.

ಅದಕ್ಕೆ ಏನು ಕಾರಣ

ದ್ರಾಕ್ಷಿತೋಟದಲ್ಲಿ ಬಹುತೇಕ ಯಾವುದೇ ಸಸ್ಯದ ಅವಶೇಷಗಳ ಮೇಲೆ ವಿಶೇಷವಾಗಿ ಹಣ್ಣಿನ ಮಮ್ಮಿಗಳ ಮೇಲೆ, ಚಳಿಗಾಲವನ್ನು ಕಳೆಯುವ ಗ್ರೀನೇರಿಯಾ ಯುವಿಕೋಲಾ ಎಂಬ ಶಿಲೀಂಧ್ರದಿಂದ ಹಾನಿ ಉಂಟಾಗುತ್ತದೆ. ಸಸ್ಯದ ಕಸದ ಮೇಲೆ ಬೆಳೆಯುವ ಶಿಲೀಂಧ್ರ ಅಂಗಾಂಶವು ಬೀಜಕಗಳನ್ನು ಉತ್ಪಾದಿಸುತ್ತದೆ. ಬೆಚ್ಚಗಿನ, ಆರ್ದ್ರ ಮತ್ತು ಮಳೆಯಂತಹ ಹವಾಮಾನ ಪರಿಸ್ಥಿತಿಗಳು ಶಿಲೀಂಧ್ರಗಳ ಬೆಳವಣಿಗೆ ಮತ್ತು ಬೀಜಕಗಳ ರಚನೆಗೆ ಅನುಕೂಲಕರವಾಗಿವೆ. ಬೀಜಕಗಳು ಆರೋಗ್ಯಕರ ಹಣ್ಣಿನೊಂದಿಗೆ ಸಂಪರ್ಕಕ್ಕೆ ಬಂದ ಒಂದು ವಾರದ ನಂತರ ಹಣ್ಣುಗಳಲ್ಲಿ ರೋಗಲಕ್ಷಣಗಳು ಕಂಡುಬರುತ್ತವೆ. ಹಣ್ಣು ಗಾಯಗೊಂಡಿದ್ದರೆ ಇದಕ್ಕಿಂತ ಕಡಿಮೆ ಸಮಯ ಸಾಕು. ಅವು ಸಾಮಾನ್ಯವಾಗಿ ಕಡಿಮೆ ತಾಪಮಾನದಲ್ಲಿ ಸಕ್ರಿಯವಾಗಿರುತ್ತವೆ. ಹಣ್ಣಿನ ಮೇಲೆ ಕಂಡುಬರುವ ಬೀಜಕಗಳು ಇತರ ಹಣ್ಣುಗಳಿಗೆ ಮಳೆಯ ತುಂತುರಿನ ಮೂಲಕ ಹರಡಬಹುದು ಮತ್ತು ನಂತರದಲ್ಲಿ ಸೋಂಕುಗಳಿಗೆ ಕಾರಣವಾಗಬಹುದು. ಕಹಿ ಕೊಳೆತವನ್ನು ಸಾಮಾನ್ಯವಾಗಿ ಕಪ್ಪು ಕೊಳೆತವೆಂದು ತಪ್ಪು ಗ್ರಹಿಸಲಾಗುತ್ತದೆ; ಆದರೆ, ಕಪ್ಪು ಕೊಳೆತವನ್ನು ಉಂಟುಮಾಡುವ ಶಿಲೀಂಧ್ರವು ಬಲಿಯದ ಹಣ್ಣುಗಳಿಗೆ ಸೋಂಕು ತರುತ್ತದೆ. ಆದರೆ ಕಹಿ ಕೊಳೆತವನ್ನು ಉಂಟುಮಾಡುವ ಶಿಲೀಂಧ್ರವು ಬಲಿತ ಹಣ್ಣುಗಳಿಗೆ ಮಾತ್ರ ಸೋಂಕು ತರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿರುವಲ್ಲಿ ನಿರೋಧಕ ತಳಿಗಳು ಅಥವಾ ತಡವಾಗಿ ಮಾಗುವ ತಳಿಗಳನ್ನು ಬಳಸಿ.
  • ಉತ್ತಮ ಗಾಳಿಯ ಪ್ರಸರಣ ಮತ್ತು ಬೆಳಕಿನ ಲಭ್ಯತೆಯನ್ನು ಉತ್ತೇಜಿಸಲು ಕಳೆಗಳು ಮತ್ತು ಸಕ್ಕರ್‌ಗಳನ್ನು ನಿಯಂತ್ರಿಸಿ.
  • ಏಕರೂಪದ ಎಲೆಗಳ ಬೆಳವಣಿಗೆಗಾಗಿ ಸರಿಯಾದ ಸಮರುವಿಕೆಯನ್ನು ಮತ್ತು ಚಿಗುರುಗಳನ್ನು ಸ್ಥಾನದಲ್ಲಿಡುವುದನ್ನು ಅಥವಾ ತೆಗೆದುಹಾಕುವುದನ್ನು ಅಭ್ಯಾಸ ಮಾಡಿ.
  • ಗಾಳಿಯ ಬೀಸುತ್ತಿರುವ ದಿಕ್ಕಿನಲ್ಲಿ ಬಳ್ಳಿ ಸಾಲುಗಳನ್ನು ನೆಡಲು ಸಾಧ್ಯವಿದ್ದಲ್ಲಿ ಹಾಗೆ ಮಾಡಿ.
  • ಹಣ್ಣುಗಳ ಗಾಯವನ್ನು ತಡೆಗಟ್ಟಲು ಕೀಟಗಳು, ಪಕ್ಷಿಗಳು ಮತ್ತು ಇತರ ದ್ರಾಕ್ಷಿ ರೋಗಗಳನ್ನು ನಿಯಂತ್ರಿಸಿ.
  • ನಿಮ್ಮ ದ್ರಾಕ್ಷಿತೋಟದಲ್ಲಿ ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡಿ.
  • ಬಳ್ಳಿಗಳಿಂದ ಮಮ್ಮೀಯಾಗಿರುವ(ಸುಕ್ಕಾಗಿ ಒಣಗಿದ ಗಟ್ಟಿಯಾದ) ದ್ರಾಕ್ಷಿಯನ್ನು ತೆಗೆದುಹಾಕಿ.
  • ಶಿಲೀಂಧ್ರಗಳ ಹಾನಿಯನ್ನು ಮಿತಿಗೊಳಿಸಲು ಸಸ್ಯದ ಅವಶೇಷಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.
  • ಬೀಜಕಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಹಳೆಯ ಕಾಂಡಗಳು, ಸಮೂಹಗಳು ಮತ್ತು ಇತರ ಸಸ್ಯ ಭಾಗಗಳನ್ನು ಕತ್ತರಿಸಿ ಮತ್ತು ನಾಶಪಡಿಸಿ.
  • ಮೇಲಾವರಣದಿಂದ ಮಮ್ಮಿಗಳನ್ನು (ರಾಸಿನ್ ನಂತಹ, ಹಣ್ಣಿನ ಗಟ್ಟಿಯಾದ ಅವಶೇಷಗಳು) ತೆಗೆದುಹಾಕುವ ಮೂಲಕ ದ್ರಾಕ್ಷಿತೋಟದಲ್ಲಿ ಗಾಳಿಯ ಪ್ರಸರಣವನ್ನು ಹೆಚ್ಚಿಸಿ.
  • ಗಾಳಿಯ ಹರಿವನ್ನು ಹೆಚ್ಚಿಸಲು ಮತ್ತು ಎಲೆಗಳ ತೇವದ ಅವಧಿಯನ್ನು ಕಡಿಮೆ ಮಾಡಲು ಋತುವಿನಲ್ಲಿ ಮೇಲಾವರಣವನ್ನು ನಿರ್ವಹಿಸಿ.
  • ಆಯಕಟ್ಟಿನ ಎಲೆಗಳ ಸಮರುವಿಕೆಯು ಎಲೆ ಒಣಗುವ ಸಮಯವನ್ನು ಕಡಿಮೆ ಮಾಡಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ