ಕಬ್ಬು

ಕಬ್ಬಿನ ರಿಂಗ್ ಸ್ಪಾಟ್

Epicoccum sorghinum

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ನೀರಿನಲ್ಲಿ ನೆನೆಸಿದಂತಹ ಕಲೆಗಳು ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ.
  • ಸಣ್ಣ, ಕಂಚಿನ-ಕಂದು ಬಣ್ಣದ ಕಲೆಗಳು ಕಂಡುಬರುತ್ತವೆ.
  • ಎದ್ದು ಕಾಣುವ ಕೆಂಪು-ಕಂದು ಅಂಚು ಹೊಂದಿರುವ ಒಣಹುಲ್ಲಿನ ಬಣ್ಣದ ಕೇಂದ್ರವಿರುವ ಕಲೆಗಳು ಕಾಣಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಕಬ್ಬು

ರೋಗಲಕ್ಷಣಗಳು

ಆರಂಭಿಕ ಲಕ್ಷಣಗಳೆಂದರೆ ಸಣ್ಣ, ಉದ್ದವಾದ, ಅಂಡಾಕಾರದ ಕಲೆಗಳು. ಅವು ಕಡು ಹಸಿರಿನಿಂದ, ಕೆಂಪು-ಕಂದು ಬಣ್ಣವನ್ನು ಹೊಂದಿದ್ದು ಹಳದಿ ಹೊರ ವರ್ತುಲ ಇರುತ್ತವೆ. ನಂತರದ ರೋಗಲಕ್ಷಣಗಳೆಂದರೆ ಅನಿಯಮಿತ ಬಾಹ್ಯರೇಖೆಗಳು ಮತ್ತು ಕೆಂಪು-ಕಂದು ಅಂಚುಗಳಿರುವ ದೊಡ್ಡ ಮತ್ತು ಉದ್ದವಾದ ಗಾಯಗಳು. ಕಲೆಗಳು ಒಟ್ಟಿಗೆ ಸೇರಿ ದೊಡ್ಡ ತೇಪೆಗಳನ್ನು ರೂಪಿಸಬಹುದು. ಇದು ಕ್ಲೋರೋಸಿಸ್ ಮತ್ತು ನೆಕ್ರೋಸಿಸ್ ಗೆ ಕಾರಣವಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ರಿಂಗ್ ಸ್ಪಾಟ್ ತೀವ್ರತೆಯನ್ನು ಕಡಿಮೆ ಮಾಡಲು ಕ್ಯಾಲ್ಸಿಯಂ ಸಿಲಿಕೇಟ್ ಸ್ಲ್ಯಾಗ್ ಅನ್ನು ಮಣ್ಣಿಗೆ ಸೇರಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಇಂದಿನವರೆಗೆ, ಈ ಶಿಲೀಂಧ್ರಗಳ ವಿರುದ್ಧ ಯಾವುದೇ ರಾಸಾಯನಿಕ ನಿಯಂತ್ರಣ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿಲ್ಲ.

ಅದಕ್ಕೆ ಏನು ಕಾರಣ

ಎಪಿಕೋಕಮ್ ಸೋರ್ಜಿನಮ್ ಎಂಬ ಶಿಲೀಂಧ್ರದಿಂದ ಹಾನಿ ಉಂಟಾಗುತ್ತದೆ. ಮತ್ತು ಇದು ಶಿಲೀಂಧ್ರದ ಗಾಳಿ- ಅಥವಾ ಮಳೆಯಿಂದ ಹರಡುವ ಬೀಜಕಗಳಿಂದ ಹರಡುತ್ತದೆ. ಶಿಲೀಂಧ್ರಗಳ ಸಂಖ್ಯಾವೃದ್ಧಿಗೆ ಬೆಚ್ಚಗಿನ, ಆರ್ದ್ರ ಪರಿಸ್ಥಿತಿಗಳು ಅಗತ್ಯ. ಇದು ಸಾಮಾನ್ಯವಾಗಿ ಹಳೆಯ ಎಲೆಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇದನ್ನು ಕಡಿಮೆ ಆರ್ಥಿಕ ನಷ್ಟ ಮಾಡುವ ಪ್ರಮುಖವಲ್ಲದ ಸಣ್ಣ ರೋಗವೆಂದು ಪರಿಗಣಿಸಲಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ರೋಗಕ್ಕೆ ಕಡಿಮೆ ಒಳಗಾಗುವ ಪ್ರಭೇದಗಳನ್ನು ಬೆಳೆಸಿ.
  • ತುಕ್ಕು ಅಥವಾ ಕಾಡಿಗೆ ರೋಗಕ್ಕೆ ಹೆಚ್ಚಾಗಿ ಒಳಗಾಗುವ ಯಾವುದೇ ಜಿನೋಟೈಪ್ ಅನ್ನು ತ್ಯಜಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ