Mycosphaerella brassicicola
ಶಿಲೀಂಧ್ರ
ಸಾಮಾನ್ಯವಾಗಿ ರೋಗಲಕ್ಷಣಗಳು ಹಳೆಯ ಎಲೆಗಳ ಮೇಲೆ ಹೆಚ್ಚಾಗಿ ಕಂಡುಬರುತ್ತವೆ. ಆದರೆ ಎಳೆಯ ಎಲೆಗಳು ಬಾಧಿತವಾಗಿದ್ದರೆ ರೋಗಲಕ್ಷಣಗಳು ಹೆಚ್ಚು ತೀವ್ರವಾಗುತ್ತವೆ. ಎಲೆಯ ಮೇಲ್ಮೈಯಲ್ಲಿ ಹಳದಿ ಪ್ರಭಾವಲಯದಿಂದ ಸುತ್ತುವರಿದ 3-5 ಮಿಮೀ ಸಣ್ಣದಾದ ಕಪ್ಪು ಕಲೆಗಳು ಆರಂಭದಲ್ಲಿ ಕಂಡುಬರುತ್ತವೆ. ಅವು ಹಸಿರು-ಕಂದು ಅಥವಾ ಬೂದು-ಕಪ್ಪು ಬಣ್ಣದಲ್ಲಿರುತ್ತವೆ ಮತ್ತು ಎಲೆಯ ನಾಳಗಳಿಂದ ಸೀಮಿತವಾಗಿರುತ್ತವೆ ಮತ್ತು ಅಂತಿಮವಾಗಿ 2-3 ಸೆಂ.ಮೀ ದೊಡ್ಡದಾಗಿರುತ್ತವೆ. ಸಣ್ಣ ಕಪ್ಪು ಚುಕ್ಕೆಗಳು ಕಲೆಗಳ ಒಳಗೆ ಕೇಂದ್ರೀಕೃತ ಉಂಗುರಗಳನ್ನು ರೂಪಿಸುತ್ತವೆ. ಕಲೆಗಳು ಒಗ್ಗೂಡಿ ಎಲೆಯ ಹಳದಿ ಬಣ್ಣಕ್ಕೆ ಕಾರಣವಾಗಬಹುದು. ತೀವ್ರವಾದ ಮುತ್ತುವಿಕೆಯ ಅಕಾಲಿಕ ಎಲೆಯುದುರುವಿಕೆಗೆ ಕಾರಣವಾಗಬಹುದು. ರಿಂಗ್ ಸ್ಪಾಟ್ ಶಿಲೀಂಧ್ರದಿಂದ ಉಂಟಾಗುವ ಕಲೆಗಳು ಆಲ್ಟರ್ನೇರಿಯಾ ಜಾತಿಗಳಿಂದ ಉಂಟಾದಂತೆಯೇ ಕಾಣುತ್ತವೆ. ಮುಖ್ಯ ವ್ಯತ್ಯಾಸವೆಂದರೆ ರಿಂಗ್ ಸ್ಪಾಟ್ ಗಾಯಗಳು ಬೂದು ಬಣ್ಣದಲ್ಲಿರುತ್ತವೆ ಮತ್ತು ಅವು ಕೇಂದ್ರೀಕೃತ ಉಂಗುರಗಳಲ್ಲಿ ಕಪ್ಪು, ಸೂಜಿ ಮೊನೆಯಂತಹ ಚುಕ್ಕೆಗಳನ್ನು ಹೊಂದಿರುತ್ತವೆ. ನೆಲದ ಮೇಲಿನ ಎಲ್ಲಾ ಸಸ್ಯ ಭಾಗಗಳು ರೋಗಲಕ್ಷಣಗಳನ್ನು ತೋರಿಸಬಹುದು. ಪ್ರತ್ಯೇಕ ಗಾಯಗಳು ಕಪ್ಪು ಬಣ್ಣದ ಫ್ರುಟಿಂಗ್ ದೇಹಗಳಿಂದಾಗಿ ಗಾಢವಾದ ಕೇಂದ್ರೀಕೃತ ಉಂಗುರಗಳನ್ನು ಹೊಂದಿರುತ್ತವೆ. ಹಳದಿ ವಲಯದಿಂದ ಸುತ್ತುವರಿದ ನಿರ್ದಿಷ್ಟ ಅಂಚುಗಳನ್ನು ಹೊಂದಿರುತ್ತವೆ. ತೀವ್ರ ದಾಳಿಯ ಸಂದರ್ಭದಲ್ಲಿ ಕಲೆಗಳು ಒಗ್ಗೂಡುತ್ತವೆ, ಮತ್ತು ಸಂಪೂರ್ಣ ಸಸ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಕಪ್ಪಾಗಬಹುದು. ಬೀಜದ ತೊಟ್ಟುಗಳಲ್ಲಿ, ಕಳೆನಾಶಕ 2,4-D ನಿಂದ ಉಂಟಾಗುವ ಗಾಯದಂತೆಯೇ ವಿರೂಪವನ್ನು ಶಿಲೀಂಧ್ರವು ಉಂಟುಮಾಡುತ್ತದೆ. ಸಂಗ್ರಹಿಸಿದ ಎಲೆಕೋಸಿನ ಮೇಲೆ ಗಾಢವಾದ ಗಾಯಗಳು ಬೆಳೆಯಬಹುದು ಮತ್ತು ಅದು ಆಳಕ್ಕೆ ಇಳೆಯಬಹುದು.
ಇಂದಿಗೂ, ಈ ರೋಗದ ವಿರುದ್ಧ ಲಭ್ಯವಿರುವ ಯಾವುದೇ ಜೈವಿಕ ನಿಯಂತ್ರಣ ವಿಧಾನದ ಬಗ್ಗೆ ನಮಗೆ ತಿಳಿದಿಲ್ಲ. ರೋಗಲಕ್ಷಣಗಳ ಸಂಭವ ಅಥವಾ ಗುರುತ್ವವನ್ನು ಕಡಿಮೆ ಮಾಡುವ ಯಾವುದೇ ಯಶಸ್ವಿ ವಿಧಾನ ನಿಮಗೆ ತಿಳಿದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ರಾಸಾಯನಿಕ ನಿಯಂತ್ರಣ ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ನಿಮ್ಮ ಬೀಜಗಳನ್ನು ನೆಡುವ ಮೊದಲು ಥಿರಮ್ ಅಥವಾ ಮ್ಯಾಂಕೋಜೆಬ್‌ನೊಂದಿಗೆ ಸಂಸ್ಕರಿಸಿ. ತಂಪಾದ ಮತ್ತು ಆರ್ದ್ರ ವಾತಾವರಣದಲ್ಲಿ ಕ್ಲೋರೊಥನೋನಿಲ್, ಮ್ಯಾಂಕೋಜೆಬ್ ಅಥವಾ ತಾಮ್ರದ ಸ್ಪ್ರೇಗಳನ್ನು ಬಳಸಿ. ಹೆಚ್ಚಿನ ಸಂಖ್ಯೆಯ ವಾಯುಗಾಮಿ ಬೀಜಕಗಳ ಕಾರಣದಿಂದಾಗಿ ಅತಿಯಾಗಿ ತರಕಾರಿ ಉತ್ಪಾದಿಸುವಲ್ಲಿ ಮತ್ತು ಹರಡುವಿಕೆ ಹಾಗು ಸೋಂಕಿಗೆ ಅನುಕೂಲಕರವಾಗಿರುವ ಪರಿಸರದ ಪರಿಸ್ಥಿತಿಗಳು ಅಂದರೆ ತಂಪು ಮತ್ತು ತೇವಾಂಶ ಇದ್ದಾಗ ಇದು ನಿಯಂತ್ರಿಸಲು ಕಷ್ಟಕರವಾದ ಕಾಯಿಲೆಯಾಗಿದೆ.
ವಾಯುಗಾಮಿ ರೋಗಕಾರಕ ಮೈಕೋಸ್ಫೇರೆಲ್ಲಾ ಬ್ರಾಸಿಸಿಕೋಲಾದಿಂದ ಹಾನಿ ಉಂಟಾಗುತ್ತದೆ. ಬೀಜಕಗಳು ನೀರು, ಗಾಳಿ ಮತ್ತು ಮಳೆಯಿಂದ ಹರಡುತ್ತವೆ. ಶಿಲೀಂಧ್ರಕ್ಕೆ ಸಂತಾನೋತ್ಪತ್ತಿ ಮಾಡಲು ಕನಿಷ್ಠ ನಾಲ್ಕು ದಿನಗಳ ಕಾಲ 100% ಸಾಪೇಕ್ಷ ಆರ್ದ್ರತೆಯ ಅವಧಿಯ ಅಗತ್ಯವಿದೆ. 16-20 °C ತಾಪಮಾನ ಮತ್ತು ಕಳಪೆ ಮಣ್ಣಿನ ಒಳಚರಂಡಿ ವ್ಯವಸ್ಥೆಯು ರೋಗಕಾರಕದ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಈ ರೋಗವು ಹೆಚ್ಚಾಗಿ ಬೀಜ ಉತ್ಪಾದನೆಯ ವಿಷಯದಲ್ಲಿ ಸಮಸ್ಯೆಯಾಗಿದೆ ಮತ್ತು ಬೀಜಗಳು ರೋಗಕಾರಕವನ್ನು ಸಾಗಿಸಬಹುದು. ಶಿಲೀಂಧ್ರವು ಸೋಂಕಿತ ಕಳೆ ಮತ್ತು ಆಶ್ರಯದಾತ ಬೆಳೆ ಅಥವಾ ಸಸ್ಯಗಳ ಉಳಿಕೆಗಳಲ್ಲಿ ಚಳಿಗಾಲವನ್ನು ಕಳೆಯುತ್ತದೆ. ಬೀಜಕಗಳು ಗಾಳಿಯಿಂದ ಹರಡುತ್ತವೆ. ತಂಪಾದ ಆರ್ದ್ರ ವಾತಾವರಣವು ರೋಗದ ಬೆಳವಣಿಗೆಗೆ ಅನುಕೂಲಕರವಾಗಿದೆ.